Gireesh pm Giree

Children Stories

1.8  

Gireesh pm Giree

Children Stories

ಮಿಂಚಿಹೋದ ಕಾಲಕ್ಕೆ ಚಿಂತಿಸಿ ಫಲವಿಲ್ಲ

ಮಿಂಚಿಹೋದ ಕಾಲಕ್ಕೆ ಚಿಂತಿಸಿ ಫಲವಿಲ್ಲ

1 min
747


ಒಂದೂರಿನಲ್ಲಿ ಸೋಮ ಎಂಬ ಅನಾಥ ಯುವಕ ವಾಸವಾಗಿದ್ದನು. ಅವನು ಜನರಲ್ ಆಸ್ಪತ್ರೆಯಲ್ಲಿ ನೌಕರನಾಗಿ ಕೆಲಸ ಮಾಡುತ್ತಿದ್ದನು. ದುಡಿದು ಎಂದರೆ ಅವನಿಗೆ ಎಲ್ಲಿಲ್ಲದ ಪ್ರೀತಿ. ಯಾರಾದ್ರೂ ಕಷ್ಟವೆಂದು ಅವನ ಬಳಿ ಹೋದರೆ ಏನಾದರೂ ಸಹಾಯ ಮಾಡುತ್ತಿದ್ದನು . ಕೆಲಸದ ಬಿಡುವಿನಲ್ಲಿ ಸಮಯದಲ್ಲಿ ಗಿಡ-ಮರಗಳಿಗೆ ನೀರ ಎರೆಯುತ್ತಿದ್ದನು . ಮರಗಿಡಗಳ ಜೊತೆಗೆ ಭಾವನಾತ್ಮಕ ಸಂಬಂಧವನ್ನು ಹೊಂದಿದ್ದನು.


ಗಿಡಗಳು ಬೆಳೆದು ದೊಡ್ಡದಾಗುತ್ತಿದ್ದಂತೆ ಸೋಮ ಬಹಳ ಸಂತೋಷ ಪಡುತ್ತಿದ್ದನು. ಆಸ್ಪತ್ರೆಗೆ ಬರುವ ಜನರನ್ನು ಈ ಮರಗಳ ನೆರಳು ಸಂರಕ್ಷಿಸುತ್ತಿತ್ತು. ಒಂದು ದಿನ ಡಾಕ್ಟರ್ ಈ ಮರವನ್ನು ಕಂಡು ಆಶ್ಚರ್ಯಗೊಂಡರು. ಇಷ್ಟು ದೊಡ್ಡದಾದ ಮರ ನನ್ನ ಕಾರು ಹೋಗಲು ಸ್ಥಳ ಸಾಕಾಗುವುದಿಲ್ಲ. ಇದನ್ನು ಕಡಿದು ಮಾರಿದರೆ  ತುಂಬ ಹಣ ಸಿಗಬಹುದು. ಈ ಮರದಿಂದ ಬೇರೆ ಯಾರಿಗೂ ಉಪಯೋಗವಾಗುವುದಿಲ್ಲ. ಅಲ್ಲ ಸೋಮ ಇದಕ್ಕೆ ನೀನು ಏನು ಹೇಳುತ್ತೀಯಾ? ಎಂದರು. ಸೋಮ ಇದಕ್ಕೆ ಏನು ಉತ್ತರಿಸಲಿಲ್ಲ. ಅವನು ಅಲ್ಲಿಗೆ ಮೂಕನಾದ.


ಮರುದಿನ ಬೆಳಿಗ್ಗೆ ಆಸ್ಪತ್ರೆಯ ದಾರಿಮಧ್ಯೆ ಗೆಲ್ಲುಗಳು ಬಿದ್ದಿರುವುದು ಸೋಮನಿಗೆ ಕಂಡಿತು. ಸೋಮನಿಗೆ ದುಃಖ ತಡೆಯಲಾಗದೆ ಕಷ್ಟ ಬಂದಾಗ ಈ ಮರದ ಉಪಯೋಗ ನಿಮಗೆ ತಿಳಿಯಬಹುದು ಎಂದು ಡಾಕ್ಟರ್ಗೆ ಹೇಳುತ್ತಾನೆ. ಅವನ ಮಾತಿನಂತೆ ಮಳೆಗಾಲ ಕಳೆದು ಬೇಸಿಗೆಗಾಲ ಆರಂಭವಾಯಿತು. ಆಸ್ಪತ್ರೆಗೆ ಬರುವವರಿಗೆ ಮತ್ತು ಅಲ್ಲಿದ್ದ ನೌಕರರಿಗೆ ಬಿಸಿಲು ಸಹಿಸಲಾಗಲಿಲ್ಲ. ಡಾಕ್ಟರ್ ಕೂಡ ಬಿಸಿಲ ಬೇಗೆಯ ಸಹಿಸಿಕೊಳ್ಳಲಾಗಲಿಲ್ಲ. ಆಗ ಸೋಮ ಬಂದು ಹೇಳಿದ ಡಾಕ್ಟರ್ ಗೆ ನಾನು ಅವತ್ತೇ ನಿಮ್ಮಲ್ಲಿ ಹೇಳಿದೆ ಮರ ಕಡಿಯುವುದು ಬೇಡ ಕಡಿದರೆ ನೂರಾರು ನಷ್ಟಗಳು ಇದೆಯೆಂದು. ಆದರೆ ನೀವು ನಿಮ್ಮ ಲಾಭವನ್ನು ಯೋಚಿಸಿದ್ದೀರಿ. ಈಗ ಚಿಂತಿಸಿ ಕೊಳ್ಳಲಿಲ್ಲ ಬನ್ನಿ ನಾವೆಲ್ಲರೂ ಸೇರಿ ಮರಗಿಡಗಳನ್ನು ನೆಡೋಣ ಎಂದನು. ಅವನ ಮಾತಿನಂತೆ ಎಲ್ಲರೂ ನಡೆದರು ಸುಖಜೀವನವನ್ನು ಪ್ರಾರಂಭಿಸಿದರು.


Rate this content
Log in