Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

Arjun Maurya

Drama Action Others

4  

Arjun Maurya

Drama Action Others

ಬೆಳಕಿರಲಿಲ್ಲ

ಬೆಳಕಿರಲಿಲ್ಲ

1 min
242


ಬೆಳಕಿರಲಿಲ್ಲ..

ಗೊತ್ತಾಗದಂತಿರಲು ಅನ್ಯರಿಗೆ

ಬೆಳಕು ಬೇಕಿರಲಿಲ್ಲ

ಅಡ್ಡ ದಾರಿಗನಿಗೆ |

ಮತ್ತೆ ಆತನನ್ನು

ಅರಿಯಲು ಇವರಿಗೂ..

ಬೇಕಿರಲಿಲ್ಲ

ಬೆಳಕು |

ಅಂಧಕಾರದೊಳಗಿನ

ಕಪ್ಪು ತೀರ್ಮಾನಗಳ

ಗುಡ್ಡೆಗಳ‌ನಡುವೆ

ಸಿಕ್ಕಿ ತೋಯ್ದಾಡುವ

ಅಲ್ಲಲ್ಲಿನ ಮಿಂಚು

ಹುಳಗಳು..|

ಸೂರ್ಯನನ್ನೂ 

ಮುಚ್ಚಿ ಹಾಕಬಹುದೇನೋ

ಎನ್ನುವಷ್ಟು

ಕಸಕಡ್ಡಿಗಳ

ಗುಡ್ಡೆಗಳು

ಕತ್ತಲಲ್ಲೇ ಅಗಣಿತ..|

ಬೇಕಿರಲಿಲ್ಲವಲ್ಲಿ

ಬೆಳಕಿನ ರಂಗವಲ್ಲಿ..

ಕತ್ತಲಲ್ಲೇ

ಮೂಡಿದ ಪ್ರಶ್ನಿಸಲಾರದ

ಸಿದ್ಧಾಂತಗಳ

ರಾಶಿರಾಶಿಗಳ ನಡುವೆ

ಕತ್ತಲಲ್ಲೇ ಹುಡುಕಬೇಕಿತ್ತು

ಮೂಡದ ಬೆಳಕು..||



Rate this content
Log in

Similar kannada poem from Drama