ಆಟ
ಆಟ
ಬಾಲ್ಯದ ಆಟ,
ಕಣ್ಣಾಮುಚ್ಚಾಲೆಯ ಕೂಟ;
ತಂದಿತು ತನುಮನಕೆ ಸಂತೋಷದ ತೋಟ.
ಶಾಲೆಯ ಆಟ,
ಖೋ ಖೋ,ಕಬ್ಬಡ್ಡಿಗಳಾಟದ ಕೂಟ;
ತಂದಿತು ಸ್ಪರ್ಧೆಯ ಮನೋಭಾವನೆಯ ಓಟ.
ಕಾಲೇಜಿನ ಆಟ,
ವಾಲಿಬಾಲ್, ಫುಟ್ಬಾಲ್ ಗಳ ಕೂಟ;
ತಂದಿತು ಗುಂಪಿನ ಯಶಸ್ಸಿನ ಒಕ್ಕೂಟ.
ಪೂರ್ವ ಕಾಲೇಜಿನ ಆಟ,
ಬಾಕ್ಸಿಂಗ್,ಎಸೆತಗಳ ಕೂಟ;
ತಂದಿತು ವ್ಯಕ್ತಿಯ ಬಲಪ್ರಯೋಗ ತೋರಿಸುವ ಮೈಮಾಟ.
ಎಲ್ಲಾ ಹಂತದಲ್ಲಾಡುವ ಆಟ,
ಕ್ರೀಕೆಟ್,ಟೆನ್ನಿಸ್ ಗಳಾಟದ ಕೂಟ;
ತಂದಿತು ನಕ್ಷೆಯೊಳಗೊಂಡಿರುವ ಅಂಕೆಗಳ ಶ್ರೇಷ್ಟ.
ಹರಟೆಯ ಆಟ,
ಕ್ಯಾರಮ್, ಚದುರಂಗಗಳಾಟದ ಕೂಟ;
ತಂದಿತು ಬುದ್ಧಿಶಕ್ತಿಯನ್ನು ಮಾಪನ ಮಾಡುವ ನೋಟ.
ಆಗಿನ ಆಟದ ಕೂಟ|
ಇಂದಿನ ಕ್ರೀಡಾಪುಟ|
ತಂದಿತು ದೇಶಗಳ ನಡುವೆ ಸ್ಪರ್ಧಾತ್ಮಕದ ಸೆಣೆಸಾಟ
ಜಯಸಿ ನೆಟ್ಟಿದರು ದೇಶದ ಬಾವುಟ||