Revati Patil

Abstract Drama Others

3  

Revati Patil

Abstract Drama Others

ಗಾನವಿ 2

ಗಾನವಿ 2

2 mins
360


ಗಾನವಿ ಮದುವೆ ಅಂದ ತಕ್ಷಣ ಒಮ್ಮೊಮ್ಮೆ ಸಿಟ್ಟಾಗುತ್ತಿದ್ದಳು , ಇಲ್ಲವೇ ಒಮ್ಮೊಮ್ಮೆ ಮಂಕಾಗುತ್ತಿದ್ದಳು. ಆದರೆ ಮದುವೆಗೆ ಒಪ್ಪಿಗೆಯನ್ನು ನೀಡಿರಲಿಲ್ಲ. ಮೋಹನ್'ಗೆ ಇದು ತುಂಬಾ ಚಿಂತೆಯ ವಿಷಯವಾಯಿತು. ಜಾಹ್ನವಿಯನ್ನು ಕರೆದು ಅಕ್ಕನೊಂದಿಗೆ ಮಾತನಾಡಲು ಹೇಳಿದನು.


ಜಾಹ್ನವಿ ಅಕ್ಕನೊಂದಿಗೆ ಮಾತನಾಡಿದಳು. ಗಾನವಿಗೆ ಅಪ್ಪ ಮತ್ತು ತಂಗಿಯನ್ನು ಬಿಟ್ಟು ಗಂಡನ ಮನೆಗೆ ಹೋಗಲು ಇಷ್ಟವಿಲ್ಲದೆ ಮದುವೆಯ ಪ್ರಪೋಸಲ್'ಗಳನ್ನು ರಿಜೆಕ್ಟ್ ಮಾಡುತ್ತಿದ್ದಳು. ಆದರೆ ಮೋಹನ್'ಗೆ ಮದುವೆ ಮಾಡದೆ ಇರಲು ಆಗುತ್ತಾ? ಹೇಗಾದರೂ ಮಾಡಿ ಮಗಳನ್ನು ಒಪ್ಪಿಸಿ ಮದುವೆ ಮಾಡುವುದು ಮೋಹನ್ ವಿಚಾರವಾಗಿತ್ತು. ಒಂದು ದಿನ ಮಗಳೊಂದಿಗೆ ಮೋಹನ್ ಮಾತಿಗಿಳಿದನು.


ಮಗಳೇ ಗಾನವಿ , ಈ ತರ ಹಠ ಮಾಡಿ ಯಾಕಮ್ಮ ನೋವು ಕೊಡುವುದು ? ಇವತ್ತಿಲ್ಲ ನಾಳೆ ಮದುವೆ ಆಗಿ ಹೋಗಲೇಬೇಕಲ್ಲ , ನೀನು ಒಪ್ಪಿ ಮದುವೆ ಆದರೆ ಮುಂದೆ ನಿನ್ನ ತಂಗಿ ಜಾನು ಮದುವೆ ಆಗುವುದು. ಅಲ್ಲವೇ. ಹಠ ಬೇಡ ಮಗಳೇ, ಒಪ್ಪಿಕೊ. ನೀನೊಪ್ಪಿದರೆ ಎಲ್ಲರಿಗೂ ಖುಷಿಯಾಗುತ್ತದೆ. ಮಗಳೇ ದಯವಿಟ್ಟು ಒಪ್ಪಿಕೊ ಎಂದು ಕೇಳಿಕೊಂಡನು. 


ಅಪ್ಪನ ಆ ದಯಾಮಯ ಮಾತುಗಳಿಗೆ ಸೋತ ಮಗಳು, ಮದುವೆಗೆ ಒಪ್ಪಿದಳು. ಆದರೆ ಅವಳ ಚಿಂತೆ ಅಪ್ಪನನ್ನು ತಂಗಿಯನ್ನು ಬಿಟ್ಟು ಹೇಗೆ ಹೋಗಲಿ, ತಾನು ಹೋದರೆ ಇಬ್ಬರು ಹೇಗೆ ಇರುತ್ತಾರೆ , ತಂಗಿ ಚಿಕ್ಕವಳು ,ಅಪ್ಪ ಬರುವುದು ತಡವಾದರೆ ಆಕೆ ಒಬ್ಬಳೇ ಹೇಗೆ ಇರುತ್ತಾಳೆ ? ಅಂತ ಆಕೆಯ ತಲೆಯಲ್ಲಿ ನೂರೆಂಟು ಪ್ರಶ್ನೆಗಳು ಬರಲಾರಂಭಿಸಿದವು. ಆದರೂ ಒಂದು ಧೈರ್ಯ ಮಾಡಿಕೊಂಡು ಅಪ್ಪನ ಹತ್ತಿರ ಬಂದು ಮಾತು ಶುರು ಮಾಡಿದಳು.  ಅಪ್ಪ ನಾನು ನಿಮ್ಮ ಮಾತಿನ ಪ್ರಕಾರ ಮದುವೆಗೆ ಒಪ್ಪಿದ್ದೇನೆ. ಆದರೆ ಜಾನು ಮದುವೆ ಆಗುವವರೆಗೆ ನಾನು ಇಲ್ಲೇ ಇರಲು ಒಪ್ಪಿಗೆ ಕೊಡಿ. ನೀವು ಹೊರಗಿನಿಂದ ಬರುವುದು ತಡವಾದರೆ ಒಬ್ಬಳೇ ಆಗುತ್ತಾಳೆ. ಭಯ ಪಡುತ್ತಾಳೆ. ಹಾಗೆ ಹೀಗೆ ಅಂತ ಹೇಳಿದಳು. ಮೋಹನ್ಗೆ ಮಗಳ ಮದುವೆ ಆಗುವುದು ಬೇಕಿತ್ತು. ಆದ್ದರಿಂದ ಗಾನವಿಯ ಎಲ್ಲ ಮಾತುಗಳಿಗೂ ಒಪ್ಪಿದನು.


ಖುಷಿಯಿಂದ ದೊಡ್ಡ ಮಗಳ ಮದುವೆ ಆಯಿತು. ಶಾಸ್ತ್ರದ ಪ್ರಕಾರ ಗಂಡನ ಮನೆಗೆ ಹೋದಳು. ಗಾನವಿಯ ದೇಹ ಮಾತ್ರ ಹೋಗಿತ್ತು. ಆದರೆ ಆಕೆಯ ಮನಸ್ಸು ಇಲ್ಲೇ ತವರಲ್ಲೇ ಇತ್ತು.


ಸ್ವಲ್ಪ ದಿನ ಕಳೆದ ಮೇಲೆ ಗಾನವಿ ತವರಿಗೆ ಹೋಗುವ ಮಾತು ತೆಗೆದಳು. ಗಾನವಿ ಗಂಡನಿಗೆ ಈ ವಿಷಯ ಯಾವುದು ಗೊತ್ತಿರಲಿಲ್ಲ. ಅದಕ್ಕೆ ಸ್ವಲ್ಪ ವಿರೋಧ ವ್ಯಕ್ತಪಡಿಸಿದನು. ಗಾನವಿಗೆ ಬೇಸರವಾಯಿತು. ಅವಳ ಗಂಡ ಮಾತ್ರ ಆಕೆಯನ್ನು ತವರಲ್ಲಿ ಬಿಡಲು ಒಪ್ಪಲೇ ಇಲ್ಲ.ಜೊತೆಗೆ ಅವಳ ಅತ್ತೆ ಮಾವ ಕೂಡ ಒಪ್ಪಲಿಲ್ಲ. ಹೀಗಿದ್ದಾಗ ಅವಳಿಗೆ ತವರಿನದೇ ಚಿಂತೆಯಾಯಿತು. ಆಗ ಎಲ್ಲರೂ ಕುಳಿತು ಗಾನವಿಯ ತಂಗಿಯನ್ನು ಆಕೆಯ ಮೈದುನನಿಗೆ ತೆಗೆದುಕೊಳ್ಳಲು ಹೇಳಿದರು. ಅದಕ್ಕವಳು ಒಪ್ಪಿದಳು. ಜೊತೆಗೆ ಅಸ್ಕೆಯ ಮನೆಯವರು ಅವಳ ಅಪ್ಪನಿಗೆ ಎರಡನೆಯ ಮದುವೆ ಮಾಡುವ ಕುರಿತು ಯೋಚಿಸಿದರು. ಜೊತೆಗೆ ತಮ್ಮ ಸಂಬಂಧಿಕರ ಮನೆಯಲ್ಲಿ ಒಬ್ಬ ಹೆಣ್ಣುಮಗಳಿದ್ದಾಳೆ, ಒಳ್ಳೆಯವಳು, ವಯಸ್ಸಾಗಿದೆ. ಮದುವೆ ಆಗಿ ಎರಡು ವರ್ಷಕ್ಕೆ ಗಂಡ ತೀರಿ ಹೋಗಿದ್ದಾನೆ. ಮಕ್ಕಳು ಇಲ್ಲ . ಅವಳು ಒಪ್ಪಿದರೆ ಎಲ್ಲವೂ ಒಳ್ಳೆಯದಾಗುತ್ತದೆ ಎಂದರು.


ಗಾನವಿಗೂ ಖುಷಿಯಾಯ್ತು. ಒಂದೇ ಸಮಯಕ್ಕೆ ಅಪ್ಪ ಹಾಗೂ ತಂಗಿಯ ಇಬ್ಬರ ಸಮಸ್ಯೆ ಕೂಡ ಬಗೆ ಹರಿಯಿತೆಂದು ಖುಷಿಯಾದಳು. ಅದೇ ಮಾತಿನಂತೆ ಮುಂದೆ ಸ್ವಲ್ಪ ದಿನದಲ್ಲಿ ತಂಗಿ ಮದುವೆಯಾಯಿತು . ಅದಾದ ಮೇಲೆ ಅಪ್ಪನ ಎರಡನೆಯ ಮದುವೆ ಕೂಡ ಆಯಿತು. ಎಲ್ಲ ಸಮಸ್ಯೆಗಳಿಗೂ ಪರಿಹಾರ ದೊರಕಿ ಎಲ್ಲವೂ ಸುಖಾಂತ್ಯ ಕಂಡಿತು


Rate this content
Log in

Similar kannada story from Abstract