Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

#Saare Jahan Se Achha Sagas: Tales of Freedom and Beyond

SEE WINNERS

Share with friends

ಪರಿಚಯ:

ಸೃಜನಶೀಲತೆ ಮತ್ತು ಅಭಿವ್ಯಕ್ತಿಯ ಮಹಾನ್ ವೇದಿಕೆಗೆ ಸುಸ್ವಾಗತ. ಇಲ್ಲಿ ಸಾಮಾನ್ಯ ಲೇಖನಿಯೊಂದು ಕತ್ತಿಗಿಂತಲೂ ಹರಿತವಾಗುತ್ತದೆ ಮತ್ತು ಶಾಯಿಯು, ಸಮಯ ಕಳೆದಂತೆ ಮತ್ತಷ್ಟು ಗಟ್ಟಿಯಾಗಿ ಪ್ರತಿಧ್ವನಿಸುವ ಕಥೆಗಳಿಗೆ ಜನ್ಮ ನೀಡುತ್ತದೆ. ಭಾರತದ 77 ನೇ ಸ್ವಾತಂತ್ರ್ಯ ದಿನದ ಈ ಸಂದರ್ಭದಲ್ಲಿ, ನಮ್ಮ ಮಿತಿಗಳನ್ನು ಅಂದರೆ ಗಡಿಗಳು, ಯುಗಗಳು ಮತ್ತು ಭಾವನೆಗಳೆಲ್ಲವನ್ನೂ ಮೀರಿದ ಅಸಾಮಾನ್ಯ ಸಾಹಿತ್ಯಿಕ ಪ್ರಯಾಣದಲ್ಲಿ ಜೊತೆಯಾಗಲು ನಾವು ನಿಮ್ಮನ್ನು ಆಹ್ವಾನಿಸುತ್ತಿದ್ದೇವೆ.

ಸ್ಟೋರಿಮಿರರ್‌ನ "ಸಾರೆ ಜಹಾನ್ ಸೆ ಅಚ್ಛಾ ಸಾಗಾಸ್: ಟೇಲ್ಸ್ ಆಫ್ ಫ್ರೀಡಮ್ ಅಂಡ್ ಬಿಯಾಂಡ್" ಸ್ಪರ್ಧೆಯು ಕೇವಲ ಒಂದು ಬರವಣಿಗೆಯ ಸ್ಪರ್ಧೆಯಷ್ಟೇ ಅಲ್ಲ; ಇದು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾರತದ ಅದ್ಭುತ ಹೋರಾಟದ ಹಾದಿಯನ್ನು ಸಾರಿ ಸಾರಿ ಹೇಳುವ ಚಿತ್ರಗಳನ್ನು ಮತ್ತು ಅದರಾಚೆಯಿರುವ ಮಿತಿಯಿಲ್ಲದ ಸಾಧ್ಯತೆಗಳನ್ನು ಚಿತ್ರಿಸಲು, ನಿಮ್ಮ ಕಲ್ಪನೆಗೆ ನೀವು ನೀಡುವ ಗೌರವ (ಟ್ರಿಬ್ಯೂಟ್) ಮತ್ತು ಕ್ಯಾನ್ವಾಸ್. ಹೌದು ಇದೊಂದು ಆಚರಣೆ! ಸಂಭ್ರಮಾಚರಣೆ! ಈ ಸ್ಪರ್ಧೆಯು ಕೇವಲ ಗದ್ಯ ಮತ್ತು ಕವಿತೆಯ ಬಗ್ಗೆ ಅಲ್ಲ; ಇವು ನಿಮ್ಮ ಮನಸ್ಸು ಮತ್ತು ಭಾವನೆಗಳನ್ನು, ರಾಷ್ಟ್ರಾಭಿಮಾನದೊಂದಿಗೆ ಪ್ರತಿಧ್ವನಿಸುವಂತೆ ಮಾಡುವ ಸ್ವಾತಂತ್ರ್ಯ ಸಾರವಿರುವ ಪದಗಳು.

ತಲೆಮಾರುಗಳಾದ್ಯಂತ ಕೈ ಜೋಡಿಸುವಿಕೆ:

"ಸಾರೆ ಜಹಾನ್ ಸೇ ಅಚ್ಛಾ ಸಾಗಾಸ್" ಹಿರಿಯರು ತಮ್ಮ ಇತಿಹಾಸದ ನೆನಪುಗಳನ್ನು ಹಂಚಿಕೊಳ್ಳಲು ಮತ್ತು ಯುವ ಪೀಳಿಗೆಗೆ ಸ್ವಾತಂತ್ರ್ಯದ ಮೌಲ್ಯಗಳನ್ನು ತಿಳಿಸಲು ಇದೊಂದು ಅದ್ಭುತ ಅವಕಾಶವಾಗಿದೆ. ಅದೇ ಸಮಯದಲ್ಲಿ, ಇದು ಹಿಂದೆ ತಾವು ಕಲಿತ ಪಾಠಗಳೊಂದಿಗೆ, ತಮ್ಮ ಸೃಜನಶೀಲತೆಯನ್ನು ವ್ಯಕ್ತ ಪಡಿಸಲು ಮತ್ತು ಏಕೀಕೃತ, ಪ್ರಗತಿಪರ ಭವಿಷ್ಯದ ಗುರಿಗಳನ್ನು ಚಿತ್ರಿಸಲು ಯುವಕರನ್ನು ಆಹ್ವಾನಿಸುತ್ತದೆ.

ಸ್ಪರ್ಧೆಯ ಮಾರ್ಗಸೂಚಿಗಳು:

ಥೀಮ್: ಸ್ವಾತಂತ್ರ್ಯದ ಥೀಮ್ ಅನ್ನು ಇನ್ನಷ್ಟು ಅನ್ವೇಷಿಸಲು ಸ್ಪರ್ಧಿಗಳನ್ನು ಪ್ರೋತ್ಸಾಹಿಸಲಾಗುತ್ತದೆ.

ಸ್ವರೂಪ: ಸ್ಪರ್ಧಿಗಳು ತಮ್ಮ ಬರಹಗಳನ್ನು ಸ್ವಾತಂತ್ರ್ಯ ದಿನ/ಸ್ವಾತಂತ್ರ್ಯದ ಸಾರವನ್ನು ತಿಳಿಸುವ ಸಣ್ಣ ಕಥೆಗಳು ಮತ್ತು ಕವಿತೆಗಳ ರೂಪದಲ್ಲಿ ಸಲ್ಲಿಸಬಹುದು.

ಸ್ವಂತಿಕೆ: ಎಲ್ಲಾ ಬರಹಗಳು ಆಯಾ ಸ್ಪರ್ಧಿಗಳು ರಚಿಸಿದ ಸ್ವಂತ ಬರಹಗಳಾಗಿರಬೇಕು. ನೆನಪಿರಲಿ, ಕೃತಿಚೌರ್ಯವು ಅನರ್ಹತೆಗೆ ಕಾರಣವಾಗುತ್ತದೆ.

ಪದಗಳ ಮಿತಿ: ಸ್ಪರ್ಧೆಗೆ ಯಾವುದೇ ಪದಗಳ ಮಿತಿ ಇಲ್ಲ.

ಸ್ಪರ್ಧೆಯಲ್ಲಿ ಭಾಗವಹಿಸಲು ಯಾವುದೇ ಭಾಗವಹಿಸುವಿಕೆಯ ಶುಲ್ಕವಿಲ್ಲ.

ಭಾಷೆ: ನಿಮ್ಮ ಬರಹಗಳು ಕನ್ನಡ, ಇಂಗ್ಲಿಷ್, ಹಿಂದಿ, ಮರಾಠಿ, ಗುಜರಾತಿ, ತಮಿಳು, ತೆಲುಗು, ಮಲಯಾಳಂ, ಒಡಿಯಾ ಮತ್ತು ಬೆಂಗಾಲಿ ಇವುಗಳಲ್ಲಿ ಯಾವುದಾದರೂ ಒಂದು ಭಾಷೆಯಲ್ಲಿರಬೇಕು. ಆದಾಗ್ಯೂ, ನೀವು ಇಲ್ಲಿರುವ ಒಂದಕ್ಕಿಂತ ಹೆಚ್ಚು ಭಾಷೆಯಲ್ಲಿ ನಿಮ್ಮ ಬರಹಗಳನ್ನು ಸಲ್ಲಿಸಬಹುದು.

ಸಲ್ಲಿಕೆಗೆ ಕೊನೆಯ ದಿನಾಂಕ: ನಿಮ್ಮ ಎಲ್ಲಾ ಬರಹಗಳನ್ನು 05 ಸೆಪ್ಟೆಂಬರ್ 2023 ರೊಳಗೆ ಸಲ್ಲಿಸಬೇಕು.

ಬಹುಮಾನಗಳು:

ಪ್ರತಿ ಭಾಷೆಯ ಮತ್ತು ಪ್ರತಿ ಕೆಟಗರಿಯ ಟಾಪ್ 30 ಬರಹಗಳನ್ನು ಸ್ಟೋರಿಮಿರರ್‌ನ ಇಬುಕ್‌ನಲ್ಲಿ ಪ್ರಕಟಿಸಲಾಗುವುದು.

ಪ್ರತಿ ಭಾಷೆಯ ಮತ್ತು ಪ್ರತಿ ಕೆಟಗರಿಯ ಟಾಪ್ 10 ಬರಹಗಳಿಗೆ ₹150/- ಮೌಲ್ಯದ ಸ್ಟೋರಿಮಿರರ್ ಡಿಸ್ಕೌಂಟ್ ವೋಚರ್ ಅನ್ನು ನೀಡಲಾಗುವುದು.

ಎಲ್ಲಾ ಸ್ಪರ್ಧಿಗಳು ಭಾಗವಹಿಸುವಿಕೆ ಪ್ರಮಾಣಪತ್ರವನ್ನು ಸ್ವೀಕರಿಸುತ್ತಾರೆ.

ಸಂಪರ್ಕಿಸಿ:

ಇಮೇಲ್: neha@storymirror.com

ದೂರವಾಣಿ ಸಂಖ್ಯೆ: +91 9372458287