ಮಾಯಾ ಮನಸು
ಮಾಯಾ ಮನಸು
ಕುಸುಮ ಕೋಮಲೆ ಮನಸ್ಸು ನೋಡಿದ್ದಲ್ಲ ಸುಂದರ ಅಖಂಡ
ಮನ ತುಂಬ
ಬಣ್ಣ ಬಣ್ಣದ ಹೂವಿನ ಚಿತ್ತಾರ
ನಿಷ್ಕಳಂಕ ಮನಸ್ಸು
ಬೇಧ ಭಾವ ಎಣಿಸದು
ವೈರತ್ವ ಅರಿಯದು
ವೈಮನಸು ತಿಳಿಯದು
ತನ್ನ ಜಗತ್ತಿನಲ್ಲಿ ತಾನೀರೇ ಬಿಡುವುದೇ ಜಗತ್ತು
ಕ್ರೋಧ ಮತ್ಸರ ಮೆಲ್ಲಮೆಲ್ಲನೆ ಅಡಿಯಿಡೆ
ಜವಾಬ್ದಾರಿ ತಿಳಿಯರಿಯೆ ಅಳತೆಗೋಲು ಜೀವನ
ಸಂಕಷ್ಟ ತಲೆ ತೂರಿ ಮನಸಿಗೆ ಆಗಿದೆ ಎಲ್ಲವೂ ಅಯೋಮಯ
ಸಿಡುಕೋ ಅಸಮಾಧಾನ ನೃತ್ಯವಾಡುತ್ತಿರಲು
ಹಿತವಚನ ಶುಭನುಡಿ ಅಸಹನಿಯವಾಗಿರಲು
ನೈಜ ಜೀವನ
ವಾಸ್ತವ ಮನಕುಲ ಸತ್ಯ
ದೃಢ ಸಂಕಲ್ಪ ತೊಟ್ಟಿದೆ
ಚಂಚಲ ಚಿತ್ತ ಮನಸ್ಸು
ಹೂವಿಂದ ಹೂವಿಗೆ ಹಾರುವ ಚಿಟ್ಟೆಯಂತಾಗಿದೆ
ಯಾವುದರಲ್ಲೂ ಸ್ಥಿರವಿಲ್ಲ
ಅತಂತ್ರ ಜೀವನ ಪಯಣ ಕಾಮಕ್ರೋಶ ಒಮ್ಮೆ ಮೆಟ್ಟಿದರೆ ಪದೇ ಪದೇ ಅದರ ಸುತ್ತಲೆ ತಿರುಗುತ್ತಾ ತಿರುಗುವ ಪೀಡಕನಾಗಿರೆ ವ್ಯಕ್ತಿಯ ವ್ಯಕ್ತಿತ್ವ
ಹುಟ್ಟಿದ ಮನೆಯಿಂದ ಬೆಳೆದ ಪರಿಸರದಿಂದ ನಿರೂಪಗೊಂಡಿದೆ
ಶಾಂತ ಸರೋವರದಂತೆ ಮನಸ್ಸು
ಹರಿಯುವ ನದಿಯಂತೆ
ಮನುಷ್ಯ ಮನುಷ್ಯನಾಗಿ ಉಳಿಯುತ್ತಾನೆ
ವೃತ ಕಲ್ಲು ಎಸೆದು ಅದನ್ನು ಕಲಕಿದರೆ ಕದಡುವುದು ಮನ
ಶಾಂತಿ ಮನ ಶಾಂತಿಗೆ ದಾರಿ
ಇಲ್ಲದೆ ಹೋದರೆ ಇದ್ದು ಇಲ್ಲದಂತೆ
ಇತರರಿಗೆ ಹೊರೆಯಾಗುವ ಇಲ್ಲವೇ ಆಡಿಕೊಳ್ಳುವವರ ವಸ್ತುವಾಗಿ
ಭೂಮಿಗೆ ಭಾರವಾಗುವುದು ಬದುಕು ಸಹ ಹೃದಯ ಸಹನೆ ಸಹವರ್ತನೆ
ಸದಾ ಇರಲಿ ಪ್ರತಿಯೊಬ್ಬರಲ್ಲೂ ಹಗುರವಾಗಲಿ ಮರೆಯದಿರಲಿ ಚೇತನಗಳು
ಮೆರೆಯಲಿ ಸೂಪ್ತ ಚೇತನಗಳು