Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

#Thankyou Teacher - Season 2

SEE WINNERS

Share with friends

ಶಿಕ್ಷಕನು ಮೇಣದಬತ್ತಿಯಂತೆ - ಶಿಕ್ಷಕರು ಇತರರ ಜೀವನ ಬೆಳಗಿಸಲು ತಮ್ಮನ್ನು ತಾವು ಸಮರ್ಪಿಸಿಕೊಳ್ಳುತ್ತಾರೆ.

ಜ್ಞಾನ, ಕಲಿಕೆ ಮತ್ತು ಮಾಹಿತಿಯ ಉತ್ತಮ ಮೂಲವೇ ಶಿಕ್ಷಕ. ಅವರು ಪ್ರತಿಯೊಬ್ಬರ ಜೀವನದುದ್ದಕ್ಕೂ ನೆರವಾಗುವಂತಹ ಅಡಿಪಾಯವನ್ನು ರಚಿಸುತ್ತಾರೆ. ಅವರು ಪ್ರತಿಯೊಬ್ಬರ ಜೀವನದ ಬೆಳಕಾಗಿದ್ದಾರೆ. ಮತ್ತು ನಾವು ಜಗತ್ತನ್ನು ಹೇಗೆ ನೋಡುತ್ತೇವೆ, ನಮ್ಮ ಆಲೋಚನೆಗಳನ್ನು ಹೇಗೆ ರೂಪಿಸಿಕೊಳ್ಳುತ್ತೇವೆ ಮತ್ತು ನಮ್ಮ ವ್ಯಕ್ತಿತ್ವವನ್ನು ಹೇಗೆ ರೂಪಿಸಿಕೊಳ್ಳುತ್ತೇವೆ ಎಂಬುದರ ಮಾರ್ಗದರ್ಶನ ನೀಡುತ್ತಾರೆ.

ಮಾಜಿ ರಾಷ್ಟ್ರಪತಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನದ ನೆನಪಿಗಾಗಿ ಸೆಪ್ಟೆಂಬರ್ 5ರ, ರಾಷ್ಟ್ರೀಯ ಶಿಕ್ಷಕರ ದಿನಾಚರಣೆಯ ಸಂದರ್ಭದಲ್ಲಿ, ಶಿಕ್ಷಕರಿಗೆ ಕೃತಜ್ಞತೆಯನ್ನು ಅರ್ಪಿಸಲು ಮತ್ತು ನಿಮ್ಮ ಜೀವನದಲ್ಲಿ ನಿಮ್ಮ ಶಿಕ್ಷಕರ ಕೊಡುಗೆಯನ್ನು ಗುರುತಿಸಲು ಸ್ಟೋರಿಮಿರರ್ "ಥ್ಯಾಂಕ್ಯೂ ಟೀಚರ್ - ಸೀಸನ್ 2" ಅನ್ನು ಪ್ರಸ್ತುತಪಡಿಸುತ್ತದೆ.

ನಿಯಮಗಳು:

  • ಸ್ಪರ್ಧಿಗಳು ನೀಡಿರುವ ವಿಷಯದ ಮೇಲೆ ಕಥೆಗಳು/ಕವಿತೆಗಳನ್ನು/ಕೋಟ್ಸ್/ಆಡಿಯೋ ಕಥೆ ಮತ್ತು ಆಡಿಯೋ ಕವಿತೆಗಳನ್ನು ಸಲ್ಲಿಸಬಹುದು.
  • ಸಂಪಾದಕೀಯ ಸ್ಕೋರ್‌ಗಳು ಮತ್ತು ನಿಮ್ಮ ಬರಹದಲ್ಲಿ ಓದುಗರ ತೊಡಗಿಸಿಕೊಳ್ಳುವಿಕೆಯ ಆಧಾರದ ಮೇಲೆ ವಿಜೇತರನ್ನು ನಿರ್ಧರಿಸಲಾಗುತ್ತದೆ.
  • ಸ್ಪರ್ಧಿಗಳು ತಮ್ಮ ಸ್ವಂತ ವಿಷಯವನ್ನು ಸಲ್ಲಿಸಬೇಕು. ನೀವು ಸಲ್ಲಿಸುವ ಬರಹಗಳ ಸಂಖ್ಯೆಗೆ ಯಾವುದೇ ಮಿತಿಯಿಲ್ಲ.


  • ನಿಮ್ಮ ವಿಷಯದಲ್ಲಿ "#ThankyouTeacher" ಅನ್ನು ಬಳಸಿ.
  • ಪದಗಳ ಮಿತಿ ಇಲ್ಲ.
  • ನಿಮ್ಮ ಬರಹ ಮತ್ತು ಟ್ಯಾಗ್‌ನಲ್ಲಿ "Teacher's Day" "ThankyouTeacher" ಅನ್ನು ಬಳಸಿ.

ವಿಭಾಗಗಳು:

ಕಥೆ

ಕವಿತೆ

ಕೋಟ್ಸ್

ಆಡಿಯೋ

ಬಹುಮಾನಗಳು:


  • ಪ್ರತಿ ಭಾಷೆ ಮತ್ತು ವಿಭಾಗದಲ್ಲಿ , ಟಾಪ್ 10 ಕಥೆಗಳು ಮತ್ತು ಕವಿತೆಗಳು ಜ್ಯೂರಿ ಆಯ್ಕೆ ಪ್ರಶಸ್ತಿಯನ್ನು ಗೆಲ್ಲುತ್ತವೆ ಮತ್ತು ₹149 ಮೌಲ್ಯದ ರಿಯಾಯಿತಿ ವೋಚರ್ ಡಿಜಿಟಲ್ ಮೆಚ್ಚುಗೆ ಪ್ರಮಾಣಪತ್ರವನ್ನು ಪಡೆಯುತ್ತವೆ. ಗೆಲ್ಲಲು ಪರಿಗಣಿಸಲಾಗುವ ಅಂಶಗಳೆಂದರೆ ನಮ್ಮ ಸಂಪಾದಕೀಯ ತಂಡದ ಸಂಪಾದಕೀಯ ಸ್ಕೋರ್‌ಗಳು (ಎಡಿಟೋರಿಯಲ್ ಸ್ಕೋರ್‌ಗಳು).
  • 20 ಅಥವಾ ಹೆಚ್ಚಿನ ಕಥೆಗಳು/ಕವನಗಳನ್ನು ಸಲ್ಲಿಸುವ ಸ್ಪರ್ಧಿಗಳು ಸ್ಟೋರಿಮಿರರ್ ಆಥರ್ಸ್ ಗ್ಯಾಲರಿಯಲ್ಲಿ ಕಾಣಿಸಿಕೊಳ್ಳುತ್ತಾರೆ.
  • ಪ್ರತಿ ಭಾಷೆ ಮತ್ತು ವಿಭಾಗದಲ್ಲಿ, ಟಾಪ್ 5 ಆಡಿಯೋಗಳು ಜ್ಯೂರಿ ಚಾಯ್ಸ್ ಪ್ರಶಸ್ತಿಯನ್ನು ಗೆಲ್ಲುತ್ತವೆ ಮತ್ತು ₹149 ಮೌಲ್ಯದ ರಿಯಾಯಿತಿ ವೋಚರ್ ಹಾಗೂ ಡಿಜಿಟಲ್ ಮೆಚ್ಚುಗೆ ಪ್ರಮಾಣಪತ್ರವನ್ನು ಪಡೆಯುತ್ತವೆ.
  • ಅತ್ಯುಧಿಕ ಓದುಗರ ತೊಡಗಿಸಿಕೊಳ್ಳುವಿಕೆಯನ್ನು ಹೊಂದಿರುವ ಪ್ರತಿ ಭಾಷೆ ಮತ್ತು ವಿಭಾಗದಲ್ಲಿನ ಟಾಪ್ 5 ಕೋಟ್‌ಗಳು (ಲೈಕ್ಸ್ ಮತ್ತು ಕಾಮೆಂಟ್‌ಗಳು) ಜ್ಯೂರಿ ಚಾಯ್ಸ್ ಪ್ರಶಸ್ತಿಯನ್ನು ಗೆಲ್ಲುತ್ತವೆ. ಮತ್ತು ₹149 ಮೌಲ್ಯದ ರಿಯಾಯಿತಿ ವೋಚರ್ ಹಾಗೂ ಡಿಜಿಟಲ್ ಮೆಚ್ಚುಗೆ ಪ್ರಮಾಣಪತ್ರವನ್ನು ಪಡೆಯುತ್ತವೆ.
  • ಎಲ್ಲಾ ಸ್ಪರ್ಧಿಗಳು ಭಾಗವಹಿಸುವಿಕೆ ಪ್ರಮಾಣಪತ್ರವನ್ನು ಸ್ವೀಕರಿಸುತ್ತಾರೆ.

ಸಲ್ಲಿಕೆಯ ಅವಧಿ: 

ಸೆಪ್ಟೆಂಬರ್ 02, 2022 ರಿಂದ ಸೆಪ್ಟೆಂಬರ್ 30, 2022

ಫಲಿತಾಂಶದ ಘೋಷಣೆ: 30 ಅಕ್ಟೋಬರ್ 2022

ಸಂಪರ್ಕಿಸಿ:

ಇಮೇಲ್: neha@storymirror.com

ದೂರವಾಣಿ ಸಂಖ್ಯೆ: +91 9372458287 / 022-49240082

ವಾಟ್ಸಾಪ್: +91 84528 04735



Trending content