Mouna M

Classics Inspirational Others

4  

Mouna M

Classics Inspirational Others

ಸೀಸರ್

ಸೀಸರ್

1 min
351


ನನ್ನ ಬರವಣಿಗೆ ಚೆನ್ನಾಗಿರಲಿ ಅಂತ ಅಪ್ಪ ಪ್ರತಿ ತಿಂಗಳು ಒಂದು ಸೀಸಕಡ್ಡಿ ಕೊಡಿಸುತ್ತ ಇದ್ರು. ನಾನು ಅದುನ್ನ ಪ್ರತಿ ದಿನ ಬ್ಲೇಡ್ ನಲ್ಲಿ ಕೆತ್ತಿ ಚೂಪಾಗಿಸಿದ್ರೂ ಕೂಡ, ಒಂದು ದಿನ ಕೂಡ ಅದು ಅಳಲಿಲ್ಲ, ಕೆಳಗೆ ಬಿದ್ದ್ರರೂ ಕೂಡ , ಮುರಿಯುತ್ತಿರಲಿಲ್ಲ, ಪ್ರತಿಯಾಗಿ, ನನ್ನ ಬರವಣಿಗೆ ದಿನೇ ದಿನೇ ಗುಂಡಾಗುತ್ತಾ ಹೋದ ಹಾಗೆ, ಇತ್ತ ಸೀಸಕಡ್ಡಿ ಕೂಡ ಕುಬ್ಜವಾಗುತ್ತಾ ಹೋಯಿತು.   ಅಪ್ಪ ಕೊಡಿಸಿದ ಸೀಸಕಡ್ಡಿ ಬರೀತಾ ಬರೀತಾ ಚಿಕ್ಕದಾಗಿ ತಿಂಗಳ ಕೊನೆಯಲ್ಲಿ ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳುತ್ತಿತ್ತು.  ಸೀಸಕಡ್ಡಿಯ ಜೊತೆಗಾರ್ತಿಯಾಗಿ ರಬ್ಬರ್ ಕೂಡ ಇರುತ್ತಾ ಇತ್ತು.  ಇತ್ತ ಸೀಸಕಡ್ಡಿ ಅಳಿದಿದ್ದನ್ನು ನೋಡಿ, ರಬ್ಬರ್ ಕೂಡ, ನಿಧಾನವಾಗಿ ನನ್ನ ತಪ್ಪುಗಳನ್ನು ಅಳಿಸಿ, ತಾನು ಸವೆದು, ನನ್ನ ಬರವಣಿಗೆಯನ್ನು ಉತ್ತಮವಾಗಿಸಿ ತನ್ನ ಜೊತೆಗಾರ್ತಿಯಾದ ಸೀಸಕಡ್ಡಿಯನ್ನು ಆಗೊಮ್ಮೆ ಈಗೊಮ್ಮೆ ಸೇರಿಕೊಳ್ಳುತ್ತಿತ್ತು. 

 

 ನನ್ನ ಅಪ್ಪ ಇದನ್ನೇ ಉದಾಹರಣೆಯಾಗಿ ತೆಗೆದುಕೊಂಡು ಜೀವನದ ಪಾಠವನ್ನು ಕಲಿಸಿದರು. ಹೇಗೆ ಸೀಸಕಡ್ಡಿಯು ತಾನು ಅಳಿದು ಇತರರ ಸುಂದರವಾದ ಬರವಣಿಗೆಗೆ ಸಹಾಯ ಮಾಡಿದರೂ, ಎಲ್ಲೂ ತನ್ನನ್ನು ಬಣ್ಣಿಸದೇ, ಇತರರನ್ನೂ ಅಳಿಯದೇ, ಸದ್ದಿಲ್ಲದೇ ತನ್ನ ಛಾಪನ್ನು ಮೂಡಿಸಿತೋ ಹಾಗೆಯೇ ನಾವು ಕೂಡ ಸೀಸಕಡ್ಡಿಯ ಹಾಗೆ ನಮ್ಮ ಜೀವನವನ್ನು ನಡೆಸಿ ಇತರರಿಗೆ ಮಾದರಿಯಾಗಿ ಬದುಕಬೇಕು.  ಇನ್ನು ರಬ್ಬರ್ ಕಲಿಸಿದ ಪಾಠ ಮರಿಯಲು ಸಾಧ್ಯವೇ? ಇಲ್ಲವೇ ಇಲ್ಲ, ಹೇಗೆ ರಬ್ಬರ್ ನಾವು ಕಾಗದದ ಮೇಲೆ ಮಾಡಿದ ತಪ್ಪನ್ನು ಸದ್ದಿಲ್ಲದೇ ಅಳಿಸಿ, ಮತ್ತೊಂದು, ಮಗದೊಂದು  ಅವಕಾಶವನ್ನು ಕೊಟ್ಟು ನಮ್ಮ ತಪ್ಪನ್ನು ತಿದ್ದಿಕೊಳ್ಳಲು ಸಮಯವನ್ನು ಕೊಡುತ್ತದೆಯೋ, ಹಾಗೆಯೇ ಜೀವನದಲ್ಲಿ ನಮ್ಮ ತಪ್ಪನ್ನು ನಾವೇ ಅರಿತುಕೊಂಡು, ಮಾಡಿದ ತಪ್ಪನ್ನು ಮರುಕಳಿಸದೇ, ಬಂದ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಮುನ್ನುಗ್ಗುತ್ತಾ ಹೋದರೆ ಜಯ ನಮಗೆ ಕಟ್ಟಿಟ್ಟ ಬುತ್ತಿ!  

 

ಈಗ ನೀವೇ ಹೇಳಿ ಈ ಕಿರುಕಥೆಗೆ ಸೀಸರ್ ತಕ್ಕ ಶೀರ್ಷಿಕೆ ಅಲ್ಲವೇ?


Rate this content
Log in

Similar kannada story from Classics