Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

Shilpashree NP

Tragedy Classics Inspirational

3  

Shilpashree NP

Tragedy Classics Inspirational

ಗಂಡಸಿಗೆ ಏಕೆ ಗೌರಿದುಃಖ

ಗಂಡಸಿಗೆ ಏಕೆ ಗೌರಿದುಃಖ

1 min
217


 ಗಂಡಸಿಗೆ  ಏನು ಗೊತ್ತು ಗೌರಿದುಃಖ ! ಅಂತಾರಲ್ವಾ ಆದ್ರೆ ಗಂಡಸರಿಗೂ ದುಃಖ ಇರುತ್ತೆ. ಹೆಂಗಸರಿಗೂ ನಮಗೂ ಇರುವುದು ಒಂದೇ ತರಹದ ಹೃದಯ ಹಾಗೂ ಭಾವನೆಗಳು ಅಲ್ವಾ ? ಅದಕ್ಕೆ ನಾನು ಇಲ್ಲಿ ಗಂಡಸಿಗೆ ಏಕೆ ಗೌರಿ ದುಃಖ ಎಂಬ ಉಲ್ಲೇಖ ಮಾಡಿರುವೆನು...


ನಾನು ಕೂಡ ನಿಮ್ಮಂತೆ ಸುಖ ದುಃಖದ ಪಾಲುದಾರನಾಗಿದ್ದೇನೆ. ನಾನಿವತ್ತು ನನ್ನ ಕಥೆ ನಿಮ್ಮ ಮುಂದೆ ಹೇಳ್ಬೇಕು ಅಂತ ಬಂದಿದೀನಿ.


 ನಾನು ವಿದ್ಯಾವಂತರ ಕುಟುಂಬದಲ್ಲಿ ಎರಡನೆ ಮಗನಾಗಿ ಹುಟ್ಟಿದೆ, ಮೊದಲನೆಯವಳು ನನ್ನ ಅಕ್ಕ. ಅಪ್ಪ-ಅಮ್ಮ ಸುಸಂಸ್ಕೃತರಾಗಿದ್ದರು ಹಾಗೂ ನನ್ನನ್ನು ಚೆನ್ನಾಗಿ ಓದಿಸಿ ಒಳ್ಳೆಯ ನೌಕರಿ ಬರುವವರೆಗೂ ಕೈಹಿಡಿದು ನಡೆಸಿದರು.


 ನನ್ನ ಜೀವನ ಸುಖವಾಗಿಯೇ ಇತ್ತು. ನಮ್ಮ ಮನೆಯವರು ನಮಗಿಂತ ಶ್ರೀಮಂತರ ಮನೆಯ ಹುಡುಗಿಯ ಜೊತೆ ನನ್ನ ವಿವಾಹ ಮಾಡಿದರು.

 ವಿವಾಹದ ನಂತರ ಅವಳು ಶ್ರೀಮಂತಿಕೆಯ ಜೊತೆ ಗರ್ವದಿಂದ ವರ್ತಿಸುತ್ತಿದ್ದಳು. ಅಂತಸ್ತಿನಲ್ಲಿ ಅವರಿಗಿಂತ ಸ್ವಲ್ಪ ಕಡಿಮೆ ಆದರೂ, ನಾನು ವಿದ್ಯಾವಂತ ಎಂದು ಆಕೆಯನ್ನು ನನ್ನ ಜೊತೆ ಮದುವೆ ಮಾಡಿದರು. 


ಅದಲ್ಲದೆ ನಾನು ಪೇಟೆಯಲ್ಲಿ ಕೆಲಸ ಮಾಡುತ್ತಿದ್ದೆ. ಅವಳಿಗೆ ಪೇಟೆಯಲ್ಲಿ ನೌಕರಿಯಲ್ಲಿರುವ ಹುಡುಗನನ್ನೇ ಮದುವೆಯಾಗಬೇಕು ಎಂಬ ಆಸೆ ಬಹುವಾಗಿತ್ತು. ಮದುವೆಯಾಗಿ ಬಂದ ಮೇಲೆ ಸ್ವಲ್ಪ ದಿನ ಸುಖವಾಗಿ ಸಂತೋಷದಿಂದ ಸಂಸಾರ ಮಾಡುತ್ತಿದ್ದಳು. 


ಆಮೇಲೆ ಅದೇನಾಯಿತೋ ಮಾತುಮಾತಿಗೂ ನನ್ನ ತಂದೆ ತಾಯಿಯನ್ನು ಜರಿಯಲು ಆರಂಭಿಸಿದಳು. ಅವರುಗಳು ಮನೆಗೆ ಬಂದರೆ ಅವರ ಸೇವೆ ಮಾಡಲು ನಾನೇನು ನಿಮ್ಮ ಆಳಲ್ಲ. ಕೆಲಸಕ್ಕೆ ಜನ ಬೇಕು ಎಂದು ತಾಕೀತು ಮಾಡಿದಳು. ನನ್ನ ದುಡಿಮೆಯಿಂದ ಇವನ್ನೆಲ್ಲ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರೆ, ಅವಳು ಕೇಳುವ ಪರಿಸ್ಥಿತಿಯಲ್ಲಿರಲಿಲ್ಲ. ತನ್ನ ತವರು ಮನೆಯಿಂದ ಹಣ ತೆಗೆದುಕೊಂಡು ಬರುವೆನು ಎಂದು ಹಠ ಮಾಡುತ್ತಿದ್ದಳು. ಇದರಿಂದ ನನ್ನ ಗೌರವಕ್ಕೆ ಧಕ್ಕೆ ಬರುತ್ತದೆ ಎಂದು ಎಷ್ಟು ತಿಳಿಹೇಳಿದರು ಅವಳು ನನ್ನನ್ನು ಅರ್ಥಮಾಡಿಕೊಳ್ಳಲೇ ಇಲ್ಲ.


Rate this content
Log in

Similar kannada story from Tragedy