Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

manjula g s

Children Stories Comedy Children

4  

manjula g s

Children Stories Comedy Children

ಅಪ್ಪನ ಕೂಸು

ಅಪ್ಪನ ಕೂಸು

1 min
371


ಎಂಥ ಮೋಜು ಎಂಥ ಸೊಗಸು 

ಅಪ್ಪನೊಡನೆ ಆಡಲು/

ಮನೆಗೆ ನಾನೇ ಪುಟ್ಟ ಕೂಸು 

ತುಂಟಾಟವನು ಮಾಡಲು//


ಹೊರಗೆ ಹೋಗುವೆ ನನ್ನ ಕಳಿಸು 

ಎಂದರೆ ಕೇಳದೆ ಇರಲು/ 

ಒಳಗೆ ಇರುವೆ ತಂಟೆ ಸಹಿಸು 

ಎಂದು ನಾನು ಕಾಡಲು//


ಅಪ್ಪನ ತಲೆಯೆ ನನಗೆ ಸಲೀಸು 

ಬ್ಯಾಂಡು ಕ್ಲಿಪ್ಪು ಹಾಕಲು/

ಓರೆ ನೋಟದ ಅಪ್ಪನ ಮುನಿಸು 

ನನಗೆ ಸಾಕು ನಗಲು//


ಅಪ್ಪ ನಿನ್ನ ಪುಸ್ತಕ ಸರಿಸು 

ನಾನಿರುವೆ ಸಮಯ ಕಳೆಯಲು/

ಅಮ್ಮ ನೋಡುವಳೆ ಮೊದಲು ತಿಳಿಸು 

ಅವಳೆಂದರೆ ನನಗೆ ದಿಗಿಲು//


ಅಪ್ಪ ನೀನು ನನ್ನ ಮುದ್ದಿಸು 

ನಿನ್ನ ಪ್ರೀತಿ ನಿತ್ಯ ಹೊನಲು/

ಸದಾ ತುಂಬಿರುವೆ ನನ್ನ ಮನಸು

ಸ್ವರ್ಗಕೂ ಮಿಗಿಲು ನಿನ್ನ ಒಡಲು//


Rate this content
Log in