Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

JAISHREE HALLUR

Tragedy Classics Inspirational

4  

JAISHREE HALLUR

Tragedy Classics Inspirational

ದಣಿದ ಜೀವ!

ದಣಿದ ಜೀವ!

1 min
262


ಬಟ್ಟಲಲ್ಲಿ ಅನ್ನವಿಟ್ಟು 

ಕಂದನನ್ನು ಎತ್ತಿಕೊಂಡು

ಬೀದಿಬೀದಿ ಅಲೆದಿದ್ದಳವಳು

ದಾರಿಹೋಕರೆದುರು ಬೇಸರಿಸದೇ.


ಕೈಯ ತುತ್ತ ಕಾಯ್ವ ನಾಯಿ ಬೆಕ್ಕು,

ಎಸೆವೆನೆಂಬ ಆಸೆ ಹೊತ್ತ ಕಾಗೆ,

ಹಸಿವೆಯೆಂದು ನೋಟದಿ ಅಳಿಲು,

ನಿನ್ನ ಬಟ್ಟಲನ್ನೇ ನೋಡುತಿದ್ದವು ಆಗ.


ಹೊತ್ತು ಏರಿ ಗಳಿಗೆ ಮೂರಾಗಿದ್ದರೂ

ನೆತ್ತಿಬಿಸಿಲು ಇಳಿಯುತಿದ್ದರೂ

ಹಸಿವೆಯಿಲ್ಲವೆಂದು ಬಾಯ್ಮುಚ್ಚಿ

ಕುಳಿತೆಯೇಕೆ ಕಂದಾ..ಎಂದಳುವಳು.


ನೀನುಣ್ಣದ ಅನ್ನ, ಎಂದಾದರೂ 

ನನ್ನ ಗಂಟಲೊಳಿಳಿವುದೇ ಹೇಳು.

ಹುಸಿಮುನಿಸೇನಿದ್ದರೂ ತೊರೆದು

ಹಸಿವ ತಣಿಸಿಕೋ ಎಂದಾಡುತ್ತಿದ್ದಳು..


ಆಟವಾಡಲು ಅಕ್ಕತಂಗಿಯರಿಲ್ಲ

ಎಂದೊಡೆ ತರವೇ, ಅಕ್ಕಪಕ್ಕದವರೆಲ್ಲ

ಬಂದುಗಳೇ..ನಕ್ಕು ನಗಿಸುವರೆಲ್ಲ ನಿನ್ನ ಉಂಡಾಡಬಹುದೆಂದು ರಮಿಸಿದ್ದಳು.


ಬಣ್ಣ ಹಲವು ನೀರಿನಲ್ಲಿ ಮಿಳಿತವಾಗಿ

ಬದುಕ ಕನಸು ಗೋಪುರದಂತೆ

ದಾರಿ ಸುಗಮವಲ್ಲ ಕಲ್ಲುಮುಳ್ಳು

ನಡೆಸಲು ಬೇಕು ಅಮ್ಮನಾ ಬೆರಳು.


ತನ್ನ ಸುಖವ ತ್ಯಜಿಸಿ ಅಪ್ಪುವಳವಳು

ತನ್ನ ಹಸಿವ ಮರೆತು ಬಡಿಸುವಳವಳು

ತನ್ನ ನೋವ ಮರೆಸಿ ನಗಿಸುವಳವಳು

ಇನ್ನೇನು ಬೇಕು ನಿನಗೆ ಹೇಳು..


ಒಲೆಯ ಮೇಲಿನ ರೊಟ್ಟಿಯೊಂದ

ಬೆಣ್ಣೆ ಸವರಿ ತಿನಿಸಿದವಳ ಅಕ್ಕರೆಯ

ಮಡದಿಯೊಡನೆ ಬೆರೆತು ಮರೆತೆಯೇಕೆ

ಸಣ್ಣತನವ ತೋರಿ ಅಲ್ಲಗಳೆಯಬೇಡ.


ಮತ್ಸರವಿಲ್ಲ ತಾಯಹೃದಯಕೆ ..

ಕಂದ ತಾ ನಿತ್ಯ ಸುಖಿಸಲೆಂಬ ಹಂಬಲ

ಮುತ್ಸದ್ದಿತನದಿ ಬೈದರೆ ಸಹಿಸಿಕೊಳ್ಳು..

ಮುಪ್ಪಿನಲಿ ನೋವುಂಬ ಶಕ್ತಿ ಅವಳಿಗಿಲ್ಲ ಕಂದಾ...

 

ದಣಿದ ಜೀವ!


Rate this content
Log in

Similar kannada poem from Tragedy