ಯಜ್ಞಸೇನಿ ಶ್ರೀಹರಿ

Abstract Others

3.5  

ಯಜ್ಞಸೇನಿ ಶ್ರೀಹರಿ

Abstract Others

ನಾ ಕಂಡಂತೆ

ನಾ ಕಂಡಂತೆ

2 mins
87


ಎಲ್ಲರೂ ಮನಸ್ಸಿನ ಮಾತನ್ನು ಹೇಳತ್ತಾರೆ ಹೀಗೆ 

" ಅವರು ಒಳ್ಳೆಯವರು ... ಅಯ್ಯೋ ಅಲ್ಲ ಕಣ್ರೀ ಇವರು ... ಇವರು ಒಳ್ಳೆಯವರು ಅಂತೇ..... " ಅದನ್ನು ಕೂಡ ವತ್ತಿ ಹೇಳತ್ತಾರೆ.

         

ಆದರೆ ಅವರು ಗಮನಿಸುವುದೇ ಇಲ್ಲ .... ತಾವು ಅಂತೆ ಕಂತೆಗಳ ಭಾವದಲ್ಲಿ ಮುಳಗಿದ್ದೆವೆ ಅಂತಾ....

ಆದರೂ ಮನದ ಮೂಲೆಯಲ್ಲಿ ಸಂಭವಿಸಿವ ಪ್ರಶ್ನೆ ಹಾಗ ಆದರೆ ಇಲ್ಲಿ ಯಾರ ಒಳ್ಳೆಯವರು.... ನಮಗೆ ನಾವೇ ಒಳ್ಳೆಯರು ಆಗಲಿಲ್ಲ ( just ask your self am i right in my way ??? the answer will be no .... ) ಅಂದ ಮೇಲೆ ಬೇರೆಯವರು ಹೇಗೆ ಒಳ್ಳೆಯವರು ಆಗತ್ತಾರೆ... ಸಂದರ್ಭಗಳಲ್ಲಿ ನಾವು ಅವರನ್ನಾ ಒಳ್ಳೆಯವರು ಅಂತಾ ಪರಿಗಣನೆ ಮಾಡತ್ತಿವಿ ವಿನಃ ಶಾಶ್ವತವಾಗಿ ಇವರು ಒಳ್ಳೆಯವರೇ ಅಂತಾ ನಿರ್ಧಾರ ತೆಗೆದುಕೊಳ್ಳುವುದಿಲ್ಲ .....

              

ಕಾರಣ ಕೂಡ ಇದೆ ಸಮಯ ಮತ್ತೆ ಸಂದರ್ಭಗಳು .... ಕಾಲದ ಚಕ್ರ ತಿರುಗಿದಾಗ ಭಾವನೆಗಳು ತಿರುಗುತ್ತವೆ... ಹಾಗಾದರೆ ನಂಬಿಕೆ .....!!! ನಮ್ಮ ಮೇಲೆ ನಂಬಿಕೆ ಎಷ್ಟು ಇದೆ ...  ಗೊತ್ತಿಲ್ಲ .... ನಂಬಿಕೆ ಅಂದರೆ ಏನು .... ದಾರಿಯಲ್ಲಿ ಹೋಗುವ ಅಮ್ಮನಾ ಮಗು ಯಾವದೇ ನಿರೀಕ್ಷೆ ಇಲ್ಲದೇ ಅಪ್ಪಿಕೊಂಡು ಮುಂದೆ ನಡೆಸು ಅಂತಾ ಹೇಳುವುದಾ .... ಅಥವಾ ನಮ್ಮ ಕರ್ತವ್ಯ ಏನು ಇದೆ ಅದನ್ನಾ ಮಾಡಿಕೊಂಡು ಗೊತ್ತು ಗುರಿ ಇಲ್ಲದೇ ಮುಂದೆ ಸಾಗುವುದಾ ..... ಅವಶ್ಯಕತೆಗಳಿಗೆ ನಮ್ಮ ಮೇಲೆ ನನಗೆ ನಂಬಿಕೆ ಇದೆ ಅಂತಾ ಮನಸ್ಸಿಗೆ ಮೋಸ ಮಾಡುವುದು ನಂಬಿಕೆಯಾ..... ಅಥವಾ ಬೇರೆಯವರ ಅಸೂಯೆ ಮೇಲೆ ನಂಬಿಕೆಯನ್ನು ಪ್ರದರ್ಶನ ಮಾಡುವುದಾ....!!


ನಂಬಿಕೆ ಹುಟ್ಟುವುದು ಸಾವಿನ ದವಡೆ ಅಲ್ಲಿ ಇದ್ದರು ನಾನು ಇದರಿಂದ ಪಾರಗುವೆ... ಅಂತಹ ಆತ್ಮವಿಶ್ವಾಸವೇ ನಂಬಿಕೆ.. ಆದರೆ ಅತಿಯಾದ ನಂಬಿಕೆ ಮತ್ತೆ ಆತ್ಮವಿಶ್ವಾಸ ನಮ್ಮವಳಗಿನ ದೊಡ್ಡ ವಿಲನ್ ಗಳು.... ಹಾಗಾದರೆ ಆತ್ಮವಿಶ್ವಾಸ ಏನು.... ಉತ್ತರ ನಿಮಗೆ ಈಗಲೇ ಅರ್ಥವಾಗಿದೆ ಅಂತ ತಿಳಿದುಕೊಂಡಿರುವೆ.....

               

ಮೌನ ಸೆರೆಯಾಗಿದೆ

ಮಧುರ ಮಾತುಗಳ ಅರ್ಥ

ಸಾವಿನ ಕುಣಿಕೆ ಏರಿದೆ.....!!!

ಎದೆಯಾಳದ ಬಡಿತದ

ಆ ಸುಂದರ ಭಾವನೆಗಳು

ಸ್ಮಶಾನದ ಗೋರಿಯಲ್ಲಿ ಮಲಗಲು ಸಿದ್ಧವಾಗಿದೆ...!!!

ಕತ್ತಲಲ್ಲಿ ಕಟ್ಟಿದ

ಕನಸಿನ ಗಾಳಿಗೋಪುರ

ಸುಂದರವಾದ ನಗ್ನ ಸತ್ಯಕ್ಕೆ ನೆಲ ಸಮವಾಗಿದೆ.....!!!

ಮಾತನ್ನು ಮೌನದ

ಸಂತೆಯಲ್ಲಿ ಮಾರಿಯಾಗಿದೆ

ಇನ್ನೆಲ್ಲಿ ಭಾವನೆಗಳಿಗೆ ಬೆಲೆ...........???

ಮಾತಿಗೆ ಬೆಲೆ ಕೊಡಿ ಆದರೆ ಎಲ್ಲಿ ಅರ್ಹವೋ ಅಲ್ಲಿ ಮಾತ್ರ .....

ಇಷ್ಟು ಎಲ್ಲಾ ಬರೆದ ನಂತರ ನನಗೆ ಕುವೆಂಪು ಅವರ ಹಾಡು ನೆನಪು ಬಂತು ನೋಡಿ ಇಲ್ಲಿದೆ....


ಇಲ್ಲಿ,

ಯಾರು ಮುಖ್ಯರಲ್ಲ;

ಯಾರು ಅಮುಖ್ಯರಲ್ಲ;

ಯಾವುದು ಯಕಶ್ಚಿತವಲ್ಲ;

ಇಲ್ಲಿ,

ಯಾವುದಕ್ಕೂ ಮೊದಲಿಲ್ಲ;

ಯಾವುದಕ್ಕೂ ತುದಿಯಿಲ್ಲ;

ಯಾವುದು ಎಲ್ಲಿಯೂ ನಿಲುವುದು ಇಲ್ಲ!

ಇಲ್ಲಿ,

ಅವಸರವೂ ಸಾವಧಾನದ ಬೆನ್ನೇರಿದೆ!

ಇಲ್ಲಿ ,

ಎಲ್ಲಕ್ಕೂ ಇದೆ ಅರ್ಥ

ಯಾವುದೂ ಅಲ್ಲ ವ್ಯರ್ಥ

ನೀರೆಲ್ಲವೂ ತೀರ್ಥ.

                  

- ಶ್ರೀ ಕುವೆಂಪು

ನಿನ್ನೋಳಗೆ ನೀ ಹೊಕ್ಕು ನಿನ್ನೆ ನೀನೇ ಕಂಡು ನೀನಾಗು ಗೆಳಯಾ...

- ದ. ರಾ ಬೇಂದ್ರೆ


ಹಾಗಾದರೆ ನಾ ಇಲ್ಲಿ ಎನ್ನನ್ನು ಕಂಡೆ ....



Rate this content
Log in

More kannada story from ಯಜ್ಞಸೇನಿ ಶ್ರೀಹರಿ

Similar kannada story from Abstract