Gireesh pm Giree

Abstract

1  

Gireesh pm Giree

Abstract

ಮೋಸ ಜಾಲ

ಮೋಸ ಜಾಲ

2 mins
219


ಜೀವನವೆಂಬ ಈ ಪಯಣದಲ್ಲಿ ಎದುರಾಗುವ ಪ್ರತಿ ಸನ್ನಿವೇಶವು ಕೂಡ ಹೊಸದೊಂದು ಜೀವನದ ತಿರುವಿಗೆ ಕಾರಣವಾಗುತ್ತದೆ . ಇಲ್ಲಿಗೆ ಎದುರಾಗುವ ಸಮಸ್ಯೆಗಳ ಲೆಕ್ಕಿಸದೆ ಅವುಗಳ ಧೈರ್ಯದಿಂದ ಎದುರಿಸುಲು ತಾಳ್ಮೆ ಧೈರ್ಯ ನಮ್ಮಲ್ಲಿರುವ ಆಯುಧವಾಗಿದೆ. ಜೀವನದಲ್ಲಿ ಎದುರಾಗುವ ಸಮಸ್ಯೆಗಳಲ್ಲಿ ಒಂದು ಮೋಸದ ಜಾಲ.


ಮೋಸದ ಜಾಲಕ್ಕೆ ಬಿದ್ದು ಜೀವನದಲ್ಲಿ ಕಳೆದುಕೊಂಡದ್ದೇ ಹೆಚ್ಚು. ಮೋಸದ ಮಾಯೆ ತಿಳಿದವರಾರು?. ಅದು ಅರಿತೋ ಅರಿಯದೆಯೋ ನಮ್ಮ ಅದರ ಜಾಲದ ಬಲೆಗೆ ಬೀಳುವಂತೆ ಮಾಡಿ ನರಳುವಂತೆ ಮಾಡುತ್ತದೆ.ಮೋಸ ಎಂದರೆ ಒಬ್ಬರನ್ನು ಏಮಾರಿಸುವುದು ಮಾತ್ರವಲ್ಲದೆ ಅವರ ನಂಬಿಕೆ ವಿಶ್ವಾಸಗಳಿಗೆ ಮಣ್ಣನ್ನು ಎರಚುವುದಾಗಿದೆ. ಈ ಮೋಸದ ಜಾಲಕ್ಕೆ ಬಿದ್ದವರಲ್ಲಿ ಎದ್ದವರೇ ಕಡಿಮೆ . ಈ ಮಾಯಾ ಬಜಾರಿನಲ್ಲಿ ಜಾರಿದವರಲ್ಲಿ ಜೀವನವೇ ಹಾಕಿಸುವ ಭಾವನೆ. ತಾನು ಮೋಸ ಹೋಗುತ್ತೇನೆಂದು ತಿಳಿಯದೆ ಅವನಲ್ಲಿ ನಾನು ಒಬ್ಬಳು ಎಂದು ಯೋಚಿಸುತ್ತಾರೆ. ಇಂತಹ ಮೋಸದ ದಾಳಕ್ಕೆ ಬಲಿಯಾದ ನನ್ನ ಗೆಳತಿಯ ಜೀವನದಲ್ಲಾದ ಬದಲಾವಣೆಯನ್ನು ನಾನು ನಿಮ್ಮ ಮುಂದೆ ತಿಳಿಯಪಡಿಸುತ್ತೇನೆ .


ಅದೊಂದು ದಿನ ಅವಳ ಜೀವನದಲ್ಲಾದ ಮಹತ್ವದ ಬದಲಾವಣೆಯನ್ನು ಘಟ್ಟ. ಆಗತಾನೇ ಅವಳ ಕಲಿಕೆ ಮುಗಿದು ಸ್ವಲ್ಪ ದಿನ ಕಳೆದಿತ್ತು.ಇನ್ನೇನು ಕೆಲಸಕ್ಕೆ ಹೋಗಬೇಕೆಂಬ ಯೋಚನೆ ಯೋಜನೆಯನ್ನು ಆಗತ್ತಾನೆ ಹಾಕಿಕೊಳ್ಳುತ್ತಿದ್ದಳು. ಕಲಿಕೆಯಲ್ಲೂ ತುಂಬಾನೇ ಮುಂದೆ. ಏನೇ ಸಮಸ್ಯೆ ಎದುರಾದರೂ ಕುಗ್ಗದೆ ಮುಂದೆ ನಡೆಯುವಳು.ಆದರೆ ಒಂದು ದಿನ ಕೆಲಸ ಹುಡುಕುವ ಸಲುವಾಗಿ ಹೋಗುವ ಸಂದರ್ಭದಲ್ಲಿ ಒಬ್ಬ ಯುವಕನ ಪರಿಚಯವಾಗುತ್ತದೆ . ಪರಿಚಯ ಮಾತಿಗೆ ತಿರುಗಿ ಮಾತು ಸ್ನೇಹಕ್ಕೆ ತಿರುಗಿ ನೀವು ಪ್ರೀತಿಗೆ ಬೀಳುವಂತೆ ಮಾಡುತ್ತದೆ. ಅನುದಿನವು ತನ್ನ ಪ್ರಿಯತಮನ ಜೊತೆಯಲ್ಲೇ ಕಳೆಯಲು ನಿರ್ಧರಿಸುತ್ತಾಳೆ. ಅದರಂತೆ ಅವಳು ಮನೆಯವರ ಯಾರ ಗಮನಕ್ಕೂ ತರದೇ ಅವನ ಜೊತೆ ಹೋಗುತ್ತಾಳೆ. ಹೋದವಳು ಬರೀ ಕೈಯಲ್ಲಿ ಹೋಗದೇ ಕೈಲಾದಷ್ಟು ಹಣ ಚಿನ್ನವನ್ನು ತೆಗೆದುಕೊಂಡು ಹೋಗುತ್ತಾಳೆ.

ಪ್ರಿಯತಮನ ಸೇರಿದ ಜಿಕೆ ಸಂತೋಷವಾಗಿ ಒಂದು ಕ್ಷಣವೂ ಇರಲಿಲ್ಲ. ಆತ ಇವಳು ತಂದ ಸಂಪತ್ತನ್ನು ಕಿತ್ತುಕೊಂಡ. ಮದುವೆಯಾಗುವೆ ಎಂದು ಹೇಳಿ ಮೋಸ ಮಾಡಿಬಿಟ್ಟ. ಆ ಪಾಪೀ ಯುವಕನಿಗೆ ಇವಳ ಮುಗ್ಧ ಪ್ರೀತಿಯು ಬೇಕಾಗಲಿಲ್ಲ. ಅದರ ಬೆಲೆಯೂ ಅವನಿಗೆ ತಿಳಿಯಲಿಲ್ಲ . ಬದಲಾಗಿ ಅವಳಲ್ಲಿದ್ದ ಹಣ ಚಿನ್ನದ ಸಂಪತ್ತಿನ ರಾಶಿಯ ಮೋಹ . ಯುವತಿಗೆ ಮುಂದೆ ದಾರಿಕಾಣದಾಯಿತು. ಬದುಕಿ ಕತ್ತಲಾಯಿತಲ್ಲ ಎಂದು ವ್ಯಥೆಪಟ್ಟಳು. ಆಚೆ ತವರಿಗೂ ಹೋಗದ ಸ್ಥಿತಿ. ಈ ಕಡೆ ಅವನ ಮೋಸದ ಜಾಲಕ್ಕೆ ಬಿದ್ದು ಹಾಳಾದ ಜೀವನ. ದಿಕ್ಕು ತೋಚದೆ ಯಾರಿಗೂ ಹೇಳದೆ ದೂರ ಬಲು ದೂರ ಹೋದಳು . ಮರಳಿ ಅವಳ ಕಾಣಲೇ ಇಲ್ಲ.


ನಾನು ಎಷ್ಟು ಬಾರಿ ಎಂದುಕೊಂಡಿದ್ದೆ ಇವಳಿಗೆ ಯಾಕೆ ಈ ಬುದ್ಧಿ ಬಂತು. ಯೋಚನೆ ಮಾಡಿದರೆ ಹೀಗೆ ಆಗುತ್ತಿತ್ತಾ ಎಂದು ಗ್ರಹಿಸುತ್ತಿದ್ದೆ. ಒಂದು ಬಾರಿ ಅವಳು ತನ್ನ ಕಷ್ಟಪಟ್ಟು ಓದಿಸಿದ ತನಗೆ ಎರಡಕ್ಷರ ಹೇಳಿಕೊಟ್ಟ ದಿನನಿತ್ಯ ಪ್ರೀತಿಯ ಅಪ್ಪುಗೆಯಿಂದ ಸಲಹಿದ ತಂದೆ ತಾಯಿಯ ಮುಖವನ್ನು ನೋಡದೆ ನಿನ್ನೆ ಮೊನ್ನೆ ಪರಿಚಯವಾದ ಅವನ ಹಿನ್ನೆಲೆ ತಿಳಿಯದೆ ಅವನ ಹಿಂದೆ ಹೋದ ಇವಳ ಬಾಳು ಹೀಗಾಯ್ತಲ್ಲ. ಆತ ಏನು ಮೋಡಿ ಮಾಡಿದ್ದಾನೋ ಆ ದುಷ್ಟನ ಮೋಸದ ಜಾಲ ಅರಿಯದೆ ವಂಚನೆಯ ಜಾಲ ಅರಿತಿದ್ದರೆ ಹೀಗೆ ಆಗುತ್ತಿರಲಿಲ್ಲ. ಆದರೆ ಈ ಪ್ರೀತಿ ಎಂಬ ಮಾಯೆ ಅವಳ ತಲೆಯನ್ನು ಕೆಡಿಸಿದ ಮೋಸಕ್ಕೆ ಬಲಿಯಾಗುವಂತೆ ಮಾಡಿತು.


ಮೋಸ ವಂಚನೆ ಎನ್ನುವ ಪದವು ಕೇವಲ ಸೀಮಿತ ಅವಧಿಯಲ್ಲಿ ಸಂತಸ ಆನಂದ ಖುಷಿಯ ಕೊಡುವುದು ಮಾತ್ರ ಅದಕ್ಕೆ ತಿಳಿದಿರುತ್ತದೆ.ಆದಿ ಕ್ಷಣದ ಮೋದಿಗಾಗಿ ಮಸ್ತಿಗಾಗಿ ಮತ್ತೊಬ್ಬರ ಜೀವನವನ್ನು ಹಾಳು ಮಾಡುವುದು ಎಷ್ಟರ ಮಟ್ಟಿಗೆ ಸರಿ?. ಆದುದರಿಂದ ಯಾರಿಗೂ ಮೋಸ ಮಾಡಬೇಡಿ ಯಾರಿಂದಲೂ ಮೋಸ ಹೋಗಬೇಡಿ. ಅಮೂಲ್ಯವಾದ ಪ್ರೀತಿಯ ಹೆಸರನ್ನು ಎಂದು ಕೆಡಿಸಬೇಡಿ....


Rate this content
Log in

Similar kannada story from Abstract