ಹಂಸವೇಣಿ ಕುಲಾಲ್

Drama Others Children

4  

ಹಂಸವೇಣಿ ಕುಲಾಲ್

Drama Others Children

ಸುವ್ವಿ ಸುವ್ವಲಾಲಿ - ೪

ಸುವ್ವಿ ಸುವ್ವಲಾಲಿ - ೪

4 mins
312


ಎಂದಿನಂತೆ ವಾರ್ಡ್‌ಗಳನ್ನೆಲ್ಲಾ ನೋಡುತ್ತಾ, ಮಕ್ಕಳ ಸಿಹಿಯಾದ ತುಂಟಾಟದಾಲ್ಲಿ ಅವಳು ಬೆರೆತು ಹೋಗಿದ್ದಳು. ಅವಳನ್ನೇ ಗಮನಿಸಿ ನೋಡುತ್ತಿದ್ದ ಡಾಕ್ಟರ್ ಜೀವನ್.


"ಹಲೋ... ಡಾಕ್ಟರ್ ಜೀವನ್ ನನ್ನ ಮುಖ ನೋಡ್ತಾ ನಿಲೋದಕ್ಕಾ ಬಂದಿರೋದು ನೀವು?"

ಅವನ ಮುಂದೆ ಕೈ ಕಟ್ಟಿ ನಿಂತು ಹೇಳಿದಳು.


"ಆ... ಅಮ್ಮು ನೀನು ಮುದ್ದುಸ್ತಾ ಇರೋದು ನೋಡ್ತಾ ಇದ್ರೆ, ನಾನೇ ಆ ಮಗು ಆಗ್ಬೇಕು ಅನಿಸ್ತಾ ಇದೆ"

ತನ್ನ ಕೆನ್ನೆ ಸವರುತ್ತಾ ಅವಳನ್ನೇ ಪ್ರೀತಿಯಲ್ಲಿ ನೋಡಿದ.


"ಕರ್ಮ... ನಾನು ಡಾಕ್ಟರ್‌ಗೆ ಕಂಪ್ಲೇಂಟ್ ಮಾಡ್ತೀನಿ. ಮಕ್ಕಳನ್ನ ಚೆಕ್ ಮಾಡೋದು ಬಿಟ್ಟು ನನ್ನ ಮುಖ ನೋಡ್ತಾ ಇರ್ತಾರೆ ಡಾಕ್ಟರ್ ಜೀವನ್ ಅಂತ"


"ಹೋ... ಎಸ್ ಈಗ್ಲೇ ಹೇಳು. ಆಗಲಾದರೂ ನಮ್ಮ ಮದುವೆ ಬೇಗ ಆಗ್ಬಹುದು"


"ಜೀವನ್...

ಕಣ್ಣು ಚಿಕ್ಕದು ಮಾಡಿ ಕೋಪದಲ್ಲಿ ನೋಡಿದಳು.

ನನಗೆ ಬುದ್ಧಿ ಇಲ್ಲ"


ಎಂದೇಳಿ ಅಲ್ಲಿಂದ ನಡೆದು ಹೋದಳು. ಅವಳನ್ನೇ ಹಿಂಬಾಲಿಸಿ ಜೀವನ್ ಸಹ ಹೋದ. ಸೀದಾ ಡಾಕ್ಟರ್ ಗುರುದಾಸ್ ಅವರ ಛೇಂಬರ್ ಒಳಗೆ ನಡೆದಳು.


"ತಮಾಷೆ ಮಾಡ್ತಾಳೆ ಅಂದ್ರೆ, ಇವ್ಳು ಸೀರಿಯಸ್ ಆಗಿ ಏನಾದ್ರೂ..."

ಮನಸ್ಸಿನಲ್ಲೇ ಪ್ರಶ್ನೆ ಮಾಡಿಕೊಂಡ ಜೀವನ್.


ಅವಳು ಒಳಗೆ ನಡೆದಾಗ ಹೊರಗೆ ನಿಂತು ಅವರಿಬ್ಬರು ಮಾತನಾಡುತ್ತಿದ್ದರೆ ಕಳ್ಳನಂತೆ ಕೇಳುತ್ತಿದ್ದ.


"ಡಾಕ್ಟರ್ ಜೀವನ್, ಅಲ್ಲೇ ಯಾಕೆ ನಿಂತಿದ್ದೀರಾ? ಒಳಗೆ ಬನ್ನಿ"

ಡಾಕ್ಟರ್ ಗುರುದಾಸ್ ಕರೆದಾಗ ಸಿಕ್ಕಿ ಹಾಕಿಕೊಂಡ ಕಳ್ಳ ಬೆಕ್ಕಿನಂತೆ ಹೆಜ್ಜೆ ಹಾಕಿದ.


" ಸಾರೀ ಡಾಕ್ಟರ್. ಐಎಂ ಜಸ್ಟ್ ಕಿಡಿಂಗ್ ಹರ್"


"ವಾಟ್?"

ಅವನ ಮಾತಿನ ಅರ್ಥ ಅವರಿಗೆ ಆಗಲಿಲ್ಲ. ಅಮೃತಾಳಿಗೆ ಒಳಗೊಳಗೆ ನಗು.


"ಡಾಕ್ಟರ್ ಜೀವನ್, ಎಸ್ಟರ್ಡೆ ಅಡ್ಮಿಟ್ ಆದ ಮಗು ಬಗ್ಗೆ ಡಿಸ್ಕಸ್ ಮಾಡ್ತಾ ಇದ್ದೀವಿ. ನೀವು ಸ್ವಲ್ಪ ರಿಪೋರ್ಟ್ ನೋಡಿ"

ಬರುತ್ತಿದ್ದ ನಗುವನ್ನು ತಡೆ ಹಿಡಿದು ಅವನಿಗೆ ರಿಪೋರ್ಟ್ ನೀಡಿದಳು.


ಅವರ ಜೊತೆ ಜೀವನ್ ಸಹ ಸೇರಿದ ಈಗ.


"ಎಕ್ಸ್ ಕ್ಯೂಸ್ ಮೀ..."

ಬಾಗಿಲ ಕಡೆಗೆ ಎಲ್ಲ ತಿರುಗಿದರು.


"ಹೋ... ಅರ್ಜುನ್ ಬಾ ಒಳಗೆ"


ಗುರುದಾಸ್ ಅವರು ಒಪ್ಪಿಗೆ ನೀಡಿದಾಗ ಅರ್ಜುನ್ ಒಳಗೆ ನಡೆದ. ಅವನ ತೋಳಲ್ಲಿ ಮುದ್ದಿನ ಮಗಳು. ಇವರನ್ನ ಕಂಡು ಆ ಪುಟ್ಟನೆಯ ತುಟಿ ತೆರೆದು ಕೊಂಡಿತು. ಆ ಮಗುವನ್ನು ಕಂಡದ್ದೇ ಅಮೃತಾಳಿಗೆ ಹೇಳಲಾಗದ ಮಧುರ ಸ್ವರ ಮನದಲ್ಲಿ ಹಾಡಿತು.


"ಪ್ಲೀಸ್ ಬೀ ಸಿಟ್ಟೆಡ್"

ಅವರು ಸೌಜನ್ಯದಿಂದ ನುಡಿದಾಗ ನಗುತ್ತಾ ಕುಳಿತ ಅರ್ಜುನ್.


"ಈಗ ಹೇಗಿದ್ದಾಳೆ ನಿಮ್ಮ ರಾಜಕುಮಾರಿ?"


"ಪರವಾಗಿಲ್ಲ ಅಂಕಲ್, ಆದ್ರೆ ನೈಟ್ ನಿದ್ದೆ ಮಾಡದೇ ಕಾಟ ಕೊಡ್ತಾಳೆ"

ಮಗುವನ್ನ ತಬ್ಬಿದ ಅರ್ಜುನ್.


ತಂದೆಯ ಶರ್ಟ್ ಬಟನ್ ಜೊತೆ ಆಡುತ್ತಿದ್ದ ಕಂದನನ್ನು ಮುದ್ದಿಸುವ ಆಸೆ ಅಮೃತಾಳಿಗೆ. ಅವರಿಬ್ಬರು ಮಾತನಾಡುತ್ತಿದ್ದರೆ ಲೋಕವನ್ನೇ ಮರೆತು ಮಗುವಿನ ಆಟ ನೋಡುತ್ತಾ ಕಳೆದು ಹೋದವು ಅಮೃತಾ ನಯನಗಳು. ಆಟವಾಡುತ್ತಾ ಒಮ್ಮೆ ಅಮೃತಾ ಕಡೆಗೆ ನೋಡಿದ ಕಂದಮ್ಮ ಕೈ ಚಾಚಿತು. ತಕ್ಷಣಕ್ಕೆ ಮಗುವನ್ನ ಬಾಚಿ ತಬ್ಬಿಕೊಂಡು ಮುದ್ದಿಸಿದಳು. ಈ ದೃಶ್ಯ ಅರ್ಜುನ್ ಕಣ್ಣಿಗೆ ಅಚ್ಚರಿಯನ್ನು ಉಂಟು ಮಾಡಿತು.


ಅಲ್ಲಿ ಇರುವವರ ಪರಿವೇ ಇಲ್ಲದೆ ಮಗುವಿನ ಮಾತಿಗೆ ಅವಳು ಮುದ್ದು ಮುದ್ದಾಗಿ ಮಾತನಾಡಿದಳು. ಜೀವನ್ ಮುಟ್ಟಲು ಹೋದರೆ ತನ್ನ ಪುಟ್ಟ ಕೈಗಳಿಂದ ಏಟು ನೀಡಿತು. ಅಮೃತಾ ಕೆನ್ನೆ ಮೇಲೆ ತನ್ನ ತುಟಿಗಳನ್ನು ಸೋಕಿಸಿತು.


"ಚಿನ್ನು, ಮುದ್ದು ಕಂದ... ಇದು ಬೇಕಾ? ಏನು ಬೇಕು?"

ಸ್ಟೆಥೋಸ್ಕೋಪ್ ಅನ್ನು ಮಗುವಿನ ಕೈಗೆ ಕೊಟ್ಟಳು.


"ಅಮ್ಮು... ಎಷ್ಟು ಮಕ್ಕಳನ್ನ ಮುದ್ದಿಸಿದ್ರು ಸಾಕಾಗೋದೆ ಇಲ್ಲ ನಿನಗೆ ನಕ್ಕರು. ಯಾವುದಕ್ಕೂ ಇರಲಿ ಮಗುವನ್ನ ಚೆಕಪ್ ಮಾಡಿ ಬಿಡು"


ಎಂದೇಳಿದಾಗ ಮಗುವನ್ನ ಕರೆದು ನಡೆದಳು ಅವಳು. ಜೀವನ್ ಮೇಲೆದ್ದ.


"ನೀವು ಎಲ್ಲಿಗೆ ಜೀವನ್? ಈ ರಿಪೋರ್ಟ್ ಸ್ಟಡಿ ಮಾಡಿ"

ಅವನ ಕೈಗೆ ನೀಡಿದರು.


"ನನ್ನ ಮುದ್ದು ಹುಡುಗಿ ಅಲ್ಲಿ ಹೋದ್ಳು. ನಾನು..."

ಗೊಣಗಿದ.


"ಜೀವನ್ ಇಸ್ ಎನಿ ಪ್ರಾಬ್ಲೆಮ್?"


"ನೋ... ನಥಿಂಗ್ ಡಾಕ್ಟರ್"

ಹಲ್ಲು ಬಿಟ್ಟ. ಮನಸ್ಸಲ್ಲಿ ಅವಳ ಬಗ್ಗೆಯೇ ಚಿಂತೆ ಇವನಿಗೆ.


"ಅರ್ಜುನ್... ಅರ್ಜುನ್"

ಅವನಂತೂ ಇನ್ನೂ ತನ್ನ ಮಗಳ ರೀತಿಗೆ ಪ್ರಶ್ನೆಯ ಗುಂಗಿನಲ್ಲೇ ಇರುವ. ಅವನನ್ನ ಎಚ್ಚರಿಸಿದಾಗ ವಾಸ್ತವಕ್ಕೆ ಮರಳಿದ.


"ಏನು? ಆ ರೀತಿ ನೋಡ್ತಾ ಇದ್ದೀಯ?"


"ನನಗೆ ಆಶ್ಚರ್ಯ ಆಗ್ತಾ ಇದೆ ಅಂಕಲ್. ನನ್ನ ಮಗಳು, ನನ್ನ ಜೊತೆ ಬಿಟ್ರೆ ಅಮ್ಮನ ಜೊತೆಗೆ ಮಾತ್ರ ಹೋಗ್ತಾ ಇದ್ಳು. ಯಾರು ಎಷ್ಟೇ ಕರೆದ್ರು ಹೋಗ್ತಾ ಇರ್ಲಿಲ್ಲ. ಈ ದಿನ ಅವಳಾಗಿಯೇ... ಅವರ ಹತ್ತಿರ ಹೋದದ್ದು ಆಶ್ಚರ್ಯ. ಈಗೀಗ ತುಂಬಾ ತುಂಟಾಟ ಕಲಿತ್ತಿದ್ದಾಳೆ"


ಅವನ ಮಾತಿಗೆ ನಕ್ಕರು ಅವರು.


"ಏನು ಅಷ್ಟು ತೊಂದರೆ ಕೊಡ್ತಾ ಇದ್ದಾಳಾ?"


"ಅದೇನು ಹೇಳ್ತೀರಾ ಅಂಕಲ್, ಪುಟ್ಟ ಪುಟ್ಟ ಹೆಜ್ಜೆ ಹಾಕೋದಕ್ಕೆ ಸ್ಟಾರ್ಟ್ ಮಾಡಿದ್ದಾಳೆ ಹಿಡಿಯೋಕ್ಕೆ ಆಗೋದಿಲ್ಲ ಅವಳನ್ನ"

ಮಗಳ ತುಂಟಾಟ ನೆನಪಾಗಿ ಮುಗುಳು ನಗೆ ಮೂಡಿತು ಅವನ ತುಟಿ ಅಂಚಿನಲ್ಲಿ.


ಒಂದಷ್ಟು ಮಾತುಗಳು ಮುಂದುವರೆಯಿತು. ಮಗುವಿಗೆ ಚೆಕಪ್ ಮಾಡಿ ಕರೆದುಕೊಂಡು ಬಂದಳು ಅಮೃತಾ. ಅವಳ ಹೆಗಲ ಮೇಲೆ ಸುಖವಾದ ನಿದ್ರಾದೇವಿ ಕಂದನನ್ನು ಆವರಿಸಿದ್ದಳು.



"ರಿಪೋರ್ಟ್ ಸಂಜೆ ನಿಮಗೆ ಸಿಗುತ್ತೆ"

ಅವಳಿಂದ ಮಗುವನ್ನ ತನ್ನ ಹೆಗಲಿಗೆ ವರ್ಗಾಹಿಸಿಕೊಂಡ ಅರ್ಜುನ್. 


"ಓಕೆ ಅಂಕಲ್, ನಾಳೆ ಬಂದು ರಿಪೋರ್ಟ್ ಕಲೆಕ್ಟ್ ಮಾಡ್ಕೊತ್ತಿನಿ"

ಮೇಲೇಳಲು ನೋಡಿದ. ಆಗ ಅವನನ್ನ ತಡೆದರು ಗುರುದಾಸ್.


"ಅರ್ಜುನ್... 

ಧ್ವನಿ ತೀರಿ ಕಡಿಮೆ ಇತ್ತು ಅವರದು.

ಅರ್ಜುನ್ ಇದು ನಿನ್ನ ಪರ್ಸನಲ್ ವಿಷಯ. ನಾನು ಡಾಕ್ಟರ್ ಆಗೋ ಮೊದಲಿನಿಂದಲೂ ನಿಮ್ಮ ತಂದೆ ಪರಿಚಯ ಇದೆ. ಅದು ನಿನಗೂ ಗೊತ್ತು. ಆ ಒಂದು ಸಲಿಗೆ ಮೇಲೆ ಒಂದು ಮಾತನ್ನ ಹೇಳ್ತಾ ಇದ್ದೀನಿ; ಇನ್ನೂ ಎಷ್ಟು ವರ್ಷ ಇದೆ ರೀತಿ ಒಬ್ಬನೇ ಇರೋದಕ್ಕೆ ಸಾಧ್ಯ? ಈಗ ನಿಮ್ಮ ತಾಯಿ ಮಗುನಾ ನೋಡ್ಕೊತ್ತಾರೆ. ಆದರೆ ಮುಂದೆ? ಜೀವನ ಒಂದೇ ರೀತಿ ಸಾಗೋದಿಲ್ಲ. ಎಜುಕೇಟೆಡ್ ನೀನು ಒಳ್ಳೆ ತೀರ್ಮಾನ ಮಾಡು. ನಿನಗಾಗಿ ಅಲ್ಲದಿದ್ದರೂ ಈ ಮಗುವಿಗೆ ತಾಯಿ ಪ್ರೀತಿ ಬೇಕು. ಆ ಕಾರಣಕ್ಕಾದರು ಇನ್ನೊಂದು ಮದುವೆ ಬಗ್ಗೆ ಯೋಚನೆ ಮಾಡು"


ಅವರ ಮಾತುಗಳನ್ನು ಕೇಳಿಸಿಕೊಂಡ ಅಮೃತಾಳಿಗೆ ಹೃದಯ ನೋವಿನಿಂದ ಭಾರವಾಯಿತು. ಮನಸ್ಸು ಮರುಗಿತು. ಮಗುವಿನ ಮೊಗವನ್ನು ನೋಡಿದಾಗ ತಾಯಿಯ ಮಮತೆ, ವಾತ್ಸಲ್ಯದಿಂದ ವಂಚಿತ ಆಗಿದೆ ಎಂಬುದ ನೆನೆಸಿಕೊಂಡಾಗ ಹೊಟ್ಟೆಯಲ್ಲಿ ಸಂಕಟ ಉಂಟಾಯಿತು.



"ನಿಮ್ಮ ಎಲ್ಲಾ ಮಾತುಗಳು, ನಿಮ್ಮ ಸ್ಥಾನದಲ್ಲಿ ನೋಡಿದಾಗ ಸರಿಯಾಗಿಯೇ ಇದೆ ಅಂಕಲ್. ನನ್ನ ಜೀವನದ ಬಗ್ಗೆ ಇಷ್ಟೊಂದು ಕಾಳಜಿ ತೋರಿಸಿದ್ದಕ್ಕೆ ಥ್ಯಾಂಕ್ಸ್. ಕ್ಷಮಿಸಿ ಅಂಕಲ್, ನೀವು ಹೇಳಿದ ಮಾತನ್ನ ನಾನು ಒಪ್ಪೋದಕ್ಕೆ ಆಗ್ತಾ ಇಲ್ಲ. ನನಗೆ ನನ್ನ ಮಗಳೆ ಪ್ರಪಂಚ. ಅವಳಿಗಾಗಿ ನಾನು ಇದ್ದೀನಿ. ಈ ಪ್ರಪಂಚದಲ್ಲಿ ನನ್ನ ಅನಾಘ ಸ್ಥಾನವನ್ನ ಬೇರೆ ಹೆಣ್ಣಿನಿಂದ ತುಂಬೋದಕ್ಕೆ ಎಂದಿಗೂ ಸಾಧ್ಯವಿಲ್ಲ. ತಾಯಿ ಮಮತೆ, ವಾತ್ಸಲ್ಯ ನನ್ನ ಮಗಳಿಗೆ ಇಲ್ಲದೆ ಇರಬಹುದು. ಆದ್ರೆ ಆ ನೋವು ನನ್ನ ಮಗಳನ್ನ ಯಾವತ್ತೂ ಕಾಡೋದಿಲ್ಲ. ಅವಳ ಪಾಲಿಗೆ ತಂದೆ-ತಾಯಿ ಇಬ್ಬರ ಪ್ರೀತಿ, ಮಮತೆ, ವಾತ್ಸಲ್ಯ ಎಲ್ಲವನ್ನ ನಾನೇ ಕೊಡ್ತೀನಿ"


ಮಗಳನ್ನ ಹೆಗಲಿಗೆ ಮಲಗಿಸಿಕೊಂಡು ಅಲ್ಲಿಂದ ಹೊರಟ.


"ವಿಧಿ... ತುಂಬಾ. ಕ್ರೂರಿ''

ಅಮೃತಾ ನೋವಿನಲ್ಲಿ ನುಡಿದಳು. ಅವಳ ಕಣ್ಣುಗಳಿಂದ ಅದಾಗಲೇ ಅಶ್ರುಧಾರೆ ಬರುತ್ತಿತ್ತು.


"ಏ... ಅಮ್ಮು ಏನಾಯ್ತು?"

ಜೀವನ್ ಗಾಬರಿಯಿಂದ ಕೇಳಿದ.


"ಸಾರೀ, ಸಾರೀ ನಥಿಂಗ್"

ತನ್ನ ರೀತಿಗೆ ಮುಜುಗರ ಪಟ್ಟುಕೊಂಡಳು ಆಕೆ.


"ಅಮ್ಮು... ತುಂಬಾ ಎಮೋಷನಲ್ ಆಗ್ಬೇಡ. ಯುವರ್ ಅ ಡಾಕ್ಟರ್"

ಅವರು ಹೇಳಿದರು.


"ಎಸ್ ಐಯಾಮ್ ಅ ಡಾಕ್ಟರ್.

ತೀರಾ ಭಾವುಕಲಾದ್ದಳು.

ನಾನು ಒಬ್ಬ ಡಾಕ್ಟರ್ ನಿಜ. ಆದ್ರೆ ಅದಕ್ಕೂ ಮೊದಲು, ನಾನು ಒಬ್ಬ ಹೆಣ್ಣು. ಭಾವನೆ ಅನ್ನೋದರ ಪ್ರತಿಬಿಂಬ ಆಗಿಬಿಡ್ತೀವಿ. ಸ್ವರ ಗದ್ಗದಿತವಾಯಿತು. ಈ ಜೀವನ ಅನ್ನೋದು ಹೀಗೇನಾ? ಬರೀ ನೋವೇ... ಇಲ್ಲಿ"


ಆ ಮಾತಿನ ಹಿಂದೆ ಇರುವ ನೋವು ಗುರುದಾಸ್ ಅವರಿಗೆ ತಿಳಿದಿದೆ. ಮರು ಮಾತನಾಡಲಿಲ್ಲ ಅವರು. ಅವಳ ಸ್ಥಿತಿ ನೆನೆದು ಮರುಗಿದರು. ಜೀವನ್‌ಗೆ, ಅವಳ ಮಾತು ಒಂದು ಅರ್ಥವಾಗಲಿಲ್ಲ. ತನ್ನ ನೋವಿನ ಕಣ್ಣೀರು ಇವರ ಮುಂದೆ ಹರಿಸಲು ಇಷ್ಟವಿಲ್ಲ ಆಕೆಗೆ. ಅಲ್ಲಿಂದ ಎದ್ದು ಹೊರಗೆ ಬಂದಳು.


       *********************


ಮುಂದುವರೆಯುತ್ತದೆ...




Rate this content
Log in

Similar kannada story from Drama