Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

Arjun Maurya

Action Classics Inspirational

3  

Arjun Maurya

Action Classics Inspirational

ಸುಮ್ಮನಿದ್ದುಬಿಡು

ಸುಮ್ಮನಿದ್ದುಬಿಡು

1 min
185


ಹರಿದ ಅಂಗಿ ಬರಿದು ಜೇಬು

ನಿನ್ನ ಮನವ ಕದಲಬಹುದು

ಸುಮ್ಮನಿದ್ದುಬಿಡು |

ಜೊತೆಯ ನೆಂಟ ಸ್ವಂತ ಭಂಟ

ದೂರದಿಂದಲೇ ತೆರಳಬಹುದು

ಸುಮ್ಮನಿದ್ದುಬಿಡು |

ಇನಯ-ತನಯ ಪ್ರಾಣ ಗೆಳೆಯ

ನಟನೆಯನ್ನೇ ಮಾಡಬಹುದು

ಸುಮ್ಮನಿದ್ದುಬಿಡು |

ನೆರೆಯ-ಕೆರೆಯ ಜೀವಜಂತು

ವಾರೆಕಣ್ಣಲಿ ನಗಲೂಬಹುದು

ಸುಮ್ಮನಿದ್ದುಬಿಡು |

ಸ್ವಂತ ಮಡದಿ ಮನದ ಕದದಿ 

ಅಡ್ಡಗೋಡೆ ಕಟ್ಟಬಹುದು

ಸುಮ್ಮನಿದ್ದುಬಿಡು |

ಒಂಟಿಯಾದ ನಿನ್ನ ಸ್ಥಿತಿಗೆ 

ದೈವಶಿಕ್ಷೆ ಅನ್ನಬಹುದು

ಸುಮ್ಮನಿದ್ದುಬಿಡು |


Rate this content
Log in

Similar kannada poem from Action