jeevithashivaraj jeevithashivraj

Abstract Drama Romance

4  

jeevithashivaraj jeevithashivraj

Abstract Drama Romance

ಮಳೆಗಾಲದ ಹುರುಪಿನಲ್ಲಿ

ಮಳೆಗಾಲದ ಹುರುಪಿನಲ್ಲಿ

2 mins
357


ಮಳೆ ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ? ಆದ್ರೆ, ನನಗೆ ಮಳೆ ಅಂದ್ರೆ ಇಷ್ಟನೇ ಆಗ್ತಾಯಿರಲಿಲ್ಲ.


ನಂಗೆ ಚಿಕ್ಕೋಳಿದ್ದಾಗಿಂದನು ಮಳೆ ಬಂದ್ರೆ ಸಾಕು ಏನೊ ಒಂದು ರೀತಿ ಇರ್ಸು ಮೂರ್ಸು ಯಾಕೆ ಅಂತ ಗೊತ್ತಿಲ್ಲ. ಆದ್ರೆ ಮಳೆ ಬರೋಕ್ ಮುಂಚೆ ಆ ಮಣ್ಣಿನ ಸುಗಂಧ ಇದ್ಯಲ್ಲ ಆಹಾ..... ಮನೆಯ ಹೊರಗಡೆ ಕೂತು ಮಳೆ ಬರೋಕೆ ಮುಂಚಿತವಾದಂತಹ ಆ ಸುಗಂಧವಾದ ಪರಿಮಳಾನ ಆನಂದಿಸುತ್ತಾ ತಂಗಾಳಿಯಲ್ಲಿ ನೆಮ್ಮದಿಯಿಂದ ಕೂತಿರ್ತಿದ್ದೆ.


ಮತ್ತೆ ಮಳೆ ಬಂದು ನಾನು ಒಳಗಡೆ ಹೋಗುವ ರೀತಿ ಮಾಡ್ತಿತ್ತು.

ಮನೆಯಲ್ಲಿ ಕೇಳಬೇಕಾ! ಅಮ್ಮ ಅಂತೂ ಮಳೆಯಲ್ಲಿ ನೆನಿ ಬಾರದು. ಮಳೆ ಬರುವ ಮುಂಚೆ ಒಳಗೆ ಬಾ, ಆಚೆ ಗಾಳಿಯಲ್ಲಿ ಹೆಚ್ಚು ಹೊತ್ತು ಕೂರಬಾರದು ಹೆಣ್ಣಮಕ್ಕಳು! ನೆಗಡಿ ಬರುತ್ತೆ. ಶೀತ ಆಗುತ್ತೆ, ಬಾ ಎದ್ದು ಒಳಗೆ ನಾಳೆ ಸ್ಕೂಲ್ ಹೋಗಬೇಕು. ಯಾಕೆ ಶಾಲೆಗೆ ನಾಳೆ ರಜಾ ಹಾಕ್ಬೇಕು ಅಂತ ಏನಾದರೂ ಅಂದುಕೊಂಡು ಇದೆಯಾ!

ಅಂತೆಲಾ ಅಮ್ಮನ ಗಾನ ಶುರುವಾಗುವ ಮುಂಚೆನೇ ಒಳಗಡೆ ನಾನೇ ಎದ್ದೋಗ್ಬಿಡ್ತಿದ್ದೆ.


ಆದರೇ.. ನಾನು ಮದುವೆ ಆದ್ಮೇಲೆ ನನ್ ಪ್ರಪಂಚಾನೇ ನನ್ನ ಪತಿರಾಯರಾದ್ರೂ. ಈ ಪ್ರಪಂಚ ಏನು? ಹೊರಗಿನ ಪ್ರಪಂಚ ಹೇಗಿರುತ್ತೆ? ಇದನ್ನೆಲ್ಲ ನಾನು ನನ್ನ ಪತಿರಾಯರಿಂದ ತಿಳ್ಕೊಳ್ಳೋಕೆ ಶುರು ಮಾಡಿದೆನೆ.


ಮದುವೆ ಆದ್ಮೇಲೆ ನಮ್ ಪಯಣ ಶುರುವಾಯ್ತು. ಮಂಡ್ಯ ಇಂದ ದೊಡ್ಡಬಳ್ಳಾಪುರ. ದೊಡ್ಡಬಳ್ಳಾಪುರದಿಂದ ಮಂಡ್ಯ. ಹೀಗೆ ನಮ್ಮಿಬ್ಬರ ಓಡಾಟ ಶುರುವಾಯಿತು.


ನಮ್ ಮಂಡ್ಯದಲ್ಲೆಲ್ಲ ಇಷ್ಟೊಂದು ಚಳಿ ವಾತಾವರಣ ಇರಲ್ಲ. ಆದ್ರೆ ದೊಡ್ಡಬಳ್ಳಾಪುರದಲ್ಲಿ ತುಂಬಾ ಚಳಿ ವಾತಾವರಣ ಇರುತ್ತೆ.

ನಾವು ಜೂನ್ ತಿಂಗಳಲ್ಲಿ ಮದುವೆ ಆದ್ರಿಂದ ಜೂನ್ ತಿಂಗಳು ಮುಗಿಯುವ ಸಮಯದಲ್ಲಿ ಮಳೆಗಾಲ ಶುರುವಾಗುತ್ತೆ ನೋಡಿ. ಆ ಮಳೆಯಲ್ಲಿ ಬಸ್ಸ್ನಲ್ಲಿ ಬರೋದು ಹೋಗೋದು. ಬಸ್ಸಿನಲ್ಲಿ ಬರುವಾಗ ಬೆಂಗಳೂರು ಬಂತ್ತೂ ಅಂದ್ರೆ ಸಾಕು ನಿದ್ದೆ ಮಾಡ್ತಾ ಇದ್ರು ಕೂಡ ನಾವು ಬೆಂಗಳೂರು ತಲುಪಿದ್ದೀವಿ ಅಂತ ಗೊತ್ತಾಗ್ತಿತ್ತು. ಅದು ಕಂಡಕ್ಟರ್ ಹೇಳ್ತಿರೋ (ಸ್ಟಾಪ್ ಬಂತು) ಬೆಂಗಳೂರು ಬಂತು ಅಂತ ಹೇಳ್ತಾರಲ್ಲ ಅದರಿಂದಲ್ಲ,


ಪ್ರಶಾಂತ್ವಾದ ತಂಗಾಳಿ ಬಂದು ಚಳಿಯಲ್ಲಿ ನಡುಕ ಭಾವ ಮೂಡಿಸೋಕೆ ಶುರು ಮಾಡುತ್ತಲ್ಲ ಆಗಲೇ ನನಗೆ ಬೆಂಗಳೂರಿಗೆ ಬಂದಿದೀವಿ ಬೆಂಗಳೂರಿಂದ ಇನ್ನೇನು ಸ್ವಲ್ಪ ಹೊತ್ತಿನಲ್ಲಿ ಮನೆಗೆ ಹೋಗ್ತೀವಿ ಅಂತ ಗೊತ್ತಾಗಿಬಿಡೋದು.

ಈ ಅನುಭವ ಇದ್ಯಲ್ಲ ತುಂಬಾ ವಿಶೇಷವಾದ ದಿನಗಳವು ನನ್ನ ಪಾಲಿಗೆ.


ಈ ಮಳೆ ವಾತಾವರಣದಲ್ಲಿ ಬಸ್ನಲ್ಲಿ ತಂಗಾಳಿಯಲ್ಲಿ ಪ್ರಯಾಣ ಮಾಡಿದ ಅನುಭವನ ಅನುಭವಿಸಿದವರಿಗೆ ಮಾತ್ರ ಗೊತ್ತು. ಎಷ್ಟು ಸುಂದರ ಕ್ಷಣಗಳಾಗಿರುತ್ತೆ ಅಂತ.


ನಾನು ನನ್ನ ಪತಿರಾಯರೂ ಒಬ್ಬರು ಕೈ ಇನೊಬ್ಬರೂ ಇಟ್ಕೊಂಡು ಬಸ್ನಲ್ಲಿ ಓಡಾಡ್ತಿದ್ದಂತಹ ಕಾಲ ಅದು ಸುಂದರ ಸುಮಧುರ ಭಾವವದೂ...


ನಾವು ಒಬ್ಬರನ್ನು ಒಬ್ಬರು ಅರ್ಥ ಮಾಡ್ಕೊಳಕ್ಕೆ ನಮಗೆ ಸಿಕ್ಕಂತಹ ಒಂದು ಅವಕಾಶ ಅಂದ್ರೆ ಅದು ಬಸ್ಸ್ ಪ್ರಯಾಣ, ತುಂತುರು ಮಳೆ ಸುರಿವಾಗ ಕೈ,ಕೈ ಹಿಡ್ಕೊಂಡು ಒಂದೇ ಛತ್ರಿಯಲ್ಲಿ ಬಸ್ಸ್ ಅಲ್ಲಿ ಓಡಾಡುವಂತಹ ಸುಂದರ ಗಳಿಗೆಗಳವು. ಆ ಭಾವವನ್ನು ವಿವರಿಸಲೂ ಅಸಾಧ್ಯ.


ಮಳೆಯಲ್ಲಿ ನೆನ್ಯೋಕೆ ಇಷ್ಟ ಪಡದೇ ಇದ್ರೂ ಸಹ ಮಳೆಯಲ್ಲಿ ಬಸ್ ಪ್ರಯಾಣ ಮಾಡಲೂ ಇಷ್ಟ ಪಡ್ತೀನಿ.


ಹೊಸದಾಗಿ ಮದುವೆ ಆಗಿರೋರ್ಗೆ ನನ್ ಕಡೆಯಿಂದ ಒಂದು ಸಲಹೆ. ಮಳೆಗಾಲದಲ್ಲಿ ನಿಮ್ ಸಂಗಾತಿ ಜೊತೆ ಹೊರಗಡೆ ಎಲ್ಲಾದರೂ ಹೋಗಬೇಕು ಅಂತ ಅನ್ಕೊಂಡಿದ್ರೆ ಬಸ್ ನಲ್ಲಿ ಪ್ರಯಾಣ ಮಾಡಿ. ನಿಮ್ಮತ್ರ ಕಾರು ಇರಬಹುದು. ಬೈಕ್ ಇರಬಹುದು. ಆದರೆ ಬಸ್ಸಿನಲ್ಲಿ ಮಳೆಗಾಲದಲ್ಲಿ ಪ್ರಯಾಣ ಮಾಡಿದ ಅನುಭವ ಇದೆಯಲ್ಲ ಅದನ್ನು ಅನುಭವಿಸಿ. ಆಮೇಲೆ ನೀವೇ ಬಂದು ಕಾಮೆಂಟ್ ಅಲ್ಲಿ ತಿಳಿಸ್ತೀರಾ? ಹೇಗಿತ್ತು ನಿಮ್ಮ ಅನುಭವ ಅಂತ.



ಆದರೆ ಕಾಲ ಕಳೆದಂತೆ ನಾನು ಬದಲಾಗಿದ್ದೇನೆ. ಇಲ್ಲಿಯ ವಾತಾವರಣಕ್ಕೆ ತಕ್ಕಂತೆ ನಾನು ಕೂಡ ಮಳೆಯನ್ನ ಇಷ್ಟ ಪಡ್ತಾ ಇದೀನಿ. ಮಳೆಯಲ್ಲಿ ನೆನೆಯೋಕೆ ಇಷ್ಟ ಇಲ್ಲ ಅಂದ್ರು ಮನೆಯ ಹೊರಗಡೆ ಹೊರಾಂಡದಲ್ಲಿ ಕುಳಿತುಕೊಂಡು ಮಳೆ ಬರೋದನ್ನ ನೋಡಿಕೊಂಡು ಎಲ್ಲರೂ ಒಟ್ಟಿಗೆ ಕಾಫಿ ಕುಡಿತಾ ಮಳೆಯನ್ನು ನೋಡ್ತಾ ಕುಳಿತುಕೊಂಡಿರುತ್ತೇವೆ. ಮಳೆ ಬರೋದ್ನ ನೋಡ್ತಾ ಹೋರಾಂಡದಲ್ಲಿ ಕೂತ್ಕೊಂಡು ಕಾಫಿ ಕುಡಿತಾ ವಿಷಯಗಳನ್ನೆಲ್ಲಾ ಮಾತಾಡಿಕೊಂಡು ಸಮಯ ಕಳೆಯುವಂತಹ ಈ ಮಳೆಗಾಲಕ್ಕೆ ನನದೊಂದು ಹೃತ್ಪೂರ್ವಕ ಮನವಿ.



ಹೇ ಮಳೆರಾಯ ಹಿತ ಮಿತದಿಂದಿರಲಿ ನಿನ್ನ ಆಗಮನ. ಧೋ ಎಂದು ಸುರಿದು ಒಮ್ಮೆಲೇ ಶಾಂತನಾಗು. ದಯಮಾಡಿ ನಿನ್ನ ಆರ್ಭಟವನ್ನು ಘರ್ಜನೆಗಳನ್ನ ಹಿತಮಿತಗೊಳಿಸು. ಈ ಸಂಕುಲನವನ್ನು ಸಂಕಷ್ಟಕ್ಕೆ ಸಿಲುಕುವಂತೆ ಮಾಡಬೇಡ.

ನೀನಿಲ್ಲದೆ ಏನು ಇಲ್ಲ. ಆದರೆ ನಿನ್ನ ಕೋಪಕ್ಕೆ ಹಲವು ಜೀವ ರಾಶಿಗಳು ತಮ್ಮ ಜೀವಿತಾವಧಿಯನ್ನೇ ಮುಗಿಸಿಕೊಂಡು ಬಿಡುವೆವು. ಸಕಾಲವು ನೀನೇ ಆದರೆ ಮನುಕೂಲದ ಸಂಕಷ್ಟಕ್ಕೆ ಅಡೆತಡೆ ಮಾಡುವ ಆಯುಧ ನೀನಾಗ ಬೇಡ. ದಯಮಾಡಿ ಈ ಮಳೆಗಾಲವನ್ನ ಖುಷಿಯಿಂದ ಕಳಿಯುವಂತೆ ಸಹಾಯ ಮಾಡು. ರಾತ್ರಿಯಲ್ಲ ಧೌ..,ಎಂದು ಸುರಿದು ಧೂಮ್ ಎಂದು ಮಾಯವಾಗು ಹಗಲಿನಲ್ಲಿ.

ಓದಿದ ಎಲ್ಲರಿಗೂ ಧನ್ಯವಾದಗಳು.


Rate this content
Log in

Similar kannada story from Abstract