venu g

Tragedy Others

4  

venu g

Tragedy Others

ಕರುಣಾ ಜನಕನ ಕಥೆ

ಕರುಣಾ ಜನಕನ ಕಥೆ

10 mins
137


ಕಥೆಯ ನಾಯಕ ವಿಲಾಸ್ ಒಬ್ಬ ಕೂಲಿ ಕಾರ್ಮಿಕ ತಾನು ಕೆಲಸ ಮಾಡುವ ಜಾಗದಲ್ಲೇ ಸವಿತಾ ಎನ್ನುವ ಹುಡುಗಿಯನ್ನು ೩ವರ್ಷ ಪ್ರೀತಿಸಿ ಮದುವೆಯಾಗಿರುತ್ತಾನೆ. ಇಬ್ಬರು ತುಂಬಾ ಅನ್ಯೋನ್ಯವಾದ ಜೀವನ ಸಾಗಿಸುತ್ತಿರುತ್ತಾರೆ. ವಿಲಾಸ್ ಒಂದು ದಿನವೂ ತನ್ನ ಹೆಂಡತಿಯನ್ನು ಹೆಸರು ಹಿಡಿದು ಕರೆಯಲಿಲ್ಲ ಹೋಗಿ ,ಬನ್ನಿ,ನೀವು , ಎಂದೇ ಮಾತನಾಡಿಸುತ್ತಿದ್ದ. ಅವಳಿಗಂತೂ ಅವನ ಮಾತುಗಳನ್ನ ಕೇಳಿ ತುಂಬಾ ತಮಾಷೆಯಾಗಿತ್ತು, ಇವನು ರೀ ಇಲ್ಲಿ ಬನ್ನಿ, ನೋಡಿ ನೀವು, ಹೀಗೆ ಮಾತನಾಡಿಸುತ್ತಿದ್ದ . ಕಷ್ಟವಿದ್ದರೂ ಹೇಳಿಕೊಳ್ಳದೆ ಇರುವುದರಲ್ಲೇ ಜೀವನ ನಡೆಸುತಿದ್ದರು. ದಿನ ಕಳೆದಂತೆ ಸವಿತಾ ಗರ್ಭವತಿಯಾಗಿ ಇಬ್ಬರು ಮಕ್ಕಳ ಹಡೆದು ಹೆಣ್ಣಿನ ಜನ್ಮಕೆ ಪರಿಪೂರ್ಣ ಅರ್ಥವನ್ನು ಪಡೆದಳು ಆದರೆ, ವಿಧಿಯಿವರ ಜೀವನದಲ್ಲಿ ಬಿರುಗಾಳಿಯ ಅಲೆಯನ್ನೇ ಬೀಸಿತು ಅದು ಸವಿತಳಾ ಸಾವು ಸಾಯುವ ಕೆಲವು ಘಳಿಗೆಯಲ್ಲಿ ತನ್ನ ಗಂಡನ ಬಳಿ ಎರಡು ವಿಚಾರ ಹೇಳುತ್ತಾಳೆ ತನ್ನ ಮಕ್ಕಳನ್ನು ಚೆನ್ನಾಗಿ ಓದಿಸಿ ವಿದ್ಯಾವಂತರಾಗಿ ಮಾಡಿ, ನೀವು ಮತ್ತೊಂದು ಮದುವೇ ಮಾಡಿಕೊಳ್ಳಬೇಡಿ ಇಷ್ಟು ಹೇಳಿ ಪ್ರಾಣ ಬಿಟ್ಟಳು . ವಿಲಾಸ್ ಇನ್ನು ಚಿಕ್ಕ ವಯಸ್ಸು ೨೯ ವರ್ಷವಷ್ಟೇ ಮತ್ತೆ ಮರು ಮದುವೇ ಮಾಡಿಕೋ ಈ ಹಸುಳೆ ಕಂದಮ್ಮ ನೋಡಿಕೊಳ್ಳಲು ಒಂದು ಹೆಣ್ಣು ದಿಕ್ಕು ಬೇಕು ಎಂದು ಸಂಬಂಧಿಕರು ಹೇಳಿದರು ಅವನು ಒಪ್ಪಲಿಲ್ಲ. ತನ್ನ ಮಕ್ಕಳನು ತಾನೇ ಸಾಕುತ್ತನೇ ಎಂಬ ಧೃಡ ಮನಸ್ಸು ಮಾಡಿಕೊಂಡು, ಬೆಂಗಳೂರಿನತ್ತ ದಾಪುಗಾಲು ಹಾಕುತ್ತಾನೆ.ಬೆಂಗಳೂರಿನಲ್ಲಿ ವಿಲಾಸ್ಗೆ ಮಣಿ ಎನ್ನುವ ವ್ಯಕ್ತಿಯ ಪರಿಚಯವಾಗುತ್ತದೆ. ಮಣಿ ವಿಲಾಸ್ಗೆ ತುಂಬಾ ಆತ್ಮೀಯನಾಗುತ್ತಾ ಹೋಗುತ್ತಾನೆ, ಇಬ್ಬರು ಒಂದೇ ಕಡೆ ಕೆಲಸಕ್ಕೆ ಸೇರುತ್ತಾರೆ ಇವರಿಬ್ಬರ ನಡುವೆ ಉತ್ತಮ ಬಾಂಧವ್ಯ ಬೆಸೆಯುತ್ತದೆ.


ಸವಿತಾ ತೀರಿಕೊಂಡ ಒಂದು ವರ್ಷದ ಬಳಿಕ ವಿಲಾಸ್ ಅ ಮಕ್ಕಳಿಗೆ ನಾಮಕರಣ ಮಾಡಿದ. ಮೊದಲನೆಯವನ ಹೆಸರು ಅಜಯ್ ಮತೊಬ್ಬ ಧ್ರುವ ಎಂದು.


ತನ್ನ ಮಕ್ಕಳನ್ನು ಚೆನ್ನಾಗಿ ಓದಿಸಬೇಕು ಎಂದು ಹಗಲು ರಾತ್ರಿ ಎನ್ನದೇ ದುಡಿಯುತ್ತಿರುತ್ತಾನೆ. ತಾನು ಉಪವಾಸವಿದ್ದು ಮಕ್ಕಳಿಗೆ ಮೂರೂ ಹೊತ್ತು ಊಟ ಮಾಡಿಸುತ್ತಿದ್ದ . ಮಕ್ಕಳಿಗೆ ಯಾವುದೇ ತೊಂದರೆಯಾಗದಂತೆ ಸಾಕುತ್ತಿದ್ದ . ತನಗೆ ಚಳಿಯಾದರು ಮಕ್ಕಳಿಗೆ ಸ್ವೇಟರ್ ಕೊಡಿಸುತಿದ್ದ . ತಾನು ಹರಿದ ಚಪಲ್ಲಿ ಹಾಕಿಕೊಂಡಿದ್ದರು ಮಕ್ಕಳಿಗೆ ಚಪ್ಪಲಿ ಮಾಸುಹೋಗುವ , ಒಲಿಗೆ ಬಿಡುವ ಮುನ್ನ ಹೊಸ ಚಪ್ಪಲಿ ಖರೀದಿಸಿ ತೊಡಿಸುತಿದ್ದ . ಅವರ ಆನಂದದಲ್ಲೇ ತನ್ನ ಖುಷಿ ಕಾಣುತಿದ್ದ. ಹಾಗೆಯೇ ತಂದೆಯ ಮಾತು ಅಜಯ್ ಮತ್ತು ಧ್ರುವ ಮೀರುತ್ತಿರಲಿಲ್ಲ, ಎಲ್ಲ ಪರೀಕ್ಷೆಗಳನ್ನು ಎದುರಿಸಿ ತುಂಬಾ ಸುಲುಭವಾಗಿ ಜಯಿಸುತ್ತಿದ್ದರು. ಅಜಯ್ ಸಾಧನೆಗೆ ಅವನ ಕಾಲೇಜಿನ ಪ್ರಿನ್ಸಿಪಾಲ ಅವನಿಗೆ ವಿದೇಶಕ್ಕೆ ಕಳುಹಿಸಿ ಇನ್ನು ಹೆಚ್ಚು ಓದಿಸಿ ಎಂದು ವಿಲಾಸ್ ಗೆ ತಿಳಿಸುತ್ತಾರೆ ಅವನಿಗೆ ವಿಧ್ಯೆ ಒಲಿದಿದೆ ಅವನ ಭವಿಷ್ಯ ಸುಂದರಗೊಳಿಸಿ ಎಂದು ಕೇಳಿಕೊಳ್ಳುತ್ತಾರೆ. ಈ ಮಾತುಗಳು ವಿಲಾಸ್ ಗೆ ಒಂದು ರೀತಿ ಖುಷಿ ತನ್ನ ಮಗನ ಬಗ್ಗೆ ಪ್ರಿನ್ಸಿಪಾಲ್ ಒಳ್ಳೆಯ ಮಾತು ಮಾತುಗಳನ್ನು ಕೇಳಿ ಅವನಿಗೆ ಹಾಲುಕುಡಿದಷ್ಟು ಸಂತಸವಾಗಿತ್ತು . ವಿಲಾಸ್ ತನ್ನ ಮಗ ಚೆನ್ನಾಗಿ ಓದಬೇಕು ಎಂಬುದಷ್ಟೇ ಅವನ ಚಿಂತೆಯಾಗಿತ್ತು. ಅದಕ್ಕಾಗಿ ಎಷ್ಟೇ ತೊಂದರೆ ಬಂದರು ಎದುರಿಸುತ್ತೇನೆ ಎಂಬ ಆತ್ಮ ಸ್ಥೈರ್ಯ ಅವನಲ್ಲಿ ಹೆಚ್ಚಾಗಿ ತುಂಬಿತ್ತು ಅಜಯ್ಗೆ ಅವರ ಮಾತುಗಳು ಕೇಳುವುದಕ್ಕೆ ಇಷ್ಟವಾಗಿದ್ದರೂ ನಾವು ಅಷ್ಟು ಹಣ ನಮ್ಮ ಬಳಿ ಇಲ್ಲ ಎನ್ನವ ವಿಚಾರ ಅವನಿಗೆ ಗೊತ್ತಿತ್ತು. ಆದ್ರೆ ವಿಲಾಸ್ ತನ್ನ ಮಗ ವಿದೇಶದಲ್ಲಿ ಚೆನ್ನಾಗಿ ಓದಿಸಲೇ ಬೇಕು ಎಂಬ ಹಠ ಕಟ್ಟುತ್ತಾನೆ.ಇನ್ನು ಪ್ರಿನ್ಸಿಪಾಲ್ ನಾನು ಅಲ್ಲಿನ ಹಾಸ್ಟೇಲ್ ವ್ಯವಸ್ಥೆ ನಾನು ಮಾಡುತ್ತೇನೆ, ಅದರ ಬಗ್ಗೆ ಚಿಂತಿಸಬೇಡಿ. ವಿಲಾಸ್ ಎಲ್ಲದಕ್ಕೂ ಒಪ್ಪಿಕೊಳ್ಳುತ್ತಾನೆ. ಪ್ರಿನ್ಸಿಪಾಲ್ ನೀವು ಸ್ವಲ್ಪ ಹಣ ಅವನ ಜೊತೆ ಮಾಡಿ ಕಳಿಸಿ ಅಷ್ಟೇ . ವಿಲಾಸ್ ಎಷ್ಹ್ತು ಎಂದು ಕೇಳುತ್ತಾನೆ? ಪ್ರಿನ್ಸಿಪಾಲ್ ಒಂದು ಲಕ್ಷ ವಿಲಾಸ್ ಗಾಬರಿಗೊಳ್ಳದೆ ಸರಿ ಮಾಡುತ್ತನೆ ಎಂದು ಹೇಳುತ್ತಾನೆ.


ಸರಿ ಎಂದು ಮುಂದಿನ ಕೆಲಸ ನಾನು ಮಾಡುತ್ತೇನೆ ಎಂದು ಪ್ರಿನ್ಸಿಪಾಲ್ ಹೇಳಿ ನಮಸ್ಕರಿಸಿ ಹೋಗುತ್ತಾನೆ .


ಈ ವಿಚಾರವನ್ನು ವಿಲಾಸ್ ತನ್ನ ಗೆಳೆಯ ಮಣಿಯ ಬಳಿ ಮಾತನಾಡುತ್ತಾನೆ. ಆದ್ರೆ ಮಣಿ ಈಗ ನಿನ್ನ ಮಗನನ್ನು ವಿದೇಶದಲ್ಲಿ ಓದಿಸಲು ನಿನ್ನ ಬಳಿ ಹಣವಿದಿಯೇ ಎಂದು ಪ್ರಶ್ನಿಸಿದ ? ಅದಕ್ಕೆ ವಿಲಾಸ್ ನಾವು ೫೦೦೦೦ ಸಾವಿರದ ಚೀಟಿ ಹಾಕಿದೆಯಲ್ಲ ಅದನ್ನು ತೆಗೆದರೆ ಆಯಿತು. ಮತ್ತೆ ೫೦೦೦೦ ಸಾವಿರ ಸಾಲ ಕೇಳಿದರೆ ಆಯಿತು ಎಂದು ಉತ್ತರಿಸುತ್ತಾನೆ. ಮಣಿ ಸರಿ ಎಂದು ಹೇಳಿ ಇಬ್ಬರು ಒಂದು ಹೋಟೆಲ್ ಬಳಿ ಹೋಗಿ ಕಾಫಿ ಕುಡಿದು ಮನೆಯತ್ತ ಹೆಜ್ಜೆ ಹಾಕುತ್ತಾರೆ.ಹೀಗೆ ದಿನ ಕಳೆದಂತೆ ಅಜಯ್ ವಿದೇಶಕ್ಕೆ ಪ್ರಯಾಣ ಬೆಳೆಸಲು ಎಲ್ಲ ಸಿದ್ದತೆಯನ್ನು ಮಾಡಿಕೊಳ್ಳುತ್ತಾನೆ. ಇತ್ತ ಮಗನ ಅಸೆಯನ್ನು ಈಡೇರಿಸುವ ಸಲುವಾಗಿ ವಿಲಾಸ್ ಓವರ್ ಟೈಮ್ ಕೆಲಸ ಮಾಡಿ ಹಣವನ್ನು ಮತ್ತಷ್ಟು ಕೂಡಿಸಲು ಪ್ರಯತ್ನ ನಡೆಸುತ್ತಾನೆ.


ಒಂದು ದಿನ ವಿಲಾಸ್ ಮತ್ತು ಮಣಿ ಚೀಟಿ ವ್ಯಾವಹಾರ ನಡೆಸುವ ಆಫೀಸ್ ಬಳಿ ಹೋಗುತ್ತಾನೆ, ಅಲ್ಲಿ ಜನಜಂಗುಳಿ ಇರುವುದು ಕಂಡುಬರುತ್ತದೆ . ಅಲ್ಲಿ ರಸ್ತೆಯಲ್ಲಿ ಹೋಗುವವನ್ನು ಮಾತನಾಡಿಸಿ ಯಾಕೆ ಜನ ಹಾಗೆ ಸೇರಿದ್ದಾರೆ ಎಂದು ವಿಚಾರಿಸಿದ ? ಅವನು ಅದಾ ಆ ಆಫೀಸ್ ನಲ್ಲಿ ಚೀಟಿ ವ್ಯಾವಹರ ನಡೆಸುತ್ತಿದ್ದ ಎಲ್ಲರೂ ಮೋಸಗಾರರು ಜನರ ಹಣ ತೆಗೆದುಕೊಂಡು ಓಡಿ ಹೋಗಿದ್ದಾರೆ. ಅದಕ್ಕೆ ಜನ ಆಫೀಸ್ ,ಮುಂದೆ ಗಲಾಟೆ ಮಾಡುತಿದ್ದರೆ ಎಂದು ಹೇಳಿ ಹೋದ.


ವಿಲಾಸ್ ಒಂದು ನಿಮಿಷ ನೆಲಕ್ಕೆ ಕುಸಿದ ತಾನು ಕಷ್ಟಪಟ್ಟು ಬೆವರು ಹರಿಸಿದ ಹಣ ಇಂದು ಮಾಯವಾಗಿ ಹೋಯಿತು ಎಂದು ಹಣೆ ಹಣೆ ಚೆಚ್ಚು ಕೊಂಡ. ಹಣ ಕಳೆದು ಕೊಂಡವರು ಹಿಡಿ ಶಾಪ ಹಾಕುತ್ತಿರುವುದು ಮುಗಿಲು ಮುಟ್ಟಿತು ನೊಂದವರು ಸಿಟ್ಟಿಗೆ ಕಲ್ಲು ತೆಗೆದು ಆಫೀಸ್ ಮೇಲೆ ಹೆಸೆದರು ಅಷ್ಟುಹೊತ್ತಿಗೆ ಪೊಲೀಸರು ಬಂದು ಲಾಠಿ ಚಾರ್ಜ್ ಮಾಡಿ ಹತೋಟಿಗೆ ತಂದರು.


ಈಗ ವಿಲಾಸ್ ಏನು ಮಾಡಬೇಕು ಎಂಬ ಗೋಜಿಗೆ ಸಿಲುಕಿದ. ಮನೆಗೆ ಹೋಗಿ ಮಗನಿಗೆ ಏನು ಹೇಳುವುದು ,ಅಪ್ಪನಾಗಿ ಅವನ ಭವಿಷ್ಯವನ್ನು ರೂಪಿಸಲು ಆಗದ ನಾನು ಅವನ ಮುಂದೆ ಹೇಗೆ ನಿಲ್ಲಲಿ ? ಎಂದೆಲ್ಲ ಪ್ರಶ್ನೆಯ ಸುರಿಮಳೆಯೇ ಅವನ ತಲೆಗೆ ಹೊಕ್ಕಿತು.


ಅದಾಗಲೇ ಕತ್ತಲೂ ಎಲ್ಲೆಡೆ ಕವಿಯಿತು. ವಿಲಾಸ್ ಪಯಣ ಬೆಳೆಸಲಿ ಎಂದು ಚಿಂತಿಸುತಿದ್ದ .


ಅವನ ಕಾಲುಗಳು ಸಹ ಅವನಿಗೆ ಜೊತೆಯಾಗಲು ಹಿಂದೇಟು ಹಾಕುತಿದ್ದವು.


ವಿಲಾಸ್ ಮಣಿಗೆ ಒಂದು ಮಾತು ಹೇಳಿದ ನೀನು ಮನೆಗೆ ಹೋಗು ನಾನು ಸ್ವಲ್ಪ ಸಮಯ ಬಿಟ್ಟು ಹೋಗುತ್ತೇನೆ ಎಂದು ಹೇಳಿದ,ಆದರೇ ಮಣಿ ಒಪ್ಪಲಿಲ್ಲ ಹೋಗುವುದಾದರೆ ಇಬ್ಬರು ಒಟ್ಟಿಗೆ ಹೋಗುವ ಎಂದು ಹಠ ಹಿಡಿದ ಆದರೂ ವಿಲಾಸ್ ಅವವನ್ನು ಮನ ಒಲಿಸಿ ಮನೆಗೆ ಕಳುಹಿಸಿದ. ಹೀಗೆ ವಿಲಾಸ್ ಒಂದು ಅಲ್ಲೇ ಕಟ್ಟೆ  ಮೇಲೆ ಕೂತು ಚಿಂತಿಸುತ್ತಾನೆ. ತಲೆಗೆ ಏನು ಹೊಳೆಯದೆ ಪೆಚ್ಚಾಗಿ ಕೂತಿರುತ್ತಾನೆ. ಎಲ್ಲ ಅಂಗಡಿ ಮುಗ್ಗಟ್ಟುಗಳು ಬಾಗಿಲು ಹಾಕುವ ಸಮಯವಾಗಿತ್ತು ವಿಲಾಸ್ ನೋಡಿದ ತಾನು, ಮನೆಗೆ ತೆರಳೋಣ ದೇವರಿದ್ದನೇ ಎಂದು ನೆನೆದು ಚಪ್ಪಲಿ ಹಾಕಿಕೊಂಡು ಹೊರಡುತ್ತಾನೆ.


ಹೋಗುವ ದಾರಿಯಲ್ಲಿ ಒಂದು ದೇವಸ್ಥಾನ ಕಾಣುತ್ತದೆ. ದೇವಾಲಯದ ಬಳಿ ಹೋಗುತ್ತಾನೆ ಆದ್ರೆ ದೇವಾಲಯ ಬಾಗಿಲು ಮುಚ್ಚಿರುತ್ತದೆ.


ದೇವರ ಮುಂದೆ ಪ್ರಾರ್ಥಿಸಿ ತನ್ನ ಸಮಸ್ಯೆ ತೋಡಿಕೊಳ್ಳುತಾನೆ. ಆಗ ಗಾಳಿಯು ಜೋರಾಗಿ ಬೀಸುತ್ತದೆ. ಧೂಳಿನ ಕಣಗಳು ಇವನ ಕಣ್ಣಿಗೆ ಬೀಳುತ್ತದೆ ಕಣ್ಣು ಉಜ್ಜಿಕೊಳ್ಳುವ ಆ ಸಂದರ್ಭದಲ್ಲಿ ಅವನ ಮುಖಕ್ಕೆ ಬಂದು ಒಂದು ಕಾಗದ ರಾಚಿ ಬಡಿಯುತ್ತದೆ.


ಅವನು ಅದನ್ನು ಕೈಗೆ ತೆಗೆದು ನೋಡಬೇಕು ಅಷ್ಟೊತ್ತಿಗೆ ಮಣಿ ಬರುತ್ತಾನೇ, ನಿನ್ನ ಎಲ್ಲಿ ಅಂತ ಹುಡುಕೋದೂ ನಿನ್ನ ಮಕ್ಕಳು ನೀನು ಬಂದಿಲ್ಲ ಎಂದು ಗಾಬರಿಗೊಂಡು ನನ್ನ ಮನೆ ಬಳಿ ಬಂದು ಕೇಳಿದರು ನೀನು ನೋಡಿದ್ರೆ ಮನೇಗೆ ಹೋಗದೆ ಇಲ್ಲಿ ಬಂದು ಕುಳಿತಿದ್ದೀಯಾ ಇದು ಸರಿನಾ ಎಂದು ಪ್ರಶ್ನಿಸಿದ ?


ವಿಲಾಸ್ ಇಲ್ಲ ನಾನು ಮನೆಗೆ ತೆರಳಬೇಕು ಮುನ್ನಡೆದಷ್ಟೇ ಗಾಳಿ ಜೋರಾಗಿ ಬಡಿತು ಅದಕ್ಕೆ ನಿಂತುಕೊಂಡೆ. ಮಣಿ ಸರಿ… ಸರಿ …ನಡಿ ನಡಿ ಟೈಮ್ ಆಯಿತು ನಿನ್ನ ಮಕ್ಕಳಿಗೆ ಮೊದಲು ನೀನು ಮುಖ ತೋರಿಸು ನಡಿ ಎಂದು ತನ್ನ ಮನೆಗೆ ಕರೆದು ಕೊಂಡು ಹೋದ ಆ ಕಾಗದವನ್ನು ತನ್ನ ಕಿಸೆಯಲ್ಲಿ ಇಟ್ಟುಕೊಂಡು ಮುನ್ನೆಡೆದ.


ಅಜಯ್ ಮತ್ತು ಧ್ರುವ ತನ್ನ ತಂದೆಯನ್ನು ನೋಡಿದ ತಕ್ಷಣವೇ ಓಡಿ ಬಂದು ತಬ್ಬಿಕೊಂಡರು ಒಂದೇ ಸಮನೆ ಅಳಲು ಶುರು ಮಾಡಿದರು. ವಿಲಾಸ್ ಇಬ್ಬರು ಮಕ್ಕಳನ್ನು ಸಮಾಧಾನ ಮಾಡಿ ಹೇಳಿದ ಏನೋ ಇಷ್ಟು ದೊಡ್ಡವರಾಗಿದ್ದೀರಾ ಅಳುತಿರಲ್ಲೋ ಅಪ್ಪ ನಾವು ನೋಡರಿಗೆ ದೊಡ್ಡವರತರಾ ಕಾಣಬಹುದು ಆದ್ರೆ ನಿನ್ನಗೆ ನಾವು ಇನ್ನು ಮಕ್ಕಳೇ ಅಪ್ಪ. ಈ ಮಾತನ್ನು ಕೇಳಿದ ವಿಲಾಸ್ ಯಾವ ಜನ್ಮದ ಪುಣ್ಯವೋ ಏನೋ ಇಂಥ ಮಕ್ಕಳನ್ನು ಪಡೆದಿದ್ದೀನೆ ಎಂದು ಮಣಿಗೆ ಹೇಳಿದ.


ಇಬ್ಬರನ್ನು ಮಕ್ಕಳನ್ನು ತನ್ನ ಮನೆಗೆ ಕರೆದುಕೊಂಡು ಹೋಗಿ ತಟ್ಟೆಗೆ ಅನ್ನ ಕಲಸಿ ಇಬ್ಬರು ಮಕ್ಕಳಿಗೂ ಕೈ ತುತ್ತು ನೀಡಿದ ಅಜಯ್ ಮತ್ತು ಧ್ರುವ ಕೂಡ ತನ್ನ ತಂದೆಗೇ ಊಟ ಮಾಡಿಸಿದರು ತಂಗಾಳಿಯ ಗಾಳಿಯಲಿ ಚಂದಿರನ ಕೆಳಗೆ ಮೂರೂ ಜನ ಮಲಗಿದರು.


ಹೀಗೆ ನೆಮ್ಮದಿಯ ನಿದ್ದೆ ಮುಗಿಸಿ ಮುಂಜಾನೆ ಎದ್ದು .ಬಿಸಿ ಬಿಸಿ ಕಾಫಿ ಜೊತೆಗೆ ತನ್ನ ಮಕ್ಕಳನ್ನು ಎಚ್ಚರಿಸುತ್ತಾನೆ.


ಆದರೆ ಧ್ರುವ ಅದಾಗಲೇ ಎದ್ದು ಎಲ್ಲಿಗೋ ಹೋಗಿರುತ್ತಾನೆ ಅವನನ್ನು ಹುಡುಕುತ್ತ ಮನೆಯ ಸುತ್ತ ನೋಡಿದ ಎಲ್ಲಿಯೂ ಕಾಣಲಿಲ್ಲ ಅಜಯ್ ನನ್ನ ಎಚ್ಚರಿಸಿ ಧ್ರುವ ಎಲ್ಲಿ ಹೋದ ಎಂದು ವಿಚಾರಿಸುತ್ತಾನೆ.ಅಜಯ್ ತನಗೆ ತಿಳಿಯದು ಎಂದು ಹೇಳುವ. ವಿಲಾಸ್ ಸರಿ ತಿಂಡಿ ಮಾಡಲು ತೆರಳುವ.ಸ್ವಲ್ಪ ಸಮಯದ ನಂತರ ಧುವ ಮನೆಗೆ ಮರಳಿದ ವಿಲಾಸ್ ಅವವನ್ನು ಕೇಳಿದ ಎಲ್ಲಿ ಹೋಗಿದ್ದೆ ಎಂದು ಇಲ್ಲ ನಾನು ಸ್ನೇಹಿತನ ಮನೆಗೆ ಹೋಗಿದ್ದೆ ಪುಸ್ತಕ ತರಲು ಹೇಳಿ ಸುಮನಾಗಿಸಿದ . ಅಸಲಿಗೆ ಅವನು ಹೋಗಿದ್ದೆ ಬೇರೆ ಕಡೆ.


ಅಜಯ್ ತನ್ನ ತಂದೆಯನ್ನು ಮತ್ತೆ ಕೇಳಿದ ಅಪ್ಪ ಫಾರೀನ್ ಗೆ ಹೋಗಲು ಇನ್ನು ಸ್ವಲ್ಪ ದಿನವೇ ಬಾಕಿ ಇರುವುದು ಎಂದು . ವಿಲಾಸ್ ಚಿಂತಿಸ ಬೇಡ ನೀನು ಹೊರಡುವ ವ್ಯವಸ್ಥೆ ಮಾಡಿಕೋ ನಾನು ಹಣದ ವ್ಯವಸ್ಥೆ ಮಾಡುತ್ತೇನೆ ಎಂದು ತಿಳಿಸಿದ.


ಹೀಗೆ ವಿಲಾಸ್ ಕೆಲಸ ಹೋಗುವ ಸಮಯ ತನ್ನ ಹಳೆಯ ಬಟ್ಟೆಗಳನ್ನು ತೆಗೆದು ಬೇರೆ ಬಟ್ಟೆ ಧರಿಸುವ ಸಮಯ ತನ್ನ ಜೇಬಿಗೆ ಕೈ ಹಾಕಿ ಏನಾದರೂ ಇದೆಯಾ ಎಂದು ಗಮನಿಸುತ್ತಾನೆ ಕೆಲವು ಚಿಲ್ಲರೆಯ ಜೊತೆ ಒಂದು ಚೀಟಿ ಸಿಗುತ್ತದೆ ಏನೆಂದು ನೋಡಿದ ಕಾಗದದಲ್ಲಿ ಒಂದು ಪ್ರಕಟಣೆ ಇತ್ತು ನನ್ನ ಮಗನಿಗೆ ಕಿಡ್ನಿ ಸಮಸ್ಯೆಯಿಂದ ಬಳಲುತಿದ್ದಾನೆ,ಯಾರಾದರೂ ದಾನಿಗಳು ತಮ್ಮ ಒಂದು ಕಿಡ್ನಿ ನೀಡಿ ನನಗೆ ಪುತ್ರ ಭಿಕ್ಷೆ ನೀಡಿ. ನೀವು ಕೇಳಿದಷ್ಟು ಹಣ ನೀಡಲು ಸಿದ್ದ ಎಂದು ಬರದಿರುತ್ತಾರೆ. ನನ್ನ ಸಂಪರ್ಕಿಸಲು ಕೆಳಗಿನ ವಿಳಾಸಕ್ಕೆ ನೋಡಬಹುದು


ಚಂದ್ರಕಾಂತ್ ದೇಸಾಯಿ


ಮನೆ ನ, ೧೧ ದೇಸಾಯಿ ಬೀದಿ,


ಪುಣೆ


ಇದನ್ನು ನೋಡಿದ ಯಾರೋ ಪಾಪ ತನ್ನ ಮಗನಿಗಾಗಿ ತಂದೆ ಈ ಪರಿ ಕಷ್ಟಪಡುವುದನ್ನು ನೋಡಿ ಮರುಗಿದ ದೇವರ ಕಡೆ ಮುಖ ಮಾಡಿ ಏನಪ್ಪಾ ನಿನ್ನ ಲೀಲೆ ಎಂದು ಹೇಳಿ ಆ ಕಾಗದವನ್ನು ಅಲ್ಲಿಯೇ ಇಟ್ಟು ಕೆಲಸಕ್ಕೆ ತೆರಳಿದ.


ವಿಲಾಸ್ ತನ್ನ ಗೆಳೆಯರ ಬಳಿಯೂ ಸಹ ಹಣಕ್ಕಾಗಿ ಕೇಳಿದ ಎಲ್ಲರೂ ಇಲ್ಲ ಎಂದರೇ ಹೊರೆತು ಯಾರೋ ಮಾತಿಗಾದರು ನೋಡೋಣ ಎನ್ನಲಿಲ್ಲ. ವಿಲಾಸ್ ತನ್ನ ಯಜಮಾನನ್ನೇ ಹೋಗಿ ಮಾತನಾಡಿಸುತ್ತಾನೆ ಅವನು ಸಹ ನನ್ನ ಬಳಿ ಹೀಗಾ ಹಣವಿಲ್ಲ ಕೆಲಸ ಬೇರೆ ಮಂದಗಾತಿಯಲ್ಲಿ ಸಾಗುತಿದೆ ವ್ಯಾಪಾರವಿಲ್ಲ ಎಂದು ಸಮಜಾಯಿಷಿ ಕೊಟ್ಟು ಕಳಿಸಿದ,ಮಧ್ಯಾಹ್ನ ಊಟದ ಸಮಯ ಮಣಿ ವಿಲಾಸ್ ಕರೆದು ಬಾ ಊಟ ಮಾಡೋಣ ಎಂದು ಕರೆದ ಆದ್ರೆ ವಿಲಾಸ್ಗೆ ತನ್ನ ಮಗನು ಹೇಳಿದ ಮಾತೇ ಮತ್ತೆ ಮತ್ತೆ ನೆನಪಾಗುತಿತ್ತು.


ಎಲ್ಲ ಕಡೆ ಕೇಳಿದರು ಒಂದೇ ಉತ್ತರ ಇಲ್ಲ ಎಂದು. ನನ್ನ ಬಳಿ ಚಿನ್ನ ಒಡವೆ ಏನೂ ಇಲ್ಲ ಅಡವಿಡಲು.ನನ್ನದು ಎಂದು ಊರಿನಲ್ಲಿ ಯಾವ ಮನೆ, ಹೊಲ, ಜಮೀನು ಕೂಡ ಇಲ್ಲ.


ಹೀಗೆ ಚಿಂತಿಸುತ್ತಲೇ ಮನೆಗೆ ಮರಳಿದ. ಅದಾಗಲೇ ಎಲ್ಲ ಸಿದ್ಧವಿದೆ ಎಂದು ಅಜಯ್ ತೋರಿಸಿದ . ಅವ್ನಿಗೆ ನಿನ್ನ ತಂದೆ ಒಬ್ಬ ನಿರ್ಗತಿಕ ಎಂದು ಹೇಳಲು ಸಾಧ್ಯವಿಲ್ಲ. ಅವನ ಕನಸನ್ನು ಕೇಡವಲು ಸಾಧ್ಯವಿಲ್ಲ.


ಹಾಗೆ ಚಿಂತಿಸುತ್ತಲೇ ಮಲಗಿದ. ಮುಂಜಾನೆಯಾಯಿತು ವಿಲಾಸಗೆ ಎಚ್ಚರವೇ ಆಗಲಿಲ್ಲ ಮಲಗೆಯಿದ್ದ ಅಜಯ್ ಎದ್ದು ಕಾಫಿ ಮಾಡಿ ತನ್ನ ತಂದೆಗೆ ನೀಡಿದ ವಿಲಾಸ್ ಎದ್ದು ಅಯ್ಯೋ ಇದೇನಿದು ಇವತ್ತು ಇಷ್ಟು ಹೊತ್ತು ಮಲಗಿದೆ ಎಚ್ಚರವೇ ಆಗಲಿಲ್ಲವಲ್ಲ ಎಂದು ತಾನ್ನನೇ ತಾನು ಕೇಳಿಕೊಳ್ಳುತಿದ್ದ. ವಿಲಾಸ್..... ಧ್ರುವ ಬಗ್ಗೆ ವಿಚಾರಿಸಿದ ಎಲ್ಲಿ? ಅವನು ಎಂದು ಅಜಯ್ ಗೊತ್ತಿಲ್ಲ ನಾನು ಏಳುವ ಮುಂಚೆಯೇ ಅವನು ಎದ್ದು ಹೋಗಿದ್ದ.


.


ವಿಲಾಸಗೆ ಯಾಕೋ ಅವನ ಬಗ್ಗೆ ಅನುಮಾನ ಬಂತು ಇವತ್ತು ಬರಲಿ ಅವನು ಕೇಳಿಯೇ ಬಿಡುತ್ತೇನೆ ಎಲ್ಲಿಗೆ ಹೋಗುತ್ತಾನೆ ಎಂದು.


ಧ್ರುವ ಸ್ವಲ್ಪ ಹೊತ್ತು ಬಿಟ್ಟು ಮನೆಗೆ ಮರಳಿದ ಅವನ ಶಬ್ದ ಕೇಳಿಸಿತು. ಅಪ್ಪ ಎಂದು ಕರೆಯುತ್ತ ಅಡುಗೆ ಮನೆಕಡೆ ಧಾವಿಸಿದ ವಿಲಾಸ್ ಇವನ ಮುಖ ನೋಡಿ ಎಲ್ಲಿಗೆ ಹೋಗಿದ್ದೆ ಎಂದು ಕೇಳಿದ ಅಪ್ಪ ಬುಕ್ಸ್ ತೆಗೆದುಕೊಂಡು ಬರಲು ಬೆಳಿಗ್ಗೆ ಬೆಳ್ಳಿಗ್ಗೆ ನಿನಗೆ ಯಾರು ಬುಕ್ಸ್ ಕೊಡೋರು ತೋರಿಸು ನಡೆ ಎಂದು ಕೇಳಿದ.


ಧ್ರುವ ಇಲ್ಲ ಅಪ್ಪ ಅವನು ಹೊರಟು ಹೋದ, ವಿಲಾಸ್, ನನಗೆ ನಿನ್ನ ಮಾತು ಮತ್ತು ನಿನ್ನ ಕಣ್ಣು ನಿಜ ಹೇಳುತ್ತಿಲಾ ಎಂದು ನನಗೆ ಅನಿಸುತಿದೆ.


ಇಷ್ಟು ಮಾತು ಕೇಳಿದ ತಕ್ಷಣ ಧ್ರುವ ಮುಖ ಕೊಂಚ ತಗ್ಗಿತು. ಏನು ಹೇಳಬೇಕು ತಿಳಿಯಲಿಲ್ಲ.ವಿಲಾಸ್ ಅವನ ಬಾಯಿಂದ ನಿಜ ತಿಳಿಯಲು ಕಾತುರನಾಗಿದ್ದ . ಕಾದು ನೋಡಿದ ಅವನ ಬಾಯಿಯಿಂದ ಒಂದು ಮಾತು ಹೊರ ಬರಲಿಲ್ಲ. ವಿಲಾಸ್ ಕೊನೆಗೆ ಧ್ರುವನನ್ನ ಕರೆದು ಕೊಂಡು ಸೀದಾ ಅವನ ತಾಯಿ ಫೋಟೋ ಬಳಿ ಹೋಗಿ ನಿನ್ನ ತಾಯಿಯಾ ಮೇಲೆ ಪ್ರಮಾಣ ಮಾಡಿ ಹೇಳು ಬೆಳಗ್ಗೆ ಎದ್ದು ಎಲ್ಲಿಗೆ ಹೋಗುತ್ತಿರುವೆ .


ಧ್ರುವ ಕಿರುದನಿಯಲ್ಲಿ ಅಪ್ಪ ನನ್ನ ಕಾಲೇಜಿನಲ್ಲಿ ಹಲವಾರು ಕೆಲಸಗಳನ್ನು ನೀಡುತ್ತಾರೆ, ಪ್ರಾಜೆಕ್ಟ್ ನೀಡುತ್ತಾರೆ ಅದಕ್ಕೆಲ್ಲ ತುಂಬಾ ಹಣಬೇಕು ನೀವು ಅಣ್ಣನಿಗೆ ತುಂಬಾ ಖರ್ಚು ಮಾಡಿ ಓದಿಸುತ್ತಿದ್ದೀರಾ. ಅದಕ್ಕೆ ಹಣ ಸಾಕಾಗುತ್ತಿಲ್ಲ ಅದಕ್ಕೆ ನಾನು ನಿಮ್ಮ ಬಳಿ ಕೇಳಬಾರದು ಎಂದು ನಾನು... ನಾನು... ರಾಗ ತೆಗೆದ


ವಿಲಾಸ್ ಹೇಳು ಅದಕ್ಕೆ ನೀನು .ಧ್ರುವ ನಾನು ಬೆಳಗ್ಗೆ ಎದ್ದು ನ್ಯೂಸ್ ಪೇಪರ್ ಮನೆ ಮನೆಗೆ ಹಾಕಿ ಬರುತ್ತಿದ್ದೇನೆಂದು ಹೇಳಿದ .


ಅವನ ಮಾತು ಕೇಳಿದ ವಿಲಾಸ್ ಮರು ಮಾತಾಡದೆ ಸುಮ್ಮ್ನೆ ಹೊರಗೆ ಹೋಗಿ ಜಗುಲಿಯ ಮೇಲೆ ಕುಳಿತು ಕಣ್ಣೀರೂ ಇಡುತ್ತಾನೆ. ಹೊರ ಬಂದ ಧ್ರುವ ತನ್ನ ತಪ್ಪನ್ನು ಮನ್ನಿಸುವಂತೆ ಕೇಳುತ್ತಾನೆ , ಆದರೆ ವಿಲಾಸ್ ತನ್ನ ಮಗನ ಕೈ ಹಿಡಿದು ದಯವಿಟ್ಟು ನನ್ನ ಕ್ಷಮಿಸು ಮಗ ನಿನ್ನ ನಾನು ತಪ್ಪು ತಿಳಿದಿದ್ದೆ.


ಅದರೇ ಧ್ರುವ ತನ್ನ ತಂದೆಯ ಕಣ್ಣೀರು ವರೆಸುತ ಅಪ್ಪ ಈಗ ನೀನು ಏನು ಆಲೋಚನೆ ಮಾಡಬೇಡಾ ತಪ್ಪು ನನ್ನದೇ ನಿನ್ನ ಒಪ್ಪಿಗೆ ಪಡೆದು ನಾನು ಕೆಲಸ ಮಾಡಬೇಕಿತ್ತು .ಆದ್ರೆ ಹೇಳದೆ ಮಾಡಿದ್ದು ನನ್ನ ತಪ್ಪು ಎಂದು ಹೇಳಿದ .


ವಿಲಾಸ್ ತನ್ನ ಮಗ ಧ್ರುವ ನನ್ನ ಬಿಗಿದಪ್ಪಿಕೊಂಡು ಅವನ ಬೆನ್ನು ತಟ್ಟಿದ. ಆ ಸಮಯದಲ್ಲಿ ಅಜಯ್ ಇಬ್ಬರಿಗೂ ಸಕ್ಕರೆ ತಿನಿಸಿ ಎಲ್ಲ ಮರಿಯೋಣ ಎಂದು ಹೇಳಿ ತಮ್ಮ ತಮ್ಮ ಕೆಲಸಗಳಿಗೆ ಹೋದರು.


ವಿಲಾಸ್ ಈ ಮಾತನ್ನು ಮಣಿಗೆ ತಿಳಿಸಿದ ಅವನಿಗೂ ಖುಷಿಯಾಯಿತು. ನಿನ್ನ ಮಕ್ಕಳು ನಿನ್ನ ಕೈ ಬಿಡುವುದಿಲ್ಲ ಚಿಂತಿಸ ಬೇಡ ಎಂದ. ಆ ಮಾತನ್ನು ಕೇಳಿದ ವಿಲಾಸ್ ಒಂದು ರೀತಿ ಖುಷಿಯಾಯಿತು. ಕಾರಣ ತನ್ನ ಮಕ್ಕಳ ಬಗ್ಗೆ ಯಾರದು ಒಳ್ಳೆಯ ಮಾತು ಹೇಳಿದರೆ ಪ್ರತಿಯೊಬ್ಬ ತಂದೆ ತಾಯಿಗೆ ಆಗುವ ಸಂತೋಷ ಅಪಾರ.


ಹೀಗೆ ದಿನ ಕಳೆಯುತ್ತ ಬಂತು ಅವನು ಊರಿಗೆ ಹೋಗುಲು ಒಂದು ವಾರವಿದೇ, ವಿಲಾಸ್ ಏನು ಮಾಡುವುದು ಮಕ್ಕಳ ಭವಿಷ್ಯ ಹೇಗೆ ಕಟ್ಟಿ ಕೊಡಲಿ ಎಂದು ಯೋಚಿಸುವಾಗ.ಗಾಳಿಯು ಜೋರಾಗಿ ಬೀಸಿತು ಅಷ್ಟು ಹೊತ್ತಿಗೆ ಮನೆ ಕತ್ತಲಾಯಿತು. ದೀಪ ಹಚ್ಚಲು ಹೋದ ದೇವರ ಬಳಿ ಎಣ್ಣೆ ಹಾಕಿ ದೀಪ ಅಂಟಿಸಿದ.


ಆಗ ಅವನಿಗೆ ಆ ಚೀಟಿಯ ಕಡೆ ಗಮನ ಹರಿಸಿದ ಮತ್ತೆ ಅದೇ ಚೀಟಿಯನ್ನು ತೆರೆದು ನೋಡಿದ ಅದೇ ಪ್ರಕಟಣೆ ವಿಲಾಸ್ ಯೋಚಿಸಿದ ಸಮಯ ತುಂಬಾ ಕಡಿಮೆ ಇದೆ ಏನು ಮಾಡಲಿ ಯೋಚಿಸುತ್ತಲೇ ಒಂದು ನಿರ್ಧಾರ ಕೈಗೊಂಡ. ಬೆಳಗಿನ ಜಾವ ಯಾರಿಗೂ ಹೇಳದೆ ಒಂದು ಚೀಟಿ ಇಟ್ಟು ಟ್ರೈನ್ ಹಿಡಿದು ಹೊರಟ ಅಜಯ್ ಮತ್ತು ಧ್ರುವ ಬೆಳಗ್ಗೆ ಎದ್ದು ತಂದೆ ಕಾಣದ್ದನ್ನು ಕಂಡು ಎಲ್ಲ ಕಡೆ ಹುಡುಕಿದರೂ ಸಿಗಲಿಲ್ಲ, ಆ ಸಮಯ ದೇವರ ಬಳಿ ಕಣ್ಣಾಡಿಸಿದ ಅಜಯ್ ಒಂದು ಕಾಗದ ನೋಡಿದ ಮಕ್ಕಳ್ಳೇ ನಾನು ಒಂದು ಮುಖ್ಯವಾದ ಕೆಲಸದ ಮೇಲೆ ಹೊರಗೆ ಹೋಗುತ್ತಿದ್ದೇನೆ ಆದಷ್ಟು ಬೇಗ ಬರುತ್ತೇನೆ ಎಂದು ಹೇಳಿ ಬರೆದಿದ್ದ .


ಇಬ್ಬರು ಈ ವಿಚಾರವವನು ಮಣಿಯ ಬಳಿ ಪ್ರಸ್ತಾಪಿಸಿದರು ಅವನಿಗೂ ಸಹ ಹೇಳಿರ್ಲಿಲ್ಲಾ ಅವನಿಗೂ ಸಹ ಆಶ್ಚರ್ಯವಾಗಿತ್ತು. ಮಣಿ ತಲೆಕೆಡಿಸಿಕೊಳ್ಳಬೇಡಿ ಬರುತ್ತಾನೆ ಬಿಡಿ ಎಂದು ಹೇಳಿ ಸಮಾಧಾನ ಮಾಡಿದ .


ಸ್ವಲ್ಪ ದಿನದ ನಂತರ ಒಂದು ಪತ್ರ ಬರುತ್ತೆ ನಾನು ನಿನ್ನ ತಂದೆ ವಿಲಾಸ್. ಯೋಗ ಕ್ಷೇಮ ವಿಚಾರವನ್ನು ಪ್ರತ್ಸ್ಥಾಪಿಸುತ್ತ ನಾನು ಕ್ಷೇಮವಾಗಿದ್ದೇನೆ ನನ್ನ ಚಿಂತೆ ಬಿಡಿ ನೀವು ಸರಿಯಾಗಿ ಊಟ ತಿಂಡಿ ಮಾಡಿ ಹಾಗೆ ನಾನು ಮಣಿಯನ್ನು ಕೇಳ್ದೆ ಅಂತ ತಿಳಿಸಿ ಹಾಗೆಯೇ ಅಜಯ್ ನೀನು ಫಾರಿನ್ ಹೋಗಲೂ ಬೇಕಾದ ಹಣದ ವ್ಯವಸ್ಥೆ ಮಾಡಿದ್ದೇನೆ ನೀನು ನಿಶ್ಚಿತಂತೆಯಾಗಿ ಹೋಗಿ ಚೇನ್ನಾಗಿ ವಿದ್ಯಾ ಭ್ಯಾಸ ಮುಗಿಸಿ ಬಾ ನಾನು ೨ ದಿನದಲ್ಲಿ ಹಣ ಕಳಿಸುತ್ತೇನೆ ಸರಿ ನಿನ್ನ ಪ್ರೀತಿಯ ತಂದೆ ವಿಲಾಸ್ ಮಾಡುವ ಆಶೀರ್ವಾದಗಳು .


ಇದಾದ ಎರಡು ದಿನದಿಂದ ನಂತರ ಒಬ್ಬ ವ್ಯಕ್ತಿ ಇವರ ಮನೆಯ ಬಳಿ ಬಂದು ಬಾಗಿಲು ತಟ್ಟಿದ. ಅಜಯ್ ಬಾಗಿಲು ತೆರೆದ ನಾನು ರಾಜೀವ್ ಇದು ವಿಲಾಸ್ ಅವರ ಮನೆ ತಾನೇ ಹೌದು ನೀವು ಅಜಯ್ ಅವ್ರ ಹೌದು ನಿಮಗೆ ಏನು ಬೇಕಾಗಿತ್ತು ಹೇಳಿ. ಏನಿಲ್ಲ ನಿಮ್ಮ ತಂದೆ ಈ ಹಣವನ್ನು ನಿಮಗೆ ಕೊಡಲು ಹೇಳಿದ್ದಾರೆ ತೆಗೆದು ಕೊಳ್ಳಿ. ಅಜಯ್ ಒಂದು ರೀತಿ ಅಚ್ಚರಿಗೊಂಡ ಮತ್ತೆ ಅವರಿಗೆ ಹೇಳಿದ ನೀವು ತಪ್ಪಾದ ವಿಳಾಸಕ್ಕೆ ಬಂದಿದ್ದೀರಾ ಎಂದು ಹೇಳಿದ ಇಲ್ಲ ನಾನು ಸರಿಯಾದ ಜಾಗಕ್ಕೆ ಬಂದಿದ್ದೇನೆ ನಿಮ್ಮ ತಂದೆಯೇ ಈ ವಿಳಾಸ ನೀಡಿದ್ದಾರೆ. ನೋಡಿ ಎಂದು ಚೀಟಿಯನ್ನು ತೋರಿಸಿದ ಮತ್ತೆ ರಾಜೀವ್ ಕರೆ ಮಾಡಿ ಕೊಟ್ಟ ತೆಗೆದು ಕೊಳ್ಳಿ ನಿಮ್ಮ ತಂದೆ ನಿಮ್ಮ ಬಳಿ ಮಾತನಾಡುತ್ತಾರೆ . ವಿಲಾಸ್ ಧ್ವನಿ ಕೇಳಿದಾಗ ಅವನಿಗೆ ವಿಶ್ವಾಸ ಬಂತು ೧ ಲಕ್ಷ ಹಣವನ್ನು ನೀಡುತ್ತಾರೆ ನೀನು ತೆಗೆದುಕೊಂಡು ಹೋಗು ಚೆನ್ನಾಗಿ ಓದು ನಿನ್ನ ತಮ್ಮ್ನನ್ನು ಮಣಿಯವರ ಮನೆಯಲ್ಲಿ ಇರಲು ಹೇಳು ನಾನು ಅವರ ಬಳಿ ಮಾತನಾಡುತ್ತೇನೆ ಎಂದು ಹೇಳಿ ಪೋನ್ ಕಟ್ ಮಾಡಿದ. ಹಣ ನೀಡಿ ಅಲ್ಲಿಂದ ರಾಜೀವ್ ಸೀದಾ ಮಣಿ ಮನೆಗೆ ತೆರಳಿದ ಮಣಿಯ ಜೊತೆ ಮಾತನಾಡಿ ತನ್ನ ಮಗನನ್ನು ಸ್ವಲ್ಪ ದಿನದ ಮಟ್ಟಿಗೆ ನಿಮ್ಮ ಮನೆಯಲ್ಲಿ ನೋಡಿಕೊಳ್ಳುವುದಕ್ಕೆ ಹೇಳಿ ಅವನಿಗೂ ಸಹ ೫೦ಸಾವಿರ ನೀಡಿದ.


ಸ್ವಲ್ಪ ಸಮಯದ ಅಜಯ್ ಮತ್ತು ಧ್ರುವ ಮಣಿಯವರ ಮನೆಗೆ ಬಂದು ಅಪ್ಪ ಇಷ್ಟು ಹಣವನ್ನು ಹೇಗೆ ಸಂಪಾದಿಸಿದರು ಎಂಬ ಪ್ರಶ್ನೆಯನ್ನು ಮಣಿಯ ಬಳಿ ಕೇಳುತ್ತಾರೆ ಅವನಿಗೂ ಅಷ್ಟೇ ಅದೇ ಪ್ರಶ್ನೆ ಕಾಡುತ್ತದೆ.


ಈ ಎಲ್ಲ ಪ್ರಶ್ನೆಗಳ ನಡುವೆ ಅಜಯ್ ಫಾರಿನ್ ಗೆ ತೆರಳುತ್ತಾನೆ .ಅಲ್ಲಿಯೇ ಚೆನ್ನಾಗಿ ಓದಿ ಒಬ್ಬ ಪ್ರಸಿದ್ಧ ವ್ಯಕ್ತಿಯಾಗಿ ವರುಷಗಳ ನಂತರ ವಾಪಸ್ ಮರಳಿ ತನ್ನ ತಾಯಿನಾಡಿಗೆ ಮರಳುತ್ತಾನೆ.


ಧ್ರುವ ಕೂಡ ಚೆನ್ನಾಗಿ ಓದಿ ಒಂದು ಲೆಕ್ಕ ಪರಿಶೋಧಕನಾಗಿ ಕಾರ್ಯನಿರ್ವಹಿಸಿರುತ್ತಾನೆ. ಅಜಯ್ ಮನೆಗೆ ಬಂದೊಡನೆ ಕೇಳುತ್ತಾನೆ ಯಾರದೀ ಮನೆ ಅಪ್ಪ ಎಲ್ಲಿ ಎಂದು ಪ್ರಶ್ನೆಗಳನ್ನ ಕೇಳುತ್ತಾನೆ. ಧ್ರುವ ಈಗ ತಾನೇ ಬಂದಿರುವೆ ಸ್ವಲ್ಪ ವಿಶ್ರಾಂತಿ ಮಾಡು ಆಮೇಲೆ ಎಲ್ಲ ತಿಳಿಸುತ್ತೇನೆ. ಸಂಜೆಯಾಯಿತು ಅಜಯ್ ಕೆಳಗಿಳಿದು ಅಪ್ಪ ಎಲ್ಲಿ ಎಂದು ಕೇಳಿದ ಧ್ರುವ ಅವನನ್ನು ಒಂದು ರೂಮಿಗೆ ಕರೆದು ಕೊಂಡು ಹೋದ ಬಾಗಿಲು ತೆರೆದ ಮಂಚದ ಮೇಲೆ ಮಲಗಿದ್ದ ವಿಲಾಸನನ್ನ ಎಚ್ಚರ ಪಡಿಸಿದ ಅಪ್ಪ ಅಜಯ್ ಬಂದಿರುವ ವಿಚಾರ ತಿಳಿಸಿದ ವಿಲಾಸ್ ತನ್ನ ಮಗನನ್ನು ನೋಡಿ ಕಣ್ತುಂಬಿಕೊಳ್ಳುತಾನೆ, ಆನಂದದಿಂದ ಅವನ ಕೆನ್ನಗೆ,ಹಣೆಗೆ ಮುತ್ತಿಟ್ಟು ಅಪ್ಪಿಕೊಳ್ಳುತ್ತಾನೆ.


ಅಪ್ಪ ನೀವು ರೆಸ್ಟ್ ತೆಗೆದುಕೊಳ್ಳಿ ಎಂದು ಹೇಳಿ ಬಾಗಿಲು ಹಾಕಿ ಹೊರ ನಡೆಯುತ್ತಾರೆ, ಈ ನಡೆಯಲ್ಲ ಅಜಯ್ ಹೊಸದಾಗಿ ಕಾಣುತ್ತದೆ. ಅವನು ಧ್ರುವನ ಕೈ ಹಿಡಿದು ಈಗ ಹೇಳು ಅಪ್ಪಗೆ ಏನಾಗಿದೆ ಯಾಕೆ ಅವ್ರು ರೆಸ್ಟ್ ಮಾಡ್ಬೇಕು ಈ ಮನೆ ಯಾರದು ?


ಧ್ರುವ ಅಜಯ್ನನ್ನು ಒಂದು ಫೋಟೋದ ಬಳಿ ಕರೆದು ಕೊಂಡು ಬರುತ್ತಾನೆ . ಇವರನ್ನು ನೋಡು ಹೆಸರು ಚಂದ್ರಕಾಂತ್ ದೇಸಾಯಿ ಈ ಮನೆಯ ಮಾಲೀಕ ಇವರಿಗೆ ಒಬ್ಬನೇ ಮಗ ಅವನಿಗೆ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ. ಇವರು ತುಂಬಾ ಕೊಟ್ಯಾಧೀಪತಿಗಳು ಇವರ ಮಗನನ್ನು ಉಳಿಸುವ ಸಲುವಾಗಿ ಅನೇಕ ಕಡೆ ಜಾಹೀರಾತು ನೀಡುತ್ತಾರೆ. ಆದ್ರೆ ಯಾವುದೇ ಪ್ರಯೋಜನವಾಗಲಿಲ್ಲ.


ಅವರ ಪ್ರಯತ್ನಗಳು ಯಾವುದು ಫಲಿಸಲೇ ಇಲ್ಲ. ಮಗ ಕೈ ತಪ್ಪಿಹೋಗುತಿದ್ದಾನೆ ಎಂದು ದೇಸಾಯಿಯವರು ರೋಧಿಸುತ್ತಿರವಾಗ. ಅವನ ಕರೆಗೆ ಓಗೊಟ್ಟು ಒಬ್ಬ ವ್ಯಕ್ತಿ ಅವ್ರಲ್ಲಿಗೆ ಬರುತ್ತಾನೆ ನಿಮ್ಮ ಮಗನನ್ನು ಬದುಕಿಸಲು ಬಂದಿರುವೆ ಎಂದು ಹೇಳುವ ಆಗ ದೇಸಾಯಿಯಾವರು ಒಮ್ಮೆ ದೇವರ ಕಡೆ ತಿರುಗಿ ನಂಬಿದವರನ್ನು ಕೈ ಬಿಡುವುದಿಲ್ಲ ಎಂಬುದಕ್ಕೆ ಈ ದಿನ ಸಾಕ್ಷಿಯಾಗಿದೆ ಎಂದು ತನ್ನ ಮನದಲ್ಲಿಯೇ ದೇವರಿಗೆ ಕೈ ಮುಗಿಯುತ್ತಾರೇ.


ಆದರೇ ನೀವು ನನಗೆ ಒಂದು ಸಹಾಯ ಮಾಡಬೇಕು ನನ್ನ ಬೇಡಿಕೆಯನ್ನು ಈಡೇರಿಸುವಿರಾ ಎಂದು ಕೇಳಿದ. ದೇಸಾಯಿ ಒಂದೇ ಮಾತು ಹೇಳಿದರು ನನ್ನ ಮಗನಿಗೋಸ್ಕರ ನಿಮ್ಮ ಪಾದ ತೊಳೆಯಲು ನಾನು ಸಿದ್ದನಿದ್ದೇನೆ ಎಂದು ಹೇಳಿದ .

ಏನಿಲ್ಲ ನನಗೆ ಒಂದು ೧೫೦೦೦೦ ಬೇಕು ನೀಡುವಿರಾ . ನಿಮ್ಮ ಒಂದು ಸಹಾಯದಿಂದ ನನ್ನ ಮಕ್ಕಳ ಭವಿಷ್ಯ ಅಡಗಿದೆ ನಾನು ನೀವು ಹೇಳುವ ಕೆಲಸ ಮಾಡಿಕೊಂಡು ನಿಮ್ಮ ಪಾದದ ಬಳಿ ಬಿದ್ದಿರುತ್ತೇನೇ ಎಂದು ಹೇಳಿದ.

ದೇಸಾಯಿಗೆ ಕಣ್ಣಿನಲ್ಲಿ ನೀರು ತುಂಬಿ ಬಂತು ಆ ವ್ಯಕ್ತಿಯನ್ನು ಹಿಡಿದು ಬಾಚಿ ಅಪ್ಪಿಕೊಂಡ ದೇವ್ರು ನಮಿಬ್ಬರ ಸಮಸ್ಯೆಯನ್ನು ಕಂಡು ಮರುಗಿ ನಿನ್ನ ನನ್ನ ಬಳಿ ,ನನ್ನ ಸಂಕಟಕ್ಕೆ ನಿನ್ನ ಬಳಿ ಕಳುಹಿಸಿದ್ದಾನೆ ಎಂದು ಕಣ್ಣ ನೀರು ಒರೆಸುತಿದ್ದರು .


ಹೇಗೋ ದೇವರ ಕೃಪೆಯಿಂದ ಅವರ ಮಗನಿಗೆ ಕಿಡ್ನಿ ಬದಲಾಯಿಸಿ . ಅವನ ಜೀವ ಉಳಿಯಿತು ಕಿಡ್ನಿ ದಾನ ಮಾಡಿದ ಮಕ್ಕಳ ಭವಿಷ್ಯವು ರೂಪಿತವಾಯಿತು. ಆದ್ರೆ ಕೆಲವು ದಿನಗಳ ಹಿಂದೆ ದೇಸಾಯಿಯವರ ತೀರಿಕೊಳ್ಳುವರು ಅವರ ಮಗ ವಿದೇಶಕ್ಕೆ ಹೋಗಿ ಬಿಡುತ್ತಾನೆ.


ಇಷ್ಟೆಲ್ಲಾ ಮಾಡಿದ ವ್ಯಕ್ತಿ ಯಾರು ಅಲ್ಲ ತನ್ನ ಮಕ್ಕಳ ಭವಿಷ್ಯಕ್ಕಾಗಿ ತನ್ನ ದೇಹದ ಅಮೂಲ್ಯವಾದ ಭಾಗವನ್ನೇ ಕುಯ್ದುಕೊಟ್ಟ ಮಹಾತ್ಮಾ ಬೇರೆ ಯಾರು ಅಲ್ಲ ನಿನ್ನ ಮತ್ತು ನನ್ನ ಹೆತ್ತು ಆಡಿಸದ ನಮಿಬ್ಬರ ತಂದೆ ! ಈ ಮಾತನ್ನು ಕೇಳಿದ ಅಜಯ್ ಹಾಗೆ ನೆಲಕ್ಕೆ ಕುಸಿಯುತ್ತಾನೆ. ಅವನ ಕಣ್ಣು ಒದ್ದೆಯಾಗುತ್ತದೆ. ಮಣಿ ಕೂಡ ತಲೆಯಾಡಿಸಿ ಈ ಮಾತು ನಿಜ ಎಂದು ಹೇಳಿದ . ಇದು ಕರುಣಾ ಜನಕನ ಕಥೆ.




Rate this content
Log in

Similar kannada story from Tragedy