Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

#Poetry Writing Month

SEE WINNERS

Share with friends

ಸ್ಟೋರಿಮಿರರ್‌ನ ಕವಿತೆ ಬರೆಯುವ ತಿಂಗಳ ಸ್ಪರ್ಧೆ (ಪೊಯೆಟ್ರಿ ರೈಟಿಂಗ್ ಮಂತ್ ಕಾಂಟೆಸ್ಟ್) ಗೆ ಸುಸ್ವಾಗತ!

ಏಪ್ರಿಲ್ ಅಂದರೆ ಸೃಜನಶೀಲತೆಯನ್ನು ಚಿಗುರಿಸುವ ತಿಂಗಳು. ಹಾಗಿದ್ದರೆ ಈ ಸೃಜನಶೀಲತೆಯನ್ನು ಸಂಭ್ರಮಿಸಲು, ಕವಿತೆ ಬರೆಯುವ ಸವಾಲಿಗಿಂತ ಉತ್ತಮವಾದ ಮಾರ್ಗ ಯಾವುದಿದೆ? ನೀವು ಅನುಭವಿ ಕವಿಯೇ ಆಗಿರಲಿ ಅಥವಾ ಪದ್ಯ ಗೀಚುವ ಕಲೆಗೆ ಹೊಸಬರೇ ಆಗಿರಲಿ, ಭಾಷೆಯ ಸೌಂದರ್ಯವನ್ನು ಅನ್ವೇಷಿಸಲು ಮತ್ತು ತಮ್ಮೊಳಗಿನ ಆಲೋಚನೆಗಳನ್ನು, ಭಾವನೆಗಳನ್ನು ಕಾವ್ಯದ ಮೂಲಕ ವ್ಯಕ್ತಪಡಿಸಲು ಉತ್ಸುಕರಾಗಿರುವ ಎಲ್ಲಾ ಕವಿಗಳಿಗೆ/ಕವಯತ್ರಿಯರಿಗೆ ನಮ್ಮ ಸ್ಪರ್ಧೆಯ ಬಾಗಿಲು ಸದಾ ತೆರೆದಿರುತ್ತದೆ.

ಇಡೀ ಏಪ್ರಿಲ್ ತಿಂಗಳುದ್ದಕ್ಕೂ, ನಿಮ್ಮ ಕಾವ್ಯದ ಕಂಪನ್ನು ಅನಾವರಣಗೊಳಿಸಲು ಮತ್ತು ಪ್ರತಿದಿನ ಒಂದೊಂದು ಕವಿತೆಯನ್ನು ರಚಿಸಲು ನಾವು ನಿಮ್ಮನ್ನು ತುಂಬು ಹೃದಯದಿಂದ ಆಹ್ವಾನಿಸುತ್ತೇವೆ. ನಿಮ್ಮ ಕವಿತೆಯು ಸಾನೆಟ್ ಆಗಿರಬಹುದು, ಹೈಕು ಆಗಿರಬಹುದು, ಮುಕ್ತ ಪದ್ಯವಾಗಿರಬಹುದು ಅಥವಾ ಕಾವ್ಯದ ಇನ್ನಾವುದೇ ರೂಪವಾಗಿರಬಹುದು. ತೊಂದರೆಯಿಲ್ಲ. ನಿಮ್ಮ ಕಲ್ಪನೆಯು ಮತ್ತಷ್ಟು ಗರಿಗೆದರಲಿ ಹಾಗೂ ಪುಟದ ತುಂಬೆಲ್ಲ ನಿಮ್ಮ ಲೇಖನಿಯು ನೃತ್ಯ ಮಾಡಲಿ. ನೀವು ಸುಂದರವಾಗಿ ಪದ್ಯ/ಕವಿತೆಗಳನ್ನು ನೇಯುವಾಗ, ಭಾವನೆಗಳನ್ನು ಸೆರೆಹಿಡಿಯಲು, ಸ್ಫೂರ್ತಿ ನೀಡಲು ಮತ್ತು ಪ್ರಚೋದಿಸಲು ನಿಮ್ಮ ಪದಗಳ ಶಕ್ತಿಯನ್ನು ಅದ್ಭುತವಾಗಿ ಬಳಸಿಕೊಳ್ಳಿ.

ಆದ್ದರಿಂದ, ನಿಮ್ಮ ಕೀಬೋರ್ಡ್/ ಕೀಪ್ಯಾಡ್/ ಹಾಳೆಯಲ್ಲಿ ನಿಮ್ಮ ಮನದ ಭಾವಗಳನ್ನು ಹೊರಹೊಮ್ಮಿಸಿ. ಹಾಗೂ ಕಾವ್ಯಗಳು ಮೋಡಿಮಾಡುವ ಪದಸಾಗರದಲ್ಲಿ ಮಿಂದೇಳಲು ನೀವೂ ಸಿದ್ಧರಾಗಿ. ನಮ್ಮ 'ಕವಿತೆ ಬರೆಯುವ ತಿಂಗಳ ಸ್ಪರ್ಧೆ'ಯಲ್ಲಿ, ನೀವು ಕವಿತೆಯ ಮಾಂತ್ರಿಕತೆಯಲ್ಲಿ ಮುಳುಗುತ್ತಿದ್ದಂತೆ ನಿಮ್ಮ ಪದಗಳು ವೇಗವಾಗಿ ಹರಿಯಲಿ, ನಿಮ್ಮ ರೂಪಕಗಳು ಹೂವಂತೆ ಅರಳಲಿ ಮತ್ತು ನಿಮ್ಮ ಭಾವನೆಗಳು ಪುಟದ ತುಂಬೆಲ್ಲ ನಾಜೂಕಾಗಿ ಚೆಲ್ಲಲಿ. ಸಂತೋಷ ಬರವಣಿಗೆ ನಿಮ್ಮದಾಗಲಿ!

ನಿಯಮಗಳು:

ನೀವು ಯಾವುದೇ ಥೀಮ್‌ನ ಮೇಲೆ ಬರೆಯಬಹುದು

ಸ್ಪರ್ಧಿಗಳು ತಮ್ಮ ಸ್ವಂತ ಬರಹಗಳನ್ನು ಸಲ್ಲಿಸಬೇಕು. ನಕಲಿಸುವುದು ಅಪರಾಧ. ಸಲ್ಲಿಸಬೇಕಾದ ಬರಹಗಳ ಸಂಖ್ಯೆಗೆ ಯಾವುದೇ ಮಿತಿಯಿಲ್ಲ.

ಬರಹಗಳಿಗೆ ಪದಗಳ ಮಿತಿ ಇಲ್ಲ.

ಸ್ಪರ್ಧೆಯಲ್ಲಿ ಭಾಗವಹಿಸಲು ಯಾವುದೇ ಭಾಗವಹಿಸುವಿಕೆ ಶುಲ್ಕವಿಲ್ಲ.

ವಿಭಾಗ: ಕವಿತೆ

ಭಾಷೆಗಳು:

ಇವುಗಳಲ್ಲಿ ಯಾವುದೇ ಒಂದು ಅಥವಾ ಒಂದಕ್ಕಿಂತ ಹೆಚ್ಚಿನ ಭಾಷೆಗಳಲ್ಲಿ ನಿಮ್ಮ ಬರಹವನ್ನು ಸಲ್ಲಿಸಬಹುದು - ಕನ್ನಡ, ಇಂಗ್ಲೀಷ್, ಹಿಂದಿ, ಗುಜರಾತಿ, ಮರಾಠಿ, ತಮಿಳು, ತೆಲುಗು, ಮಲಯಾಳಂ, ಒಡಿಯಾ ಮತ್ತು ಬಾಂಗ್ಲಾ

ಬಹುಮಾನಗಳು:

ಟಾಪ್ 30 ಕವಿತೆಗಳನ್ನು ಸ್ಟೋರಿಮಿರರ್‌ನ ಇಬುಕ್‌ನಲ್ಲಿ ಪ್ರಕಟಿಸಲಾಗುವುದು.

ಪ್ರತಿದಿನವೂ ಕವಿತೆಗಳನ್ನು ಸಲ್ಲಿಸುವ ಎಲ್ಲಾ ಸ್ಪರ್ಧಿಗಳಿಗೆ ₹149 ಮೌಲ್ಯದ ಸ್ಟೋರಿಮಿರರ್ ಡಿಸ್ಕೌಂಟ್ ವೋಚರ್ ಅನ್ನು ನೀಡಲಾಗುವುದು.

ಎಲ್ಲಾ ಸ್ಪರ್ಧಿಗಳು ಭಾಗವಹಿಸುವಿಕೆಯ ಪ್ರಮಾಣಪತ್ರವನ್ನು ಪಡೆಯಲಿದ್ದಾರೆ.

ಸಲ್ಲಿಕೆಯ ಹಂತ - ಏಪ್ರಿಲ್ 12, 2023 ರಿಂದ ಮೇ 15, 2023 ರವರೆಗೆ.

ಫಲಿತಾಂಶದ ಘೋಷಣೆ: ಜೂನ್ 15, 20223

ಸಂಪರ್ಕಿಸಿ:

ಇಮೇಲ್neha@storymirror.com

ದೂರವಾಣಿ ಸಂಖ್ಯೆ: +91 9372458287 / 022-49243888