Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

#Ink Lights Diwali: A Festival of Words

SEE WINNERS

Share with friends

ಶರತ್ ಋತುವಿನ ರೋಮಾಂಚಕ ಬಣ್ಣಗಳು ಇಡೀ ಜಗತ್ತನ್ನೇ ಬೆಚ್ಚಗಿನ ಬಟ್ಟೆಯಲ್ಲಿ ಚಿತ್ರಿಸುವಂತೆ, ನಮ್ಮ ಮನಸ್ಸು ಮತ್ತು ಮನೆಗಳನ್ನು ಬೆಳಗುವ ಹಬ್ಬವಾದ ದೀಪಾವಳಿಯ ಉತ್ಸಾಹದಲ್ಲಿ ನಾವು ಮುಳುಗಿದ್ದೇವೆ. ಈ ಸಂತೋಷದ ಸಂಭ್ರಮವನ್ನು ಆಚರಿಸಲು, ನಿಮ್ಮ ಪದಗಳ ಶಕ್ತಿಯನ್ನು ಜಗತ್ತಿಗೆ ತಿಳಿಸಲು ಮತ್ತು ನಮ್ಮ ಬರವಣಿಗೆ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ನಾವು ನಿಮ್ಮನ್ನು ಆಹ್ವಾನಿಸುತ್ತಿದ್ದೇವೆ - ಇಂಕ್ ಲೈಟ್ಸ್ ದೀಪಾವಳಿ: ಪದಗಳ ಹಬ್ಬ! (Ink Lights Diwali : A Festival of Words)

ಈ ಸ್ಪರ್ಧೆಯು ಸೃಜನಶೀಲತೆಯ ಸಂಭ್ರಮಾಚರಣೆಯಾಗಿದೆ, ದೀಪಾವಳಿಯ ಸಡಗರಕ್ಕೆ ಕೊಂಡೊಯ್ಯುವ ದಾರಿಯಾಗಿದೆ ಹಾಗೂ ಈ ಹಬ್ಬವನ್ನು ಇನ್ನಷ್ಟು ವಿಶಿಷ್ಟವಾಗಿಸುವ ಸಂಪ್ರದಾಯಗಳು, ಕಥೆಗಳು ಮತ್ತು ಮಾಂತ್ರಿಕತೆಯ ಅನ್ವೇಷಣೆಯಾಗಿದೆ.

ಈ ಸುಂದರ ಹಬ್ಬದ ಸಾರವನ್ನು ಸೆರೆಹಿಡಿಯುವಂತಹ ಸಂಪ್ರದಾಯದ ಕಥೆಗಳು, ದೈವಭಕ್ತಿಯ ಕವಿತೆಗಳು ಅಥವಾ ನಿರೂಪಣೆಯಲ್ಲಿನ ನಿಮ್ಮ ಕಲ್ಪನೆಯು ದೀಪಾವಳಿಯ ದೀಪಗಳಂತೆ ಹೊಳೆಯಲಿ ಮತ್ತು ಬೆಳಗಲಿ. ಆದ್ದರಿಂದ, ನಿಮ್ಮ ದೀಪಾವಳಿಯ ಕನಸುಗಳಿಗೆ ಅಕ್ಷರದ ರೂಪ ನೀಡಿ, ಕಥೆ ಹೇಳುವ ಅವಕಾಶವನ್ನು ಅನಾವರಣಗೊಳಿಸಿ, ಮತ್ತು ನಿಮ್ಮ ಸೃಜನಶೀಲತೆಯ ಹೊಳಪಿನಿಂದ ಪುಟಗಳನ್ನು ಬೆಳಗಿಸಿ.


ಬರವಣಿಗೆಗೆ ಶುಭವಾಗಲಿ, ಮತ್ತು ನಿಮ್ಮ ಸಾಹಿತ್ಯಿಕ ಪ್ರಯತ್ನಗಳು ದೀಪಾವಳಿ ಹಬ್ಬದಂತೆಯೇ ಪ್ರಕಾಶಮಾನವಾಗಿರಲಿ!


ನಿಯಮಗಳು:

ನೀವು ದೀಪಾವಳಿ ಹಬ್ಬದ ಥೀಮ್ ಮೇಲೆಯೇ ಬರೆಯಬೇಕು.

ಸ್ಪರ್ಧಿಗಳು ತಮ್ಮ ಸ್ವಂತ ವಿಷಯವನ್ನು ಸಲ್ಲಿಸಬೇಕು. ನಕಲಿಸುವುದು ಅಪರಾಧ. ಸಲ್ಲಿಸಬೇಕಾದ ಬರಹಗಳ ಸಂಖ್ಯೆಗೆ ಯಾವುದೇ ಮಿತಿಯಿಲ್ಲ.

ಬರಹಗಳಿಗೆ ಯಾವುದೇ ಪದಗಳ ಮಿತಿ ಇಲ್ಲ.

ಸ್ಪರ್ಧೆಯಲ್ಲಿ ಭಾಗವಹಿಸಲು ಯಾವುದೇ ಭಾಗವಹಿಸುವಿಕೆ ಶುಲ್ಕವಿಲ್ಲ.

ವಿಷಯ/ಬರಹದ ಗುಣಮಟ್ಟವನ್ನು ಆಧರಿಸಿ ಸ್ಪರ್ಧಿಗಳನ್ನು ಜಡ್ಜ್ ಮಾಡಲಾಗುವುದು.


ವಿಭಾಗಗಳು:

ಕಥೆ

ಕವಿತೆ


ಭಾಷೆಗಳು:

ಕನ್ನಡ, ಇಂಗ್ಲಿಷ್, ಹಿಂದಿ, ಮರಾಠಿ, ಗುಜರಾತಿ, ತಮಿಳು, ತೆಲುಗು, ಮಲಯಾಳಂ, ಒಡಿಯಾ ಮತ್ತು ಬಾಂಗ್ಲಾ - ಇವುಗಳಲ್ಲಿ ಯಾವುದೇ ಒಂದು ಅಥವಾ ಒಂದಕ್ಕಿಂತ ಹೆಚ್ಚಿನ ಭಾಷೆಗಳಲ್ಲಿ ನಿಮ್ಮ ಬರಹಗಳನ್ನು ಸಲ್ಲಿಸಬಹುದು.


ಬಹುಮಾನಗಳು:

ಪ್ರತಿ ಭಾಷೆಯ ಮತ್ತು ಪ್ರತಿ ವಿಭಾಗದ ಟಾಪ್ 10 ಕಥೆಗಳು ಮತ್ತು ಕವಿತೆಗಳು ₹149 ಮೌಲ್ಯದ ಸ್ಟೋರಿಮಿರರ್ ಡಿಸ್ಕೌಂಟ್ ವೋಚರ್ ಮತ್ತು ಡಿಜಿಟಲ್ ಮೆಚ್ಚುಗೆ ಪ್ರಮಾಣಪತ್ರವನ್ನು ಪಡೆಯುತ್ತವೆ. ಗೆಲ್ಲಲು ಪರಿಗಣಿಸಲಾಗುವ ಮಾನದಂಡಗಳು ನಮ್ಮ ಸಂಪಾದಕೀಯ ತಂಡ ನೀಡುವ ಸಂಪಾದಕೀಯ ಅಂಕಗಳು (ಎಡಿಟೋರಿಯಲ್ ಸ್ಕೋರ್‌ಗಳು)

ಎಲ್ಲಾ ಸ್ಪರ್ಧಿಗಳು ಭಾಗವಹಿಸುವಿಕೆ ಪ್ರಮಾಣಪತ್ರವನ್ನು ಪಡೆಯುತ್ತಾರೆ.


ಸಲ್ಲಿಕೆಯ ಹಂತ - ನವೆಂಬರ್ 10, 2023 ರಿಂದ ಡಿಸೆಂಬರ್ 10, 2023 ವರೆಗೆ

ಫಲಿತಾಂಶದ ಘೋಷಣೆ: ಜನವರಿ 10, 2024

ಸಂಪರ್ಕಿಸಿ:

ಇಮೇಲ್neha@storymirror.com

ದೂರವಾಣಿ ಸಂಖ್ಯೆ: +91 9372458287

ವಾಟ್ಸಾಪ್: +91 84528 04735