ಬರೆದೆ ನಾನು
ಬರೆದೆ ನಾನು
ಧರ್ಮದಲಿ ಅರ್ಥದಲಿ
ಕಾಮದಲಿ ನಿನ್ನ ನಾ
ಮೀರಿ ಹೋಗಲಾರೆ
ಓ ನನ್ನ ಬಾಳಸಂಗಾತಿ
ಸುಖದಲಿ ದು:ಖದಲಿ
ಜೊತೆ ಜೊತೆಯಲಿ
ಹೆಜ್ಜೆ ಹಾಕುತ್ತಾ ನೀ
ಪ್ರಮಾಣ ಮಾಡುತಾ
ನನ್ನ ಜೊತೆಯಾಗಿ
ಸಪ್ತಪದಿ ತುಳಿದ ನೀ
ನನ್ನ ಬಾಳ ಸಂಗಾತಿ
ಬರೆದೆ ನಾನು ನಿನ್ನ ಹೆಸರ
ನನ್ನ ಆತ್ಮದ ಪುಟದಲಿ
ಜನುಮ ಜನುಮಕೂ
ಜೊತೆಯಾಗಿ ಸಾಗಿ ಬಾ
ನನ್ನ ಬಾಳಿನ ಒಡತಿ
ನೀ ನನ್ನ ಆತ್ಮ ಸಂಗಾತಿ
ವಿಜಯ ಭಾರತೀ.ಎ.ಎಸ್.