Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

#Brother - Sister Memories

SEE WINNERS

Share with friends

ಸಂಭ್ರಮದ ರಕ್ಷಾ ಬಂಧನ ಬಂದಿದೆ. ಇದು ಕೇವಲ ಒಡಹುಟ್ಟಿದವರ ನಡುವಿನ ಬಾಂಧವ್ಯವನ್ನು ಗಟ್ಟಿಗೊಳಿಸುವುದು ಮಾತ್ರವಲ್ಲದೆ ನಂತರದ ಸರಣಿ ಹಬ್ಬಗಳಿಗೆ ಶುಭಾರಂಭವನ್ನು ಸೂಚಿಸುತ್ತದೆ. ಈ ಹಬ್ಬವನ್ನು ಆಚರಿಸಲು ಕೆಲವು ‘ಬಾಲ್ಯದ ನೆನಪುಗಳು' (ಬಚ್‌ಪನ್ ಕಿ ಯಾದೇ) ಇದ್ದರೆ ಸೂಕ್ತವಲ್ಲವೇ? ಪುನಃ ನೆನಪಿನ ದಾರಿಯಲ್ಲಿ ನಡೆಯುವುದಕ್ಕಿಂತ ಉತ್ತಮವಾದ ಮಾರ್ಗ ಬೇರಾವುದಿದೆ? 

ಈ ಸಂದರ್ಭದಲ್ಲಿ, ಸ್ಟೋರಿಮಿರರ್‌ನ "ಸಹೋದರ - ಸಹೋದರಿಯರ ನೆನಪುಗಳು" ಸ್ಪರ್ಧೆಯಲ್ಲಿ ಭಾಗವಹಿಸುವ ಮೂಲಕ ನಮ್ಮ ಒಡಹುಟ್ಟಿದವರೊಂದಿಗಿನ ಉತ್ತಮ ನೆನಪುಗಳನ್ನು ಮತ್ತೊಮ್ಮೆ ಹೊರತರೋಣ ಹಾಗೂ ಮುಂದಿನ ವರ್ಷಗಳಿಗಾಗಿ ಅವನ್ನು ಸ್ಮರಣೀಯವಾಗಿಸೋಣ. ಆದ್ದರಿಂದ, ನೀವು ಮತ್ತು ನಿಮ್ಮ ಒಡಹುಟ್ಟಿದವರ ಕೆಲವು ತಮಾಷೆಯ ನೆನಪುಗಳನ್ನು ಕಥೆಗಳ/ ಕವನಗಳ ಮೂಲಕ ಹಂಚಿಕೊಳ್ಳಿ. ಸುಮಧುರ ಕ್ಷಣಗಳನ್ನು ಮತ್ತೇ ಹಸಿರಾಗಿಸಲು ಈ ಅವಕಾಶವನ್ನು ಬಳಸಿಕೊಳ್ಳಿ.

ಈ ವಿಷಯಗಳಿಗೆ ಬರೆಯಬಹುದು:

Theme Suggestions

  • ಟಿವಿ ರಿಮೋಟ್‌ಗಾಗಿ ಜಗಳ
  • ವಿಲಕ್ಷಣವಾದ ಅಡ್ಡಹೆಸರುಗಳೊಂದಿಗೆ ಕಿರಿಕಿರಿ ಮಾಡಿಕೊಂಡಿದ್ದು
  • ನಿಮ್ಮ ಒಡಹುಟ್ಟಿದವರು ಪರೀಕ್ಷೆಗಳಲ್ಲಿ ಹೆಚ್ಚು ಅಂಕ ಗಳಿಸಿದ ಕ್ಷಣ
  • ರಾಖಿ ಕಟ್ಟುವ ವಿಧಿ-ವಿಧಾನ
  • ಒಟ್ಟಿಗೆ ಆಟಗಳನ್ನು ಆಡಿದ್ದು
  • ಪರಸ್ಪರರ ಮೇಲೆ ತಮಾಷೆ ಮಾಡಿ ಕಾಲೆಳೆದಿದ್ದು
  • ಒಡಹುಟ್ಟಿದವರ ತಿಂಡಿಯನ್ನು ಕದ್ದು ತಿಂದಿದ್ದು
  • ಪರಸ್ಪರ ಬೆಂಬಲಿಸಿದ್ದು

ನಿಯಮಗಳು:

Rules


  • ಸ್ಪರ್ಧಿಗಳು ತಮ್ಮ ಬರಹವನ್ನು ರಾಖಿ/ಸಹೋದರ-ಸಹೋದರಿ ಥೀಮ್‌ನಲ್ಲಿ ಮಾತ್ರ ಸಲ್ಲಿಸಬೇಕು.
  • ಸ್ಪರ್ಧಿಗಳು ತಮ್ಮ ಸ್ವಂತ ಬರಹವನ್ನು ಸಲ್ಲಿಸಬೇಕು. ನಕಲಿಸುವುದು ಅಪರಾಧ. ನಿಮ್ಮ ಬರಹಗಳ ಸಂಖ್ಯೆಗೆ ಯಾವುದೇ ಮಿತಿಯಿಲ್ಲ.
  • ನಿಮ್ಮ ಬರಹಗಳಿಗೆ ಪದಗಳ ಮಿತಿಯಿಲ್ಲ.
  • ಇಮೇಲ್ ಮೂಲಕ ಅಥವಾ ಹಾರ್ಡ್ ಕಾಪಿಯಾಗಿ ಅಥವಾ ಸ್ಪರ್ಧೆಯ ಲಿಂಕ್ ಅನ್ನು ಬಳಸದೆ ಮಾಡಿದ ಯಾವುದೇ ಸಲ್ಲಿಕೆಯು ಈ ಸ್ಪರ್ಧೆಗೆ ಅರ್ಹವಾಗಿರುವುದಿಲ್ಲ.
  • ಸ್ಪರ್ಧೆಯಲ್ಲಿ ಭಾಗವಹಿಸಲು ಯಾವುದೇ ಶುಲ್ಕವಿಲ್ಲ.

ವಿಭಾಗಗಳು: ಕಥೆ, ಕವಿತೆ

ಭಾಷೆಗಳು: ಕನ್ನಡ, ಇಂಗ್ಲೀಷ್, ಹಿಂದಿ, ಮರಾಠಿ, ಗುಜರಾತಿ, ತಮಿಳು, ತೆಲುಗು, ಮಲಯಾಳಂ, ಒಡಿಯಾ ಮತ್ತು ಬೆಂಗಾಲಿ

ಬಹುಮಾನಗಳು:

  • ಪ್ರತಿ ಭಾಷೆ ಮತ್ತು ವಿಭಾಗದಲ್ಲಿ ಅತ್ಯುತ್ತಮವೆನಿಸಿದ ಟಾಪ್ 30 ಬರಹಗಳು ಜ್ಯೂರಿ ಆಯ್ಕೆ ಪ್ರಶಸ್ತಿಯನ್ನು ಗೆಲ್ಲುತ್ತವೆ ಮತ್ತು ಅವುಗಳನ್ನು ಸ್ಟೋರಿಮಿರರ್‌ನ ಇಬುಕ್‌ನಲ್ಲಿ ಪ್ರಕಟಿಸಲಾಗುವುದು. ಅವರು ಡಿಜಿಟಲ್ ಮೆಚ್ಚುಗೆ ಪ್ರಮಾಣಪತ್ರವನ್ನು ಸಹ ಪಡೆಯುತ್ತಾರೆ. ಗೆಲ್ಲಲು ಪರಿಗಣಿಸಲಾಗುವ ಅಂಶಗಳೆಂದರೆ ನಮ್ಮ ಸಂಪಾದಕೀಯ ತಂಡದಿಂದ ನೀಡಲಾಗುವ ಸಂಪಾದಕೀಯ ಸ್ಕೋರ್‌ಗಳು.
  • ಪ್ರತಿ ಭಾಷೆ ಮತ್ತು ವಿಭಾಗದಲ್ಲಿ ಹೆಚ್ಚಿನ ಓದುಗರ ತೊಡಗಿಸಿಕೊಳ್ಳುವಿಕೆಯನ್ನು ಹೊಂದಿದ (ಲೈಕ್ಸ್ ಮತ್ತು ಕಾಮೆಂಟ್‌ಗಳು) ಟಾಪ್ 5 ಬರಹಗಳು ಜನಪ್ರಿಯ ಬರಹಗಾರ ಪ್ರಶಸ್ತಿಯನ್ನು (ಪಾಪ್ಯುಲರ್ ರೈಟರ್ ಅವಾರ್ಡ್) ಗೆಲ್ಲುತ್ತವೆ. ಮತ್ತು ₹149 ಮೌಲ್ಯದ ಡಿಸ್ಕೌಂಟ್ ವೋಚರ್ ಅನ್ನು ಪಡೆಯುತ್ತವೆ. ಹಾಗೂ ಡಿಜಿಟಲ್ ಮೆಚ್ಚುಗೆ ಪ್ರಮಾಣಪತ್ರವನ್ನು ಸಹ ಪಡೆಯುತ್ತವೆ.
  • ಎಲ್ಲಾ ಸ್ಪರ್ಧಿಗಳು ಭಾಗವಹಿಸುವಿಕೆ ಪ್ರಮಾಣಪತ್ರವನ್ನು ಪಡೆಯುತ್ತಾರೆ.

ಸಲ್ಲಿಕೆ ಅವಧಿ: ಆಗಸ್ಟ್ 11, 2022 ರಿಂದ ಸೆಪ್ಟೆಂಬರ್ 05, 2022

ಫಲಿತಾಂಶ: ಅಕ್ಟೋಬರ್ 05, 2022

ಸಂಪರ್ಕಿಸಿ:

ಇಮೇಲ್: neha@storymirror.com

ದೂರವಾಣಿ ಸಂಖ್ಯೆ: +91 9372458287 / 022-49240082

ವಾಟ್ಸಾಪ್: +91 84528 04735