Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

#52-Week Writing Challenge - 2024 (Edition 7)

PARTICIPATE

Share with friends

ನಿಮಗೆಲ್ಲ ತಿಳಿದಿರುವಂತೆ 2023 ಕೊನೆಗೊಳ್ಳುತ್ತಿದೆ, ಹೊಸ ವರ್ಷದ ಆರಂಭವು, ನಮಗೆ ಹೊಸ ಗುರಿಗಳನ್ನು ಮತ್ತು ನಿರ್ಣಯಗಳನ್ನು ಕೈಗೊಳ್ಳಲು ಸೂಕ್ತ ಅವಕಾಶವನ್ನು ನೀಡುತ್ತದೆ. ಆ ನಿಟ್ಟಿನಲ್ಲಿ ಸ್ಟೋರಿಮಿರರ್ ನಿಮಗೊಂದು ಆಹ್ವಾನವನ್ನು ನೀಡುತ್ತಿದೆ, ಅದುವೇ ' ಸಾಪ್ತಾಹಿಕ ಬರವಣಿಗೆ' (ವೀಕ್ಲಿ ರೈಟಿಂಗ್). ಈ ಸ್ಪರ್ಧೆಯು, ಬರವಣಿಗೆಯ ಬದ್ಧತೆಯನ್ನು ಸ್ವೀಕರಿಸಲು ಮತ್ತು ಅದೇ ಪ್ರಯತ್ನದಲ್ಲಿ ತೊಡಗಿರುವ ಸಮಾನ ಮನಸ್ಕ ಬರಹಗಾರರ ಬಳಗವನ್ನು ಸೇರಲು ನಿಮ್ಮನ್ನು ಹುರಿದುಂಬಿಸುತ್ತದೆ.


52-ವಾರದ ಬರವಣಿಗೆ ಚಾಲೆಂಜ್ - 2024 ( 7ನೇ ಆವೃತ್ತಿ) ರ ಆರನೇ ಸೀಸನ್‌ನ ಪ್ರಾರಂಭವನ್ನು ಘೋಷಿಸಲು ನಾವು ರೋಮಾಂಚನಗೊಂಡಿದ್ದೇವೆ. ಈ ಸ್ಪರ್ಧೆಯಲ್ಲಿ ಭಾಗವಹಿಸುವುದರಿಂದ ಇದು ನಿಮ್ಮ ಬರವಣಿಗೆಯ ಕೌಶಲ್ಯವನ್ನು ಹೆಚ್ಚಿಸುವ ಮತ್ತು ಸಹ ಬರಹಗಾರರ ಬಳಗದ ಅಮೂಲ್ಯ ಬೆಂಬಲದೊಂದಿಗೆ ನಿಮ್ಮ ಸೃಜನಶೀಲತೆಯನ್ನು ಹೆಚ್ಚಿಸುವ ಭರವಸೆ ನೀಡುತ್ತದೆ.


ಈ ಸೀಸನ್‌ನಲ್ಲಿ ಹೊಸತೇನಿದೆ?

ಪ್ರತಿ ತಿಂಗಳನ್ನು ಒಂದು ನಿರ್ದಿಷ್ಟ ಥೀಮ್‌ಗಾಗಿ ಮೀಸಲಿಡಲಾಗುತ್ತದೆ. ಸ್ಪರ್ಧಿಗಳು ಇಡೀ ತಿಂಗಳು ಆ ಥೀಮ್‌ನ ಮೇಲೆ ತಮ್ಮ ಬರಹಗಳನ್ನು ಬರೆಯಲು ಪ್ರೋತ್ಸಾಹಿಸಲಾಗುತ್ತದೆ.

ನೀವು ಸಣ್ಣ ಕಥೆಗಳನ್ನು (ಶಾರ್ಟ್ ಸ್ಟೋರಿ) ರಚಿಸುವುದಾಗಿರಲಿ, ಕವಿತೆ ರಚಿಸುವುದಾಗಿರಲಿ ಅಥವಾ ಜರ್ನಲ್ ಅನ್ನು ನಿರ್ವಹಿಸಲು ಇಷ್ಟಪಡುವುದಾದರೆ, ಈ ಸವಾಲು ನಿಮಗಾಗಿಯೇ! ನಿಮ್ಮ ಕಲ್ಪನೆಯನ್ನು ವಿಸ್ತರಿಸಲು ಮತ್ತು ಅಸಂಖ್ಯಾತ ಬರವಣಿಗೆಯ ವಿಷಯಗಳಿಗೆ ಸ್ಫೂರ್ತಿ ನೀಡಲು ಈ ಸವಾಲನ್ನು ವಿನ್ಯಾಸಗೊಳಿಸಲಾಗಿದೆ.


ಆದಾಗ್ಯೂ, ಈ ಥೀಮ್‌ಗಳು ಐಚ್ಛಿಕವಾಗಿರುತ್ತವೆ ಮತ್ತು ಸ್ಪರ್ಧಿಗಳು ಬಯಸಿದಲ್ಲಿ ತಮ್ಮದೇ ಆದ ಸ್ವಂತ ಥೀಮ್‌ಗಳನ್ನು ಆಯ್ಕೆ ಮಾಡಿಕೊಳ್ಳಲು ಸ್ವತಂತ್ರರಾಗಿರುತ್ತಾರೆ ಎಂಬುದನ್ನು ಗಮನಿಸಿ.


1. ಜನವರಿ ತಿಂಗಳು - ಪ್ರಕಾರ ಗಾಲಾ: ಇಡೀ ತಿಂಗಳು ಯಾವುದಾದರೂ ಪ್ರಕಾರವನ್ನು (ಉದಾ., ವೈಜ್ಞಾನಿಕ ಕಾದಂಬರಿ, ಪ್ರಣಯ, ರಹಸ್ಯ, ಭಯಾನಕ, ಫ್ಯಾಂಟಸಿ) ಆಯ್ಕೆಮಾಡಿ ಮತ್ತು ಆ ಪ್ರಕಾರದಲ್ಲಿ ನಿಮ್ಮ ಬರಹವನ್ನು ರಚಿಸಿ. ಈ ತಿಂಗಳ ಪ್ರತಿ ಸಲ್ಲಿಕೆಯು ಒಂದೊಂದು ವಿಭಿನ್ನ ಪ್ರಕಾರವನ್ನು ಅನ್ವೇಷಿಸುತ್ತದೆ ಎಂಬುದನ್ನು ಖಚಿತಪಡಿಸಿಕೊಳ್ಳಿ.

2. ಫೆಬ್ರವರಿ ತಿಂಗಳು - ಕ್ಯಾರೆಕ್ಟರ್ ಕ್ರಾನಿಕಲ್ಸ್

ಈ ತಿಂಗಳು ಪ್ರತಿ ವಾರ ಒಂದು ಹೊಸ ಪಾತ್ರವನ್ನು ಭೇಟಿ ಮಾಡಿ. ವಿವಿಧ ತಿರುವುಗಳು ಮತ್ತು ಸನ್ನಿವೇಶಗಳಲ್ಲಿಆ ಪಾತ್ರಕ್ಕೆ ಜೀವ ತುಂಬುವ ಕಥೆಗಳನ್ನು ಹೆಣೆಯಿರಿ. ಅದರಲ್ಲಿ ಆ ಪಾತ್ರದ ಭೂತ, ವರ್ತಮಾನ ಮತ್ತು ಭವಿಷ್ಯವನ್ನು ಅದ್ಭುತವಾಗಿ ಚಿತ್ರಿಸಿ.

3. ಮಾರ್ಚ್ ತಿಂಗಳು - ಕಾಮನಬಿಲ್ಲಿನ ಮೂಲಕ ಬರೆಯುವುದು

ಈ ತಿಂಗಳ ಪ್ರತಿ ವಾರಕ್ಕೆ ಕಾಮನಬಿಲ್ಲಿನ ಒಂದೊಂದು ಬಣ್ಣವನ್ನು ನಿಗದಿಪಡಿಸಿ ಮತ್ತು ಅದರ ಕಂಪು ನಿಮ್ಮ ಸಲ್ಲಿಕೆಯ ಮೇಲೆ ಪ್ರಭಾವ ಬೀರುವಂತಿರಲಿ. ಪ್ರತಿ ಬಣ್ಣಕ್ಕೆ ಸಂಬಂಧಿಸಿದ ಸಾಂಕೇತಿಕತೆ, ಭಾವನೆಗಳು ಮತ್ತು ಚಿತ್ರಣಗಳು ನಿಮ್ಮ ಬರಹದಲ್ಲಿರಲಿ.

4. ಏಪ್ರಿಲ್ ತಿಂಗಳು - ಪ್ರತಿದಿನದ ಸಂತೋಷಗಳು

ಈ ತಿಂಗಳು ನಮ್ಮ ಜೀವನದಲ್ಲಿ ಕಾಣಸಿಗುವ ಸಣ್ಣ ಮತ್ತು ಸರಳ ಸಂತೋಷಗಳ ಬಗ್ಗೆ ಬರೆಯಿರಿ. ಪ್ರತಿದಿನದ ಅನುಭವಗಳಲ್ಲಿ ಸಂತೋಷ, ಕೃತಜ್ಞತೆ ಮತ್ತು ತೃಪ್ತಿಯ ಕ್ಷಣಗಳನ್ನು ಚಿತ್ರಿಸಿ.

5. ಮೇ ತಿಂಗಳು - ನಿಮ್ಮ ಊರಿನ ಕಥೆಗಳು

ನಿಮ್ಮ ಸ್ಥಳೀಯ ಸಮುದಾಯ ಅಥವಾ ಊರಿನಿಂದ ಸ್ಫೂರ್ತಿ ಪಡೆದ ಕಥೆಗಳನ್ನು ಈ ತಿಂಗಳು ಹಂಚಿಕೊಳ್ಳಿ. ನೀವು ಮನೆಯೆಂದು (ನಿಮಗೆ ಆಪ್ತವೆನಿಸುವ ಸ್ಥಳ) ಕರೆಯುವ ಸ್ಥಳದ ಮೋಡಿ, ಚಮತ್ಕಾರಗಳು ಮತ್ತು ಅನನ್ಯತೆಯನ್ನು ಬರಹಗಳ ಮೂಲಕ ಸಂಭ್ರಮಿಸಿ.

6. ಜೂನ್ ತಿಂಗಳು - ಬಣ್ಣದ ಪ್ಯಾಲೆಟ್ ಕ್ರಾನಿಕಲ್ಸ್

ಪ್ರತಿ ವಾರ ಒಂದೊಂದು ಬಣ್ಣವನ್ನು ಆಯ್ಕೆಮಾಡಿ ಮತ್ತು ಅದನ್ನು ನಿಮ್ಮ ಕಥೆಯಲ್ಲಿ ಸೇರಿಸಿ. ಪ್ರತಿ ಬಣ್ಣಕ್ಕೆ ಸಂಬಂಧಿಸಿರುವ ಭಾವನೆಗಳು, ಸಂಕೇತಗಳು ಮತ್ತು ಅರ್ಥಗಳನ್ನು ಸುಂದರವಾಗಿ ಬರಹಗಳ ಮೂಲಕ ಚಿತ್ರಿಸಿ.

7. ಜುಲೈ ತಿಂಗಳು - ಡ್ರೀಮ್ ಡೈರಿ

ನಿಮ್ಮ ಅಥವಾ ಇತರರ ಕನಸುಗಳಿಂದ ಪ್ರೇರಿತವಾದ ವಿಷಯವನ್ನು ಮತ್ತಷ್ಟು ನವೀನ ರೀತಿಯಲ್ಲಿ ಹೆಣೆದು ಅದ್ಭುತ ಕಥೆಯನ್ನಾಗಿಸಿ. ಕನಸುಗಳು ಆಗಾಗ ತರುವ ವಾಸ್ತವಿಕ ಮತ್ತು ಅದ್ಭುತ ಅಂಶಗಳು ನಿಮ್ಮ ಯೋಚನಾಶಕ್ತಿಯಲ್ಲಿ ಮೂಡಿಬರಲಿ.

8. ಆಗಸ್ಟ್ ತಿಂಗಳು - ಪೆಟ್ ಟೇಲ್ಸ್

ಸಾಕುಪ್ರಾಣಿಗಳು ಅಥವಾ ಪ್ರಾಣಿಗಳಿಂದ ಪ್ರೇರಿತವಾದ ವಿಷಯವನ್ನು ಕಥೆ/ಕವಿತೆಯ ಮೂಲಕ ಹಂಚಿಕೊಳ್ಳಿ. ಮಾನವರು ಮತ್ತು ಪ್ರಾಣಿಗಳ ನಡುವಿನ ಬಂಧವನ್ನು ಚಿತ್ರಿಸಿ ಅಥವಾ ಪ್ರೀತಿಪಾತ್ರರನ್ನು, ಸಂಗಾತಿಯನ್ನು ಒಳಗೊಂಡ ಕಾಲ್ಪನಿಕ ವಿಷಯದ ಮೇಲೆ ಕಥೆ/ಕವಿತೆ ರಚಿಸಿ.

9. ಸೆಪ್ಟೆಂಬರ್ ತಿಂಗಳು - ಪ್ರಕೃತಿಯ ನಿರೂಪಣೆಗಳು

ನಿಮ್ಮ ಕಥೆಗಳನ್ನು ನಿಸರ್ಗದ ಸುಂದರತೆಯ ನಡುವೆ ಅರಳಿಸಿ, ಆ ಮೂಲಕ ಪ್ರಕೃತಿಯನ್ನು ಸಂಪರ್ಕಿಸಿ. ಭೂದೃಶ್ಯಗಳ ಸೌಂದರ್ಯ, ಕಾಡುಗಳ ಮಾಂತ್ರಿಕತೆ ಅಥವಾ ಜಲಮೂಲಗಳ ಕಥೆಯನ್ನು ಚಿತ್ರಿಸಿ.

10. ಅಕ್ಟೋಬರ್ ತಿಂಗಳು - ಪುಸ್ತಕಗಳ ಅಡ್ವೆಂಚರ್ 

ಪುಸ್ತಕಗಳ ಕುರಿತು ನಿಮ್ಮ ಬರಹವನ್ನು ಕೇಂದ್ರೀಕರಿಸಿ ಮತ್ತು ಅವುಗಳಲ್ಲಿನ ಕಥೆಗಳು ಅಥವಾ ಪಾತ್ರಗಳನ್ನು ಮರುಸೃಷ್ಟಿಸಿ. ಪುಸ್ತಕದ ಪುಟಗಳಲ್ಲಿ ಕಂಡುಬರುವ ಮಾಂತ್ರಿಕತೆ ಮತ್ತು ಕಲ್ಪನೆಯನ್ನು ಚಿತ್ರಿಸುವ ಮೂಲಕ ನೀವು ಸಾಹಿತ್ಯ ಪ್ರಪಂಚದಲ್ಲಿ ಮಿಂದೇಳಿ.

11. ನವೆಂಬರ್ ತಿಂಗಳು - ಹುಡುಕಾಟದ ಕಥೆ

ಕಳೆದುಹೋದ ಮತ್ತು ಕೈಗೆ ಸಿಕ್ಕ ಅದ್ಭುತ ವಸ್ತುಗಳ ಸುತ್ತ ನಿಮ್ಮ ಕಥೆಗಳನ್ನು ಹೆಣೆಯಿರಿ. ಮೌಲ್ಯಯುತ ವಸ್ತುವನ್ನು ಕಂಡುಹಿಡಿಯುವುದರೊಂದಿಗೆ ಸಂಬಂಧಿಸಿದ ಭಾವನೆಗಳು, ಕಲಿತ ಪಾಠಗಳು ಮತ್ತು ಸಂತೋಷಗಳನ್ನು ನಿಮ್ಮ ಅಕ್ಷರಗಳಲ್ಲಿ ಚಿತ್ರಿಸಿ.

12. ಡಿಸೆಂಬರ್ - ಹಬ್ಬಗಳ ಕ್ರಾನಿಕಲ್ಸ್

ಪ್ರಪಂಚದಾದ್ಯಂತ ಆಚರಿಸಲಾಗುವ ವಿವಿಧ ಹಬ್ಬಗಳಿಂದ ಪ್ರೇರಿತವಾದ ನಿಮ್ಮ ಬರಹವನ್ನು ಸಲ್ಲಿಸಿ, ಈ ಘಟನೆಗಳಿಗೆ ಸಂಬಂಧಿಸಿದ ಹಿನ್ನೆಲೆ ಕಥೆಗಳು, ಸಂಪ್ರದಾಯಗಳು ಮತ್ತು ಭಾವನೆಗಳನ್ನು ಅಕ್ಷರಗಳಲ್ಲಿ ಸೆರೆಹಿಡಿಯಿರಿ.


ನಿಯಮಗಳು:

1. ಸ್ಪರ್ಧಿಗಳು 52 ವಾರಗಳವರೆಗೆ ಸತತವಾಗಿ 52 ಕಥೆಗಳು ಅಥವಾ 52 ಕವಿತೆಗಳನ್ನು ಸಲ್ಲಿಸಬೇಕು, ಅಂದರೆ, ಪ್ರತಿ ವಾರ ಆಯಾ ವಿಭಾಗದ ಅಡಿಯಲ್ಲಿ (ಕಥೆ/ಕವಿತೆ) 1 ಬರಹವನ್ನು ಸಲ್ಲಿಸಬೇಕು.

2. ಉದಾಹರಣೆಗೆ, ನೀವು ಜನವರಿ 2023 ರ 3 ನೇ ವಾರದಿಂದ ನಿಮ್ಮ ಬರಹಗಳ ಸಲ್ಲಿಕೆಯನ್ನು ಪ್ರಾರಂಭಿಸುತ್ತಿದ್ದರೆ, ನೀವು ಜನವರಿ 2024 ರ 3 ನೇ ವಾರದವರೆಗೆ ನಿಮ್ಮ ಕಥೆ/ಕವಿತೆಗಳನ್ನು ಸಲ್ಲಿಸಬಹುದು.

3. ಸ್ಪರ್ಧಿಗಳು ವಿವಿಧ ವಿಭಾಗಗಳಿಗೆ (ಕಥೆ/ಕವಿತೆ) ನೋಂದಾಯಿಸಿಕೊಳ್ಳಬಹುದು. ಆದಾಗ್ಯೂ, 52 ಸಲ್ಲಿಕೆಗಳ ಪ್ರತಿ ಸೆಟ್, ಕಥೆ ಅಥವಾ ಕವಿತೆಯ ಒಂದೇ ವಿಭಾಗದ ಅಡಿಯಲ್ಲಿರಬೇಕು. ಅಂದರೆ ನೀವು 52 ಕಥೆಗಳನ್ನಾಗಲಿ ಅಥವಾ 52 ಕವಿತೆಗಳನ್ನಾಗಲಿ ಪ್ರತ್ಯೇಕವಾಗಿಯೇ ಸಲ್ಲಿಸತಕ್ಕದ್ದು. ಕೆಲವು ಕಥೆಗಳು, ಕೆಲವು ಕವಿತೆಗಳನ್ನು ಸೇರಿಸಿ 52 ಬರಹಗಳೆಂದು ಸಲ್ಲಿಸಿದರೆ, ಅವುಗಳನ್ನು ಸ್ಪರ್ಧೆಗೆ ಪರಿಗಣಿಸಲಾಗುವುದಿಲ್ಲ

4. ಸ್ಪರ್ಧಿಗಳು ಈ ಸ್ಪರ್ಧೆಯ ಅಡಿಯಲ್ಲಿ ಬರಹಗಳನ್ನು ಸಲ್ಲಿಸಲು ಪ್ರಾರಂಭಿಸಿದ ನಂತರ ನಿಮ್ಮ ಸಲ್ಲಿಕೆಯಲ್ಲಿ ಯಾವುದೇ ವಿರಾಮ ನೀಡಬಾರದು. ಬರಹಗಳ ಸಲ್ಲಿಕೆಯಲ್ಲಿ ವಿರಾಮ ಉಂಟಾದರೆ ಅವರನ್ನು ಅನರ್ಹಗೊಳಿಸಲಾಗುವುದು.

5. ವಿಜೇತರನ್ನು ಅವರ ಸಲ್ಲಿಕೆಗಳು ಮತ್ತು ಸಂಪಾದಕೀಯ ಸ್ಕೋರ್‌ಗಳು ಹಾಗೂ ಅವುಗಳನ್ನು ಓದಿದ ಸಂಖ್ಯೆ ಮತ್ತು ಲೈಕ್‌ಗಳ ಸಂಖ್ಯೆಯ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ. ಇದು ಎಲ್ಲಾ 52 ಸಲ್ಲಿಕೆಗಳಿಗೆ ಸಂಚಿತ ಸ್ಕೋರ್ ಆಗಿರುತ್ತದೆ.

6. ಸ್ಟೋರಿಮಿರರ್‌ನ ನಿರ್ಧಾರವೇ ಅಂತಿಮವಾಗಿರುತ್ತದೆ ಮತ್ತು ಎಲ್ಲಾ ಸ್ಪರ್ಧಿಗಳು ಇದಕ್ಕೆ ಬದ್ಧವಾಗಿರತಕ್ಕದ್ದು.

7. ಸ್ಪರ್ಧೆಯಲ್ಲಿ ಭಾಗವಹಿಸಲು ಯಾವುದೇ ಭಾಗವಹಿಸುವಿಕೆಯ ಶುಲ್ಕವಿಲ್ಲ.


ಬಹುಮಾನಗಳು:

1. ಪ್ರತಿ ಭಾಷೆಯ 2 ವಿಜೇತರು (1 ಕಥೆ + 1 ಕವಿತೆ) ತಮ್ಮ ಪುಸ್ತಕವನ್ನು ಸ್ಟೋರಿಮಿರರ್ ಮೂಲಕ ಭೌತಿಕ ರೂಪದಲ್ಲಿ ಪ್ರಕಟಿಸಲು ಅವಕಾಶವನ್ನು ಪಡೆಯುತ್ತಾರೆ.

2. 13 ವಾರಗಳು ಪೂರ್ಣಗೊಂಡ ನಂತರ: ಡಿಜಿಟಲ್ ಪ್ರಮಾಣಪತ್ರ (ನಿಮ್ಮ ಬರಹ ಪ್ರಯಾಣದ 1/4 ನೇ ಭಾಗ)

3. 26 ವಾರಗಳು ಪೂರ್ಣಗೊಂಡ ನಂತರ ಅಂದರೆ ನಿಮ್ಮ ಬರಹ ಪ್ರಯಾಣದ 1/2 ಭಾಗ: ನೀವು ₹100 ಮೌಲ್ಯದ ಸ್ಟೋರಿಮಿರರ್‌ ಶಾಪ್ ವೋಚರ್ ಅನ್ನು ಸ್ವೀಕರಿಸುತ್ತೀರಿ. ಮತ್ತು ಸ್ಟೋರಿಮಿರರ್‌ ಪಬ್ಲಿಷಿಂಗ್ ಪ್ಯಾಕೇಜ್‌ಗಳ ಮೇಲೆ 10% ರಿಯಾಯಿತಿಯನ್ನು ಪಡೆಯುವಿರಿ.

4. 39 ವಾರಗಳು ಪೂರ್ಣಗೊಂಡ ನಂತರ, ಅಂದರೆ ನಿಮ್ಮ ಬರಹ ಪ್ರಯಾಣದ 3/4: ನೀವು ₹200 ಮೌಲ್ಯದ ಸ್ಟೋರಿಮಿರರ್ ಶಾಪ್ ವೋಚರ್ ಅನ್ನು ಸ್ವೀಕರಿಸುತ್ತೀರಿ. ಮತ್ತು ಸ್ಟೋರಿಮಿರರ್‌ ಪಬ್ಲಿಷಿಂಗ್ ಪ್ಯಾಕೇಜ್‌ಗಳ ಮೇಲೆ 15% ರಿಯಾಯಿತಿಯನ್ನು ಪಡೆಯುವಿರಿ.

5. 52 ವಾರಗಳು ಪೂರ್ಣಗೊಂಡ ನಂತರ: ಸ್ಟೋರಿಮಿರರ್ ನಿಮ್ಮ ಇ-ಪುಸ್ತಕ + ಪ್ರಮಾಣಪತ್ರವನ್ನು ಬಿಡುಗಡೆ ಮಾಡುತ್ತದೆ

6. ಅತ್ಯಧಿಕ ಬರಹಗಳನ್ನು ಸಲ್ಲಿಸುವ ಎಲ್ಲಾ ಭಾಷೆಗಳ ಟಾಪ್ 10 ಸ್ಪರ್ಧಿಗಳು ಸ್ಟೋರಿಮಿರರ್‌ನಿಂದ ಉಚಿತ ಪುಸ್ತಕ ಮತ್ತು ಭೌತಿಕ ಪ್ರಮಾಣಪತ್ರವನ್ನು ಸ್ವೀಕರಿಸುತ್ತಾರೆ.


ಭಾಷೆಗಳು: ಕನ್ನಡ, ಇಂಗ್ಲೀಷ್, ಹಿಂದಿ, ಮರಾಠಿ, ಗುಜರಾತಿ, ತಮಿಳು, ತೆಲುಗು, ಮಲಯಾಳಂ, ಒಡಿಯಾ ಮತ್ತು ಬಾಂಗ್ಲಾ.

ಗಮನಿಸಿ: ನೀವು ಒಂದಕ್ಕಿಂತ ಭಾಷೆಗಳಲ್ಲಿ ನಿಮ್ಮ ಕಥೆ/ಕವಿತೆಗಳನ್ನು ಸಲ್ಲಿಸುತ್ತಿದ್ದರೆ, ನೀವು ಪ್ರತಿ ಭಾಷೆಯಲ್ಲಿ 52 ಕಥೆ/ಕವಿತೆಗಳನ್ನು ಪ್ರತ್ಯೇಕವಾಗಿಯೇ ಸಲ್ಲಿಸಬೇಕಾಗುತ್ತದೆ.

ವಿಷಯದ ವಿಭಾಗ - ಕಥೆ | ಕವಿತೆ

ಸಲ್ಲಿಕೆಯ ಅವಧಿ - ಜನವರಿ 1, 2024 ರಿಂದ ಏಪ್ರಿಲ್ 30, 2025 ರವರೆಗೆ 

ನೋಂದಣಿ - ಏಪ್ರಿಲ್ 30, 2024 ರವರೆಗೆ 

ಫಲಿತಾಂಶಗಳು - ಆಗಸ್ಟ್ 2025


ಸಂಪರ್ಕಿಸಿ:

ಇಮೇಲ್: neha@storymirror.com

ದೂರವಾಣಿ ಸಂಖ್ಯೆ: +91 9372458287