Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

#Friends Forever Challenge

SEE WINNERS

Share with friends

ಪರಿಚಯ:

ಸ್ನೇಹವೆನ್ನುವುದು ಸಮಯ, ದೂರ ಮತ್ತು ಎಂತಹುದೇ ಸಂದರ್ಭಗಳನ್ನು ಮೀರಿದ ಬಂಧವಾಗಿದೆ. ಇದು ನಮ್ಮ ಜೀವನವನ್ನು ಸಮೃದ್ಧಗೊಳಿಸುವ ನಿಧಿಯೆಂದರೂ ತಪ್ಪಲ್ಲ. ಏಕೆಂದರೆ ಸ್ನೇಹ ನಮಗೆ ಸಂತೋಷ, ಬೆಂಬಲ ಮತ್ತು ಮರೆಯಲಾಗದ ನೆನಪುಗಳನ್ನು ನೀಡುತ್ತದೆ. ಸ್ಟೋರಿಮಿರರ್‌ನ "ಫ್ರೆಂಡ್ಸ್ ಫಾರೆವರ್ ಚಾಲೆಂಜ್" ಒಂದು ಅತ್ಯಾಕರ್ಷಕ ಬರವಣಿಗೆ ಸ್ಪರ್ಧೆಯಾಗಿದ್ದು, ಅದು ಸ್ನೇಹದ ಮಹತ್ವವನ್ನು ಆಚರಿಸುತ್ತದೆ ಮತ್ತು ಈ ಸ್ಪರ್ಧೆಯು ಸ್ಪರ್ಧಿಗಳನ್ನು ತಮ್ಮ ವೈಯಕ್ತಿಕ ಅನುಭವಗಳು, ಕಾಲ್ಪನಿಕ ಕಥೆಗಳು ಅಥವಾ ಎಂದೂ ಕೊನೆಯಾಗದ ಸ್ನೇಹದ ಥೀಮ್ ಮೇಲೆ ಸೃಜನನಾತ್ಮಕ ದೃಷ್ಟಿಕೋನಗಳನ್ನು ತೆರೆದಿಡಲು ಆಹ್ವಾನಿಸುತ್ತದೆ.

ಸ್ಪರ್ಧೆಯ ಮಾರ್ಗಸೂಚಿಗಳು:

ಥೀಮ್: ನಿರಂತರ ಹಾಗೂ ಚಿರನೂತನವಾದ ಸ್ನೇಹದ ವಿಷಯವನ್ನು ಇನ್ನಷ್ಟು ಅನ್ವೇಷಿಸಲು ಬಯಸುವವರನ್ನು ಪ್ರೋತ್ಸಾಹಿಸಲಾಗುತ್ತದೆ. ನಿಮ್ಮ ಬರಹಗಳು ಬಾಲ್ಯದ ಗೆಳೆಯರು ಅನೇಕ ವರ್ಷಗಳ ನಂತರ ಮತ್ತೆ ಒಂದಾಗುವ ಹೃದಯಸ್ಪರ್ಶಿ ಕಥೆಗಳಿಂದ ಹಿಡಿದು, ಸ್ಥಳ ಹಾಗೂ ಸಮಯದ ಗಡಿಗಳನ್ನು ಮೀರಿ ನಿಂತ ಅದ್ಭುತ ಸ್ನೇಹ ಸಾರುವಂತಹ ಕಾಲ್ಪನಿಕ ಕಥೆಗಳವರೆಗೆ ಇರಬಹುದು.

ಸ್ಪರ್ಧೆಯ ಸ್ವರೂಪ: ಸ್ಪರ್ಧಿಗಳು ತಮ್ಮ ಬರಹಗಳನ್ನು ಸ್ನೇಹದ ಮಹತ್ವವನ್ನು ಸೆರೆಹಿಡಿಯುವ ಸಣ್ಣ ಕಥೆಗಳ ಮತ್ತು ಕವಿತೆಗಳ ರೂಪದಲ್ಲಿ ಸಲ್ಲಿಸಬಹುದು.

ಸ್ವಂತಿಕೆ: ಎಲ್ಲಾ ಬರಹಗಳು ಆಯಾ ಸ್ಪರ್ಧಿಗಳು ರಚಿಸಿದ ಸ್ವಂತ ಬರಹಗಳಾಗಿರಬೇಕು. ನೆನಪಿರಲಿ, ಕೃತಿಚೌರ್ಯವು ಅನರ್ಹತೆಗೆ ಕಾರಣವಾಗುತ್ತದೆ.

ಪದಗಳ ಮಿತಿ: ಸ್ಪರ್ಧೆಗೆ ಯಾವುದೇ ಪದಗಳ ಮಿತಿ ಇಲ್ಲ.

ಸ್ಪರ್ಧೆಯಲ್ಲಿ ಭಾಗವಹಿಸಲು ಯಾವುದೇ ಭಾಗವಹಿಸುವಿಕೆಯ ಶುಲ್ಕವಿಲ್ಲ.

ಭಾಷೆ: ನಿಮ್ಮ ಬರಹಗಳು ಕನ್ನಡ ಇಂಗ್ಲಿಷ್, ಹಿಂದಿ, ಮರಾಠಿ, ಗುಜರಾತಿ, ತಮಿಳು, ತೆಲುಗು, ಮಲಯಾಳಂ ಒಡಿಯಾ ಮತ್ತು ಬಾಂಗ್ಲಾ ಇವುಗಳಲ್ಲಿ ಯಾವುದಾದರೂ ಒಂದು ಭಾಷೆಯಲ್ಲಿರಬೇಕು. ಆದಾಗ್ಯೂ, ನೀವು ಇಲ್ಲಿರುವ ಒಂದಕ್ಕಿಂತ ಹೆಚ್ಚು ಭಾಷೆಯಲ್ಲಿ ನಿಮ್ಮ ಬರಹಗಳನ್ನು ಸಲ್ಲಿಸಬಹುದು.

ಸಲ್ಲಿಕೆಗೆ ಕೊನೆಯ ದಿನಾಂಕ: ನಿಮ್ಮ ಎಲ್ಲಾ ಬರಹಗಳನ್ನು 31 ಆಗಸ್ಟ್ 2023 ರೊಳಗೆ ಸಲ್ಲಿಸಬೇಕು.

ಬಹುಮಾನಗಳು:

ಪ್ರತಿ ಭಾಷೆ ಮತ್ತು ಪ್ರತಿ ಕೆಟಗರಿಯ ಟಾಪ್ 10 ಬರಹಗಳಿಗೆ, ₹150/- ಮೌಲ್ಯದ ಸ್ಟೋರಿಮಿರರ್ ಡಿಸ್ಕೌಂಟ್ ವೋಚರ್ ಅನ್ನು ನೀಡಲಾಗುವುದು.

ಎಲ್ಲಾ ಸ್ಪರ್ಧಿಗಳು ಭಾಗವಹಿಸುವಿಕೆ ಪ್ರಮಾಣಪತ್ರವನ್ನು ಸ್ವೀಕರಿಸುತ್ತಾರೆ.

ಸಂಪರ್ಕಿಸಿ:

ಇಮೇಲ್: neha@storymirror.com

ದೂರವಾಣಿ ಸಂಖ್ಯೆ: +91 9372458287