kaveri p u

Classics Inspirational Others

4  

kaveri p u

Classics Inspirational Others

ಸೂಪರ್ ಹೀರೋ

ಸೂಪರ್ ಹೀರೋ

1 min
468


ಕೋವಿಡ್ ಸಮಯದಲ್ಲಿ ಸೂಪರ್ ಹೀರೋಗಳು. 


ಪಾವನಿ ಶಾಲೆಯಿಂದ ಮದ್ಯಾಹ್ನ ಮನೆಗೆ ಬಂದಳು. ಹಿತ್ತಲಿನಲ್ಲಿ ಬಟ್ಟೆ ತೊಳಿಯುತ್ತಿದ್ದ ಅಮ್ಮ ಬಂದು, ಯಾಕೆ ಪಾವು ಮಧ್ಯಾಹ್ನ ಬಂದೆ ಎಂದರು. ಅಯ್ಯೋ ಅಮ್ಮಾ ಕರೋನ ಎಲ್ಲಾ ಕಡೆ ಜಾಸ್ತಿ ಹರಡ್ತಾ ಇದೆಯಂತೆ,  ಈ ವರ್ಷ ಪರೀಕ್ಷೆ ಕೂಡ ಮಾಡುವುದಿಲ್ಲವಂತೆ, ಅವರು ಹೇಳುವವರೆಗೆ ನಾವು ಶಾಲೆಗೆ ಬರುವುದು ಸಹ ಬೇಡ ಅಂತ ಹೇಳಿದ್ದಾರೆ. 


ಹೌದಾ ಪಾವನಿ. ಸರಿ ಬಿಡು ಏನಾಗುತ್ತೋ ಆಗಲಿ.ನೀನು ಹೋಗಿ ಕೈ ಕಾಲು ತೊಳೆದುಕೊಂಡು ಬಾ, ಊಟ ಮಾಡು .


ಆಯ್ತು ಅಮ್ಮ , ಡ್ರೆಸ್ ಚೇಂಜ್ ಮಾಡಿ ಬರ್ತೀನಿ ತಡಿಯಮ್ಮ ಎಂದು ಪಾವನಿ ಕೈಕಾಲು ತೊಳೆದು ಬಂದು ಊಟ ಮಾಡಿ ಮುಗಿಸಿದಳು.


ಕೆಲಸ ಮುಗಿದ ಮೇಲೆ ಟಿವಿ ನೋಡುತ್ತಾ ಕುಳಿತಿದ್ದೇವು

ನಮ್ಮ ಜಿಲ್ಲೆಯಲ್ಲಿ ಕರೋನ ಸಂಖ್ಯೆ ಹೆಚ್ಚಾಗುತ್ತಲೆ ಇತ್ತು.

ನಾವು ಕೂಡಾ ಎಲ್ಲಿಯೂ ಹೋಗದೆ ಮನೆಯಲ್ಲಿ

ಇದ್ದೆವು. ನಾವೇನೋ ಮನೆಯಲ್ಲಿ ಹುಷಾರಾಗಿ ಕುಳಿತಿದ್ದೆವು. ಆದರೆ, ನಮ್ಮ ಹಾಗೆ ವೈದ್ಯರು ಮತ್ತೆ ನರ್ಸ್ಗಳು ಮನೆಯಲ್ಲಿ ಇದ್ದರೆ ನಡಿಯುತ್ತಾ? 


ಇಲ್ಲ ನಡಿಯುವುದೇ ಇಲ್ಲ. ಅವರು ಹಗಲು ರಾತ್ರಿ ಕರ್ತವ್ಯ ಪಾಲಿಸಿದರು. ಅವರಿಗೆಲ್ಲ ನಾವು ಒಮ್ಮೆ ಚಪ್ಪಾಳೆ ಹೊಡಿಯಲೇಬೇಕು. ಅವರಿಗೂ ನಮ್ಮಂತೆಯೇ ಕುಟುಂಬ ಇರತ್ತದೆ. ಮಕ್ಕಳು,ಅಪ್ಪ ಅಮ್ಮ, ಎಲ್ಲರನ್ನು ಬಿಟ್ಟು ಆಸ್ಪತ್ರೆಯಲ್ಲಿ ಉಳಿದುಕೊಂಡು ಕೊರೊನಾ ರೋಗಿಗಳನ್ನು ನೋಡುವುದರಲ್ಲಿ ನಿರತರಾಗಿದ್ದರು. 

ಒಮ್ಮೆ PPE ಕಿಟ್ಟನ್ನು ಧರಿಸಿದರೆ ಎಂಟು ತಾಸು ಇರಬೇಕಿತ್ತು. ನೀರು, ಊಟ, ನಿದ್ದೆ ಎಲ್ಲವನ್ನು ಬಿಟ್ಟು ನಮಗಾಗಿ ಹಗಲಿರುಳು ಶ್ರಮಿಸಿದರು.

ರೋಗಿಗಳ ಜೊತೆ ಸಮಾಧಾನದಿಂದ ವರ್ತಿಸಿ, ಅವರು ಬೇಗ ಹುಷಾರಾಗಲಿ ಎಂದು ವಿವಿಧ ಬಗೆಯ ಚಿಕಿತ್ಸಾ ಕ್ರಮಗಳನ್ನು ತಾವೇ ಹುಡುಕುತ್ತಿದ್ದರು. 

ಪ್ರತಿಯೊಬ್ಬ ವೈದ್ಯರು ಆ ಸಮಯದಲ್ಲಿ ಜನರಿಗೆ ಹೆದರಿಸುವ ಅಥವಾ ಸಿಟ್ಟಿನಲ್ಲಿ ಗದರದೇ, ಬದಲಾಗಿ ತುಂಬಾ ಧೈರ್ಯದಿಂದ ಕರೊನಾವನ್ನು ಎದುರಿಸುವ ಬಗ್ಗೆ ಜಾಗೃತಿ ಮೂಡಿಸಿದರು. 


ಮನೆ ಮನೆಗೆ ಆಶಾ ಕಾರ್ಯಕರ್ತೆಯರು ಭೇಟಿ ನೀಡಿ, ಕೆಮ್ಮು ಜ್ವರ ಇದ್ದವರಿಗೆ ಮಾತ್ರೆಗಳನ್ನು ನೀಡಿದರು.

ಹೊರಗೆ ಹೋಗುವಾಗ ಮಾಸ್ಕ್ ಹಾಕಿಕೊಳ್ಳಿ , ಅಂತರದಲ್ಲಿ ಇದ್ದು ನಿಮ್ಮ ಕೆಲಸಗಳನ್ನು ಮುಗಿಸಿಕೊಂಡು ಬನ್ನಿ, ಸಂತೆಯಲ್ಲಿ ತಂದ ಹಣ್ಣು, ತರಕಾರಿಗಳನ್ನು ಉಪ್ಪು ನೀರಿನೊಂದಿಗೆ ತೊಳೆದು ಬಳಸಿ ಅಂತ ಮನೆ ಮನೆಗೂ ತೆರಳಿ ಮಾಹಿತಿ ನೀಡಿ ಹೋಗುತ್ತಿದ್ದರು.


ಇವರು ಮಾಡಿದ ಕಾಳಜಿಗೆ ನನ್ನದೊಂದು ಸಲಾಮ್, ನಮ್ಮ ಹಾಗೆ ಅವರು ಕೈಚೆಲ್ಲಿ ಕೂತಿದ್ದರೆ, ಭಯದಿಂದ ಅವರೂ ಒಳಗಡೆಯೇ ಇದ್ದಿದ್ದರೇ, ಇಲ್ಲಿಯವರೆಗೆ ಅದೆಷ್ಟು ಸಾವು ನೋವುಗಳು ಸಂಭವಿಸುತ್ತಿದ್ದವೋ ದೇವರೇ ಬಲ್ಲ. 


ಹೀಗಾಗಿ ಕರೊನಾ ವಾರಿಯರ್ಸ್ ಗಳೇ ನಿಜವಾದ ಸೂಪರ್ ಹೀರೋಗಳು.


Rate this content
Log in

Similar kannada story from Classics