Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

#Navratri Diaries - Season 2

SEE WINNERS

Share with friends

ಕುಣಿತ, ಡೊಳ್ಳು, ದಾಂಡಿಯಾ, ಜಾನಪದ ಸಂಗೀತ, ಸಂತೋಷದಿಂದ ಮಾಡುವ ನೃತ್ಯಗಳು, ಒಂಬತ್ತು ದಿನಕ್ಕೆ 9 ಬಣ್ಣದ ಬಟ್ಟೆಗಳ ವೇಳಾಪಟ್ಟಿ, ದೀಪಗಳು, ಜಾತ್ರೆ, ತರಹೇವಾರಿ ಆಹಾರ ವ್ಹಾ! ಇದು ನವರಾತ್ರಿ - ನೀವು ಸಕಾರಾತ್ಮಕ ಶಕ್ತಿಯಿಂದ, ಇಂದ್ರಿಯಗಳಿಂದ ಮತ್ತು ಆಧ್ಯಾತ್ಮಿಕತೆಯಿಂದ ನಿಮ್ಮನ್ನು ನೀವು ಮತ್ತೇ ಚೈತನ್ಯದಿಂದ ತುಂಬಿಕೊಳ್ಳುವಂತೆ ಮಾಡಿಕೊಳ್ಳುವುದೇ ಈ ನವರಾತ್ರಿ. ಈ ಹಬ್ಬವನ್ನು ನಾಡಿನಾದ್ಯಂತ ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ನವರಾತ್ರಿಯು ಪ್ರತಿಯೊಬ್ಬರ ಜೀವನದಲ್ಲೂ ಸಂತೋಷ ಮತ್ತು ಶಾಂತಿಯನ್ನು ತರುತ್ತದೆ.

 ಕಥೆಗಳು ಮತ್ತು ಕವಿತೆಗಳ ಮೂಲಕ ನವರಾತ್ರಿಯನ್ನು ಆಚರಿಸುವ ಸ್ಪರ್ಧೆಯಾದ 'ನವರಾತ್ರಿ ಡೈರೀಸ್' ಸ್ಪರ್ಧೆಯ ಭಾಗವಾಗಲು ಸ್ಟೋರಿಮಿರರ್ ನಿಮ್ಮನ್ನು ಆಹ್ವಾನಿಸುತ್ತದೆ.

 ನಮ್ಮ ಸಂಪ್ರದಾಯಗಳು ತಮ್ಮೊಳಗಡೆ ಒಂದು ಅಂತರ್ಗತ ಸೌಂದರ್ಯವನ್ನು ಹೊಂದಿವೆ. ನಾವೀಗ ನಮ್ಮ ಲೇಖನಿಯೊಂದಿಗೆ ಬರವಣಿಗೆಯ ಸಾಗರದೊಳಗೆ ಇನ್ನಷ್ಟು ಆಳಕ್ಕೆ ಧುಮುಕೋಣ.


ವಿಷಯ (ಥೀಮ್): 

ನವರಾತ್ರಿಯನ್ನು ಆಚರಿಸುವ ಜನರು, ಅದರಲ್ಲೂ ವಿಶೇಷವಾಗಿ ಮಹಿಳೆಯರು 9 ದಿನಗಳಿಗೆ 9 ನಿರ್ದಿಷ್ಟ ಬಣ್ಣವನ್ನು ಅನುಸರಿಸುತ್ತಾರೆ. ಇಲ್ಲಿ, ನಾವು ನವರಾತ್ರಿಯ ಬಣ್ಣಗಳು ಮತ್ತು ಅದರ ಅರ್ಥವನ್ನು ಪಟ್ಟಿ ಮಾಡಿದ್ದೇವೆ. ನವರಾತ್ರಿಯ ಬಣ್ಣ ಮತ್ತು ಅದರ ಸಾರವನ್ನು ಪ್ರತಿಬಿಂಬಿಸುವ ರೀತಿಯಲ್ಲಿ ನೀವು ಕಥೆ ಅಥವಾ ಕವಿತೆಯನ್ನು ರಚಿಸಬೇಕಾಗಿದೆ. ಉದಾಹರಣೆಗೆ, ನೀವು ಕೆಂಪು ಬಣ್ಣವನ್ನು ಆರಿಸಿದರೆ, ನೀವು ಹವ್ಯಾಸ, ಉತ್ಸಾಹ ಬಗ್ಗೆ ಕಥೆ ಅಥವಾ ಕವಿತೆಯನ್ನು ಬರೆಯಬಹುದು. 


ಬಿಳಿ - ಬಿಳಿ ಬಣ್ಣವು ನೆಮ್ಮದಿ, ಪ್ರಶಾಂತತೆ, ಮತ್ತು ಪರಿಶುದ್ಧತೆಯನ್ನು ಸಂಕೇತಿಸುತ್ತದೆ. 

ಕೆಂಪು - ಕೆಂಪು ಬಣ್ಣವು ಉತ್ಸಾಹ, ಮಂಗಳಕರ. ಜೊತೆಗೆ ಕೋಪವನ್ನು ಸಂಕೇತಿಸುತ್ತದೆ. ಕೋಪವನ್ನು ಬೇರು ಸಹಿತ ಕಿತ್ತೆಸೆಯಬೇಕು.

ಕಡುನೀಲಿ - ಕಡುನೀಲಿ ದೈವಿಕ ಶಕ್ತಿಯನ್ನು ಪ್ರತಿನಿಧಿಸುತ್ತದೆ. 

ಹಳದಿ - ಹಳದಿ ಬಣ್ಣವು ಸಂತೋಷ ಮತ್ತು ಉಲ್ಲಾಸವನ್ನು ಸಂಕೇತಿಸುತ್ತದೆ 

ಹಸಿರು - ಹಸಿರು ಬಣ್ಣವು ಪ್ರಕೃತಿ ಮಾತೆಯ ವಿವಿಧ ಅಂಶಗಳನ್ನು ಮತ್ತು ಅದು ತಾಯಿಯಲ್ಲಿರುವ ಪೋಷಣಾ ಗುಣಗಳನ್ನು ಸೂಚಿಸುತ್ತದೆ. 

ಬೂದು - ಬೂದು ಬಣ್ಣವು ದುಷ್ಟತನದ ನಾಶವನ್ನು ಸೂಚಿಸುತ್ತದೆ.

ಕಿತ್ತಳೆ - ಕಿತ್ತಳೆ ಬಣ್ಣವು ಬೆಂಕಿ, ಹೊಳಪು ಮತ್ತು ಜ್ಞಾನವನ್ನು ಸಂಕೇತಿಸುತ್ತದೆ. 

ನವಿಲು ಹಸಿರು - ನವಿಲು ಹಸಿರು ಬಣ್ಣವು ಈಡೇರುವ ಆಸೆ, ಕನಸು ಮತ್ತು ಹಾರೈಕೆಗಳನ್ನು ಸೂಚಿಸುತ್ತದೆ. 

ಗುಲಾಬಿ - ಗುಲಾಬಿ ಶುದ್ಧತೆ ಮತ್ತು ಸ್ತ್ರೀತ್ವವನ್ನು ಪ್ರತಿನಿಧಿಸುತ್ತದೆ. 


ನಿಯಮಗಳು: 

  • ನೀವು ಮೇಲೆ ನೀಡಲಾದ ಎಲ್ಲಾ ಬಣ್ಣಗಳಿಗೂ (ವಿಷಯಗಳಿಗೆ) ಬರೆಯಬೇಕಾಗಿದೆ. 
  • ಸ್ಪರ್ಧಿಗಳು ವಿವಿಧ ವಿಭಾಗಗಳಿಗೆ (ಕಥೆ/ಕವಿತೆ) ತಮ್ಮ ಬರಹವನ್ನು ಸಲ್ಲಿಸಬಹುದು. ಆದಾಗ್ಯೂ, 9 ಸಲ್ಲಿಕೆಗಳ ಪ್ರತಿ ಸೆಟ್, ಕಥೆ ಅಥವಾ ಕವಿತೆಯ ಒಂದೇ ವರ್ಗದ ಅಡಿಯಲ್ಲಿರಬೇಕು. 
  • ಸ್ಪರ್ಧಿಗಳು ತಮ್ಮ ಸ್ವಂತ ಬರಹವನ್ನು ಸಲ್ಲಿಸಬೇಕು. ನಕಲಿಸುವುದು ಅಪರಾಧ. 
  • ಸಲ್ಲಿಸಬೇಕಾದ ಬರಹಗಳ ಸಂಖ್ಯೆಗೆ ಯಾವುದೇ ಮಿತಿಯಿಲ್ಲ. 
  • ಯಾವುದೇ ಪದಗಳ ಮಿತಿಯಿಲ್ಲ. 
  • ಸ್ಪರ್ಧೆಗೆ ಭಾಗವಹಿಸಲು ಯಾವುದೇ ಶುಲ್ಕವಿಲ್ಲ.


 ವರ್ಗಗಳು:

  • ಕಥೆ
  • ಕವಿತೆ


ಭಾಷೆಗಳು: ಕನ್ನಡ, ಇಂಗ್ಲಿಷ್, ಹಿಂದಿ, ಮರಾಠಿ, ಗುಜರಾತಿ, ತಮಿಳು, ತೆಲುಗು, ಮಲಯಾಳಂ, ಒಡಿಯಾ ಮತ್ತು ಬಾಂಗ್ಲಾ. ಇವುಗಳಲ್ಲಿ ಯಾವುದಾದರೂ ಒಂದು ಅಥವಾ ಹೆಚ್ಚಿನ ಭಾಷೆಗಳಲ್ಲಿ ನಿಮ್ಮ ಬರಹವನ್ನು ಸಲ್ಲಿಸಬಹುದು. 

 ಬಹುಮಾನಗಳು: 

  • ಪ್ರತಿ ಭಾಷೆ ಮತ್ತು ವಿಭಾಗದ ಟಾಪ್ 10 ಕಥೆ ಮತ್ತು ಕವಿತೆಗಳು, ಜ್ಯೂರಿ ಚಾಯ್ಸ್ ಪ್ರಶಸ್ತಿಯನ್ನು ಗೆಲ್ಲುತ್ತವೆ. ಮತ್ತು ₹149 ಮೌಲ್ಯದ ಸ್ಟೋರಿಮಿರರ್ ಡಿಸ್ಕೌಂಟ್ ವೋಚರ್ ಅನ್ನು ಪಡೆಯುತ್ತವೆ. ಅದರ ಜೊತೆಗೆ ಡಿಜಿಟಲ್ ಮೆಚ್ಚುಗೆ ಪ್ರಮಾಣಪತ್ರವನ್ನು ಸಹ ನೀಡಲಾಗುವುದು. ಗೆಲ್ಲಲು ಪರಿಗಣಿಸಲಾಗುವ ಅಂಶಗಳೆಂದರೆ ನಮ್ಮ ಸಂಪಾದಕೀಯ ತಂಡದ ಸಂಪಾದಕೀಯ ಅಂಕಗಳು (ಎಡಿಟೋರಿಯಲ್ ಸ್ಕೋರ್ಗಳು) 
  • 9 ಅಥವಾ ಅದಕ್ಕೂ ಹೆಚ್ಚಿನ ಕಥೆಗಳು/ಕವಿತೆಗಳನ್ನು ಸಲ್ಲಿಸುವ ಸ್ಪರ್ಧಿಗಳು ಸ್ಟೋರಿಮಿರರ್ ಆಥರ್ಸ್ ಗ್ಯಾಲರಿಯಲ್ಲಿ ಕಾಣಿಸಿಕೊಳ್ಳುತ್ತಾರೆ ಮತ್ತು ₹200 ಮೌಲ್ಯದ ಸ್ಟೋರಿಮಿರರ್ ಡಿಸ್ಕೌಂಟ್ ವೋಚರ್ ಅನ್ನು ಪಡೆಯುತ್ತಾರೆ. 
  • ಎಲ್ಲಾ ಸ್ಪರ್ಧಿಗಳು ಭಾಗವಹಿಸುವಿಕೆಯ ಪ್ರಮಾಣಪತ್ರವನ್ನು ಸ್ವೀಕರಿಸುತ್ತಾರೆ. 


ಸಲ್ಲಿಕೆ ಅವಧಿ - 4ನೇ ಅಕ್ಟೋಬರ್ 2023 ರಿಂದ 25ನೇ ಅಕ್ಟೋಬರ್ 2023

ಫಲಿತಾಂಶದ ಘೋಷಣೆ: ನವೆಂಬರ್ 30, 2023


ಸಂಪರ್ಕ:

ಇಮೇಲ್: neha@storymirror.com

ದೂರವಾಣಿ ಸಂಖ್ಯೆ: +919372458287

ವಾಟ್ಸಾಪ್: +9184528 04735