Meenakshi "meeನ"

Abstract Others

2  

Meenakshi "meeನ"

Abstract Others

ಸಂದೇಶಕ್ಕಾಗಿ ಕಾದಾಗ.

ಸಂದೇಶಕ್ಕಾಗಿ ಕಾದಾಗ.

6 mins
122


ಅದೊಂದು ರೆಸ್ಟುರೆಂಟ್....! ದೊಡ್ಡ ಕಾಫಿ ಮಗ್ ಅಲ್ಲಿ ಒಂದೊಂದೇ ಸಿಪ್ ಚಹಾ ಹೀರುತ್ತ ಕುಳಿತಿದ್ದಳು... ಮಾಯಾ.. ತನಗಾಗಿ ಬರುವ ಸಂದೇಶವನ್ನು ಕಾದು.

        ಅದೆಷ್ಟು ಹೊತ್ತು ಕಾದರು ಯಾವ ಸಂದೇಶ ಬರಲಿಲ್ಲ.. ಮೊಬೈಲ್ ನೋಡುತ್ತ ಕುಳಿತಿದ್ದ ಮಾಯಾ ಬೇಸರವಾಗಿ ಸುತ್ತಲೂ ಕಣ್ಣಾಡಿಸಿದಳು. ಅಲ್ಲೊಂದು ಚೆಂದದ ಜೋಡಿ ಕಾಫಿ/ ಚಹಾ (ಏನೋ ಒಂದು ) ಹೀರುತ್ತಾ ಕುಳಿತಿತ್ತು. ಅವರನ್ನು ನೋಡಿ ನೆನಪಿನ ಅಂಗಳಕ್ಕೆ ಜಾರಿದಳು.. ಮಾಯಾ...

            "ಸ್ಯಾಮ್.. ಸ್ಯಾಮ್... ಎಲ್ಲಿ ನೀನು" ಅಂತ ಸಮರ್ಥ ನನ್ನು ಕೂಗುತ್ತಾ ಅವನ ಮನೆಯ ಬಾಗಿಲಲ್ಲಿ ನಿಂತಳು..

       ಕಾಲಿಂಗ್ ಬೇಲ್ ಇದ್ದರೂ.. ಬಾಗಿಲು ಬಡಿಯುತ್ತಾ... "ಲೋ.. ಸ್ಯಾಮ್.. ಎದ್ದೆಳೋ ಎಷ್ಟು ಹೊತ್ತು ನಿನ್ನ ನಿದ್ದೆ. ಬೇಗ ಎದ್ದು ರೆಡಿಯಾಗಿ ನನ್ನ ಕಾಲೇಜ್ ಗೆ ಡ್ರಾಪ್ ಮಾಡೋದು ಬಿಟ್ಟು ಇನ್ನೂ ಬಿದ್ದ್ಕೊಂಡಿದಿಯಾ ಹಂದಿ ತರ.. ಎದ್ದೆಳೋ ಬೇಗ." ಅಂತ ಕೂಗುತ್ತಿದ್ದಳು...

        ಇವಳ ಕೂಗಿಗೆ ಬೆಚ್ಚಿಬಿದ್ದು ದಡಬಡಾಯಿಸಿ ಎದ್ದ ಸಮರ್ಥ ಕಣ್ಣು ಬಿಟ್ಟು ಗಡಿಯಾರ ನೋಡಿಕೊಂಡ... "ಅಯ್ಯೋ ಆಗಲೇ 8-30 ಆಯಿತಾ.. ಈ ರಾಕ್ಷಸಿ ಇವತ್ತು ನನ್ನ ರಕ್ತ ಹೀರೋದು ಗ್ಯಾರಂಟಿ ಅಂತ ಎದ್ದು ಓಡಿ ಹೋಗಿ ಬಾಗಿಲು ತಗೆದು ನಿಂತ...

            ಕೋಪದಿಂದ ಕೆಂಪಾದ ಮಾಯಾಳ ನೋಡಿ.., ಏನೇ ಮಾಯಬಜಾರ ಇಷ್ಟು ಕೆಂಪ ಆಗಿದಿಯಾ.. ಆ ಸೂರ್ಯ ನಿನ್ನಿಂದ ಬಿಸಿ ಆಗ್ತನಾ.. ಇಲ್ಲ ಅವನಿಂದ ನೀನು ಇಷ್ಟು ಕೆಂಪ ಆಗಿದಿಯಾ ಅಂತ ರೇಗಿಸಿ ಅವಳ ಕೋಪ ಇನ್ನಷ್ಟು ಹೆಚ್ಚು ಮಾಡಿದ.

         ಮಾಯಾ.." ಯೇ.. ಕತ್ತೆ ಸುಮ್ನೆ ಇದ್ರೆ ಸರಿ ಈಗ.. ಇಲ್ಲ ಅಂದ್ರೆ ನಿನ್ನ ಪರಿಸ್ಥಿತಿ ಸರಿ ಇರೋಲ್ಲ.. ಅಲ್ವೋ..! ಗೂಬೆ ನಿನ್ನೆ ನೆ ಹೇಳಿದ್ದೆ ಅಲ್ವಾ ನಿನಗೆ? ನಾಳೆ ನನಗೆ ಕಾಲೇಜ್ ಗೆ ಬೇಗ ಡ್ರಾಪ್ ಮಾಡು ಅಂತ. ಗೊತ್ತಿದ್ದರೂ ಕುಂಭಕರ್ಣ ನ ಹಾಗೆ ಇನ್ನೂ ಬಿದ್ದಕೊಂಡು ಏನ ಕನಸು ಕಾಣ್ತಾ ಇದ್ದಿಯಾ.. ನಿನ್ನ ಮುಸಡಿಗೆ ಅದ್ಯಾವಳು ಬರೋಲ್ಲ ಕನಸಲ್ಲಿ, ಬಂದರೂ ಅವಳು ಮರಿ ರಾಕ್ಷಸಿ.. ಒಂಚೂರು ಟೇಸ್ಟ್ ಇಲ್ದೆ ಇರೋ ಹುಡಗಿ..

    ಹೌದು ನಿನ್ನೆ ರಾತ್ರಿ ನಾನು ಕಾಲ್ ಮಾಡಿದಾಗ ಎಲ್ಲೋ ಇದ್ದೆ. ಅದೆಷ್ಟು ಗಲಾಟೆ ಕೇಳಿಸ್ತಾ ಇತ್ತು. ಏನು ಮಾಡ್ತಾ ಇದ್ದೆ.." ಅಂತ ತನ್ನ ಅನುಮಾನ ವ್ಯಕ್ತಪಡಿಸಿದಳು.

        ಆಮೇಲೆ...! ರಾತ್ರಿ ಎಷ್ಟು ಹೊತ್ತಿಗೆ ಮನೆಗೆ ಬಂದೆ.. ? ಒಂದೇ ಸಮನೆ ಬಿಟ್ಟು ಬಿಡದೆ ಪ್ರಶ್ನೆಗಳ ಸುರಿಮಳೆ..

     "ಹೇಳೋ... ರೌಡಿ! ಎಲ್ಲಿ ಇದ್ದೆ.." ಅಂತ.. 

   ಸಮರ್ಥ "ಅಲ್ವೇ ರಾಕ್ಷಸಿ...! ನನಗೂ ಮಾತಾಡಕ್ಕೆ ಬಿಡದೆ ಒಂದೇ ಸಮ ಪ್ರಶ್ನೆ ಕೇಳ್ತಾ ಇದ್ದರೆ ನಾನು ಹೆಂಗೆ ಉತ್ತರ ಕೊಡಲಿ.. ನನಗೂ ಮಾತಾಡಕ್ಕೆ ಅವಕಾಶ ಕೊಡು.." ಅಂತ ಹೇಳಿದಾಗ.. ಮಾಯಾಗೆ ತನ್ನ ಮೇಲೆ ತನಗೆ ನಗು ಬಂದು ಸುಮ್ಮನಾಗಿ ಹೇಳು ಅಂತ ಕಣ್ಣಲ್ಲೇ ಸೂಚಿಸಿದಳು.

           ಅದು ನಿನ್ನೆ ಒಂದು ದೊಡ್ಡ ಕೆಲಸ ಕಣೆ... ನಿದ್ದೆ ಇಲ್ಲ ರಾತ್ರಿ ಎಲ್ಲ.. ಅಂತ ತನ್ನ ಕೆಂಪಾದ ಕಣ್ಣು ಉಜ್ಜುತಿದ್ದ... ಸಮರ್ಥ.

          ಮಾಯಾ.." ಏನೋ ಅಂಥ ಘನಂದ್ದಾರಿ ಕೆಲಸ , ಅದು ಈ ಸನ್ಯಾಸಿಗೆ..." ಅಂತ ಒಮ್ಮೆ ಅನುಮಾನ ದಿಂದ ನೋಡಿದಳು...

      ಸಮರ್ಥ ಯಾವತ್ತೂ ತನ್ನ ಕೆಲಸ ಏನು ಅಂತ ಯಾವತ್ತೂ ಗುಟ್ಟು ಬಿಟ್ಟು ಕೊಟ್ಟಿರಲಿಲ್ಲ.. ಯಾರಿಗೂ ಕೂಡ..

       ಸಮರ್ಥ ಮಾಯಾಳ ಊರಿಗೆ ಬಂದಾಗ.. ತಾನೊಬ್ಬ ಅನಾಥ ಅಂತ ಹೇಳಿಕೊಂಡು ಕೆಲಸದ ಹುಡುಕಾಟ ದಲ್ಲಿ ಇದಿನಿ.. ಅಂತ ಮಾಯಾಳ ಮನೆಯ ಬೀದಿಯ ಕೊನೆಯ ಖಾಲಿ ಮನೆಯಲ್ಲಿ ವಾಸವಿದ್ದ.

      ನಿಜವಾಗಲೂ ಸಮರ್ಥ ಅನಾಥನಾ.. ಅವನಿಗೆ ಯಾರು ಇಲ್ಲವ ಅನ್ನೋದು ಸಮರ್ಥ ಹೊರತು ಯಾರಿಗೂ ಗೊತ್ತಿಲ್ಲ.

     ಒಂದು ದಿನ ಪುಂಡರ ಕಾಟಕ್ಕೆ ಒಳಗಾದ ಮಾಯಾ, ಸಮರ್ಥನಿಂದ ಬಚಾವ ಆಗಿದ್ದಳು.. ಆಗಿನಿಂದ ಅವರಿಬ್ಬರೂ ಒಳ್ಳೆಯ ಸ್ನೇಹಿತರಾಗಿದ್ದರು. ಬಿಡುವು ಸಿಕ್ಕಗೆಲ್ಲ ಮಾಯಾ ಮನೆಗೆ ಬಂದು ಹೋಗುತ್ತಿದ್ದ. ಅವಳ ತಂದೆ ತಾಯಿಗೂ ಹತ್ತಿರದವನಾಗಿದ್ದ. ಸಮರ್ಥನ ಮಾತು , ಕಾಳಜಿ ಹಾಗೆ ಎಲ್ಲರೂ ಅವನಿಗೆ ಹತ್ತಿರವಾಗಿ ಬಿಡುತ್ತಾರೆ.

         ಸಮರ್ಥ, "ಏನೇ.. ಬೆಂಕಿ ಉಂಡೆ ಯಾಕ್ ಹಾಗೆ ನೋಡ್ತಾ ಇದೀಯಾ ಏನು ನಿನ್ನ ಅನುಮಾನ?" ಅಂತ ಕೇಳಿದ.

         ಮಾಯಾ, " ಅಲ್ಲ.. ಕೆಲಸ ಇಲ್ದೆ ಇರೋ ನಿರುದ್ಯೋಗಿಗೆ ಅದೇನು ಕೆಲಸ ಅಂತ ಯೋಚನೆ ಮಾಡ್ತಾ ಇದಿನಿ.. ಹೇಳು ಅದೇನು ಕಡೆದು ಗುಡ್ಡೆ ಹಾಕಿದಿಯಾ ನಾನು ಕೇಳತಿನಿ.." ಅಂತ ಹೇಳ್ತಿರ್ ಬೇಕಾದರೆ...

     ಸಮರ್ಥ.., "ಒಯ್.. ಮಾಯಾ ಬಜಾರ್... ಈಗ ನಿನ್ನ ಕಾಲೇಜ್ ಗೆ ಲೇಟ್ ಆಗಲ್ವಾ.. ಅಥವಾ ಇವತ್ತು ನಿನ್ನ ಕಾಲೇಜ್ ಗೆ ಬಂಕ್..? ನಡಿ ಮೊದಲು ನಿನಗೆ ಡ್ರಾಪ್ ಮಾಡಿ ಬರ್ತೀನಿ ಇಲ್ಲ ಅಂದ್ರೆ ನನ್ನ ಹುರಿದು ಮುಕ್ಕಿ ಬಿಡ್ತೀಯಾ ನೀನು ಅಂತ ಅವಳನ್ನ ಅಲ್ಲಿಂದನೆ ಎಳೆದು ಕೊಂಡು ಹೋದ." ಬೈಕ್ ಕೀ ತೆಗೆದು ಕೊಂಡು.

   ನೆನಪಿನಿಂದ ಹೊರಬಂದ ಮಾಯಾ..." ಅವತ್ತೇ ನಾನು ಅವನ ಕೆಲಸ ಏನು ಅಂತ ಕೇಳಿದ್ರೆ, ಬಹುಶ ಇವತ್ತು ಸ್ಯಾಮ್ ನನ್ನ ಕಣ್ಣ ಮುಂದೆ ಇರ್ತಾ ಇದ್ದ ಅನಿಸುತ್ತೆ.. ಅವನ ಒಂದು ಸಂದೇಶ.. ಅದೆಷ್ಟು ವರ್ಷ ಆಯಿತು ನಾನು ಕಾದು ದಿನ ಅವ ಹೇಳಿದ ಟೈಂ ಗೆ ಸರಿಯಾಗಿ ಬಂದು ಕುಳಿತು.. ಅವನಿಷ್ಟದ ಟೀ ಕುಡಿತಾ ಕಾಲ ಕಳೆಯೋದೆ ಒಂದು ಕೆಲಸ ಆಗಿದೆ..."

             " ಅವತ್ತೊಂದು ದಿನ ನಾನು ಸ್ನೇಹಿತರ ಜೊತೆ ಮಾಸ್ ಬಂಕ್ ಮಾಡಿ ಹೊರಗಡೆ ಸುತ್ತಾಡಲು ಹೋದಾಗ ಶ್ಯಾಮ್ ಆ ಬೀದಿಯಲ್ಲಿ ಹೋಗುತ್ತ ಇದ್ದಾಗ ಒಂದು ಕ್ಷಣ ಶಾಕ್ ಆದೇ.. ಅವ ಯಾಕೆ ಆ ಬೀದಿಯಲ್ಲಿ ಹೋದ.. ಇಡೀ ಊರಿನ ಪ್ರಕಾರ ಆ ಬೀದಿಗೆ ಹೋಗುವವ ಸೀರೆ ಸೇರಗಿನ ಹಿಂದೆ ಹೋಗುವವ.. ಅಂತ.. " ಹೇಳ್ತಾ ಇದ್ದಿದ್ದು ಕೇಳಿದ್ದಳು ಮಾಯಾ.. 

          ಅದೇ ಯೋಚನೆಯಲ್ಲಿ ಮನೆಗೆ ಬಂದ ಮಾಯಾ.. ಬಟ್ಟೆ ಬದಲಿಸಿ ಸೀದಾ ಸಮರ್ಥನ ಮನೆ ಬಾಗಿಲಿಗೆ ಹೋದಳು.. ಅವನನ್ನು ಕಾಯುತ್ತ ಕುಳಿತಳು.. ಅವ ಇನ್ನೂ ಬಂದಿರೋಲ್ಲ ಅನ್ನೋ ನಂಬಿಕೆಯಲ್ಲಿ..

      ಆದರೆ ಆಶ್ಚರ್ಯ ವೆಂಬಂತೆ ಸಮರ್ಥ ಅವಳಿಗಿಂತ ಮೊದಲೇ ಮನೆಗೆ ಬಂದು ಮಾಯಾಳಿಗೆ ಅಂತ ತಿಂಡಿ ರೆಡಿ ಮಾಡುತ್ತ ಇದ್ದ.. ಒಗ್ಗರಣೆ ವಾಸನೆಗೆ ಮನೆಯ ಬಾಗಿಲು ಬಡಿದಳು.. ಬಾಗಿಲು ತೆಗದೆ ಇತ್ತು.. ಸೀದಾ ಗುಳಿಯ ಹಾಗೆ ಅಡಿಗೆ ಮನೆಗೆ ನುಗ್ಗಿದ ಮಾಯಾ.. "ಇವತ್ತು ನಾನು ... " ಅಂತ ಮಾತು ಶುರು ಮಾಡುತ್ತಿದ್ದಳು. ಅಷ್ಟರಲ್ಲಿ ತಡೆದ ಸಮರ್ಥ... "ಗೊತ್ತು.. ಬಾಯಿ ಬಡಕಿ.. ನಾನು ಇವತ್ತು ರೆಡ್ ಲೈಟ್ ಏರಿಯಾಗೆ ಹೋಗ್ತಾ ಇದ್ದೆ , ಅದನ್ನ ನೀನು ನೋಡಿದೆ ಅಲ್ವಾ.." ಅಂತ ಏನು ಆಗೆ ಇಲ್ಲ ಅನ್ನೋತರ ಸಮಾಧಾನ ದಿಂದ ಹೇಳಿದ.

        ಮಾಯಾ.. ಆಶ್ಚರ್ಯದಿಂದ ಹೌದು ಅನ್ನೋತರ ತಲೆಯಾಡಿಸಿ ಕಣ್ಣಲ್ಲೇ ಅಲ್ಲಿ ಯಾಕೆ ಹೋಗಿದ್ದು ನೀನು ಅನ್ನೋತರ ನೋಡಿದಳು...

           ಸಮರ್ಥ.. ಇವತ್ತು ಇವಳಿಗೆ ಎಲ್ಲ ವಿಷಯ ಹೇಳಿ ಬಿಡಬೇಕು ಅಂತ ನಿರ್ಧರಿಸಿ ಬಿಟ್ಟಿದ್ದ. ಅದನ್ನೇ ಹೇಳಿದ ಕೂಡ...

           "ಮಾಯಾ.., ನಾನು ನಿನ್ನಿಂದ ಒಂದು ವಿಷಯ ಮುಚ್ಚಿ ಇಟ್ಟಿದ್ದೆ ಕಣೆ.. ನಾನು ಕೆಲಸ ಇಲ್ಲದ ನಿರುದ್ಯೋಗಿ ಅಲ್ಲ.. ನಾನು ಸರ್ಕಾರದ ಮನುಷ್ಯ.. ಸರಕಾರಕ್ಕೆ ಅಂತ ಕೆಲಸ ಮಾಡುವವ.. ಆದರೆ ನನ್ನ ಕೆಲಸ ಏನು ಅಂತ ಮಾತ್ರ ಹೇಳುವ ಹಾಗಿಲ್ಲ.. ನನ್ನ ಸ್ವಂತ ಅಪ್ಪ ಅಮ್ಮನಿಗೂ ಕೂಡ.. ಗೊತ್ತಿಲ್ಲ..

    ಅಪ್ಪ.. ಅಮ್ಮ ಅನ್ನುತ್ತಿದ್ದ ಹಾಗೆ.. ಮಾಯ ಮತ್ತಿಷ್ಟು ಆಶ್ಚರ್ಯ ಗೊಂಡಳು.. ಅವಳ ಶಾಕ್ ಮುಖ ನೋಡಿ...

     ಸಮರ್ಥ, "ಹೌದು ಮಾಯ... ಅಪ್ಪ ಅಮ್ಮ ಇಬ್ಬರು ಇದಾರೆ ನನಗೆ.. ನಾನು ಅನಾಥ ಅಲ್ಲ.. ಅಪ್ಪ ಅಮ್ಮನಿಗೆ ನಾನು ಒಬ್ಬನೇ ಮಗ.. ಕೂತು ಉಂಡರು ಕರಗದ ಆಸ್ತಿ.. ಆದ್ರೆ ಅದೆಲ್ಲ ನನ್ನದು ಅಲ್ಲ ಎಲ್ಲ ಅಪ್ಪ ಮಾಡಿಟ್ಟ ಆಸ್ತಿ.. ಅದರ ಮೇಲೆ ನನಗ್ಯಾವ ಹಕ್ಕು ಇಲ್ಲ. ನಾನು ದುಡಿದು ಸಂಪಾದಿಸಿದ್ದು ಮಾತ್ರ ನನ್ನದು.. ಸರ್ಕಾರ ಕೊಡೋ ಸಂಬಳ ಸಾಕಾಗುತ್ತದೆ.. ನನ್ನ ಊಟ ತಿಂಡಿ ಎಲ್ಲ ಅವರೇ ಕೊಡೋದು.. ಹ..! ನನ್ನ ಕೆಲಸ ಏನು ಅಂತ ಮಾತ್ರ ಕೇಳಬೇಡ.. ಅದು ಗುಟ್ಟು... ಆದರೆ ನನ್ನ ನಂಬು, ನನ್ನ ನಂಬಿ ಬಂದವರಿಗೆ ನಾನು ಯಾವತ್ತೂ ಮೋಸ ಮಾಡೋಲ್ಲ.." ಅಂತ ಒಂದು ಚೆಂದದ ನಗೆ ನಕ್ಕ.. ಆ ನಗುವಿನಲ್ಲೇ ಕಳೆದೊದ ಮಾಯಾ... ನಕ್ಕು ತಿಂಡಿ ಏನು ಅಂತ ಕೇಳಿದಳು...

           "ನಿನ್ನ ಇಷ್ಟದ ತಿಂಡಿ... ಕಣೆ.. ಕೋಳಿ ಪುಕ್ಕ.., ಉಪ್ಪಿಟ್ಟು.." ಅಂತ ಮತ್ತೆ ಕೆಣಕಿದ...

      ಅವ ರೇಗಿಸಿದ್ದು ಕೂಡ ಕೇಳಿಸಲಿಲ್ಲ ಮಾಯಾಳಿಗೆ ಉಪ್ಪಿಟ್ಟಿನ ಹೆಸರು ಕೇಳಿ.. "ಹೌದೇನೋ" ಅಂತ ತಾನೇ ತಟ್ಟೆಗೆ ಬಡಿಸಿಕೊಂಡು ತಿನ್ನಲು ಶುರು ಮಾಡಿದಳು..

           "ಅಯ್ಯೋ.. ಬಕಾಸುರಿ ವಂಶದವಳೇ.. ನನಗೂ ಇಡೇ.. ನಾನಿನ್ನು ತಿಂದಿಲ್ಲ.. ಒಬ್ಬಳೇ ತಿಂದು ತೆಗಬೇಡ...ನನಗೂ ಹಸಿವು.." ಅಂತ ಅದೇ ತಟ್ಟೆಯಲ್ಲಿ ಇಬ್ಬರು ತಿಂದು, ಮಾಯಾ ಮಸಾಲ ಟೀ ಮಾಡಿ ಕೊಟ್ಟಳು ಸಮರ್ಥನಿಗೆ..

       " ಸ್ಯಾಮ್.. ನಾನು ನಿನಗೆ ಯಾವತ್ತೂ ಪ್ರಶ್ನೆ ಮಾಡೋಲ್ಲ.. ನಿನ್ನನ್ನು ನಾ ನನಗಿಂತ ಹೆಚ್ಚಾಗಿ ನಂಬುತ್ತೇನೆ. ಪರಿಚಯವಾದ ಇವತ್ತಿನ ವರೆಗೂ ನಿನ್ನ ಮೇಲೆ ಎಳ್ಳಷ್ಟೂ ಅನುಮಾನ ಇಲ್ಲ ನನಗೆ.. ಅಂತ ಅವನ ಕಣ್ಣಲ್ಲಿ ಕಣ್ಣಿಟ್ಟು ಹೇಳಿದಳು.

       ಮೊದಲೇ ಅರ್ಥವಾಗಿತ್ತು ಸಮರ್ಥನಿಗೆ ಮಾಯಾ ತನ್ನನ್ನು ಇಷ್ಟ ಪಡುತ್ತಾಳೆ ಅಂತ. "ತಾನು ಕೂಡ ಇಷ್ಟ ಪಟ್ಟೆ ಆದರೆ ನನ್ನ ಕೆಲಸ ..? ನನ್ನ ಪ್ರಾಣ ಯಾವಾಗ ಹೋಗುತ್ತೆ ಅಂತ ಗೊತ್ತಿಲ್ಲ... ಅದ್ಯಾವ ಬೀದಿಯಲ್ಲಿ ಹೆಸರಿಲ್ಲದ ಅನಾಥ ಹೆಣವಾಗಿ ಬಿದ್ದಿರುತ್ತೇನೆ... ಅಂತ ಕೂಡ ಗೊತ್ತಿಲ್ಲ.. ಹೀಗಿರುವಾಗ ಹೇಗೆ ಅವಳಿಗೆ ಹೇಳಲಿ.. ನಿನಂದ್ರೆ ಇಷ್ಟ.. ನಿನ್ನ ಕೊನೆಯವರೆಗೂ ಕಾಪಾಡುವ ಜವಾಬ್ದಾರಿ ಹೊಣೆ ನನ್ನದು ಅಂತ.." ಯೋಚಿಸುತ್ತಾ ಕಳೆದೆ ಹೋದ ಮಾಯಾಳ ಸ್ಯಾಮ್...

        ಮಾಯಾ.. "ಅದ್ಯಾವ ಊರಲ್ಲಿ ಕಳೆದು ಹೋದೆ.. ಶ್ಯಾ.." ಅಂತ ರೇಗಿಸುತ್ತಿದ್ದಳು ಮಾಯಾ...

    ಮಾಯಾಳ ಕೂಗಿಗೆ ಎಚ್ಚೆತ್ತ ಸಮರ್ಥ, "ಎಲ್ಲೂ ಇಲ್ಲ.. ಕೋಳಿ ಮರಿ.." ಅಂತ ಅವಳನ್ನು ಅವಳ ಮನೆಗೆ ಕರೆದುಕೊಂಡು ಹೋದ.

          ಮೊಬೈಲ್ ರಿಂಗಿಗೆ ಯೋಚನೆಯಿಂದ ಹೊರಬಂದ ಮಾಯಾ.. ಮೊಬೈಲ್ ತೆಗೆದು ನೋಡಿದಳು.. ತನ್ನ ಅಪ್ಪನ ಕಾಲ್.. "ಹೆಲೋ ಅಪ್ಪ.. ಮನೆಗೆ ಬರ್ತಾ ಇದಿನಿ" ಅಂತ ಹೇಳಿ ಫೋನ್ ಕಟ್ ಮಾಡಿದಳು.

           " ಅವತ್ತು ಕೂಡ ಗೊತ್ತಾಗಲಿಲ್ಲ ಸ್ಯಾಮ್ ನ ಕೆಲಸ.. ಆದರೆ ಅವ ಮಾಡುತ್ತಿರುವ ಕೆಲಸ ನೇರ ಸರಕಾರಕ್ಕೆ ಅಂತ ಮಾತ್ರ ಹೇಳಿದ್ದ. ಅವ ಯಾವ ಕಾನೂನು ಬಾಹಿರ ಚಟುವಟಿಕೆ ಮಾಡೋಲ್ಲ ಅಂತ ಅವನ ಮಾತಿನ ಮೇಲೆ ನಂಬಿಕೆ ಇಟ್ಟು.. ಯಾವುದನ್ನು ಕೇಳದೆ ನನ್ನ ಮನೆಗೆ ಹೋದೆ.. ಹೋದ ಕೆಲ ದಿನಗಲ್ಲೇ ಸ್ಯಾಮ್ ನಾಪತ್ತೆ ಆಗಿ ಹೋದ... ಫೋನಿಗೂ ಕೂಡ ಸಿಗಲಿಲ್ಲ.. ನನಗೆ ಹೇಳದೆ ಅವ ಎಲ್ಲೂ ಹೋಗುವುದು ಇಲ್ಲ.. ಆದರೆ ಈಗ? ಅವ ಸುಳಿವು ಕೊಡದೆ ಎಲ್ಲಿಗೋ ಹೋಗಿದ್ದಾನೆ ಅಂದ್ರೆ.. ಅವ ಯಾವುದೋ ಅಪಾಯದಲ್ಲಿ ಇದಾನಾ?" ಅಂತ ಯೋಚನೆಗೆ ಬಿದ್ದಳು.. ಮಾಯ...

           "ಆಗ ಅಲ್ವಾ ನಾನು ಅವನ ಮನೆಗೆ ಹೋದೆ ಇನ್ನೊಂದು ಬೀಗದ ಕೈ ತಗೊಂಡು... ಪರಿಚಯದ ಸ್ವಲ್ಪ ದಿನದಲ್ಲೇ ಇನ್ನೊಂದು ಕೀ ನನಗೆ ಕೊಟ್ಟ ಆದರೆ ಯಾವತ್ತೂ ನಾ ಅದನ್ನ ಉಪಯೋಗಿಸಿರಲಿಲ್ಲ. ಇವತ್ತು ಯೂಸ್ ಮಾಡೋ ಅವಶ್ಯಕತೆ ಬಂದಿದೆ" ಅಂತ ಕೀ ತೆಗೆದು ಮನೆಯ ಒಳಗೆ ಕಾಲಿಟ್ಟಳು ಮಾಯಾ.

           ಒಳ ಹೋದವಳಿಗೆ ಸ್ಯಾಮ್ ನ ನೆನಪು ಅತಿಯಾಗಿ ಕಾಡಿತು.. ಸಾವರಿಸಿಕೊಂಡು ಏನಾದರೂ ಇಲ್ಲಿ ಸಂದೇಶ ಬಿಟ್ಟು ಹೋಗಿದಾನ ಅಂತ ಮನೆಯೆಲ್ಲ ಹುಡುಕಿದಳು.. ಏನು ಹುಡುಕುತ್ತಿದ್ದೇನೆ ಅಂತ ಕೂಡ ಗೊತ್ತಿಲ್ಲದೆ...

          ರೂಮ್.., ಹಾಲ್, ಬಾಲ್ಕನಿ.., ಹೀಗೆ ಒಂದೊಂದೇ ಎಲ್ಲ ಹುಡುಕಾಡಿದಳು...ಎಲ್ಲವೂ ಖಾಲಿ.. ಎಲ್ಲೂ ಯಾವ ಸುಳಿವು ಸಿಗಲಿಲ್ಲ. ಅಡಿಗೆ ಮನೆ ಕೂಡ ಜಾಲಾಡಿ ಬಿಟ್ಟಳು.. ಯಾವುದೇ ಸಂದೇಶ ಸಿಗಲಿಲ್ಲ.. ಕಡೆ ಪ್ರಯತ್ನ ಎಂಬಂತೆ... ಇಬ್ಬರು ಯಾವಾಗಲೂ ಕುರುತಿದ್ದ ಹಿತ್ತಲಲ್ಲಿ ಹೋಗಿ ಹೂವಿನ ಗಿಡದ ಹತ್ತಿರ ಹೋದಳು.. ಅಲ್ಲಿ ಏನಾದರೂ ಇಡಬಹುದಾ ಅಂತ..

        ಅಲ್ಲಿ ಸಿಕ್ಕಿತು ಒಂದು ಸಂದೇಶ.. ಬಿಳಿ ಹಾಳೆಯ ಮೇಲೆ ಬರೆದು ಅದನ್ನು ಹೂವಿನ ಗಿಡಕ್ಕೆ ಕಟ್ಟಿ ಬಿಟ್ಟಿದ್ದ. ಅದನ್ನು ನೋಡಿದವಳೇ ಓಡಿ ಹೋಗಿ ತೆಗೆದುಕೊಂಡು ಓದ ತೊಡಗಿದಳು...

      ಪ್ರೀತಿಯ ಮಾಯಾ...,

           ನಿನಗೆ ಹೇಳ್ದೆ ಹೋಗ್ತಾ ಇದಿನಿ ಕ್ಷಮಿಸು.. ತುಂಬಾ ಅರ್ಜೆಂಟ್ ಕೆಲಸ ಹೋಗಲೇ ಬೇಕು.. ಆದಷ್ಟು ಬೇಗ ಬಂದು ನಿನ್ನ ಕಾಣತಿನಿ.. ಯಾವಾಗ ಅಂತ ಸರಿಯಾಗಿ ನನಗೂ ಗೊತ್ತಿಲ್ಲ. ಒಂದು ತಿಂಗಳು.., ಆರು ತಿಂಗಳು.. ಇಲ್ಲ ಒಂದು ವರ್ಷ ಕೂಡ ಆಗಬಹುದು... ನಾವು ಯಾವಾಗಲೂ ಹರಟೆ ಹೊಡೆಯುತ್ತ ಕೂರುತಿದ್ದ ರೆಸ್ಟುರೆಂಟ್ ಅಲ್ಲಿ ಸಂಜೆ ಸರಿಯಾಗಿ ನಾಲ್ಕು ಗಂಟೆಗೆ ಸಿಗತಿನಿ.. ಬಹುಶ ಈ ಮನೆಗೆ ಇನ್ಯಾವತ್ತು ಬರೋಲ್ಲ ನಾನು.. ಹೆಚ್ಚಿಗೆ ಏನು ಹೊಳೋದು ಆಗೋಲ್ಲ... ಇನ್ನೊಮ್ಮೆ ಕ್ಷಮಿಸಿ ಬಿಡು..

            ಇತಿ.. ನಿನ್ನಯ

           ಸ್ಯಾಮ್...

    ಅಂತ ಪತ್ರ ಬರೆದು ಇಟ್ಟಿದ್ದ ಸಮರ್ಥ. ಆ ಪತ್ರ ಅವಳಿಗೆ ಸಿಕ್ಕ ಹದಿನೈದು ದಿನದ ನಂತರ ಸಮರ್ಥ ಹೇಳಿದ ರೆಸ್ಟುರೆಂಟ್ ಅಲ್ಲಿ ಪ್ರತಿದಿನ ನಾಲ್ಕು ಗಂಟೆಗೆ ಸರಿಯಾಗಿ ಕಾದು ಕುಳಿತು ಬಿಡುತ್ತಾಳೆ.. ಅವನ ನೆನಪಲ್ಲಿ ಒಂದು ಕಪ್ ಟೀ ಕುಡಿದು.. ಸಮರ್ಥ ಗೆ ಮೊಬೈಲ್ ನಂಬರ್ ಗೊತ್ತು.. ಅವ ಏನಾದರೂ ಇನ್ನೊಂದು ಸಂದೇಶ ಕಳುಹಿಸಿ ಬಹುದು.. ಅನ್ನೋ ಭರವಸೆಯಲ್ಲಿ.. ಆದರೆ ಯಾವತ್ತೂ ಸಮರ್ಥನಿಂದ ಯಾವ ಸಂದೇಶ ಬರೋದಿಲ್ಲ ಅಂತ ಅವಳ ತಂದೆಗೆ ಗೊತ್ತಿದ್ದರೂ ಮಾಯಾಳಿಗೆ ಹೇಳುವ ಧೈರ್ಯ ಸಾಲದೇ ಸುಮ್ಮನೆ ಅವಳ ಹುಡುಕಾಟ ನೋಡುತ್ತಾ ಇದ್ದರು.

         ನಿಜ.. ಸಮರ್ಥ ಯಾವುದೋ ಕೇಸ್ ವಿಷಯವಾಗಿ ದೂರದ ದೇಶಕ್ಕೆ ಹೋಗಿರುತ್ತಾನೆ.. ಅಲ್ಲೇ ಅವ ಹೆಣವಾಗಿ ಹೋಗಿರುತ್ತಾನೆ.. ಎನ್ನುವ ಸುದ್ದಿ ತಡವಾಗಿ ಸ್ಯಾಮ್ ನ ತಂದೆ ಮಾಯಾಳ ತಂದೆಗೆ ತಿಳಿಸಿರುತ್ತಾರೆ.. ಈ ಎಲ್ಲ ವ್ಯವಸ್ಥೆ ಸಾಯುವ ಮೊದಲು ಸಮರ್ಥ ಮಾಡಿರುತ್ತಾನೆ.. ತಾನು ಸತ್ತರೆ ಮಾಯಾ ಒಬ್ಬಂಟಿಯಾಗಿ ನನ್ನ ನೆನಪಲ್ಲೆ ನನ್ನ ದಾರಿ ಕಾಯಬಾರದು ಅಂತ..

       ಕಡೆಗೂ.. ಯಾವ ಸಂದೇಶ ಕೂಡ ಬರಲಿಲ್ಲ.. ಎಂದಿನಂತೆ ಮರುದಿನದ ನಾಲ್ಕು ಗಂಟೆಗಾಗಿ ಕಾಯುತ್ತಾ ಎದ್ದು ಹೋದಳು ಮಾಯಾ.. ಮನೆಯ ಕಡೆಗೆ..


Rate this content
Log in

Similar kannada story from Abstract