Vijayalaxmi C Allolli

Abstract Inspirational Others

4  

Vijayalaxmi C Allolli

Abstract Inspirational Others

ಹೋಳಿ

ಹೋಳಿ

1 min
288


ನಮ್ಮ ಜಿಲ್ಲೆ ಬಾಗಲಕೋಟೆಯ ಬಣ್ಣ ಇಡಿ ದೇಶದಾದ್ಯಂತ ಚಿರಪರಿಚಿತ ಮತ್ತು ಜಗತ್ಪ್ರಸಿದ್ದವೂ ಹೌದು.ನಮ್ಮ ಜಿಲ್ಲೆಯಲ್ಲಿ ಹೋಳಿ ಹುಣ್ಣಿಮೆ ಮತ್ತು ಯುಗಾದಿಯಲ್ಲೂ ಬಣ್ಣದಾಟವನ್ನು ಆಡುತ್ತಾರೆ.ಇದನ್ನು ಗಂಡು ಮಕ್ಕಳ ಹಬ್ಬ ಎಂದೂ ಕರೆಯುತ್ತಾರೆ...ಕಾರಣ ಎಲ್ಲ ಹಬ್ಬಗಳಲ್ಲೂ ಹೆಣ್ಣು ಮಕ್ಕಳದೆ ಜೋರು ಇರುವುದರಿಂದ ಇದೊಂದನ್ನು ಮಾತ್ರ ಗಂಡು ಮಕ್ಕಳಿಗೆ ಮೀಸಲು..


ಶಿವರಾತ್ರಿ ಅಮಾವಾಸ್ಯೆಯ ಮರುದಿನದಿಂದ ಗಂಡು ಮಕ್ಕಳು ಹಲಗೆ ಬಾರಿಸುತ್ತಾ ಸಂಭ್ರಮ ಪಡುತ್ತಾರೆ.ಮನೆಮನೆಗೆ ತೆರಳಿ ಪಟ್ಟಿ ಎತ್ತುತ್ತಾರೆ.ನಮ್ಮ ಬಾಗಲಕೋಟೆಯಲ್ಲಿ ಹಲಗೆ ಮೇಳ ಎಂದೂ ಕಾರ್ಯಕ್ರಮಗಳನ್ನು ಆಯೋಜಿಸುತ್ತಾರೆ.ಹೋಳಿ ಹುಣ್ಣಿಮೆಯವರೆಗೂ ಹಲಗೆಯ ನಾದ ಎಲ್ಲೆಲ್ಲೂ ಮೊಳಗುತ್ತಿರುತ್ತದೆ.ಕೆಲವರಿಗೆ ಅದು ಕಿರಿಕಿರಿ ಮಾಡುವುದುಂಟು...


ಹುಣ್ಣಿಮೆ ದಿನ ರಾತ್ರಿ ಕಾಮದಹನ ಮಾಡಿ ಸಂಭ್ರಮ ಪಡುತ್ತಾರೆ. ಮರುದಿನ ಬಣ್ಣದಾಟಕ್ಕೆ ಚಾಲನೆ ನೀಡುತ್ತಾರೆ.ಹಳೆ ಬಾಗಲಕೋಟೆಯಲ್ಲಿ ಕೆಲವು ಹಿರಿಯರಿಂದ ಚಾಲನೆ ದೊರೆಯುತ್ತದೆ.ಅಲ್ಲಿಂದ ಮೂರು ದಿನಗಳವರೆಗೆ ಬಣ್ಣದೊಕುಳಿಯೆ ಬಣ್ಣದೊಕುಳಿ.

ಹಿಂದಿನ ಕಾಲದಲ್ಲಿ ಬಣ್ಣದ ನೀರನ್ನು ಹೊತ್ತು ಎತ್ತಿನ ಬಂಡಿಗಳು ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಹಿರಿಯರು,ಕಿರಿಯರು,ಯುವಕರು, ಮಕ್ಕಳು ಎಲ್ಲರೂ ಬಣ್ಣದಾಟವನ್ನು ಆಡುತ್ತಾರೆ.


ಒಟ್ಟಿನಲ್ಲಿ ನಮ್ಮ ಬಾಗಲಕೋಟೆ ಬಣ್ಣ ನೋಡಿದರೆ ಮನಸ್ಸೆಲ್ಲಾ ಉಲ್ಲಾಸವೇ ಉಲ್ಲಾಸ...



Rate this content
Log in

Similar kannada story from Abstract