kaveri p u

Inspirational Others Children

4.2  

kaveri p u

Inspirational Others Children

ಸ್ನೇಹ ಪ್ರೀತಿಯ ಮದ್ಯೆ

ಸ್ನೇಹ ಪ್ರೀತಿಯ ಮದ್ಯೆ

2 mins
1.9K



 ಹುಟ್ಟಿನಿಂದಲೆ ನಾವು ರಕ್ತ ಸಂಬಂಧಗಳ ಜೊತೆ ಬೆಳೆಯುತ್ತೆವೆ. ಪ್ರೀತಿ ಕಾಳಜಿ ವಾತ್ಸಲ್ಯಗಳ ಮಧ್ಯೆ ಬೆಳೆಯುತ್ತೆವೆ. ಅದನ್ನು ಹೊರತು ಪಡಿಸಿ ನಾವು ನಮ್ಮ ಅನಿಸಿಕೆ ಅಭಿಪ್ರಾಯ ವ್ಯಕ್ತಪಡಿಸುವುದಾದರೆ ಅದು ಗೆಳತನ ಎನ್ನುವ ಕೊಂಡಿಯೊಂದಿಗೆ. ಯಾರು ಬಿಡಿಸಲಾಗದ ಕಬ್ಬಿಣದ ಕೊಂಡಿ ಅಂದ್ರು ತಪ್ಪಾಗಲಾರದು. ಗೆಳೆಯರಿಂದ ಸಿಗುವ ಒಗ್ಗಟ್ಟು ಕುಟುಂಬಗಳಲ್ಲಿ ಸಿಗಲು ಕೊಂಚ ಮಟ್ಟಿಗೆ ಕಡಿಮೆ ಇರಬಹುದು. ಅದೇನೋ ನಮಗೆ ಗೊತ್ತಿಲ್ಲದ ಹಾಗೆ ನಮ್ಮನ್ನು ಗೆಳೆತನ ಎಂಬ ಹೆಸರಲ್ಲಿ ಬೆಸೆಯುತ್ತೇವೆ. 


1ರಿಂದ 10ನೆ ತರಗತಿ ಮುಗಿಸಿದ ನಂತರ ಬೆಳೆದ ಗೆಳತನ ಇದು. ರಾಜು, ಮನು, ಹರೀಶ್, ಅನಿತಾ, ಅಶ್ವಿ,ನಿ ಅಮೃತಾ ಗೆಳೆಯರ ಒಂದು ಗುಂಪು ಸಿದ್ಧವಾಗತ್ತೆ ಆ ಗುಂಪಿನಲ್ಲಿ ಎಲ್ಲದಕ್ಕೂ ಮಾನ್ಯತೆ ಇರತ್ತೆ. ಇವರು ಲಾಸ್ಟ್ ಬೆಂಚಿನ ಗೆಳೆಯರು. ಒಂದು ಹುಡುಗಿ ಇಷ್ಟಾ ಆದ್ರೆ ಸಾಕು ಎಲ್ಲರೂ ಆತನಗೆ ಸಹಾಯ ಮಾಡಲು ಮುಗಿಬಿಳ್ಳುವುದು ಸಾಮಾನ್ಯವಾಗಿತ್ತು.ಇನ್ನೂಬ್ಬ ಗೆಳೆಯನ ಮನೆಯಲ್ಲಿ ಆರ್ಥಿಕ ಪರಿಸ್ಥಿತಿ ಕೆಟ್ಟಾಗ ಅವನಿಗೆ ಸಹಾಯದ ಜೊತೆಗೆ ಸುಂದರ ಜೀವನ ರೂಪಿಸಲು ಏಷ್ಟಾಗತ್ತೊ ಅಷ್ಟು ಸಹಾಯ ಮಾಡುವುದು. ಒಬ್ಬರನ್ನು ಇನ್ನೊಬ್ಬರು ಅನುಕರಿಸುವುದು ಪ್ರಚೋದಿಸುವುದು, ತಮಾಷೆ ಮಾಡುವುದು ಎಲ್ಲವೂ ಇತ್ತು. ಇಂತಹ ಗೆಳತನ ಒಂದು ವಿಷಯಕ್ಕೆ ಜಗಳವಾಡಿ ಅವರ ಗೆಳತನ ಮುರಿದು ಬಿಳ್ಳುತ್ತೇ.


ಆ ಜಗಳದ ಹಿಂದೆ ಒಂದು ಪ್ರೀತಿಯ ಬೆಂಕಿ ಉರಿಯುವುದಕ್ಕೆ ಪ್ರಾರಂಭವಾಗಿರತ್ತೆ. ರಾಜು ಮತ್ತು ಮನುಗೆ ಅಮೃತಾ ನನಗೆ ಸೇರಿದವಳು, ನನಗೆ ಸೇರಿದವಳು ಎಂದು ಭಿನ್ನಾಭಿಪ್ರಾಯ ಇರುವುದನ್ನು ಅಶ್ವಿನಿ ನೋಡಿದ್ದಳು. ಅದನ್ನು ಮೊದಲೇ ಅಮೃತಳ ಜೊತೆ ಮಾತಾಡಿದ್ದಳು. ರಾಜು ಮತ್ತೆ ಮನು ಇಬ್ಬರು ಅಮೃತಳನ್ನ ಇಷ್ಟಾ ಪಟ್ಟಿರುತ್ತಾರೆ ಅದನ್ನೇ ಮಾತನಾಡುವುದಕ್ಕೆ ಅವಳ ಹತ್ತಿರ ಬಂದು ನಿಂತಾಗ ಅಮೃತ ಹೇಳಿದ ಮಾತುಗಳು ಹೀಗಿದ್ದವು. ಇಬ್ಬರು ಒಳ್ಳೆಯ ಸ್ನೇಹಿತರು ನೀವು. ಪ್ರೀತಿ ಅಂತ ಬಂದಾಗ ಅದನ್ನಾ ಒಬ್ಬರಿಗೆ ಮೀಸಲು ಇಡಲು ಸಾಧ್ಯ ಎಂದು ಅಮೃತ ಅವರಿಬ್ಬರಿಗೂ ತಿಳಿಸಿ ಹೇಳಿದಳು. ನಮ್ಮ ಈ ಸ್ನೇಹದ ಬಗ್ಗೆ ಗೌರವ ಇದೆ, ಈ ಪ್ರೀತಿ ಪ್ರೇಮದ ಹಿಂದೆ ಬೀಳುವುದು ಬೇಡಾ. ಓದೋಣ, ನಮ್ಮ ಸ್ವಂತ ದುಡಿಮೆಗೆ ಏನು ಬೇಕು ಎಂಬುದರ ಬಗ್ಗೆ ಅರಿಯೋಣ. ಈ ವಿಷಯವನ್ನು ಅಲ್ಲಿಗೆ ಬಿಟ್ಟು ಬಿಡೋಣ. ಮನು, ರಾಜು ನಾನು ಹೇಳುವುದು ನಿಮಗೆ ಅರ್ಥ ಆಗಿದೆ ಅಂತ ಅಂದುಕೊಳ್ಳುವೆ ಎಂದು ಹೇಳಿದಳು.


ರಾಜು ಮತ್ತೆ ಮನುಗೆ ಅವಳ ಮಾತು ನಿಜ ಅಂತ ಅನಿಸಿತು. ನೋಡಿ ನೀವು ನನ್ನ ಬೆಸ್ಟ್ ಪ್ರೇಡ್ಸ್ ನೀವು ಹೀಗೆ ಮಾಡುವುದು ಸರಿ ಅಲ್ಲಾ ಎಂದು ಅಮೃತ ಮತ್ತೆ ಭಾರವಾದ ಮನಸ್ಸಿನಿಂದ ಹೇಳಿದಳು. ರಾಜು ಮನು sorry ಕೇಳಿ ಮತ್ತೆ ಗೆಳತನವನ್ನು ಮುಂದುವರಿಸಿದರು. ರಾಜು,ಮನು, ಮತ್ತೆ ಅಮೃತಾ ಹೊಸದೊಂದು ಹೆಜ್ಜೆಗೆ ಮುಂದಾಗುತ್ತಾರೆ. ಅವರಲ್ಲಿ ಇದ್ದ ಭಿನ್ನಾಭಿಪ್ರಾಯವನ್ನು ತೆಗೆದೊಗೆದು ಒಳ್ಳೆಯ ಸ್ನೇಹಿತರಾಗಿ ಮುಂದೆ ಸಾಗುತ್ತಾರೆ. ನಿಜ ಅಲ್ವಾ ಸ್ನೇಹಿತರೇ ಸ್ನೇಹವೆ ಬೇರೆ, ಪ್ರೀತಿಯೇ ಬೇರೆ.





Rate this content
Log in

Similar kannada story from Inspirational