Arjun Maurya

Tragedy Fantasy Inspirational

4  

Arjun Maurya

Tragedy Fantasy Inspirational

ಅದೇ ನೋಟ

ಅದೇ ನೋಟ

4 mins
227


ಪರಿಚಯದವರಂತೆ ಬಸ್ಸು ಸುಮಾಳ ಮುಂದೆ ನಿಂತಿತು.

ಕೈ ತೋರಬೇಕಿರಲಿಲ್ಲ. ಏರಿದ ಕೂಡಲೇ ಆ ಬಸ್ ರಸ್ತೆಗುಂಡಿಗಳಲ್ಲಿ ಬಳುಕಾಡುತ್ತಾ ಚಲಿಸತೊಡಗಿತು. ಅದು ಅವಳಿಗೆ ಅಭ್ಯಾಸವಾಗಿತ್ತು. ಸುಮಾ ಮಾಮೂಲಿನಂತೆ ಡ್ರೆöÊವರ್ ಬದಿಯ ಖಾಲಿಯಿದ್ದ ಸೀಟಿನಲ್ಲಿ ಕುಕ್ಕರಿಸಿದಳು. ನೋಡಬೇಕೆ ಬೇಡವೇ?..ಮನಸ್ಸಿಲ್ಲದಿದ್ದರೂ ಮೆಲ್ಲನೆ ಆ ಕಡೆ ತನ್ನ ಕಣ್ಣುಗಳನ್ನು ಹೊರಳಿಸಿ ನೋಡಿದಳು..

ಹೌದು!..ಅದೇನೋಟ! ದಿನಂಪ್ರತಿ ಅದೇ ನೋಟ!! ಯಾರೀತ? ಹುಡುಗರ‍್ನ ಕಾಣದ್ಹಂಗೆ ನೋಡ್ತಾ ರ‍್ತಾನೆ.. ನನ್ನನ್ನೇ ನೋಡ್ಬೇಕಾಂತ ಏನಿದೆ? ಛೇ! ಈ ಗಂಡಸ್ರಿಗೆ ಸ್ವಲ್ಪವಾದ್ರೂ ಮಾನಮರ್ಯಾದೆನೇ ಇಲ್ಲ. ಒಳ್ಳೇ ಮಾರ್ಯಾದಸ್ತನಂಗೆ ಕಾಣ್ತಾನೆ... ದಿನಾ ಇದೇ ಬಸ್ನಲ್ಲೇ ರ‍್ತಿರ‍್ತಾನೆ..!? ಅಸಮಾಧಾನದಿಂದ ಮುಖವನ್ನು ಆಚೆಗೆ ತಿರುಗಿಸಿದಳು. ಬಸ್ಸಿಗೆ ಇದು ಅಗತ್ಯವಿಲ್ಲವಲ್ಲ...ಚಲಿಸುತ್ತಿತ್ತು. ಇವಳ ಅಸಮಧಾನವನ್ನು ದಿನಾ ಗಮಿನಿಸುತ್ತಿದ್ದ ಕಂಡಕ್ಟರ್ ಅವಳಿಗೆ ಸ್ಪಂದಿಸುವAತೆ ನಗುತ್ತಿದ್ದನೇ ಹೊರತು ಅದೇ ನೋಟದವನನ್ನು ಮಾತ್ರ ಜಡಾಯಿಸದೆ ಸುಮ್ಮನಿದ್ದನು. ಸುಮಾಳತ್ತಿರ ಬಂದು ನಗೆ ಬೀರಿದನು. ಇವಳಿಗೆ ಇವತ್ತು ಸುಮ್ಮನಿರಲಾಗಲಿಲ್ಲ..ಕೇಳಿಯೇ ಬಿಟ್ಟಳು..ರ‍್ರೀ ಕಂಡಕ್ಟರ್ ಯಾರವುö್ನ!?

...

ಮಾರ್ಯಾದೆ ಇಲ್ದೋನ್ ತರ ನೋಡ್ತಾ ಇದ್ದಾನೆ..ಅದೂ ದಿನಾ ನೋಡ್ತಾ ರ‍್ತಾನೆ..ಬುದ್ಧಿಗಿದ್ದಿ ಇಲ್ವ..

ಕಂಡಕ್ಟರ್‌ನಾದರೋ ಅಸಹಾಯಕನಂತಾಗಿದ್ದ. ದಿನಾ ಇದೇ ಗೋಳು ಅಂದುಕೊಳ್ಳುತ್ತಿದ್ದAತೆಯೇ ಬಸ್ಸು ಮಲ್ಲಾಪುರ ತಲುಪಿತು. ಬಸ್ಸನ್ನಿಳಿದಳು ಸುಮಾ. ಅವನೂ ಇಳಿದ.. ಮನಸ್ಸಿಲ್ಲದ್ದಿದ್ದರೂ ಒಮ್ಮೆ ಕೆಕ್ಕೆರಿಸಿಕೊಂಡು ಅವನ ಕಡೆ ನೋಡಿ ತನ್ನ ಶಾಲೆಯ ಹಾದಿ ಹಿಡಿದಳು.

**

ಸುಮಾ ಹೆಸರಿಗೆ ತಕ್ಕಂತೆ ಸೌಂದರ್ಯವತಿಯಾಗಿದ್ದಳು. ತನ್ನ ರೂಪುಲಾವಣ್ಯದಿಂದ ಎಂಥವರನ್ನೂ ಆಕರ್ಷಿಸುವಂಥ ಮೈಕಟ್ಟು, ಕಾಂತಿಯುತ ಮುಖ, ಹೊಳೆವ ಮುಗ್ಧತೆಯ ಕಣ್ಣುಗಳು, ಅದಕ್ಕೆ ತಕ್ಕಂತೆ ನಡಿಗೆ ಇವೆಲ್ಲದಕ್ಕೂ ಕಿರೀಟವೆಂಬAತೆ ಅವಳ ವಿನಯ ನಡೆ-ನುಡಿ ಎಷ್ಟೋ ಹುಡುಗರು ಇವಳಿಗಾಗಿ ಅವಳ ಪ್ರೀತಿಗಾಗಿ ಹಂಬಲಿಸಿ ಕೊನೆಗೆ ಅವಳಿಂದ ತಿರಸ್ಕöÈತವಾಗಿ ಅವಮಾನಗೊಂಡಿದ್ದರು. ಅದಕ್ಕೊಂದು ಕಾರಣವೂ ಇತ್ತು. ಸುಮಾ ತನ್ನ ಜೀವನವನ್ನು ಒಬ್ಬ ಸುದ್ಗುಣ ವಿನಯಶಾಲಿಗಾಗಿ ಮೀಸಲಿಡಲು ಬಯಸಿದ್ದಳು. ತಾಯಿಯಿಲ್ಲದ ತಬ್ಬಲಿ ಸುಮಾಳನ್ನು ಅವಳ ತಂದೆಯೇ ಚಿನ್ನದಂತೆ ಸಾಕುತ್ತಿದ್ದರು. ಅವಳ ಮನಸ್ಸಿನಲ್ಲಿ ಅಳಿಸಲಾರದ ಒಂದು ನೋವಿನ ಸಂಗತಿಯೂ ಬೇರುಬಿಟ್ಟಿತ್ತು. ಅದೇನೆಂದರೆ ಅವಳ ಒಬ್ಬನೇ ಒಬ್ಬ ‘ಅಣ್ಣನನ್ನು ಕಳೆದುಕೊಂಡದ್ದು. ಒಂದು ಅಪಘಾತದಲ್ಲಿ ಅವಳ ಪ್ರೀತಿಯ ಅಣ್ಣ ದುರ್ಮರಣಗೊಂಡಿದ್ದ. ಜೀವನದಲ್ಲಿ ಅವಳ ಕೈ ಹಿಡಿದದ್ದು ಶಿಕ್ಷಕಿ ವೃತ್ತಿ. ಮಲ್ಲಾಪುರದ ಪ್ರೌಢಶಾಲೆಯಲ್ಲಿ ಶಿಕ್ಷಕಿವೃತ್ತಿಯನ್ನು ಕರ್ತವ್ಯ ನಿಷ್ಠೆಯಿಂದ ನಿರ್ವಹಿಸುತ್ತಿದ್ದಳು. ತನ್ನೂರಿನಿಂದ ಮಲ್ಲಾಪುರಕ್ಕೆ ದಿನಾ ಇದೇ ಬಸ್ಸಿನಲ್ಲಿ ಹೋಗುತ್ತಿದ್ದಳು.


ಇತ್ತೀಚೆಗೆ ದಿನಾ ಬೆಳಿಗ್ಗೆ ಬಸ್‌ನಲ್ಲಾಗುತ್ತಿದ್ದ ಈ ಅನುಭವದಿಂದಾಗಿ ಆಕೆಗೆ ಮಾನಸಿಕವಾಗಿ ಸಂಘರ್ಷವುAಟಾಗುವAತೆ ಮಾಡಿತ್ತು. ಸುಸಂಸ್ಕೃತ ಹೆಣ್ಣಾಗಿದ್ದ ಆಕೆಗೆ ಇಂತಹ ವರ್ತನೆ ಹಿಡಿಸುತ್ತಿರಲಿಲ್ಲ. ಆದರೆ ಈಗ!? ಇದ್ದಕ್ಕಿದ್ದಂತೆ ದಿನಂಪ್ರತಿ ಸುಮಾಳನ್ನೇ ತದೇಕಚಿತ್ತದಿಂದ ನೋಡುವ ಆ ಕಣ್ಣುಗಳು!..

ವ್ಯಕ್ತಿಯೇನೋ ಚೆನ್ನಾಗೇ ಇದ್ದಾನೆ. ಅವನೂ ಮಲ್ಲಾಪುರದಲ್ಲಿ ಇಳಿಯುತ್ತಾನೆ. ಮನಸ್ಸಿಲ್ಲದಿದ್ದರೂ ಇವಳು ಒಮ್ಮೆ ನೋಡಿದರೆ, ಅವನು ಇವಳನ್ನು ದಿಟ್ಟಿಸುತ್ತಿರುತ್ತಾನೆ. ಸಹಜವಾಗಿ ಹುಡುಗರ ಬಗ್ಗೆ ಪೂರ್ವಾಗ್ರಹಪೀಡಿತಳಾಗಿದ್ದ ಆಕೆಗೆ ಆ ನೋಟದ ಹಿಂದಿನ ಭಾವನೆ ತಿಳಿಯಲು ದಿನಗಳೇ ಬೇಕಾದುವು. ಆದರೆ ಸದ್ ವ್ಯಕ್ತಿಯಂತೆ ತೋರುವ ಆತ ದಿನಾ ಇವಳನ್ನು ಕಣ್ಣೆವೆಯಿಕ್ಕದೆ ನೋಡುವುದು, ಅವಳಿಗೆ ತುಂಬಾ ಬೇಸರ ತಂದಿತ್ತು. ಅವನ ಬಗ್ಗೆ ಒಂದು ತರದ ತಿರಸ್ಕöÈತ ನೋಟ ಹರಿಸುತ್ತಿದ್ದಳು.


ಅದೊಂದು ದಿನ ಸುಮಾ ತನ್ನ ಗೆಳತಿಯನ್ನು, ಅವನ ಬಗ್ಗೆ ಟೀಕೆ ಮಾಡಿ ವಿಚಾರಿಸಿದಾಗ- “ಸುಮಾ..ಛೆ.ಛೆ!! ಹಾಗೆಲ್ಲಾ ಹೇಳ್ಬರ‍್ದು ಕಣೇ. ಅವುö್ರ ಪಕ್ಕದ್ ಕಾಲೇಜಿನ ಲೆಕ್ಚರರ್.. ಹೆಸರು ಚಂದ್ರಕಾAತ ಅಂತ. ಒಳ್ಳೇ ಬ್ರಿಲಿಯಂಟ್..

ತುAಬಾ ಒಳ್ಳೆಯವರು..ಏನೋ ನಿನ್ನ ಪರಿಚಯಕ್ಕಾಗಿ ಇಷ್ಟಪಟ್ಟಿರಬೇಕು.. ಆದರೆ ನೀನು ಅವರನ್ನೇ ತಿರಸ್ಕöÈತ ನೋಟದಿಂದ ನೋಡೋದು ತಪುö್ಪಕಣೇ.. ಎಷ್ಟಾದ್ರೂ ನಾವು ಹೆಣ್ಣು.. ಲಜ್ಜೆ ವಿನಯದಿಂದಿರಬೇಕು.. ಒಂದ್ ವೇಳೆ ಅವುö್ರ ಕೆಟ್ಟವರಾಗಿದ್ರೆ.. ನಿನ್ನ ಪರಿಸ್ಥಿತಿ ನೋಡಿ ಜನ ಅವರನ್ನ ಬಿಡ್ತಿದ್ರೆ!? .. ಅವುö್ರ ಒಬ್ಬ ಸದ್ಗುಣಶಾಲಿ ಮನುಷ್ಯ ಎಂದು ಇಡೀ ಸಮಾಜಕ್ಕೇ ಗೊತ್ತಿದೆ.. ಅಂಥದ್ದರಲ್ಲಿ ನಿನಗೇ ಅವುö್ರ ಯಾರಂತ ಗೊತ್ತಿಲ್ಲದಿರುವುದು.. ಬೇಸರದ ಸಂಗತಿ..” ಎಂದು ಸುಮಾಳ ಮನಸ್ಸಿಗೆ ಮೀಟುವಂತೆ ನುಡಿದಳು.

ಹಂಗಾದ್ರೆ.. ನನ್ನ ದಿನಾ ಆ ತರಹ ಏಕೆ ನೋಡ್ತಾರೆ.. ನನಗೇನಪ್ಪ ಅದು ಒಂಚೂರೂ ಇಷ್ಟ ಆಗೋಲ್ಲ..ಸುಮಾ ಪ್ರತಿಕ್ರಿಯಿಸಿದಳು. ಅದು ಅವರನ್ನೇ ಕೇಳ್ಬೇಕು..ಎಂದಷ್ಟೇ ಅವಳ ಗೆಳತಿ ಹೇಳಿ ಮುಗಿಸಿದಳು.

**

ದಿನಗಳುರುಳುತ್ತಿದ್ದವು..ಸುಮಾ ಬರಬರುತ್ತಾ ಬದಲಾಗುತ್ತಿದ್ದಳು. ಇತ್ತೀಚೆಗೆ ಚಂದ್ರಕಾAತನನ್ನು ತಿರಸ್ಕöÈತ ದೃಷ್ಠಿಯಿಂದ ನೋಡುವುದನ್ನು ಬಿಟ್ಟಿದ್ದಳು. ಇತ್ತೀಚೆಗೆ ಆ ನೋಟವನ್ನು ಅರ್ಥಮಾಡಿಕೊಳ್ಳುವ ಮನಸ್ಸು ಮಾಡಿದ್ದಳು. ಆಕೆಗೆ ಅದು ಕಾಮವಲ್ಲವೆಂದು ತಿಳಿದಾಗ, ಅವಳ ಮನದಲ್ಲಿ ಕ್ರಮೇಣ ಚಿಕ್ಕ ಬದಲಾವಣೆಯಾಗಿತ್ತು.....

**

ಅವತ್ತು ಬಸ್ಸಿನ ಸೀಟಿನಲ್ಲಿ ಕುಳಿತ ತಕ್ಷಣ, ಆ ಕಣ್ಣುಗಳು ಇವಳನ್ನೇ ದಿಟ್ಟಿಸುತ್ತಿತ್ತು. ಇವಳು ತನ್ನ ಮನವನ್ನು ಕೊಂಚ ಬದಲಿಸಿ ಅವನ ಕಡೆ ನೋಡಿ ಕಿರುನಗೆ ಹರಿಸಿದಳು. ಚಂದ್ರಕಾAತನ ಕಣ್ಣುಗಳು ಸೌಹಾರ್ದಯುತವಾಗಿ ಸ್ಪಂದಿಸಿತು.

ಸುಮಾ ತಲೆತಗ್ಗಿಸಿದಳು. ಪ್ರಥಮ ಬಾರಿಗೆ ಅವಳಲ್ಲಿ ನಾಚಿಕೆಯ ಮನೋಭಾವ ಮೂಡಿತು. ಸುಮಾಳ ಮನಸ್ಸಿನ ತಂತಿ ಆ ಕ್ಷಣ ಮೀಟಿ..ಹೊಮ್ಮಿದ ನಾದ ಪ್ರೇಮಗೀತೆ ಪ್ರಾರಂಭಿಸಲು ಜಾಸ್ತಿ ದಿನ ಬೇಕಾಗಿರಲ್ಲಿಲ್ಲ.. ಅವಳೆದೆ ತಾಳತಪ್ಪಿ ಹೊಯ್ದಾಡಿತು. ಬಸ್ಸು ಮಲ್ಲಾಪುರದಲ್ಲಿ ನಿಂತಾಗ ಇಬ್ಬರೂ ಇಳಿದರು. ಅವ ನೋಡಿ ನಕ್ಕ.. ಹೂ ಬಿರಿದಂತೆ ಇವಳು ನಗೆಬೀರಿ ತಲೆತಗ್ಗಿಸಿ ಶಾಲೆ ಹಾದಿ ಹಿಡಿದಳು.


ಆ ದಿನ ರಾತ್ರಿಯಿಡೀ ಸುಮಾಳ ಮನಸ್ಸಿನಲ್ಲಿ ಚಂದ್ರಕಾAತನೇ ತುಂಬಿದ್ದ. ಅವನ ನೋಟದ ರಹಸ್ಯ ಇವಳಿಗೆ ಒಗಟಾಗಿಯೇ ಇತ್ತು. ಅದೇನೆ ಇರಲಿ ಅವರು ನನ್ನನ್ನು ಇಷ್ಟಪಟ್ಟಿರುವುದಂತೂ ನಿಜ. ಅವಳ ಮನ ಎಂದೂ ಕಾಣದಿದ್ದ ಕನಸನ್ನು ಹೆಣೆಯತೊಡಗಿ, ಚಂದ್ರಕಾAತ ಮತ್ತು ಅವಳ ಒಡನಾಟ ಕಲ್ಪಿಸಿಕೊಳ್ಳುವ ಮಟ್ಟಕ್ಕಿಳಿದಿದ್ದಳು. ಅವಳ ಮನದ ಕಲ್ಪನಾಲೋಕದ ಚಿತ್ರದಲ್ಲಿ, ಚಂದ್ರಕಾAತನ ಆ ನೋಟವನ್ನು ಅವಳು ಸವಿಯುತ್ತಿದ್ದಳು. ತನ್ನ ದೀರ್ಘಕಾಲದ ಬಯಕೆಯಂತೆ ಅವಳಿಗೊಬ್ಬ ಸಂಗಾತಿ ಸಿಕ್ಕಿದ ಸಂತೋಷವಾಗಿತ್ತು..ಮೆಲ್ಲನೆ ತನ್ನ ಹೃದಯವನ್ನು ಅವನಿಗಾಗಿ ತೆರೆಯಲು ಸಜ್ಜಾಗಿದ್ದಳು.


ಇವತ್ತೂ ಕೈ ತೋರದೆ ಬಸ್ಸು ನಿಂತಾಗ, ಬೇಗನೆ ಏರಿ ಡ್ರೆöÊವರ್ ಬದಿಯ ಆ ಸೀಟಿನಲ್ಲಿ ಕುಳಿತು, ಅ ಕಡೆ ಕಣ್ಣೋಡಿಸಿದ ಸುಮಾಳ ಮನಸ್ಸಿಗೆ ಆಶ್ಚರ್ಯ ಕಾದಿತ್ತು. ಅಲ್ಲಿ ಚಂದ್ರಕಾAತ ಇರಲ್ಲಿಲ್ಲ. ಇವಳ ಕಳವಳ ಅರಿತ ಕಂಡಕ್ಟರ್ ಟಿಕೇಟ್..ಟಿಕೇಟ್.. ಅನ್ನುತ್ತಲೇ ಇವಳ ಬಳಿಗೆ ಬಂದು ವಿಷಾದದ ನಗೆ ಬೀರಿ, ಇವಳಿಗೆ ಒಂದು ಕವರ್ ನೀಡಿದ. ಆತಂಕದಿAದಲೇ ಅದನ್ನು ವ್ಯಾನಿಟಿ ಬ್ಯಾಗಿನೊಳಗಿಟ್ಟಳು. ಏನಿರಬಹುದೆಂಬ ಕುತೂಹಲ ಅವಳಿಗೆ. ಮೊದಲ ಪ್ರೇಮಪತ್ರ.. ಛೇ! ಪ್ರೇಮದ್ದೇ..!?!?.

ಆ ರಾತ್ರಿ ತಾನೊಬ್ಬಳೇ ಮಲಗಿರುವಾಗ, ಮೆಲ್ಲನೆ ದೀಪದ ಬೆಳಕಿನಲ್ಲಿ ಆ ಪತ್ರವನ್ನ ಬಿಡಿಸಿದಳು.. ಅದರಲ್ಲಿನ ಚಂದ್ರಕಾAತರ ಮುದ್ದುಮುದ್ದಾದ ಅಕ್ಷರವನ್ನ ಕುತೂಹಲದ ಕಣ್ಗಳಿಂದ ಓದತೊಡಗಿದಳು....

 

ಪ್ರೀತಿಯ ಸುಮಾ,

     ದಿನೇ ದಿನೇ ನಾನು ನಿನ್ನನ್ನೇ ದಿಟ್ಟಿಸುತ್ತಿದ್ದೆ. ಇದರಿಂದ ನಿನ್ನ ಮನಸ್ಸಿಗೆ ಬೇಜಾರಾಗಿದೆ ಎಂದೂ ನಂಗೆ ಗೊತ್ತಿದೆ. ಸುಮಾ! ನೀನು ಏನೇ ತಿಳಿದುಕೋ. ನಿನ್ನನ್ನು ನೋಡುವಾಗ ನಿನ್ನ ಆ ಮುದ್ದಾದ ರೂಪು ನನ್ನ ಹೃದಯವನ್ನು ತಟ್ಟುತ್ತದೆ. ಮನವುಕ್ಕಿ ಕಂಬನಿ ಮಿಡಿಯುತ್ತದೆ.

ಸುಮಾ! ನಾನೊಬ್ಬ ನತದೃಷ್ಟ. ತಂದೆತಾಯಿ ಇಲ್ಲದೆ ಕೊರಗುತ್ತಿದ್ದ ನನ್ನನ್ನು ಇನ್ನೂ ಕೊರಗಿಕೊರಗಿ ನಿಶ್ಚೇತ ಮನುಷ್ಯನನ್ನಾಗಿ ಮಾಡಿದವಳು ನನ್ನ ಮುದ್ದಾದ ತಂಗಿ ಪುಷ್ಪ. ತಬ್ಬಲಿಯಾಗಿ ನನ್ನ ಆಸರೆಯಲ್ಲಿ ಬೆಳೆದಿದ್ದ ಅವಳನ್ನು ಚೆನ್ನಾಗಿ ನೋಡಿಕೊಂಡೆ. ಲೆಕ್ಚರರ್ ಹುದ್ದೆಯಲ್ಲಿದ್ದುಕೊಂಡು, ನನ್ನ ಮುದ್ದಾದ ತಂಗಿ ಪುಷ್ಪಳನ್ನು ಅತ್ಯಂತ ಪ್ರೀತಿಯಿಂದ ಸಾಕಿದೆ. ಆದರೆ ಆ ದೇವರು ನನಗೆ ಅನ್ಯಾಯ ಮಾಡಿದ. ನನ್ನನ್ನು ಕರಾಳಕತ್ತಲೆಗೆ ದೂಡಿದ. ಅದೊಂದು ಅಪಘಾತದಲ್ಲಿ ಪುಷ್ಪ ಇನ್ನಿಲ್ಲವಾದಳು. ಅಲ್ಲಿಗೆ ನನ್ನ ಬಾಳು ಬರಡಾಯಿತು. ನಾಲ್ಕೆöÊದು ವರ್ಷಗಳ ನಂತರ, ನನಗೆ ಮಲ್ಲಾಪುರಕ್ಕೆ ವರ್ಗವಾಯ್ತು. ಪಕ್ಕದ ನಿಮ್ಮೂರಿನಲ್ಲಿ ಒಂದು ಬಾಡಿಗೆ ರೂಂ ಪಡೆದುಕೊಂಡೆ. ವೃತ್ತಿಯನ್ನು ಮುಂದುವರೆಸುತ್ತಿದ್ದೆ. ಇದೇ ಬಸ್ನಲ್ಲಿ ದಿನಾ ಪಯಣಿಸಬೇಕಿತ್ತು. ಆ ದಿನ ಡ್ರೆöÊವರ್ ಬದಿಯ ಸೀಟಿನಲ್ಲಿ ಕುಳಿತಿದ್ದ ನಿಮ್ಮ ಕಡೆ ನನ್ನ ಕಣ್ಣೋಡಿತು.. ಅಷ್ಟೇ! ನಿಮ್ಮ ಸುಂದರವಾದ ಮುದ್ದಾದ ರೂಪು ನೋಡಿ ಮೊದಲ ನೋಟಕ್ಕೇ ನನ್ನ ಮನತುಂಬಿ, ನನ್ನ ಕಣ್ಣುಗಳು ನನಗರಿವಿಲ್ಲದಂತೆ ತೇವಗೊಂಡಿತು. ದು:ಖ ಒತ್ತರಿಸಿ ಬಂದು.. ಕ್ಷಣದಲ್ಲಿ ಪುಷ್ಪಳನ್ನೇ ನೋಡುತ್ತಿರುವೆನೆಂದು ಭಾಸವಾಯ್ತು.. ನಿಮ್ಮ ಆ ಮುಖ.. ರೂಪು.. ಮುದ್ದಾದ ನನ್ನ ತಂಗಿಯನ್ನೇ ಹೋಲುತ್ತಿತ್ತು.

ಮನತುಂಬಿ ಬಂದು ಪುಷ್ಪ ಎಂದು ಕರೆದುಬಿಡಲೇ ಅನಿಸಿತು.. ಅಂದಿನಿAದ ನನ್ನ ಪುಷ್ಪಳನ್ನು ನಿಮ್ಮಲ್ಲೇ ಕಾಣುತ್ತಿರುವೆ. ದಯವಿಟ್ಟು ಇದನ್ನು ಹುಸಿಗೊಳಿಸಬೇಡಿ..

ನನಗೆ ನಾಳೆ ಈ ಕಾಲೇಜಿನಿಂದ ವರ್ಗವಾಗುತ್ತಿದೆ.. ನನ್ನದೊಂದು ಸಣ್ಣ ಬೇಡಿಕೆಯಿದೆ.. ನಡೆಸಿಕೊಡುತ್ತೀರ.. ಪತ್ರವನ್ನೊಮ್ಮೆ ಓದಿ.. ಒಮ್ಮೆ ಮನಸಾರೆ ‘ಅಣ್ಣಾ’ ಎಂದು ಬಿಡಿ ಪ್ಲೀಸ್. ಎಂದೆAದಿಗೂ ನಿಮ್ಮ ಅಣ್ಣನಾಗಿರುವ ಭಾಗ್ಯ ಕರುಣಿಸಿಕೊಡಿ. ಇಲ್ಲಿಗೆ ಮುಗಿಸುತ್ತೇನೆ. 

ಇತಿ ನಿಮ್ಮ ಅಣ್ಣ

 ಚಂದ್ರಕಾAತ

  

ಕಣ್ಣಿನಿಂದ ಬಿದ್ದ ಹನಿ ಪತ್ರದ ಕೆಲಭಾಗ ಒದ್ದೆ ಮಾಡಿತ್ತು. ಅಕ್ಷರ ಮಾತ್ರ ಸ್ಪಷ್ಟವಾಗಿತ್ತು. ಸುಮಾ ಪತ್ರವನ್ನು ಓದಿ ಮುಗಿಸಿದಾಗ ಅದೇ ನೋಟ ಸೌಹಾರ್ದಯುತವಾಗಿ ಸ್ಪಂದಿಸಿತು..!

ಕಣ್ಣೀರೊರೆಸಿಕೊAಡಳು.ಮನಸ್ಸು ಬದಲಾವಣೆಯಾಗತೊಡಗಿತು. ಅಣ್ಣನಿಗಾಗಿ ಹಂಬಲಿಸಿತು..ಮನತುAಬಿ ಬಂತು..ತುಟಿಯ ಮೇಲೆ ಕಣ್ಣೀರು ಹರಿಯಿತು. ಮೆಲ್ಲನೆ ಬಾಯ್ದೆರೆದು ಅವಳಿಗರಿವಿಲ್ಲದಂತೆಯೇ ಮನಸಾರೆ ಒಮ್ಮೆ ಗದ್ಗದಿತಳಾಗಿ ಅಣ್ಣಾ’ ಎಂದಳು...

ತಲೆನೇವರಿಸಲು ಬಳಿಬಂದ ಅಪ್ಪನೆದೆಗೆ ಒರಗಿ ಸಮಧಾನವಾಗುವವರೆಗೂ ಅತ್ತಳು.



Rate this content
Log in

Similar kannada story from Tragedy