Arjun Maurya

Classics Inspirational Thriller

4  

Arjun Maurya

Classics Inspirational Thriller

ಪಯಣ

ಪಯಣ

7 mins
292


ಪಯಣ

ಪ್ರಶ್ನೆಯೇ ಉತ್ತರವಾಗುತ್ತಿದೆಯಲ್ಲ..ಈ ಪರಿಯೇನು! ನಾನ್ಯಾರೋ! ನನ್ನ ಕಾಯಕವೇನೋ?! ಒಗಟು... ಒಂದು ರೀತಿಯಲ್ಲಿ ಎಲ್ಲಾವೂ ದ್ವಂದ್ವ.

ಸೂರ್ಯ ಮುಳುಗುತ್ತಿದ್ದ...ಆಕಾಶ ತುಂಬೆಲ್ಲಾ ನೆತ್ತರ ಬಣ್ಣದ ಗೆರೆಗಳು, ಸಮುದ್ರದಲೆಗಳ ಮೇಲೂ ಅದರ ಪ್ರತಿಬಿಂಬ ಹರಡಿ ಹೊಳೆಯುತ್ತಿತ್ತು...ನಾಟ್ಯವಾಡುತ್ತಾ ಆತ ಮುಳುಗಿದರೆ?! ಜೀವಿಗಳಿಗೆ ಉಳಿಯುವುದು ಕತ್ತಲೆ..ಬರೀ ಕತ್ತಲೆ...!!

ಸಮುದ್ರ ತಟದ ಈ ಕಲ್ಲಿನಲ್ಲಿ ಕುಳಿತಿದ್ದರೂ...ವಾಸ್ತವವನ್ನೇ ಮರೆಸುವಂತಿದೆ...ಈ ಸ್ಥಿತಿ!. ರಂಗುರAಗಿನ ಸೌಂದರ್ಯ ತುಂಬಿದ ಈ ಭುವಿಯ ವೇದಿಕೆಯಲ್ಲಿ ಅದೆಂಥೆAತಹಾ ಪಾತ್ರಗಳು..ಪಾತ್ರವೇ ಬೇರೆ ನಾನೇ ಬೇರೆ.

ನಾನ್ಯಾರೋ?! ಇತ್ತೀಚೆಗೆ ಏಕೀ ಪ್ರಶ್ನೆ ಗಾಢವಾಗಿ ಕಾಡುತ್ತಿದೆ...?! ನನಗಿರುವ ಹೆಸರೂ ನನ್ನದೇ ಆದರೂ ನನ್ನದಲ್ಲವಲ್ಲ..ಹೌದು! ಸತ್ಯ!!. ಹಾಗಾದ್ರೆ ಗತಿಸಿದ ಅನುಸೂಯ ನನ್ನ ಪತ್ನಿಯಲ್ಲವೇ?!.. ರಾಘು ನನ್ನ ಮಗನಾಗಲಾರನಾ?...ಮಹಾಲಕ್ಷಿ÷್ಮ ನನ್ನ ಸೊಸೆಯಲ್ಲವೇ?!... ತೇಜು ನನ್ನ ಮೊಮ್ಮಗನಲ್ಲವೇ?!...ಸುಳ್ಳೇ ನಿಜಾನಾ...ಅಥವಾ ನಿಜವೇ ಸುಳ್ಳಾ?!. ಹಾಗಾದ್ರೆ‘ನಾನು ಮತ್ತು ನನ್ನ ಸಂಬAಧಗಳು ಸತ್ಯನಾ ಅಥವಾ ಸುಳ್ಳಾ ಗೊತ್ತಿಲ್ಲ. ಆದ್ರೆ ಒಂದAತೂ ಗೋಚರವಾಗುತ್ತಿದೆ. ಅದೇನೆಂದ್ರೆ ಮೂಲದ ಸಂಶೋಧನೆಗೆ ತೊಡಗಿದಾಗ ಪ್ರಶ್ನೆಗಳೇ ಉತ್ತರಗಳಾಗಿರುತ್ತವೆ.

ಛಟೀರ್! ಎಂಬ ಶಬ್ದಕ್ಕೆ ವಾಸ್ತವ್ಯಕ್ಕೆ ಬಂದೆ..ಸ್ವಲ್ಪ ದೂರದಿಂದ ಬಂದ ದನಿಗೆ ತಿರುಗಿದೆ. ಪ್ರೇಮಿಗಳೇ ಅವರು!. ಸರಸವಿರಸ ಸಲ್ಲಾಪದಲ್ಲಿ ನಗುನಗುತ್ತಾ ಅಂಟಿಕೊAಡೇ ಮಾತನಾಡುತ್ತಿದ್ದರು. ಆ ಕಲ್ಲಿನ ಮೇಲೆ ಕುಳಿತಿದ್ದರು..ಸೂರ್ಯಾಸ್ತ ನೋಡುವುದು ಅವರಿಗೆ ನೆಪವೂ ಆಗಿರಬಾರದೆಂದೇನೂ ಇಲ್ಲವಲ್ಲ. ಪಾಪ! ಪ್ರಪಂಚವನ್ನೇ ಮರೆತಿದ್ದಾರೆ. ಅದು ಮಾತ್ರವಲ್ಲ.ಸತ್ಯಾಂಶವನ್ನೇ ಮರೆತಿದ್ದಾರೆ. ಮಾಯಾ ಅವರನ್ನ ಆ ರೀತಿ ಆಡಿಸುತ್ತಿರಬಹುದು. ಒಟ್ಟಾರೆ ಈ ನಾಟಕಕ್ಕೆ ಮೂಲ.

ದಟ್ಟವಾಗಿ ಬೆಳೆದಿದ್ದ ಗಡ್ಡವನ್ನೊಮ್ಮೆ ಸವರಿದಾಗ,ಕೆರೆತ ಬಂದAತಾಯ್ತು ಕೆರೆದುಕೊಂಡೆ. ಆಕಳಿಕೆ ಬಂತು. ಮುಖದ ಮೇಲೆ ಕೈಯಾಡಿಸಿದೆ ಮುಖದ ತುಂಬೆಲ್ಲಾ ನೆರಿಗೆಗಳು..ಗುಳಿಬಿದ್ದ ಕಣ್ಣುಗಳು..ನೋಟವೆಲ್ಲಾ ಅಸ್ಪಷ್ಟವಾಗಿತ್ತು. ಆದರೂ ಗುರುತು ಹಿಡಿಯಬಹುದಾಗಿತ್ತು ಅಲ್ಲಿ ಹೋಗುತ್ತಿರುವುದು ವೇಣುಗೋಪಾಲನಲ್ಲವೇ?!. ಹೌದು! ಅವನೇ..ಅವನೇ!. ಹಾಲು ಮಾರಿ ಜೀವನ ಸಾಗಿಸುತ್ತಾನೆ. ನಮ್ಮ ಮನೆಗೆ ಸರಿಯಾದ ಸಮಯಕ್ಕೆ ಹಾಲು ಕೊಡುತ್ತಾನೆ. ಅವನನ್ನು ಕರೆದೆ. ಬಂದು ನಿಂತ. ಅವನಿಗೆ ಗೊತ್ತಿತ್ತು. ಆದ್ರೂ ಮುದುಕನೆಂಬ ತಾಳ್ಮೆ. ಅವನನ್ನೇ ನೋಡಿ ನುಡಿದೆ. ನಾನ್ಯಾರಪ್ಪ?!”

ಅವನಿಗೂ ತಾಳಲಾಗಲಿಲ್ಲ. ಕೋಪ, ಅಸಹನೆ, ಬೇಸರ, ಅಥವಾ ಅದರೊಂದಿಗೆ ನನ್ನ ಬಗ್ಗೆ ಕಿಂಚಿತ್ತಾದ್ರೂ ಅನುಕಂಪ ಬಂದಿರಬಹುದು. ಯಾಕಂದ್ರೆ ಮೂರನೇ ಬಾರಿಗೆ ಅವನನ್ನ ಕೇಳಿರಬಹುದು ನಾನು. ಆದ್ರೂ ಹಿಂದೆ ನುಡಿದಂತೆಯೇ...ಸಾವರಿಸಿಕೊAಡು..ಇAದು ನನ್ನ ಹತ್ತಿರ ಬಂದು ನುಡಿದ...

ಪ್ರೊಫೆಸರ್ ಪುರುಷೋತ್ತಮಾರಾಯ್ರು...ಈಗ್ಲಾದ್ರೂ ತಿಳಿತಾ ಸಾಮಿ.. 

ಅದಲಪ್ಪಾ....ನಾನ್ಯಾರು?!ಅಂದೆ.

ಮತ್ತದೆ ಹುಚ್ಚಾ ಈ ಮುದುಕನಿಗೆ ಅಂತ ಅವನಿಗನಿಸಿರಬೇಕು.

ಸ್ವಾಮಿ, ಬೇಸ್ರ ಮಾಡಿಕೊಳ್ಲಬರ‍್ದು...ನಿಮ್ಜತೆ ಮಾತಾಡ್ಕಂಡ್ ಕುಂತ್ರೆ...ನಾನೂ ನಾಳೆ ಬರ‍್ಯಾರನ್ನಾದ್ರೂ ನಾನ್ಯಾರಪ್ಪಾ?ಅಂತ ಕೇಳಿ ಬೈಸ್ಕೋಬೇಕು...ರ‍್ತೀನಿ ಅಂತ ಹೊರಟೇಬಿಟ್ಟ.

ಅಯ್ಯೋ ವೇಣು ಬಾಪ್ಪಾ’ಅಂದೆ. ತಿರುಗಿ ಒಮ್ಮೆ ಕೆಕ್ಕರಿಸಿ ನೋಡಿ ಹೊರಟೇಬಿಟ್ಟ.

ಹೌದು! ನನ್ನೀ ವರ್ತನೆ ಎಲ್ಲರಿಗೂ ಬೇಸರ. ಮೊನ್ನೆ ಡಾ||ಗಿರೀಶ್ ಅಯ್ಯರ್‌ಗೆ ಫೋನಾಯಿಸಿ ಮಾತಾಡಿದಾಗ ತುಂಬಾ ಸಂತೋಷಗೊAಡ. 

ಹೇಗ್ ನಡೀತಿದೆ ನಿನ್ನ ಸಾಹಿತ್ಯ ಕೃಷಿ?..

ರ‍್ವಾಗಿಲ್ಲ ನಿಮ್ಮಾಶೀರ್ವಾದ ಎಂದಿದ್ದ ಆತನೊಂದಿಗೂ ನನ್ನ ಪ್ರಶ್ನೆ ಹಾಯಿಸಿದ್ದೆ. 

ದಯಮಾಡಿ ತಾವು ತಾವು ತಮ್ಮ ಅಗಾಧ ಓದುವಿಕೆಯನ್ನ ಕಡಿಮೆ ಮಾಡಿ..ಮನಸ್ಸನ್ನು ವಿಶ್ರಾಂತ ಮಾಡಿಕೊಳ್ಳಿ...ಹೆಚ್ಚಿನ ಅಧ್ಯಯನ ನಿಮ್ಮಲ್ಲಿ ಈ ಪ್ರಶ್ನೆ ತಂದಿರಬಹುದು!!ಎAದು ಕಟ್ ಮಾಡಿದ್ದ.

ಊರಿನ ಎಲ್ಲೆಡೆಯಲ್ಲೂ ನನ್ನ ಮೇಲೆ ಗೌರವ ಭಾವನೆ ಇದ್ದರೂ ಈಗಿನ ನನ್ನ ವಿಚಿತ್ರ ವರ್ತನೆಯಿಂದಾಗಿ ಹುಚ್ಚನೆಂದೆ ಭಾವಿಸುತ್ತಿದ್ದಾರೆ. ಆದರೆ ನನ್ನ ಮುಂದೆ ಅದನ್ನ ತೋರ್ಪಡಿಸುತ್ತಿಲ್ಲ.ಅದ್ಹೇಗಾದ್ರೂ ಸಹಿಸ್ಕೋಬಹುದು. ನನ್ನ ಮನೆ ವಾತಾವರಣದಲ್ಲೂ ನನ್ನ ಬಗ್ಗೆ ಈ ಅಭಿಪ್ರಾಯವಿದೆ.

ಸತ್ಯವೇ ಇಲ್ಲ...!! ಸುಳ್ಳಿನ ಮೇಲೆಯೇ ಈ ನಾಟಕ ನಡೀತಿದೆ. ಸತ್ಯವೇನಾದ್ರೂ ಗೊತ್ತಾದ್ರೆ... ವೈಚಿತ್ರ÷್ಯವೆನಿಸುವುದರ ಜತೆಗೆ ಮಾನವ ಸಂಬAಧಗಳಲ್ಲಿ ದ್ವಂದ್ವಗಳು, ಅಸಂಬದ್ಧತೆ ಸಾಮಾನ್ಯವಾಗುತ್ತೆ... ನಾನ್ಯಾರು? ನೀನ್ಯಾರು?! ಪ್ರಶ್ನೆಗಳೇ ಉತ್ತರಗಳಾಗಿರುತ್ತವೆ.

ನಾ ಹೋಗಬೇಕೆಂದಿರುವ ಆ ಗೂಡಿನಲ್ಲಿ ಮಗ, ಸೊಸೆ, ಮೊಮ್ಮಗ ಮನೆಯ ಆಳು ನಿಂಗ ಮೊದಲಾದ ಸಂಬAಧಗಳಿವೆಯಲ್ಲ!. ನಾ ಹೋದರೂ ಯಾರೂ ಹೆಚ್ಚು ನನಗೋಸ್ಕರ ತಲೆ ಕೆಡಿಸಿಕೊಳ್ಳಲಾರರು. ನನ್ನ ಬಗ್ಗೆ ಕಾಳಜಿ ಇದ್ದರೆ ತಾನೇ! ಉಪಚಾರವೊಂದಿದ್ದರೆ ಸಾಲದು. ಮೊಮ್ಮಗ ತೇಜು”ಬಿಟ್ಟರೆ ಯಾರೂ ನನ್ನ ಪಕ್ಕ ಸುಳಿಯುವುದಿಲ್ಲ. ತಾತ!’ಅಂತ ತೇಜು ನನ್ನ ಬಳಿಗೆ ಓಡಿ ಬರುವುದು ಸಂತಸವಾದರೂ... ನಾನು ತಾತನಂತೆ ಪ್ರತಿಕ್ರಿಯಿಸುತ್ತಿಲ್ಲವೆಂಬ ಕಾರಣಕ್ಕೆ ದೂರವಿರಿಸಿದ್ದಾರೆ.

ಆದ್ರೂ ನನ್ನಲ್ಲಿ ಸ್ಥಾಪಕತ್ವ ಪಡೆದಿರುವ ಇಂತಹ ಸ್ಥಿತಿ ನನಗೆ ವೈಚಿತ್ರ÷್ಯವೆನಿಸಿದರೂ ಸರಿಯೆನಿಸುತ್ತಿರುವುದು ಸುಳ್ಳಲ್ಲ.

ಮೂಲದ ಶೋಧನೆಗೆ ತೊಡಗಿದಾಗ ಹಾದಿಯಲ್ಲಿ ಸಿಗೋದು ಹುಡುಕಾಟದ ಪ್ರಶ್ನೆಗಳೇ.

***

ಗಾಳಿ ತೀಡುತ್ತಿದೆ..ನಿಶ್ಯಬ್ದ ವಾತಾವರಣದಲ್ಲಿ ಹಕ್ಕಿಗಳ ಕಲರವ ಇಂಪಾಗಿತ್ತು..ವಾಸ್ತವ್ಯದಲ್ಲಿ ಇದು ಸಾಧ್ಯವಲ್ಲವೇ? ಸುತ್ತಲೂ ಹಸಿರುಮಯ. ಹಸಿರ ಪೊದೆಗಳು..ಮಧ್ಯ ಮಧ್ಯದಲ್ಲಿ ಎದ್ದು ನಿಂತ ಮರಗಳು ಗಟ್ಟಿಮುಟ್ಟಾಗಿ ಬೆಳೆದಿದ್ದವು..ಬಹುದೂರದ ಆ ಗಿರಿಗಳ ಸಾಲು ಹಸಿರೇ ಮೈವೆತ್ತಂತೆ ಇದ್ದುವು..ನೆಲದ ಹುಲ್ಲು ಒಣಗಿದ್ದರೂ ಹಸಿರ ಇನ್ನೊಂದು ಮುಖ ಕಾಣುತ್ತಿತ್ತು..ಒಂದು ರೀತಿಯಲ್ಲಿ ಹಳದಿ ಮಿಶ್ರಿತವಾದಂತಿತ್ತು..ನಾನು ಕುಳಿತ ಸ್ವಲ್ಪ ದೂರ ಕಾಫಿಯ ತೋಟ. ಮಧ್ಯ ಮಧ್ಯದಲ್ಲಿ ಬಹು ಎತ್ತರವಾದ ಮರಗಳು..ಅದಕ್ಕೆ ಹಬ್ಬಿರುವ ಕರಿಮೆಣಸಿನ ಬಳ್ಳಿ ಮರವನ್ನೇ ಮುಚ್ಚಿದೆ..ಸತ್ಯವನ್ನು ಸುಳ್ಳು ಮಚ್ಚಿದ ಹಾಗೆ.

ಸಂಜೆಯಾದ್ದರಿAದ..ಸೂರ್ಯನ ಕಿರಣಗಳ ವ್ಯತಿರಿಕ್ತ ಹರಡುವಿಕೆಯಿಂದಾಗಿ ಹಸಿರ ಬಣ್ಣಗಳಲ್ಲೇ ನಾನಾ ವಿಧ ಗೋಚರವಾಗುತ್ತಿತ್ತು..ಆ ಮರದ ತುದಿಯನ್ನು ಯಾರೋ ಕತ್ತರಿಸಿ ಹಾಕಿದ್ದಾರೆ..ಬಹಳ ದಪ್ಪವಿದೆ.. ಸೂರ್ಯ ಕಿರಣದಿಂದಾಗಿ ಅದರ ಒಂದು ಬದಿ ಬೆಳಕು ಚೆಲ್ಲಿದ್ದರೆ..ಮತ್ತೊಂದು ಬದಿ ಬೆಳಕಿದ್ದರೂ ಮಬ್ಬು ಆವರಿಸಿತ್ತು.

ಹಾಗೇ ಕುಳಿತಿದ್ದೆ...ಪ್ರಶಾಂತ ವಾತಾವರಣ..ಈ ಅನುಭವ ನಾ ವಾಸ್ತವ್ಯಕ್ಕೆ ಬಂದಾಗ ಸಾಧ್ಯ...ಆ ಸಮುದ್ರ ತಟದಲ್ಲಿ ಕುಳಿತಿದ್ದ ನಾನು...ಈ ವಾತಾವರಣದಲ್ಲಿ ಇಲ್ಲಿದ್ದೀನಲ್ಲ!!...ಎಷ್ಟು ಬೇಗ ಪರಿಸರ ಬದಲಾವಣೆಯಾಗುತ್ತದೆ?! ಆದ್ರೆ ನಾನು ಮಾತ್ರ ಬದಲಾವಣೆ ಹೊಂದಿಲ್ಲ ನನ್ನ ಭಾವನೆಯಲ್ಲಿ..!! ಪ್ರಕೃತಿಯ ಸೌಂದರ್ಯ ಒಂದು ದೃಷ್ಠಿಯಲ್ಲಿ ನೋಡಿದಾಗ ಪುಳಕ ಹೇಗೋ ಹಾಗೆಯೇ ಇನ್ನೊಂದು ದೃಷ್ಠಿಯಿಂದ ನೋಡಿದಾಗ ಈ ಪ್ರಕೃತಿಯೇ ವಿಚಿತ್ರವೆನಿಸಿ...ಜೀವ ಮಡುಗಟ್ಟಿದಂತೆ ಭಯವಾಗುತ್ತದೆ.

ಹೌದು! ಸೌಂದರ್ಯವೆAದರೆ ಸಂತೋಷ,ಭಯ. ಹುಟ್ಟು-ಸಾವು, ಆದಿ-ಅಂತ್ಯ ಏನಿವೆಲ್ಲ?!...ಈ ಪರಿಸರ ಗಾಳಿ ಚೆನ್ನಾಗಿದೆ. ಸ್ವಲ್ಪ ಚಳಿಯಾದರೂ ಕುಳಿತಿರೋಣವೆನ್ನುವಷ್ಟು ವಾತಾವರಣ.

ಆದ್ಯಾರೋ ಡಾಕ್ಟç ಸಲಹೆ ಮೇರೆಗೆ ಪರಿಸರ ಬದಲಾವಣೆಗಾಗಿ ಮಗ ರಾಘು ನನ್ನನ್ನ ಈ ದೂರದ ಸ್ಥಳಕ್ಕೆ ಕಳುಹಿಸಿದ್ದಾನೆ. ಇಲ್ಲಿ ನನ್ನ ಸೊಸೆ ಮಹಾಲಕ್ಷಿ÷್ಮಯ ಚಿಕ್ಕಪ್ಪನ ಮನೆಯಿದೆ. ಬಹಳ ದೊಡ್ಡ ಸಂಸಾರ... ದೊಡ್ಡದಾದ ಬಂಗಲೆಯಿದೆ. ಸೊಸೆಯ ಚಿಕ್ಕಮ್ಮ ನಾಗವೇಣಿ ಕಾಲೇಜಿನ ಪ್ರಿನ್ಸಿಪಾಲ್. ಮೂರು ಜನ ಗಂಡು ಮಕ್ಕಳು ಹಾಗೂ ಒಬ್ಬಳೇ ಮಗಳು ಅವರಿಗೆ. ಕೊನೆಯವನ್ನೊಬ್ಬ ಬಿಟ್ಟು ಮಿಕ್ಕವರು ಹುದ್ದೆಯಲ್ಲಿದ್ದಾರೆ. ಯಾವುದರಲ್ಲೂ ಕಮ್ಮಿಯಿಲ್ಲ. ದೊಡ್ಡ ಮನೆತನ. ಎರಡನೇಯವನು ಸಾಫ್ಟ್ವೇರ್ ಕಂಪನಿಯಲ್ಲಿದ್ದವ. ಈವಾಗ ಇಲ್ಲೂ ಅದೇ ಬಿಸಿನೆಸ್ಸು..

ನನ್ನ ಮಗ ರಾಘು ಕೂಡ ಅಮೇರಿಕಾದ ಪ್ರಸಿದ್ಧ ಸಾಫ್ಟ್ವೇರ್ ಕಂಪನಿಯಲ್ಲಿದ್ದು ಬಂದವನು. ಇಲ್ಲೂ ಮಿತಿಮೀರಿಯೇ ಸಂಪಾದಿಸುತ್ತಿದ್ದಾನೆ. ಇನ್ನು ನನ್ನ ಸೊಸೆ ಮಹಾಲಕ್ಷಿ÷್ಮ ಕಾಲೇಜಿನ ಲೆಕ್ಚರರ್. ಮೊಮ್ಮಗ ತೇಜು ಕಾನ್ವೆಂಟ್‌ನಲ್ಲಿ ಸವೆಂತ್. ಹೇಳಬೇಕೆಂದರೆ ನನಗ್ಯಾವುದರಲ್ಲೂ ಕಡಿಮೆಯಿಲ್ಲ. ತೇಜು ಹೆಸರಿನಲ್ಲಿ ಎರಡು ಬಟ್ಟೆ ಅಂಗಡಿ ಒಂದು ಸಿನಿಮಾ ಥಿಯೇಟರ್ ಎಲ್ಲವಿದೆ. ಸಾಲದ್ದಕ್ಕೆ ರಾಘು ಖಾಸಗಿ ಫೈನಾನ್ಸ್ ಒಂದನ್ನ ನಡೆಸುತ್ತಿದ್ದಾನೆ.

ಕುಟುಂಬ ವರ್ಗ ಬೆಳೆಯುತ್ತಾ ಹೋಗುತ್ತದೆ. ಎಲ್ಲಾ ದ್ವಂದ್ವ.. ಛೆ! ಇನ್ನೂ ಇದ್ದಾರೆ..ಆದರೆ ಹೇಳಿದಷ್ಟೂ ಮುಗಿಯಲಾರದು. ವ್ಯಾಪ್ತಿ ದೊಡ್ಡದು..!

ನನ್ನಿರುವಿಕೆ ನಾನೇ ಮರೆಯಲಾರಂಭಿಸಿದೆ..!ಸೂರ್ಯ ಮುಳುಗಿದ್ದ. ಮುಸ್ಸಂಜೆಯ ಬೆಳಕಿನೊಡನೆ ಕತ್ತಲು ಸೆಣಸಾಡತೊಡಗಿತ್ತು..ನಾಳೆ ಹುಟ್ಟಲೇಬೇಕಲ್ಲವೇ?! ಅಂದರೆ..ಹೌದು! ಸಾವಿನ ಹುಟ್ಟು..ವಿಸ್ಮಯದ ಹುಟ್ಟು.

***

ಮೂಡಲ ಮನೆಯಲ್ಲಿ ಸೂರ್ಯ ಮೂಡುತ್ತಿದ್ದನು...ಎಲ್ಲೆಲ್ಲೂ ಹಕ್ಕಿಗಳ ನಾದನಿನಾದ..ದೂರಲ್ಲೆಲ್ಲೋ ಸುಪ್ರಭಾತದ ಇಂಪು ಬೇರೆ. ಎಲ್ಲೆಲ್ಲೂ ಕಂಗೊಳಿಸುತ್ತಿರುವ ಹಸುರಿನ ವೈಭವದ ಜತೆಗೆ ಬಗೆಬಗೆ ಹೂಗಳ ಬೆಡಗಿನ ಸೊಬಗು..ಹೊಂಗೆ ಹೂವಿನ ಮರದಲ್ಲಿ ಅದೇನು ಸಿರಿಯ ಸೊಬಗು. ಆದಿಯ ಸೊಬಗು. ಎಂಥಾ ಸೌಂದರ್ಯದ ಸೃಷ್ಠಿ...!.

ಹೂವು ಎಲೆಗಳ ಮೇಲೆಲ್ಲಾ ಮಂಜಿನ ನೀರ ಮುತ್ತುಗಳದೇ ಆಟ. ಅವುಗಳು ಸೂರ್ಯರಶ್ಮಿಗೆ ತಾಗಿದಾಗ ಒಂದೊAದು ಕೋನದಿಂದ ನೋಡಿದಷ್ಟೂ ಬಣ್ಣಗಳ ಆಟ. ಎಲ್ಲೆಲ್ಲೂ ಸಂಭ್ರಮ. ಹಕ್ಕಿಗಳ ಗಾನ. ಹರುಷದ ಹೊನಲ ಧಾರೆ..ಪ್ರಕೃತಿಯೇ ರಮ್ಯ, ಗಮ್ಯ. ಎಂಥಾ ಸೊಗಸು...ಹಸುರಚಿಗುರ ಹೊಸ ಹುಟ್ಟು ಎಷ್ಟೊಂದು ಕಣ್ಮನ ಸೆಳೆಯುತ್ತಿತ್ತು...ಆ ಮುತ್ತುಗದ ಹೂಗಳ ರಂಗೇರಿದ ಬಣ್ಣ...!? ಹಕ್ಕಿಗಳ ದಟ್ಟ ಗುಂಪೊAದು ಗೆರೆಗಳೆಳೆದಂತೆ ಹಾರುತ್ತಿದ್ದವು. ಒಂದಕ್ಕೊAದು ಅಂಟಿಕೊAಡAತೆ ಹಾರುತ್ತಿದ್ದ ಆ ಜೋಡಿ ಹಕ್ಕಿಗಳ ಸಂಭ್ರಮ..ನಭದಲ್ಲಿ ಕಲಾಕಾರ ಸೂರ್ಯನು ಕಿರಣವೆಂಬ ಕುಂಚದಿAದ ಚಿನ್ನಬೆಳ್ಳಿಯ ಗೆರೆಗಳನ್ನು ಎಳೆದಿದ್ದನು...

ಮನೆಯಲ್ಲಿ ಸಂಭ್ರಮದ ವಾತಾವರಣ. ಮನೆಯಲ್ಲೆಲ್ಲಾ ನೆಂಟರು ಬಂಧುಬಳಗದವರಿAದಾಗಿ ಗಿಜಿಗಿಜಿ ವಾತಾವರಣವಿತ್ತು...ಮನೆಯ ಮುಂದೆ ಸಾಮಿಯಾನ ಹಾಕಿಸಿದ್ದರು...ಬಂದ ಅತಿಥಿಗಳು ಜೋಡಿಸಿದ್ದ ಸಾಲು ಕುರ್ಚಿಗಳನ್ನು ಅಲಂಕರಿಸಿದ್ದರು. ನಗು ಕೇಕೆ ಒಂದು ಕಡೆಯಾದರೆ ಇನ್ನೊಂದೆಡೆ ಸಿದ್ದತೆಗೆ ಓಡಾಡುವ ಮಂದಿ..

ಆ ವಿಶಾಲವಾದ ಅಲಂಕೃತ ವೇದಿಕೆಯಲ್ಲಿ,ಬಹುಸೊಬಗಿನ ತೊಟ್ಟಿಲು ಒಂದನ್ನ ಇರಿಸಿದ್ದರು. ಶ್ರೀಮಂತಿಕೆಯನ್ನ ಬಿಂಬಿಸುವAತಿತ್ತದು. ಹೂವಿನ ಪರಿಮಳ ಎಲ್ಲೆಲ್ಲೂ ಘಮಘಮಿಸುತ್ತಿತ್ತು. ಸಂತೋಷ ಸಂಭ್ರಮದ ಜತೆಗೊಂದಷ್ಟು..ಡಿಗ್ನಟಿಯ ರೂಪಗಳು.ದೊಡ್ಡದಾದ ಆ ಬಂಗಲೆಯಲ್ಲಿ..ಅAತಸ್ತಿಗೆ ತಕ್ಕಂತೆ ಜನ ಸೇರಿದ್ದರು.ಯಾರ ಬಾಯಲ್ಲೂ ದೊಡ್ಡ ದೊಡ್ಡ ವ್ಯವಹಾರದ ಮಾತೆ!. ಮನೆಯ ಆಳು ದೇವೀರಮ್ಮ ನನ್ನನ್ನು ಸ್ನಾನ ಮಾಡಿಸಿ ಪೌಡರ್ ಕ್ರೀಂ ಹಾಕಿ ನಂತರ ಹೊಸ ಉಡುಪೊಂದನ್ನ ಹಾಕಿದಳು.ನನ್ನಮ್ಮ ಅವಳ ಕೈನಿಂದ ಕೇಳಿಕೊಂಡು ನನ್ನ ಪುಟ್ಟ ಕೈಗಳಿಗೆ ಚಿನ್ನದ ಬಳೆಗಳನ್ನು ತೊಡಿಸಿದಳು..ನನ್ನಮ್ಮ ಗಂಗಾದೇವಿ ವೈಯಾರದಿಂದ ನನ್ನನ್ನ ಆಡಿಸಿದಳು. ಕೆನ್ನೆಗೆ ದೃಷ್ಠಿ ಬೊಟ್ಟೊಂದನ್ನಿಟ್ಟು ಎತ್ತಿ ಮುದ್ದಾಡುತ್ತಾ ಬಂದಳು. ನೆರೆದಿದ್ದ ಮಂದಿ ನನ್ನನ್ನು ಮುದ್ದಿಸಲನುವಾದರು. ಪೂಜಾರಿಯ ಮಂತ್ರದ ನಂತರ ನನ್ನನ್ನ ಆ ಸೊಗಸಾದ ತೊಟ್ಟಿಲಲ್ಲಿ ಮಲಗಿಸಿದರು.

ಹೌದು!ಇಂದು ನನ್ನ ನಾಮಕರಣ ಮಹೋತ್ಸವ. ಮಗು ಹೆಸರೇನೆಂದು ಕೇಳಿದಾಗ ತಂದೆ ರಾಮರಾಯರು ಪುರುಷೋತ್ತಮಾ”ಅಂದರು ಬ್ರಾಹ್ಮಣರಿಗೆ. ನನ್ನ ಹೆಸರನ್ನೂ ಕೂಡಿಸಿ ಮಂತ್ರವೊAದನ್ನ ಪಠಿಸಿದರು. ಅಪ್ಪಾಜಿ ಮತ್ತು ಅಮ್ಮ ಬೆಣ್ಣೆ ಬಾಯಿಗಿಟ್ಟು ಪುರುಷೋತ್ತಮಾ”ಎಂದರು.ಆನAತರ ಸರದಿಯಂತೆ ಬಂಧುಬಳಗದವರೆಲ್ಲಾ ಬಂದು ಬಾಯಿಗೆ ಬೆಣ್ಣೆ ಸವರಿ ಹೆಸರನ್ನುಚ್ಚರಿಸಿ,ಬಹುಬೆಲೆಬಾಳುವಂತಹ ಉಡುಗೊರೆಗಳನ್ನು ನೀಡಿ ಅಥವಾ ಇಟ್ಟು ಕೆನ್ನೆ ಸವರಿ ಅಥವಾ ಪ್ರೀತಿಯಿಂದ ಮುದ್ದಿಸಿ ಹೊರಡುತ್ತಿದ್ದರು.

ಊಟಕ್ಕಿಂತ ಮುಂಚೆ ಓಪನ್‌ಬಾರ್‌ನ ವ್ಯವಸ್ಥೆಯಿತ್ತು..ಆನಂತರ ರುಚಿರುಚಿಯಾದ ಭರ್ಜರಿ ಊಟ. ನಾಮಕರಣ ಮಹೋತ್ಸವ ಭರ್ಜರಿಯಾಗಿತ್ತು. ಒಟ್ಟಾರೆ ನನಗೊಂದು ಹೆಸರನ್ನು ಇಟ್ಟಿದ್ದರು.

ಬಾಲ್ಯಾವಸ್ಥೆ, ಪ್ರೌಢಾವಸ್ಥೆ ದಾಟಿ, ಯೌವನಾವಸ್ಥೆ ಬಂದಾಗ ನನ್ನ ವಿದ್ಯಾಭ್ಯಾಸ ಮುಗಿದಿತ್ತು. ಮುಂದೆ ಪ್ರಸಿದ್ಧ ಕಾಲೇಜೊಂದರೆ ಪ್ರೊಫೆಸರ್ ಹುದ್ದೆ ಅಲಂಕರಿಸಿದ್ದೆ. ನನ್ನ ಮನೆಯಲ್ಲಿ ಪುಸ್ತಕಭಂಡಾರವೇ ಇತ್ತು. ಎಲ್ಲಾ ಕ್ಷೇತ್ರಗಳಿಗೆ ಸಂಬAಧಪಟ್ಟ ಪುಸ್ತಕ ಗ್ರಂಥಗಳೇ ಜಾಸ್ತಿ. ಆದರೆ ಅದಕ್ಕಿಂತಲೂ ಮನಸ್ಸಿನ ವಿಷಯಕ್ಕೆ ಸಂಬAಧಪಟ್ಟ ಗ್ರಂಥಗಳು. ಗ್ರಂಥಗಳು ನನ್ನ ಜ್ಞಾನದ ಆಹಾರವಾಗಿದ್ದವು. ಎಷ್ತು ಪತ್ರಿಕೆಗಳು, ವಾರಪತ್ರಿಕೆ, ಮಾಸಪತ್ರಿಕೆ ಯಾವುದಿವೆಯೋ ಎಲ್ಲವೂ ನಮ್ಮ ಮನೆಬಾಗಿಲಿಗೆ ಬಂದು ಬಿದ್ದಿರುತ್ತಿತ್ತು.ಓದುವಿನ ಹುಳುವಾಗಿದ್ದೆನು.

ನನ್ನಲ್ಲೂ ಮನುಷ್ಯ ಸಹಜದಂತೆ ಪ್ರೇಮ ಕಾಮ ಮೂಡತೊಡಗಿದ್ದು, ಅನುಸೂಯಳನ್ನ ಕಂಡಾಗ. ಅವಳ ನಡೆ ಸೌಂದರ್ಯ, ಜತೆಗೆ ಮೈಮಾಟ ನನ್ನ ಬುದ್ದಿಗೆ ಹುಚ್ಚೇ ಹಿಡಿಸಿತ್ತು.ಅವಳ ನೋಟಕ್ಕಾಗಿ ಸನಿಹಕ್ಕಾಗಿ ಮಾತಿಗಾಗಿ, ನಂತರ ಸ್ನೇಹಕ್ಕಾಗಿ ಪ್ರೀತಿಗಾಗಿ ನಿದ್ದೆಯಿಲ್ಲದ ರಾತ್ರಿಗಳನ್ನು ಅದೆಷ್ಟೋ ಕಳೆದಿದ್ದೇನೆ. ಕೊನೆಗೂ ನನ್ನ ಹೃದಯ ಬಲೆಯಲ್ಲಿ ಆ ಹಕ್ಕಿ ಬಿದ್ದಿತು. ಅನಸೂಯ ನೃತ್ಯ ಕಲಾವಿದೆ. ಹಲವು ಕಲಾಸಕ್ತರಿಗೆ ಭರತನಾಟ್ಯ ತರಬೇತಿ ನೀಡುತ್ತಿದ್ದಳು. ಅವಳ ತಂದೆ ರಂಗಪ್ಪ ಪ್ರೆöÊಮರಿ ಸ್ಕೂಲ್ ಒಂದರ ಮೇಷ್ಟುç. ಅವರ ತಾಯಿ ಶಾರಮ್ಮ ಗೃಹಿಣಿ. ಅನಸೂಯಳ ತಮ್ಮನೊಬ್ಬ ಸಣ್ಣ ಅಂಗಡಿಯೊAದನ್ನು ಇಟ್ಟುಕೊಂಡಿದ್ದಾನೆ.

ಎಲ್ಲಾ ಪ್ರೇಮಕಥೆಗಳಿಗೆ ಬರುತ್ತಿದ್ದ ತಿರುವುಗಳಂತೆ ನಮ್ಮಲ್ಲೂ ಪ್ರಾರಂಭವಾಯ್ತು. ನಮ್ಮ ತಂದೆಗೆ ಕಿಂಚಿತ್ತೂ ಇಷ್ಟವಿರಲ್ಲಿಲ್ಲ. ಮಾತ್ರವಲ್ಲ ಅಂತಸ್ತಿಗೆ ತಕ್ಕವರಲ್ಲ ಹಾಗೂ ಜಾತಿಯೆಂಬ ಸಬೂಬು ಮುಂದೆಯಿಟ್ಟು ರಗಳೆ ಪ್ರಾರಂಭಿಸಿದರು. ತಾಯಿಯೂ ದನಿಗೂಡಿಸಿದರು. ಪ್ರೇಮಿಗಳಿಗೆ ತಾನೇ ಜಯ. ತಂದೆ ತಾಯಿ ಮುಂದೊAದು ದಿನ ತಲೆಬಾಗಲೇ ಬೇಕಾಯ್ತು. ಅನುಸೂಯಳೊಂದಿಗೆ ಬೇರೊಂದು ಸ್ಥಳಕ್ಕೆ ಹೋಗಿದ್ದ ನನ್ನನ್ನು ವಾಪಾಸು ಕರೆಸಿ ಅರತಕ್ಷತೆ ಮಾಡಿಸಿದರು. ಅನಸೂಯ ನನ್ನ ಕೈ ಹಿಡಿದ ಧರ್ಮಪತ್ನಿಯಾದಳು. ತುಂಬಾ ಸಂತಸದಲ್ಲಿದ್ದು ಆರಾಮವಾದಾಗ ಮುಸ್ಸಂಜೆ ಇಬ್ಬರೂ ಸಮುದ್ರ ತಟದಲ್ಲಿ ಕುಳಿತು..ನಯನ ಮನೋಹರ ದೃಶ್ಯ ನೋಡುತ್ತ ಕೆಲವೊಮ್ಮೆ ಅಲ್ಲಿನ ಅಲೆಯಲ್ಲಿ ಆಡುತ್ತಾ ಪ್ರಣಯ ಸಲ್ಲಾಪದಲ್ಲಿ ತೊಡಗಿರುತ್ತಿದ್ದೆವು.

ದಿನಗಳುರುಳುತ್ತಿದ್ದವು...ಅನುಸೂಯಳಲ್ಲಿ ಬದಲಾವಣೆ ಗಮನಿಸುತ್ತಿದ್ದೆ..ಅದೊಂದು ದಿನ ನಾನು ಗಂಡು ಮಗುವಿನ ತಂದೆಯಾದೆನು. ಆ ಹೊತ್ತಿಗಾಗಲೇ ತಂದೆ ರಾಮರಾಯರು ನಿಧನರಾಗಿದ್ದರು.

ಮಗ ರಾಘು ಬೆಳೆಯುತ್ತಿದ್ದ...ಯಾಕೆಂದರೆ ಕಾಲ ಹಾಗೂ ವಯಸ್ಸು ನಿಲ್ಲುವುದಿಲ್ಲ.ರಾಘು ವಿದೇಶಕ್ಕೆ ಹೋಗಿ ಬಂದ.ಇಲ್ಲಿ ಹುದ್ದೆಯೂ ಆಯಿತು.ಮಹಾಲಕ್ಷಿ÷್ಮ ಹೆಸರಿಗೆ ತಕ್ಕಂತೆಯೇ ಬಂದು ಸೊಸೆಯಾಗಿ ಬೆಳೆಗಿದಳು. ಮದುವೆ ಕಳೆದ ಹದಿನಾರು ದಿನದಲ್ಲೇ ತಾಯಿಯಾದ ಗಂಗಾದೇವಿಯೂ ಮರಣವನ್ನಪ್ಪಿದಳು. ಅನಸೂಯಳಿಗೆ ಮೆದುಳಿಗೆ ಸಂಬAಧಪಟ್ಟ ಕಾಯಿಲೆ ಇತ್ತು. ಅದೊಂದು ದಿನ ಅವಳೂ ವಿಧಿವಶಳಾದಳು.. ತಡೆಯಲು ಸಾಧ್ಯವಿದ್ದಿದ್ದರೆ ತಡೆಯಬಹುದುದಾಗಿತ್ತು. ಸಾಧ್ಯವಿಲ್ಲವಲ್ಲ..ಎಲ್ಲರೂ ಸಾಯುವವರೇ. ಮುಂದೊAದು ದಿನ ನಾನೂ ಕೂಡ. ಕಲ್ಪಿಸಿಕೊಂಡಾಗ ಇದು ಒಂದು ಪಯಣವೇ ಸರಿಯೆನಿಸುತ್ತಿದೆ.

ಬದುಕೆಂಬ ದಾರಿಯಲ್ಲಿ ಏನೆಲ್ಲಾ ತಿರುವುಗಳು?!..ಸಾಗುವಾಗ ಸಂತಸದ ಜತೆಜತೆಗೆ ನೋವು, ಸರಸ, ಕುಹಕ ಬದಲಾಗುವ ಬಣ್ಣಗಳು..ಇದೇನು ಕನಸಾ..ಅಲ್ಲಾ ನನಸಾ ಅನ್ನೋ ತರದ ಘಟನಾವಳಿಗಳು. ಅಂತ್ಯದೆಡೆಗೆ ಸಾಗುವ ದಾರಿ ವಿಚಿತ್ರವಾದರೂ, ಅದುವೇ ಸರಿಯಲ್ಲವೇ. ಹಾಗಾದರೆ ಈ ದಾರಿಯಲ್ಲಿ ನನ್ನ ಪಾತ್ರವೇನು..ದ್ವಂದ್ವತೆಯೇ ನಿಜವಾಗುತ್ತದೆಯಲ್ಲ..!


ದಿನಗಳು ಸರಿಯುತ್ತಿವೆ..ಇತ್ತೀಚೆಗೆ ಯಾರ ಹತ್ತಿರವೂ ಸೇರುತ್ತಿಲ್ಲ..ನಾನಾಯ್ತು ಕಾಲೇಜಾಯ್ತು.ಮನೆ ಹಾಗೂ ಅದೇ ಸಮುದ್ರ ತಟವಾಯ್ತು.ಈಗೀಗ ವಿಭಿನ್ನವಾದೊಂದು ಪ್ರಶ್ನೆ ತಲೆ ಕೊರೆಯುತ್ತ್ತಿದೆ. ಯಾವಾಗಲೂ ಕಾಡುತ್ತಿದೆ..ಅದೇ ನಾನ್ಯಾರು?..ಇಲ್ಲೇನು ಕಾಯಕ!..ಜೀವದಿಂದ ಜೀವ ಚೆಲ್ಲಿ ಬಿದ್ದ ಹಾಗೆ!!..ಹುಟ್ಟು, ಸಾವಿನ ಆರಂಭವೇ!?ಸಾವಿನ ನಂತರ.. ಇದಕ್ಕೆ ಸಂಬAಧಪಟ್ಟAತೆ ತತ್ವಶಾಸ್ತç,ಮನ ಶಾಸ್ತç.ವೈಜ್ಞಾನಿಕ ಪುಸ್ತಕಗಳು..ಧಾರ್ಮಿಕ ನೆಲೆಗಟ್ಟಿನ ಆಧಾರದ ಮೇಲೆ ನಿರೂಪಿಸಲ್ಪಟ್ಟಿರುವ ಗ್ರಂಥಗಳು..ಊಹುA! ಆದರೆ ಯಾವುವೂ ನನಗೆ ಸೂಕ್ತ ಉತ್ತರ ನೀಡಿಲ್ಲ. ಭಾವನೆಗಳು ಮಿತಿಮೀರಲು ಪ್ರಾರಂಭಿಸಿವೇ?..

ಪ್ರೊಫೆಸರ್ ಹುದ್ದೆಗೆ ನಿವೃತ್ತಿ ಘೋಷಿಸಿ ಮನೆಯಲ್ಲಿದೆ.ಜಾಸ್ತಿ ಹೊತ್ತು ಅದೇ ಸಮುದ್ರ ತಟದ ಜಾಗ..!!. ತೇಜು ಇಂಥಕಾಲದಲ್ಲೇ ಹುಟ್ಟಿ ಬೆಳೆದು ಕಾನ್ವೆಂಟಿಗೆ ಹೋಗುತ್ತಿದ್ದಾನೆ. ಮಗನಿಗೆ ನನ್ನ ಇತ್ತೀಚಿನ ವರ್ತನೆ ಕುರಿತಂತೆ ಬಂದ ಸಂಶಯಕ್ಕೆ, ಬೇರೆಯವರ ಒಗ್ಗರಣೆ ಬೇರೆ..ಸಂಶಯದಿAದ ಒಂದೆರಡು ಬಾರಿ ನಿಮ್ಹಾನ್ಸ್ಗೆ ಕರೆದು ಕೊಂಡು ಹೋಗಿ ಬಂದಿದ್ದ.

ಹೌದು! ಸತ್ಯವನ್ನೇ ಇಲ್ಲಿ ಸುಳ್ಳೆಂದು ನಂಬಿಕೊಳ್ಳಲಾಗಿದೆ. ನಿಜ ಸಾರಲು ಹೋದರೆ..ಮರುಕ ದೃಷ್ಟಿಯಿಂದ ನೋಡುತ್ತಾರೆ.ಅದರರ್ಥ ಪರೋಕ್ಷವಾಗಿ ಹುಚ್ಚನ ಪಟ್ಟ ಕಟ್ಟುವುದೇ ಆಗಿದೆ.ಒಂದುಬಾರಿ ನಾನು ತೇಜುವನ್ನು ಕರೆದು, ನೀನು ತೇಜುವಲ್ಲ ನಾನು ನಿನ್ನ ತಾತ ಪುರುಷೋತ್ತಮಾರಾಯ್ರೂ ಅಲ್ಲ ಅಂತ ಗಂಭೀರವಾಗಿ ನುಡಿದಾಗ ಆ ಮುಗ್ದ ಕಂದ ಅರ್ಥವಾಗದೆ ನನ್ನ ಮುಖವನ್ನೆ ನೋಡಿ, ಹಾಗಾದ್ರೆ ನೀನ್ಯಾರು.. ನಾನ್ಯಾರು?ಅಂತ ಕೇಳಿತ್ತು. ಅದೇ ಪ್ರಶ್ನೆಯೀಗ ಎಂದೆ. ಇದನ್ನು ಗಮನಿಸುತ್ತಿದ್ದ ಮಗ ಅಂದಿನಿAದ ನನ್ನ ಮೇಲೆ ನಿಗಾ ಇರಿಸಿದ್ದಾನೆ.

***

ವಾಸ್ತವ್ಯಕ್ಕೆ ಬಂದೆ. ಸೂರ್ಯ ಮುಳುಗಿದ್ದ. ಸುತ್ತಲೂ ಕತ್ತಲಾವರಿಸಿತ್ತು.ಗಡ್ಡ ಸವರಿಕೊಳ್ಳಲೂ ತ್ರಾಣವಿರಲಿಲ್ಲ. ಅಬ್ಬಬ್ಬಾ! ನೆನಪುಗಳೇ..ಸಾವು ಎಂಬ ಮರೆವು ಎಂಥೆAತಹಾ ವಿಚಿತ್ರ ಆಟಕ್ಕೆ ಕಾರಣವಾಗಿರುತ್ತದೆ. ಅಥವಾ ವಿಚಿತ್ರ ಪಾತ್ರಧಾರಿಗೆ ಸಾವಿನ ಪರಿವೆ ಇರುವುದಿಲ್ಲವೆಂದು ತೋರುತ್ತದೆ.

ಬಹುಶ: ವಾಸ್ತವ್ಯದಲ್ಲಿದ್ದರೂ ಅತೀಂದ್ರಿಯ ಶಕ್ತಿಯ ಮೂಲಕ ಈ ಪರಿಕಲ್ಪನೆ ಸಾಧ್ಯವಾಗಿರಬಹುದೇ?!. ಸಂಬAಧಗಳು ಸಮಾಜ ಪರಂಪರೆ ಸಂಸ್ಕöÈತಿ ಇವೆಲ್ಲ ಗಣನೆಗೆ ಬರುವುದು ನಾನು ನನ್ನಲ್ಲಿ ಲೀನವಾಗದೆ ಇದ್ದಾಗ ತಾನೇ?!. ಅಚೇತನಾ ವಸ್ತುವಿನೊಡನೆ ನಾನು’ಸೇರಿದಾಗಲೇ ಚೈತನ್ಯವಾಗಬಹುದೇನೋ. ಹಾಗಾದರೆ ಹೆಸರು, ದೇಹ, ಸಂಸಾರ, ಬಾಂಧವ್ಯವವು ಕೇವಲ ನೆಪಗಳಾಗಬಹುದೇನೋ.

ಹೌದು!! ನಾನು ಈಗ ಸಾವು ಎಂಬ ಹುಟ್ಟಿಗೆ ಸಿದ್ದನಿದ್ದೇನೆ. ಅರ್ಥಾತ್ ಸಾಯುವವನಿದ್ದೇನೆ.ಹಾಗೇ ಸತ್ತು ಹೋದೆನು..ಕೆಳಬಿದ್ದಿತು ನನ್ನ ದೇಹ.

ಎಲ್ಲೆಲ್ಲೂ ರೋಧನ..ದು:ಖಸಾಗರ.ಅದೇ ಹುಟ್ಟಿದ ಮನೆಯ ತುಂಬೆಲ್ಲಾ ಬಂಧುಬಳಗ ನೆಂಟರಿಷ್ಟರು.!!. ಅಂದಿನ ಸಂಭ್ರಮ, ಕೇಕೆ, ನಗು ದೊಡ್ಡ ದೊಡ್ಡ ವ್ಯವಹಾರದ ಮಾತು ಈಗಿರಲ್ಲಿಲ್ಲ...ಈವಾಗ ವಾತಾವರಣದ ತುಂಬೆಲ್ಲಾ ಶೋಕಸಾಗರ!! ಅಷ್ಟಕ್ಕೂ ಹುಟ್ಟುವಾಗ ಸಂತೋಷವೇ ಪಡಬೇಕೆ?! ಸಾವಿನ ಹುಟ್ಟೆಂದು ತಿಳಿದುಕೊಂಡು ಶೋಕ ಸಾಗರ ನಿರ್ಮಿಸಬಾರದೆ?!..ಹಾಗೇ ಸಾಯುವಾಗ ದು:ಖವಾದರೂ ಏಕೆ?! ಇಂದಿನ ಸಾವು ನಾಳೆಯ ಹುಟ್ಟು ಎಂದು ತಿಳಿದು ಸಂಭ್ರಮ ಪಡಬಾರದೇ?..ಅಂದರೆ ನನ್ನನ್ನ ಮರೆತಿದ್ದಾರೆ!!ಎಲ್ಲಾ ಮರೆತು ರೂಪ ಗಂಧಗಾಳಿಯ ಈ ನಿಸ್ತೇಜ ಶರೀರಕ್ಕೆ ಹೆಸರನ್ನಿಟ್ಟು ಸಾಯಿಸುತ್ತಿದ್ದಾರೆ.

ಶಾಸ್ತೊçÃಕ್ತವಾಗಿ, ಮುಖ್ಯವಾಗಿ ಕೆಲಜನರು ಬಂದು ಒಂದೊAದು ಚೆಂಬು ನೀರನ್ನು ಸತ್ತ ನನ್ನ ತಲೆಯ ಮೇಲೆ ಹುಯ್ದು ಹೋಗುತ್ತಿದ್ದರು..ಹೌದು! ಸತ್ತು ಹೋದ ನನ್ನನ್ನು ಸ್ನಾನ ಮಾಡಿಸುತ್ತಿದ್ದರು. ನನ್ನ ಶರೀರ ನಿಸ್ತೇಜವಾಗಿತ್ತು.ಆನಂತರ ಸುಗಂಧದ್ರವ್ಯ ಎರಚಿ ಉಡುಪುಗಳ ಅಲಂಕಾರ ಮಾಡಿದ್ದರು. ಹೂವಿನ ಅಲಂಕಾರ ಬೇರೆ...ಅದ್ಯಾರೋ ಎಲೆಅಡಿಕೆಯನ್ನ ಜಜ್ಜಿ, ನನ್ನ ಬಾಯಲ್ಲಿಟ್ಟಿದ್ದರು. ಹಣೆಗೆ ನಾಮವಿರಿಸಿ ನಾಣ್ಯ ಅಂಟಿಸಿದ್ದಿರು. ನನ್ನ ಪಯಣಕ್ಕೆ ಸಿದ್ದವಾಗಿದ್ದ ಚಟ್ಟ ಕೂಡ ಸಿಂಗಾರಗೊAಡಿತ್ತು.ಸುತ್ತಲೂ ಸಾಮಿಯಾನವೂ ಅಂದಿನAತೆ ಇಂದೂ ಇತ್ತು. ಆದರೂ ಪುಳಕಗೊಳ್ಳದೆ ಅಳುತಿದ್ದಾರಲ್ಲಾ. ನನ್ನ ಸಿಂಗಾರ ನೋಡಿಯಾದರೂ ಸಂತೋಷದಿAದ ಪುಳಕಗೊಳ್ಳಬಾರದೇ?!. ಆದರೆ ಯಾರೂ ಸಿದ್ದರಿರಲ್ಲಿಲ್ಲ. ಆ ವಾತಾವರಣವೇ ದು:ಖ ಸಾಗರದಲ್ಲಿ ಮಡುಗಟ್ಟಿತ್ತು. ಇಡೀ ಬಂಗಲೆಯೇ ಶೋಕಸಾಗರದಲ್ಲಿ ಮುಳುಗಿತ್ತು.

ಬಂದುಬಳಗದವರ ರೋಧನ ಮುಗಿಲು ಮುಟ್ಟಿದ್ದೆಂದರೆ, ನನ್ನನ್ನ ಚಟ್ಟದಲ್ಲಿರಿಸಿ ಮಸಣದ ಕಡೆ ಹೊರಟಾಗ..ಎಲ್ಲೆಲ್ಲೂ ಜನಸಾಗರ ಆದರೆ ನನಗೀಗ ಯಾವುದು ದು:ಖ ಯಾವುದು ಸುಖ ಒಂದೂ ಗೊತ್ತಾಗುತ್ತಿಲ್ಲ..ಯಾಕೆಂದರೆ ನಾನು ಪಯಣಿಗನಷ್ಟೇ ಆಗಿದ್ದೆ. ಈಗ ಅಥವಾ ಯಾವತ್ತೂ..

ಚಟ್ಟವನ್ನು ಮಸಣದಲ್ಲಿರಿಸಿದರು. ದು:ಖದಿಂದ ಅತ್ತೂ ಅತ್ತೂ ಸುಸ್ತಾಗಿದ್ದವರೆಲ್ಲರೂ..ಅಳಲಾರದೆ ಮೌನಕ್ಕೆ ಶರಣಾಗಿದ್ದರೂ..ಅಲ್ಲೊಂದು ಶೋಕದ ವಾತಾವರಣ ಬಿಗಿಯಾಗಿತ್ತು. ಪುöರುಷೋತ್ತಮಾರಾಯ್ರು ಹೋಗಿ ಬಿಟ್ರಲ್ಲ ಸ್ವಾಮೀ..ಅಂತ ಮೌನದ ಮಧ್ಯೆ ಕೀರಲಾಗಿ ಯಾರೋ ಒಬ್ಬರು ನುಡಿದು ಬಿಕ್ಕಳಿಸಿದರು.

ಸ್ವಲ್ಪ ದೂರದಲ್ಲಿ ಗುಂಡಿ ತೋಡಲಾಗಿತ್ತು..ಸರಿ! ಎಲ್ಲರೂ ಕಾರ್ಯೋನ್ಮುಖರಾದರು..ನನ್ನನ್ನು ಎತ್ತಿ ಗುಂಡಿಯಲ್ಲಿರಿಸಿದರು..ಸಿAಗಾರ ಮಾಡಿದ್ದ ಚಟ್ಟ ಹೊರಗಡೆಯೇ ಇತ್ತು. ಎಲ್ಲರೂ ಒಬ್ಬೊಬ್ಬರಂತೆ ಬಂದು ಹಿಡಿ ಮಣ್ಣನ್ನು ಹಾಕಿ ನಡೆದರು. ಗುದ್ದಲಿ ಹಿಡಿದಿದ್ದ ಒಂದಿಬ್ಬರು ಗುಂಡಿ ಮುಚ್ಚಲು ಅನುವಾದರು. ಆತನೊಬ್ಬನ ಗುದ್ದಲಿಯಿಂದ ಎಳೆಯಲ್ಪಟ್ಟ ಮಣ್ಣು ಗುಂಡಿಯಡಿ ನಿಸ್ತೇಜನಾಗಿ ಮಲಗಿದ್ದ ನನ್ನೆದೆಯ ಮೇಲೆ ದೊಪ್ಪನೆ ಬಿದ್ದಿತು. ಮಣ್ಣು ಬೀಳುತ್ತಲೇ ಇತ್ತು...ಗುದ್ದ ಸಿದ್ದವಾಯ್ತು. ಹೂವಿನ ಅಲಂಕಾರ ಮಾಡಿ ಊದುಬತ್ತಿ ಹಚ್ಚಿದರು..ತೆಂಗಿನಕಾಯಿ ಒಡೆದಿಟ್ಟರು..ಗಂಧ ಪುಷ್ಪಾರ್ಚನೆಯಿಂದ ಇಡೀ ವಾತಾವರಣ ಘಮಘಮಿಸುತ್ತಿದ್ದರೂ ಎಂಥಾ ಸುವಾಸನೆಯೆಂದು ಆಸ್ವಾದಿಸುವಂತಿಲ್ಲ. ಒಂದು ರೀತಿಯಲ್ಲಿ ದು:ಖದೊಡನೆ ಭಯವೂ ಇದ್ದಿರಬಹುದೇನೋ!?. ಅಂತಿಮ ನಮನವೆಂಬAತೆ ಕೈಮುಗಿದು ತೆರಳುತ್ತಿದ್ದರು.. ಎಲ್ಲರ ಕಣ್ಣಲ್ಲೂ ನೀರು..ಈಗ ಜೋರಾಗಿ ಯಾರೂ ಅಳುತ್ತಿರಲ್ಲಿಲ್ಲ..ಮೌನದ ಮಧ್ಯೆಮಧ್ಯೆ ಬಿಕ್ಕುವಿಕೆ ಮಾತ್ರ.

***

ಎಲ್ಲರಿಗೂ ನಾನು ಸತ್ತಿದ್ದೇನೆಂದೇ ಭಾವನೆ..!! ವಾಪಾಸು ಹೋಗುತ್ತಿದ್ದರು..ನನ್ನೊಬ್ಬನನ್ನು ಬಿಟ್ಟು ತಿರುಗಿ ನೋಡದೆಯೂ..ಸುಳ್ಳಿನ ಪ್ರಪಂಚಕ್ಕೆ. ಆದರೆ ಸತ್ಯವೆಂದರೆ ನಾನು ಸತ್ತಿರಲಿಲ್ಲ. ಸತ್ತಿದ್ದು ನಾನಲ್ಲ..ಅದು ಪುರುಷೋತಮಾರಾಯ್ರು.   

ಸೂರ್ಯ ಮುಳುಗುತ್ತಲ್ಲಿದ್ದ..ಅಷ್ಟೆ. ಅದು ಅಂತ್ಯವಲ್ಲ...ಮತ್ತೊAದು ಹುಟ್ಟಿಗೆ ನಾಂದಿ..

ನಾನು ಪಯಣಿಗನಷ್ಟೇ ಆಗಿದ್ದೆ.

***



Rate this content
Log in