Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

manjula g s

Abstract Inspirational Others

4  

manjula g s

Abstract Inspirational Others

ದೇವಿ ಮಹಾತ್ಮೆ

ದೇವಿ ಮಹಾತ್ಮೆ

1 min
305



ನಮಿಸೋಣ ಬನ್ನಿ ದೇವಿಯ ಚರಣಕೆ 

ನವರಾತ್ರಿ ದಿನಗಳ ಮುದದ ಅನುಗ್ರಹಕೆ! 


ಪಾಡ್ಯದ ದಿನದಿ ನಾಂದಿ ಹಾಡುವ 

ದಕ್ಷ ಯಜ್ಞ ಸೇರಿದ ಶೈಲ ಪುತ್ರಿಗೆ/


ಬಿದಿಗೆ ದಿನದಿ ಗೈಯ್ಯುತ ತಪವ 

ಕನ್ಯೆಯಾಗಿ ಕಂಗೊಳಿಪ ಬ್ರಹ್ಮಚಾರಿಣಿಗೆ/


ತದಿಗೆ ದಿನದಿ ಶೌರ್ಯ ಮೆರೆವ 

ಶೃಂಗಾರ ಪ್ರತೀಕ ಚಂದ್ರಘಂಟಾ ದೇವಿಗೆ/


ಚೌತಿಯ ದಿನದಿ ಸೌಂದರ್ಯ ತೋರುವ 

ಕ್ಷುದ್ರ ಶಕ್ತಿ ನಿವಾರಕಿ ಕೂಷ್ಮಾಂಡ ದೇವಿಗೆ/


ಪಂಚಮಿ ದಿನದಿ ಮಾತೃ ರೂಪವ 

ಹೊತ್ತಂತಹ ತ್ರಿನೇತ್ರಿ ಸ್ಕಂದ ಮಾತೆಗೆ/


ಷಷ್ಟಿಯ ದಿನದಿ ಜಗವನು ಪೊರೆವ 

ಅಷ್ಟ ಆಯುಧ ಹಿಡಿದ ಕಾತ್ಯಾಯಿನಿಗೆ/


ಸಪ್ತಮಿ ದಿನದಿ ಕಾಲರೂಪ ತಳೆವ 

ಶುಭಂಕರಿ ಶುಭಫಲದಾಯಿ ಕಾಳರಾತ್ರಿಗೆ/


ಅಷ್ಟಮಿ ದಿನದಿ ಇಷ್ಟಾರ್ಥ ಸಿದ್ಧಿಸುವ 

ಅನ್ನಪೂರ್ಣೇಶ್ವರಿ ಪ್ರತೀಕ ಮಹಾಗೌರಿಗೆ/


ನವಮಿ ದಿನದಿ ಸಿಂಹಿಣಿಯಾಗುವ 

ಸಿದ್ದಿಯ ಕೊಡುವ ತಾಯಿ ಸಿದ್ದಿಧಾತ್ರಿಗೆ/ 


Rate this content
Log in

Similar kannada poem from Abstract