Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

Ramamurthy Somanahalli

Tragedy

4  

Ramamurthy Somanahalli

Tragedy

ನಿಜ ಬಣ್ಣ ???

ನಿಜ ಬಣ್ಣ ???

1 min
42



ಹೆತ್ತು ಹೊತ್ತು ಸಲಹಿದ್ದ ಅಮ್ಮ

ಕಾದಿದ್ದಳು ಮಗ ಬರುವನೆಂದು

ಚಿತೆಗೇರಿಸಿ ಮುಕ್ತಿ ಕೊಡುವನೆಂದು

ಹಂಬಲಿಸಿದ್ದಳು ಕೋವಿಡ್ ಆಸ್ಪತ್ರೆಯಲಿ ||


ಏದುಸಿರು, ಕ್ಷೀಣ ಧ್ವನಿ

ಬಳಲಿ ಬೆಂಡಾದ ದೇಹ

ಮಬ್ಬು ದೃಷ್ಟಿ, ಆಸೆಹೊತ್ತ ಕಂಗಳು

ಕಾದಿತ್ತು ಮಗ ಬರುವನೆಂದು

ತುಳಸಿ ನೀರು ಬಿಡುವನೆಂದು ||


ದಿನ ಉರುಳಿತ್ತು, ಉಸಿರು ನಿಂತಿತ್ತು

ಇಹಲೋಕ ಸಂಬಂಧ ಕಳೆದು

ಅಮ್ಮನ ಶವ ಬಿದ್ದಿತ್ತು

ಮಗ ಬರುವನೆಂದು

ಅಂತ್ಯ ಸಂಸ್ಕಾರದ ನಿರೀಕ್ಷೆಯಲಿ! ...||


ಸೃಷ್ಟಿಯನು ಗೆದ್ದೆನೆಂಬ ಅಹಂನಲಿ

ಬೀಗುತ್ತಿದ್ದ ಮಾನವ !

ಕೊರೊನಾ ಭೀತಿಯಲಿ...

ಸಂಬಂಧಗಳ ಅರ್ಥವನರಿಯದೆ

ನಿಜ ಬಣ್ಣ ತೋರಿ ಬೆತ್ತಲಾಗಿದ್ದ ! ಬೆತ್ತಲಾಗಿದ್ದ .... ||




Rate this content
Log in

Similar kannada poem from Tragedy