Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

Ramesh Megaravalli

Abstract Tragedy Others

5  

Ramesh Megaravalli

Abstract Tragedy Others

ಸಂತ್ರಸ್ತೆಯೊಬ್ಬಳು ಹೇಳುತ್ತಾಳೆ

ಸಂತ್ರಸ್ತೆಯೊಬ್ಬಳು ಹೇಳುತ್ತಾಳೆ

1 min
46


ನನ್ನಪ್ಪ ಮದಿರೆಯ ವಾಸನೆ ಹೊಡೆವ ಬಾಯಿ ತೆರೆದಾಗಲೆಲ್ಲ

ನನ್ನ ಬಾಲ್ಯದ ದಿನಗಳಲ್ಲಿ ವಿಷ ತುಂಬುತ್ತಿದ್ದ

ಆಗೆಲ್ಲ ನಾನೆಷ್ಟು ಹೊಟ್ಟೆ ಕಿಚ್ಚು ಪಡುತ್ತಿದ್ದೆ

ಪಕ್ಕದ ಮನೆಯ ಹುಡುಗಿಯರ ಅಪ್ಪ ಮೂಕನಾಗಿದ್ದದ್ದಕ್ಕೆ.


ನನ್ನ ಗಂಡ ನನ್ನನ್ನು ಹಿಂಡಿ ಹಿಸುಕಿ ಮೃಗೀಯವಾಗಿ ಹಿಂಸಿಸಿ

ನನ್ನ ರಾತ್ರಿಗಳನ್ನೆಲ್ಲ ಕರಾಳಗೊಳಿಸುತ್ತಿದ್ದ

ಆಗೆಲ್ಲ ನಾನೆಷ್ಟು ಹೊಟ್ಟೆ ಕಿಚ್ಚು ಪಡುತ್ತಿದ್ದೆ

ಎದುರುಮನೆಯವಗಂಡ ಶಂಡನಾಗಿದ್ದದ್ದಕ್ಕೆ.


ನನ್ನ ಮಕ್ಕಳು , ಸೊಸೆಯಂದಿರು ಕಟು ಮ್ತಿನ 

ಚಾಕುವಿನಿಂದ ನನ್ನನ್ನು ಚುಚ್ಚಿ ಚುಚ್ಚಿ ನೋಯುಸುತ್ತಿರುವಾಗ

ನಾನು ಹೊಟ್ಟೆಕಿಚ್ಚು ಪಡುತ್ತೇನೆ

ಕೊನೆ ಮನೆಯ ಹೆಂಗಸು ಬಂಜೆಯಾಗಿರುವುದಕ್ಕೆ!

        


Rate this content
Log in

Similar kannada poem from Abstract