Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

#Colour Your Words Season 2

SEE WINNERS

Share with friends

ಕಲರ್ ಯುವರ್ ವರ್ಡ್ಸ್ (ನಿಮ್ಮ ಪದಗಳಿಗೆ ಬಣ್ಣತುಂಬಿ) ಸೀಸನ್ 2 ಬರವಣಿಗೆ ಸ್ಪರ್ಧೆಗೆ ಸುಸ್ವಾಗತ. ಈ ಸಂತೋಷದಾಯಕ ಹೋಳಿ ಹಬ್ಬವನ್ನು ಇನ್ನಷ್ಟು ರಂಗೇರಿಸಲು ನಾವು ನಿಮ್ಮನ್ನು ಆಹ್ವಾನಿಸುತ್ತಿದ್ದೇವೆ. ಬನ್ನಿ, ಪದಗಳ ಬಣ್ಣದಲ್ಲಿ ಮಿಂದೇಳಲು ನಿಮಗಿದು ಸರಿಯಾದ ಅವಕಾಶ. ಬಣ್ಣಗಳ ಹಬ್ಬ ಎಂದು ಕರೆಯಲಾಗುವ ಹೋಳಿಯು, ದುಷ್ಟತನದ ವಿರುದ್ಧದ ವಿಜಯೋತ್ಸವ ಮತ್ತು ವಸಂತಕಾಲದ ಆಗಮನವನ್ನು ಆಚರಿಸಲು ಸಮುದಾಯಗಳು ಒಗ್ಗೂಡುವ ಸಮಯ. ಆದರೆ ಮೋಜು ಮತ್ತು ಉಲ್ಲಾಸವನ್ನು ಮೀರಿ, ಪ್ರತಿ ಬಣ್ಣಗಳೂ ತಮ್ಮದೇ ಆದ ಮಹತ್ವವನ್ನು ಸಂಕೇತಿಸುತ್ತವೆ.

ಈ ಸ್ಪರ್ಧೆಯಲ್ಲಿ, ಹೋಳಿಯ ಬಣ್ಣಗಳ ಹಿಂದಿನ ಆಳವಾದ ಅರ್ಥಗಳನ್ನು ಹುಡುಕಲು ಮತ್ತು ಅವುಗಳನ್ನು ಸೆರೆಹಿಡಿಯುವ ಕಥೆಗಳು ಅಥವಾ ಕವನಗಳನ್ನು ಅನುವಾದಿಸಲು ನಾವು ಬರಹಗಾರರಿಗೆ ಸವಾಲು ನೀಡುತ್ತೇವೆ. ಪ್ರತಿಯೊಂದು ಬಣ್ಣವು ವಿಶಿಷ್ಟವಾದ ಭಾವನೆ ಅಥವಾ ಜೀವನದ ವಿಭಿನ್ನ ಅಂಶವನ್ನು ಪ್ರತಿನಿಧಿಸುತ್ತದೆ ಹಾಗೂ ಸಾಹಿತ್ಯಿಕ ಅಭಿವ್ಯಕ್ತಿಗೆ ಸ್ಫೂರ್ತಿಯನ್ನು ನೀಡುತ್ತದೆ.




ಥೀಮ್‌ಗಳು :-

ಸ್ಪರ್ಧಿಗಳು ಕೊಟ್ಟಿರುವ ಥೀಮ್‌ಗಳ ಮೇಲೆ ಮಾತ್ರ ಕಥೆಗಳನ್ನು ಮತ್ತು ಕವಿತೆಗಳನ್ನು ಸಲ್ಲಿಸಬಹುದು. ನಾವು ಬಣ್ಣ ಮತ್ತು ಆ ಬಣ್ಣಗಳ ಅರ್ಥವನ್ನು ನೀಡಿದ್ದೇವೆ. ಬಣ್ಣದ ಅರ್ಥವನ್ನು ಪ್ರತಿಬಿಂಬಿಸುವ ರೀತಿಯಲ್ಲಿ ನೀವು ಕಥೆ ಅಥವಾ ಕವಿತೆಯನ್ನು ರಚಿಸಬೇಕು. ಉದಾಹರಣೆಗೆ, ನೀವು ಕೆಂಪು ಬಣ್ಣವನ್ನು ಆಯ್ಕೆ ಮಾಡಿಕೊಂಡರೆ, ನೀವು ಪ್ರೀತಿಯ ಬಗ್ಗೆ ಕಥೆ ಅಥವಾ ಕವಿತೆಯನ್ನು ಬರೆಯಬಹುದು.


ಕೆಂಪು: ಪ್ರೀತಿ, ಉತ್ಸಾಹ ಮತ್ತು ಫಲವತ್ತತೆಯನ್ನು ಪ್ರತಿನಿಧಿಸುತ್ತದೆ.

ನೀಲಿ: ನಿರ್ಮಲತೆ, ಆಧ್ಯಾತ್ಮಿಕತೆ ಮತ್ತು ಭಕ್ತಿಯನ್ನು ಪ್ರತಿನಿಧಿಸುತ್ತದೆ.

ಹಸಿರು: ಬೆಳವಣಿಗೆ, ನವೀಕರಣ ಮತ್ತು ಪ್ರಕೃತಿಯೊಂದಿಗಿನ ಸಾಮರಸ್ಯವನ್ನು ಪ್ರತಿನಿಧಿಸುತ್ತದೆ.

ಹಳದಿ: ಸಂತೋಷ, ಆಶಾವಾದ ಮತ್ತು ಜ್ಞಾನೋದಯವನ್ನು ಪ್ರತಿನಿಧಿಸುತ್ತದೆ.

ಗುಲಾಬಿ: ವಾತ್ಸಲ್ಯ, ಮೃದುತ್ವ ಮತ್ತು ಚಂಚಲತೆಯನ್ನು ಪ್ರತಿನಿಧಿಸುತ್ತದೆ.

ನೇರಳೆ: ರಾಜತ್ವ (ಅರಸುತನ), ಐಷಾರಾಮಿ ಮತ್ತು ಸೃಜನಶೀಲತೆಯನ್ನು ಪ್ರತಿನಿಧಿಸುತ್ತದೆ.

ಕಿತ್ತಳೆ: ಶಕ್ತಿ, ಉತ್ಸಾಹ ಮತ್ತು ಚೈತನ್ಯವನ್ನು ಪ್ರತಿನಿಧಿಸುತ್ತದೆ.

ಬಿಳಿ: ಶುದ್ಧತೆ, ಶಾಂತಿ ಮತ್ತು ಹೊಸ ಆರಂಭವನ್ನು ಪ್ರತಿನಿಧಿಸುತ್ತದೆ.


ನಿಯಮಗಳು:

ಸ್ಪರ್ಧೆಯನ್ನು ಗೆಲ್ಲಲು, ನೀವು ಎಲ್ಲಾ 10 ಥೀಮ್‌ಗಳಲ್ಲೂ ಬರೆಯಬೇಕು.

ಸ್ಪರ್ಧಿಗಳು ವಿವಿಧ ಕೆಟಗರಿಗಳಿಗೆ (ಕಥೆ/ಕವಿತೆ) ಸಲ್ಲಿಸಬಹುದು. ಆದಾಗ್ಯೂ, 10 ಸಲ್ಲಿಕೆಗಳ ಪ್ರತಿ ಸೆಟ್ ಕಥೆ ಅಥವಾ ಕವಿತೆಯ ಒಂದೇ ಕೆಟಗರಿಯ ಅಡಿಯಲ್ಲಿರಬೇಕು. ಅಂದರೆ ನೀವು ಸ್ಪರ್ಧೆಗಾಗಿ ಕಥೆಗಳನ್ನು ಸಲ್ಲಿಸಿದರೆ, 10 ಬರಹಗಳು ಕಥೆಯ ಕೆಟಗರಿಯಲ್ಲಿಯೇ ಇರತಕ್ಕದ್ದು, ಹಾಗೆಯೇ ಕವಿತೆಗಳನ್ನು ಸಹ ಪ್ರತ್ಯೇಕವಾಗಿಯೇ ಸಲ್ಲಿಸಬೇಕು. ಕಥೆ, ಕವಿತೆಗಳೆರಡೂ ಸೇರಿ 10 ಸಲ್ಲಿಕೆಗಳೆಂದು ಪರಿಗಣಿಸಲಾಗುವುದಿಲ್ಲ.

ಸ್ಪರ್ಧಿಗಳು ತಮ್ಮ ಸ್ವಂತ ವಿಷಯವನ್ನು ಸಲ್ಲಿಸಬೇಕು. ನಕಲಿಸುವುದು ಅಪರಾಧ.

ಸಲ್ಲಿಸಬೇಕಾದ ಬರಹಗಳ ಸಂಖ್ಯೆಗೆ ಯಾವುದೇ ಮಿತಿಯಿಲ್ಲ.

ನಿಮ್ಮ ಬರವಣಿಗೆಗೆ ಯಾವುದೇ ಪದಗಳ ಮಿತಿ ಇಲ್ಲ.

ಸ್ಪರ್ಧೆಗೆ ಭಾಗವಹಿಸಲು ಯಾವುದೇ ಭಾಗವಹಿಸುವಿಕೆ ಶುಲ್ಕವಿಲ್ಲ.


ಕೆಟಗರಿಗಳು:

ಕಥೆ, ಕವಿತೆ ಮತ್ತು ಆಡಿಯೋ


ಭಾಷೆಗಳು:

ಕನ್ನಡ, ಇಂಗ್ಲಿಷ್, ಹಿಂದಿ, ಮರಾಠಿ, ಗುಜರಾತಿ, ತಮಿಳು, ತೆಲುಗು, ಒಡಿಯಾ ಮತ್ತು ಬಾಂಗ್ಲಾ.


ಬಹುಮಾನಗಳು:

ಎಲ್ಲಾ 10 ಥೀಮ್‌ಗಳಲ್ಲೂ ತಮ್ಮ ಬರಹಗಳನ್ನು ಸಲ್ಲಿಸುವ ಎಲ್ಲಾ ಸ್ಪರ್ಧಿಗಳು ₹200 ಮೌಲ್ಯದ SM ವೋಚರ್‌ಗಳನ್ನು ಸ್ವೀಕರಿಸುತ್ತಾರೆ.

ವಿಜೇತರು ಮೆಚ್ಚುಗೆಯ ಪ್ರಮಾಣಪತ್ರಗಳನ್ನು ಸ್ವೀಕರಿಸುತ್ತಾರೆ.

ಎಲ್ಲಾ ಸ್ಪರ್ಧಿಗಳು ಭಾಗವಹಿಸುವಿಕೆಯ ಪ್ರಮಾಣಪತ್ರವನ್ನು ಸ್ವೀಕರಿಸುತ್ತಾರೆ.

ಎಲ್ಲಾ ಭಾಷೆಗಳ ಕಥೆ ಮತ್ತು ಕವಿತೆ ವಿಭಾಗದ ಟಾಪ್ 20 ಬರಹಗಳು ₹250 ಗಳ ಸ್ಟೋರಿಮಿರರ್‌ ಶಾಪ್ ವೋಚರ್ ಅನ್ನು ಪಡೆಯುತ್ತವೆ.

ಎಲ್ಲಾ ಭಾಷೆಗಳ ಕಥೆ ಮತ್ತು ಕವಿತೆ ವಿಭಾಗದ ಟಾಪ್ 5 ಬರಹಗಳು ಸ್ಟೋರಿಮಿರರ್‌ನಿಂದ ಉಚಿತ ಪುಸ್ತಕವನ್ನು ಪಡೆಯುತ್ತವೆ.