Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

Shridevi Patil

Inspirational Thriller Others

4  

Shridevi Patil

Inspirational Thriller Others

ಅನಿರೀಕ್ಷಿತ

ಅನಿರೀಕ್ಷಿತ

2 mins
222



ಸುಂದರ್ ಮತ್ತು ಲೀಲಾ ಪ್ರೀತಿಸಿ ಮದುವೆಯಾದರು. ಮದುವೆಯೆಂದರೆ ಸರಳವಾಗಿ ಆಗಿದ್ದರೆ ಅಂತಹ ವಿಶೇಷವೇನೂ ಇರುತ್ತಿರಲಿಲ್ಲ ಅನಿಸುತ್ತೆ. ಆದರೆ ಅವರ ಮದುವೆ ಆಗಿದ್ದೆ ಒಂಥರ ವಿಶೇಷ ಬಿಡಿ. ಪಕ್ಕಾ ಸಿನಿಮೀಯ ಸ್ಟೈಲನಲ್ಲಿ ಆಗಿದ್ದ ಮದುವೆ ಅದು.


ಲೀಲಾ ಅಪ್ಪ ದೊಡ್ಡ ರಾಜಕೀಯ ಪುಡಾರಿ, ಹೀಗಾಗಿ ಅವಳನ್ನು ತನ್ನ ರಾಜಕೀಯ ಬೆಳವಣಿಗೆಗಾಗಿ ರಾಜಕೀಯ ಸ್ನೇಹಿತನ ಮಗ ರಾಕಿ ಗೆ ಕೊಟ್ಟು ಮದುವೆ ಮಾಡಲು ಗುಟ್ಟು ಮಾಡಿದ್ದನು. ಇದು ಗೊತ್ತಾಗುತ್ತಲೇ ಲೀಲಾ ಹೇಗೋ ತನ್ನ ಪ್ರೇಮಿ ಸುಂದರ್ ಗೆ ವಿಷಯ ತಿಳಿಸಿ ತನ್ನನ್ನು ಕರೆದುಕೊಂಡು ಹೋಗುವಂತೆ ಒತ್ತಾಯಿಸಿದ್ದಾಳೆ.


ಇತ್ತ ಸುಂದರ್ ತನ್ನ ಸ್ನೇಹಿತರ ಕೈ ಕಾಲು ಹಿಡಿದು ಆಕೆಯನ್ನು ಕರೆ ತರಲು ಸಹಾಯ ಕೋರಿದ್ದಾನೆ. ಫ್ರೆಂಡ್ಸ್ ಅಲ್ವಾ ಆಯ್ತು ಅಂತಾ ಶ್ರೀಮಂತ,ರಾಜಕಾರಣಿ ಮೋಹನ್ಲಾಲ್ ಮನೆಗೆ ಹೋಗಿ ಲೀಲಾಳನ್ನು ಕರೆದೊಯ್ದಿದ್ದಾರೆ.. ಇದು ಆಕೆಯ ಅಪ್ಪನಿಗೆ ತಿಳಿದು, ಹಿಂದೆಯೇ ರೌಡಿಗಳನ್ನು ಬಿಟ್ಟು ಹುಡುಕಿಸಲು ಪ್ರಯತ್ನ ಪಟ್ಟಿದ್ದಾನೆ. ಆದರೆ ಅವರ ಸುಳಿವು ಸಿಗದೆ ಹಲ್ಲು ಕಿತ್ತ ಹಾವಿನಂತೆ ಬುಸುಗುಡುತ್ತ ಅವಳ ಸಿಗುವಿಕೆಗಾಗಿ ಕಾದು ಕೂತಿದ್ದಾನೆ..


ಹೀಗೆ ವರುಷಗಳು ಉರುಳ ತೊಡಗಿದವು. ಲೀಲಾ ಸುಂದರ್ ಮದುವೆ ಮಾಡಿಕೊಂಡು ಚೆನ್ನಾಗಿ ಜೀವನ ಮಾಡುತ್ತಿದ್ದರು. ಪ್ರೀತಿಯೊಂದೇ ಮಂತ್ರವಾಗಿತ್ತು ಅವರಿಗೆ. ಹೀಗೆ ನಡೆಯುತ್ತಿರಬೇಕಾದರೆ ಸುಂದರ್ ಕಂಪನಿಯಲ್ಲಿ ಕೆಲಸ ಮಾಡುತ್ತಿರುವಾಗ ಮೇಲಿಂದ ಭಾರವಾದ ವಸ್ತುವೊಂದು ತಲೆ ಮೇಲೆ ಬಿದ್ದು ಅಲ್ಲಿಯೇ ಬಿದ್ದು ಸತ್ತು ಹೋದನು. ಈ ಅನೀರಿಕ್ಷೀತ ಗಂಡನ ಸಾವು ಲೀಲಾಳನ್ನು ಕಷ್ಟದ ಕೂಪಕ್ಕೆ ತಳ್ಳಿತ್ತು..

ಚಿಕ್ಕ ವಯಸ್ಸು ಬೇರೆ, ಗಂಡನನ್ನು ಕಳೆದುಕೊಂಡು , ಕೈಯ್ಯಲ್ಲಿ ಕೆಲಸವೂ ಇಲ್ಲದೆ ತುಂಬಾ ಕಷ್ಟ ಪಡುತ್ತಿದ್ದಳು.



ಇಷ್ಟರ ಮಧ್ಯ ಆಕೆ ಹೊಟ್ಟೆಯಲ್ಲಿ ಸುಂದರ್ ನ ಪ್ರೇಮದ ಕುಡಿಯೊಂದು ಅರಳುತ್ತಿತ್ತು. ಈಗಂತೂ ಆಕೆ ಅಕ್ಷರಶಃ ಕುಸಿದೇ ಹೋಗಿದ್ದಳು. ಖುಷಿ ಪಡಬೇಕಾ ಅಥವಾ ಅದನ್ನು ತೆಗೆಸಬೇಕಾ ಎನ್ನುವ ಆತಂಕದಲ್ಲಿ ಲೀಲಾ ಇದ್ದಳು. ಕಾರಣ ತನಗೆ ಉಣ್ಣಲು ,ಇರಲು ಏನೂ ಇಲ್ಲದ ಪರಿಸ್ಥಿತಿ. ಬಾಡಿಗೆ ಕಟ್ಟಿಲ್ಲವೆಂದು ಮನೆ ಮಾಲಕರು ಮನೆ ಬಿಡಲು ಹೇಳಿದ್ದರು. ಹೀಗಾಗಿ ಚಿಂತೆ ಮಾಡುತ್ತಿರುವಾಗ ಪಕ್ಕದ ಮನೆಯ ಸರಸಕ್ಕ ತನ್ನ ಜೊತೆಗೆ ಕೆಲಸಕ್ಕೆ ಬರುವಂತೆ ಹೇಳಿದಾಗ ಲೀಲಾಳಿಗೆ ಹೋದ ಜೀವ ಬಂದಂತಾಗಿತ್ತು..


ಯಾವ ಕೆಲಸ ಅಂತಾನೂ ಕೇಳದೆ ಹೊರಟೆ ಬಿಟ್ಟಳು ಲೀಲಾಳು ಸರಸುವಿನೊಂದಿಗೆ ಕೆಲಸಕ್ಕೆ.


ಸರಸು ಒಂದು ನಾಲ್ಕಾರು ದೊಡ್ಡ ದೊಡ್ಡ ಮನೆಯಲ್ಲಿ ಅಡುಗೆ, ಬಟ್ಟೆ ತೊಳೆಯುವುದು, ಕಸ ಮುಸುರೆ ಮಾಡಿ ಬರುತ್ತಿದ್ದಳು. ಲೀಲಾಳಿಗೆ ಆ ಕೆಲಸ ಈ ಕೆಲಸ ಅನ್ನದೇ ಈಗ ಸದ್ಯದ ಪರಿಸ್ತಿತಿಗೆ ಕೆಲಸವಷ್ಟೇ ಮುಖ್ಯವಾಗಿತ್ತು. ಹಾಗಾಗಿ ಆಕೆ ಸರಸು ಹೋದ ಮನೆಯಲ್ಲಿ ಕೆಲಸ ಮಾಡಿ ಮಾಡಿ ರೂಢಿಯಾದಳು.


ಹೀಗೆ ಮಾಡುತ್ತ ಮಾಡುತ್ತ ಒಬ್ಬ ದೊಡ್ಡ ಶ್ರೀಮಂತನ ಮನೆಯ ಕೆಲಸ ಮಾಡುವ ಅವಕಾಶ ದೊರೆತಾಗ,ಇರಲು ಮನೆ ಕೊಟ್ಟು ಊಟ ಕೊಟ್ಟು, ಆರು ಸಾವಿರ ಸಂಬಳ ಎಂದಾಗ ಖುಷಿಯಿಂದ ಒಪ್ಪಿಕೊಂಡಳು.


ಮುಂದೆ ತುಸು ದಿನದಲ್ಲಿ ಮನೆಯಲ್ಲಿ ಭರ್ಜರಿ ಪಾರ್ಟಿ ತಯಾರಿ ನಡೆದಿತ್ತು. ಲೀಲಾ ಖುಷಿಯಿಂದ ಎಲ್ಲವನ್ನು ಮಾಡುತ್ತಿದ್ದಳು. ಇನ್ನೇನು ಸಾಯಂಕಾಲ ಪಾರ್ಟಿ ಶುರುವಾಗುತ್ತಿದ್ದಂತೆ ಆತ್ಮೀಯರೆಲ್ಲರ ಆಗಮನ ಶುರುವಾಯಿತು. ಬಂದವರು ಕುಡಿದು, ತಿಂದು ಮೋಜು ಮಸ್ತಿ ಮಾಡಿ ಕುಣಿಯುತ್ತಿದ್ದರು. ಆಗ ಒಬ್ಬರು ಬಾತ್ರೂಮ್ ಹೋಗಬೇಕೆಂದು ಒಳ ಹೋಗುತ್ತಿರುವ ಸಮಯದಲ್ಲಿ ಲೀಲಾ ಎದುರಾದಾಗ ಇಬ್ಬರು ಒಂದು ನಿಮಿಷ ಮೌನ.


ಕಾರಣ ಅಪ್ಪ ಮಗಳ ಅನೀರಿಕ್ಷೀತ ಭೇಟಿ. ಅದೂ ಗೆಳೆಯನ ಮನೆಯಲ್ಲಿ, ಅದೂ ಕೆಲಸದವಳ ರೂಪದಲ್ಲಿ. ಹಾಗಾದರೆ ಆ ಅನಿರೀಕ್ಷಿತ ಭೇಟಿಯ ರೋಚಕತೆ ಹೇಗಿತ್ತೆಂದು ನೀವೇ ಊಹಿಸಿಕೊಳ್ಳಿ.


Rate this content
Log in

Similar kannada story from Inspirational