ಮಹಾ ಪಯಣ
ಮಹಾ ಪಯಣ
ಮಹಾ ಪಯಣವೇ ಈ ನಮ್ಮ ಜೀವನ,
ಏಳುಬೀಳುಗಳ ಅದ್ಭುತ ರೋಮಾಂಚನ,
ಹರುಷ ಸಂಭ್ರಮಗಳ ಅಪಾರ ಸಿಂಚನ,
ದುಗುಡ ದುಮ್ಮಾನಗಳ ರೌದ್ರ ನರ್ತನ!!
ನಿನ್ನಾಯ್ಕೆಯು ಈ ಜೀವನದ ಪಯಣ,
ಬೇಡೆನಿಸಿದರೆ ಅದುವೇ ಅಂತಿಮ ನಿಲ್ದಾಣ,
ತಾಳ್ಮೆಯಲಿರುವುದು ಅವಕಾಶಗಳ ತಂಗುದಾಣ,
ಹೃನ್ಮನದಲ್ಲಪ್ಪಿಕೋ ಈ ಅನನ್ಯ ಜೀವನದಪಯಣ!!