kaveri p u

Classics Inspirational Others

3  

kaveri p u

Classics Inspirational Others

ಸಂತೋಷ

ಸಂತೋಷ

1 min
298


ನಾನ್-ಸ್ಟಾಪ್ ನವೆಂಬರ್ ಎಡಿಷನ್ - ಬಿಗಿನರ್


ಶರಣಪ್ಪ ದಾನಮ್ಮಾ ಎನ್ನುವ ದಂಪತಿಗೆ ಒಬ್ಬಳು ಮಗಳಿದ್ದಳು. ಅವಳ ಹೆಸರು ಚೈತ್ರಾ. ಬಡತನ ಎನ್ನುವುದು ಅವಳು ಹುಟ್ಟಿದಾಗಿನಿಂದ ಇತ್ತು. ಅವಳು ಓದಿದ್ದು ಕನ್ನಡ ಮಾಧ್ಯಮದಲ್ಲಿ. ಕನ್ನಡ ವಿಷಯದಲ್ಲಿ ಅವಳು ತುಂಬಾ ಆಸಕ್ತಿ ವಹಿಸುತ್ತಿದ್ದಳು. 


ಅವಳಿಗೆ ಓದಿನಲ್ಲಿ ಇದ್ದ ಆಸಕ್ತಿ ನೋಡಿ ಅವರ ಮೇಷ್ಟ್ರು ಕೂಡ ಅವಳ ಓದಿಗಾಗಿ ಸಹಾಯ ಮಾಡುತ್ತಿದ್ದರು. 10ನೇ ತರಗತಿಯಲ್ಲಿ ಪ್ರಥಮ ಸ್ಥಾನ ಪಡೆದು ಶಾಲೆಗೆ ಹೆಸರು ತಂದಿದ್ದಳು.


ಈ ಸಾಧನೆಯನ್ನು, ಸಂತೋಷವನ್ನು ಅವಳು ಸ್ಟೇಜ್ ಮೇಲೆ ನಿಂತು ನನ್ನ ಸಾಧನಗೆ ನನ್ನ ಅಪ್ಪ ಅಮ್ಮಾ ಕಾರಣ ಅಂತ ಹೇಳಿದಾಗ ಅವಳ ಅಪ್ಪ-ಅಮ್ಮನ ಮುಖದಲ್ಲಿ ಮೂಡಿದ ಸಂತೋಷ, ಚೈತ್ರಾಳ ಕಣ್ಣಲ್ಲಿ ಹಾಗೆಯೇ ಸೆರೆಯಾಗಿತ್ತು.


ಅವಳು ತನ್ನ ಸಹಪಾಠಿಗಳನ್ನು, ಅವಳಿಗೆ ಓದಲು ಸಹಾಯ ಮಾಡಿದ ಎಲ್ಲಾ ಶಿಕ್ಷಕರನ್ನು ನೆನೆದು ಸಂತಸ ಪಟ್ಟಳು.


ಧನ್ಯವಾದಗಳನ್ನು ಹೇಳಿ ತನ್ನ ಮಾತುಗಳನ್ನು ಮುಗಿಸಿದಳು.



రచనకు రేటింగ్ ఇవ్వండి
లాగిన్

Similar kannada story from Classics