Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

manjula g s

Abstract Classics Inspirational

4  

manjula g s

Abstract Classics Inspirational

ಸಂಕ್ರಾಂತಿ ಸುಗ್ಗಿ

ಸಂಕ್ರಾಂತಿ ಸುಗ್ಗಿ

1 min
3



ಪ್ರಕಾರ :- ಉತ್ಸಾಹ ಲಯ 


ಹಿಗ್ಗು ತರಲು ಬುವಿಯ ಮೇಲೆ 

ಸುಗ್ಗಿ ಕಾಲ ಬಂದಿದೆ/

ಮೊಗ್ಗು ತಾನು ಅರಳಿ ನಿಂತು 

ಸಗ್ಗವಿಲ್ಲೆ ಎಂದಿದೆ//


ಮಕರ ರಾಶಿ ಸೇರಿ ಸೂರ್ಯ 

ಸಕಲ ಜಗವ ಪೊರೆಯುವ/

ನಿಕಟ ಶಾಖ ಧರೆಗೆ ಬಿತ್ತಿ 

ಮುಕುರದಂತೆ ಹೊಳೆಯುವ//


ಸೈನ್ಯದಂತೆ ದುಡಿದ ಜನರು 

ಮಾನ್ಯತೆಯನು ಪಡೆವರು/

ಧಾನ್ಯಗಳನು ರಾಶಿ ಮಾಡಿ

ಧನ್ಯತೆಯನು ಮೆರೆವರು//


ಸೊಗಡು ತಂದ ಅವರೆ ಜೊತೆಗೆ 

ದುಗುಡ ದೂರವಾಗಿದೆ/

ಹಗುರವಾದ ಭಾವದಿಂದ 

ನಗುವು ಜಗದಿ ಹರಡಿದೆ//


ಗಾಳಿ ಪಟವು ಬಾನಿನಲ್ಲಿ

ಗೂಳಿಯಂತೆ ನುಗ್ಗಿದೆ/

ಬಾಳಿಗೊಂದು ನಲಿವು ಬಂದು

ಕಾಳರಾತ್ರಿ ಕಳೆದಿದೆ//


ಹಳ್ಳಿ ಜನರ ಕಣವ ಕಂಡು

ಬಳ್ಳಗಳವು ಹಿಗ್ಗಲಿ/

ಎಳ್ಳು ಬೆಲ್ಲ ಕಬ್ಬು ಗೆಣಸು 

ಒಳ್ಳೆಯದನು ಮಾಡಲಿ//


Rate this content
Log in

Similar kannada poem from Abstract