Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

#Inkstorm: Tales of the Monsoon

SEE WINNERS

Share with friends

ಸ್ಟೋರಿಮಿರರ್‌ನ "ಇಂಕ್‌ಸ್ಟಾರ್ಮ್: ಟೇಲ್ಸ್ ಆಫ್ ದಿ ಮಾನ್ಸೂನ್" ಗೆ ಸುಸ್ವಾಗತ. ಇದೊಂದು ಬರವಣಿಗೆಯ ಸ್ಪರ್ಧೆಯಾಗಿದ್ದು, ಮಾನ್ಸೂನ್ ಋತುವಿನ ಮಾಂತ್ರಿಕತೆ ಮತ್ತು ಸೌಂದರ್ಯವನ್ನು ನಿಮ್ಮೆಲ್ಲರ ಅದ್ಭುತ ಪದಗಳ ಮೂಲಕ ಆಚರಿಸಲು ಬಯಸುತ್ತದೆ. ಸ್ವರ್ಗದ ಬಾಗಿಲು ತೆರೆಯುವಂತೆ ಮತ್ತು ಮಳೆಹನಿಗಳು ಭೂಮಿಗೆ ಮುತ್ತಿಡುವಂತೆ, ಸಾಹಿತ್ಯದ ನಿಮ್ಮ ಈ ಪ್ರಯಾಣವನ್ನು ತಾಜಾತನದಿಂದ ಪ್ರಾರಂಭಿಸಲು ನಾವು ನಿಮ್ಮನ್ನು ಆಹ್ವಾನಿಸುತ್ತೇವೆ. ಇಲ್ಲಿ ನೀವು ಮಾನ್ಸೂನ್‌ನ ಸುಂದರತೆಯನ್ನು ಸ್ಪಷ್ಟವಾಗಿ ಚಿತ್ರಿಸಬಹುದು ಮತ್ತು ನಮ್ಮ ಜೀವನದ ಮೇಲೆ ಇದು ಬೀರುವ ಪ್ರಭಾವವನ್ನು ತಿಳಿಯಬಹುದು.


ದೀರ್ಘಾವಧಿಯ ಬರಗಾಲದ ನಂತರ ಮೊದಲ ಮಳೆಯ ಅನುಭವವನ್ನು ಅನುಭವಿಸುತ್ತಿರುವ ದೂರದ ಹಳ್ಳಿಗಳ ಓದುಗರನ್ನು ತಲುಪಲು ನೀವು ಆಯ್ಕೆ ಮಾಡಿಕೊಳ್ಳಬಹುದು ಅಥವಾ ಮಳೆಯಲ್ಲಿ ನೃತ್ಯ ಮಾಡುವ, ಕಾಗದದ ದೋಣಿಗಳೊಂದಿಗೆ ಆಡುವ ಯುವ ಜೋಡಿಯ ಉತ್ಸಾಹವನ್ನು ಸೆರೆಹಿಡಿಯಲು ಆಯ್ಕೆ ಮಾಡಿಕೊಳ್ಳಬಹುದು. ನಿಮ್ಮ ಬರಹ, ಬರಹದುದ್ದಕ್ಕೂ ನೀವು ಪೋಣಿಸಿರುವ ಪದಗಳು, ಈ ಮಾನ್ಸೂನ್ ಋತುವಿನ ಅದ್ಭುತ ಸಾರವನ್ನು ಜಗತ್ತಿಗೆ ಸಾರುವ ಶಕ್ತಿಯನ್ನು ಹೊಂದಿವೆ.


ಕೆಸರುಗುಂಡಿಗಳಲ್ಲಿ ಕುಣಿದ ಬಾಲ್ಯದ ನೆನಪುಗಳು ಅಥವಾ ಉಲ್ಲಾಸಭರಿತ ಮಾನ್ಸೂನ್ ಹಬ್ಬಗಳನ್ನು ನೀವು ನೆನಪಿಸಿಕೊಳ್ಳುವಾಗ, ಆಹಾ ಅದೇನೋ ಪುಳಕ, ಮನಸ್ಸು ಅದೆಷ್ಟೋ ನೆನಪುಗಳ ಆಳಕ್ಕೆ ಇಳಿಯುತ್ತದೆ. ಸರಿ ಹಾಗಿದ್ದರೆ, ನಿಮ್ಮ ಬರಹಗಳ ಮೂಲಕ ಸಂಬಂಧಗಳು, ಸ್ನೇಹ ಅಥವಾ ವೈಯಕ್ತಿಕ ಬೆಳವಣಿಗೆಯ ಮೇಲೆ ಮಾನ್ಸೂನ್ ಪ್ರಭಾವವನ್ನು ಪ್ರತಿಬಿಂಬಿಸಿ. ಅಂದಿನ ಮಾನ್ಸೂನ್‌ಗೂ ಹಾಗೂ ಇಂದಿನ ಮಾನ್ಸೂನ್‌ಗೂ ಆಗಿರುವ ರೂಪಾಂತರ, ನವೀಕರಣವನ್ನು ಒತ್ತಿ ಹೇಳಿ.


ಆದ್ದರಿಂದ, ನಿಮ್ಮ ಕಲ್ಪನೆಯ ಬಾಗಿಲನ್ನು ಅನ್‌ಲಾಕ್ ಮಾಡಿ, ಮಳೆಹನಿಗಳು ನಿಮ್ಮ ಲೇಖನಿಗೆ ಮಾರ್ಗದರ್ಶನ ನೀಡಲಿ ಮತ್ತು ಮಾನ್ಸೂನ್ ಡೊಮೇನ್ ಮೂಲಕ ಈ ಸ್ಪರ್ಧೆಯಲ್ಲಿ ನಮ್ಮೊಂದಿಗೆ ಸೇರಿಕೊಳ್ಳಿ. ಮಾನ್ಸೂನ್‌ನ ಸಂತೋಷ, ಉಲ್ಲಾಸ್, ಸ್ಫೂರ್ತಿ ಮತ್ತು ಅದ್ಭುತವನ್ನು ನೀವೂ ಸವಿಯಿರಿ ಮತ್ತು ನಿಮ್ಮ ಬರಹಗಳ ಮೂಲಕ ನಮ್ಮ ಓದುಗರಿಗೂ ಆ ಸವಿಯನ್ನು ನೀಡಿರಿ.


ನಿಯಮಗಳು:-


  • ನೀವು ಮಾನ್ಸೂನ್ ಥೀಮ್ ಮೇಲೆ ಬರೆಯಬಹುದು
  • ಸ್ಪರ್ಧಿಗಳು ತಮ್ಮ ಸ್ವಂತ ವಿಷಯವನ್ನು ಸಲ್ಲಿಸಬೇಕು. ಯಾವುದೇ ಪೂರ್ವ-ಪ್ರಕಟಿತ ಅಥವಾ ಕೃತಿಚೌರ್ಯದ ಬರಹವನ್ನು ತೆಗೆದುಕೊಳ್ಳಲಾಗುವುದಿಲ್ಲ.
  • ಸಲ್ಲಿಸಬೇಕಾದ ಬರಹಗಳ ಸಂಖ್ಯೆಗೆ ಯಾವುದೇ ಮಿತಿಯಿಲ್ಲ. ವಿಷಯವು ಆಸಕ್ತಿದಾಯಕವಾಗಿರಲಿ, ವ್ಯಾಕರಣಬದ್ಧವಾಗಿರಲಿ ಮತ್ತು ಓದುಗರ ಹೃದಯವನ್ನು ಮುಟ್ಟುತ್ತದೆ ಎನ್ನುವುದನ್ನು ಖಚಿತಪಡಿಸಿಕೊಳ್ಳಿ.
  • ಸ್ಪರ್ಧಿಗಳು ಯಾವುದೇ ಸ್ಪ್ಯಾಮ್, ಫೌಲ್, ಅಸಭ್ಯ, ಬೆದರಿಕೆ, ತಾರತಮ್ಯ, ಅಸಭ್ಯ ಮತ್ತು/ಅಥವಾ ಸಾರ್ವಜನಿಕ ನೈತಿಕತೆಗೆ ವಿರುದ್ಧವಾದ ಯಾವುದೇ ಬರಹಗಳನ್ನು ಸಲ್ಲಿಸದಂತೆ / ಪೋಸ್ಟ್ ಮಾಡದಂತೆ ವಿನಂತಿಸಲಾಗಿದೆ. ಅದು ಅನರ್ಹತೆಗೆ ಕಾರಣವಾಗಬಹುದು. ಅಂತಹ ಅನರ್ಹತೆಯ ನಿರ್ಧಾರಗಳು ಸ್ಟೋರಿಮಿರರ್‌ನ ಸ್ವಂತ ವಿವೇಚನೆಗೆ ಒಳಪಟ್ಟಿರುತ್ತವೆ.
  • ಲೇಖನಗಳು / ಪ್ರಬಂಧಗಳನ್ನು ಈ ಸ್ಪರ್ಧೆಗೆ ಸಲ್ಲಿಸಲು ಅವಕಾಶವಿಲ್ಲ.
  • ನಿಮ್ಮ ಬರಹಗಳಿಗೆ ಯಾವುದೇ ಪದಗಳ ಮಿತಿ ಇಲ್ಲ. ನಿಮಗೆ ಬೇಕಾದಷ್ಟು ಬರೆಯಿರಿ. ಬರಹದ ಅಂತ್ಯವೂ ಮನಮುಟ್ಟುವಂತಿರಲಿ.
  • ಸ್ಪರ್ಧೆಗೆ ಭಾಗವಹಿಸಲು ಯಾವುದೇ ಭಾಗವಹಿಸುವಿಕೆ ಶುಲ್ಕವಿಲ್ಲ. ಅದ್ಭುತ, ಅಲ್ಲವೇ?


ಭಾಷೆಗಳು:

ಇಲ್ಲಿರುವ ಯಾವುದೇ ಒಂದು ಅಥವಾ ಹೆಚ್ಚಿನ ಭಾಷೆಗಳಲ್ಲಿ ನಿಮ್ಮ ಬರಹವನ್ನು ಸಲ್ಲಿಸಬಹುದು - ಕನ್ನಡ, ಇಂಗ್ಲೀಷ್, ಹಿಂದಿ, ಗುಜರಾತಿ, ಮರಾಠಿ, ತಮಿಳು, ತೆಲುಗು, ಮಲಯಾಳಂ, ಒಡಿಯಾ ಮತ್ತು ಬಾಂಗ್ಲಾ


ಬಹುಮಾನಗಳು:


  • ಪ್ರತಿ ಭಾಷೆ ಮತ್ತು ಪ್ರತಿ ವಿಭಾಗದಲ್ಲಿನ ಟಾಪ್ 30 ಬರಹಗಳನ್ನು ಸ್ಟೋರಿಮಿರರ್‌ನಿಂದ ಇಬುಕ್‌ನಲ್ಲಿ ಪ್ರಕಟಿಸಲಾಗುತ್ತದೆ.
  • 5 ವಿವಿಧ ಮಾನ್ಸೂನ್ ಬರಹಗಳನ್ನು ಸಲ್ಲಿಸುವ ಎಲ್ಲಾ ಸ್ಪರ್ಧಿಗಳಿಗೆ ₹149 ಮೌಲ್ಯದ ಸ್ಟೋರಿಮಿರರ್‌ನ ಡಿಸ್ಕೌಂಟ್ ವೋಚರ್ ಅನ್ನು ನೀಡಲಾಗುವುದು
  • ಎಲ್ಲಾ ಸ್ಪರ್ಧಿಗಳು ಭಾಗವಹಿಸುವಿಕೆಯ ಪ್ರಮಾಣಪತ್ರವನ್ನು ಸ್ವೀಕರಿಸುತ್ತಾರೆ.


ಸಲ್ಲಿಕೆಯ ಹಂತ - ಜುಲೈ 05, 2023 ರಿಂದ ಆಗಸ್ಟ್ 31, 2023 ರವರೆಗೆ 


ಫಲಿತಾಂಶದ ಘೋಷಣೆ: ಸೆಪ್ಟೆಂಬರ್ 15, 20223


ಸಂಪರ್ಕಿಸಿ:

ಇಮೇಲ್: neha@storymirror.com

ದೂರವಾಣಿ ಸಂಖ್ಯೆ: +91 9372458287 / 022-49243888