Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

Arjun Maurya

Abstract Fantasy Inspirational

4  

Arjun Maurya

Abstract Fantasy Inspirational

ಇಳೆ‌ ಕಾಯುತಿದೆ ಮಳೆ

ಇಳೆ‌ ಕಾಯುತಿದೆ ಮಳೆ

1 min
274


ಇಳೆ‌ ಕಾಯುತಿದೆ ಮಳೆ

ಬರಡು ಬದುಕಿಗ್ಹೊಳೆಯಾಗಿ

ಸುರಿದು ತಣಿಸು ಬಾ ll


ನಿನ್ನ ಮುತ್ತಿನಾ ಹನಿಯು

ಒಡೆದ ಎದೆಯ ಒಳಗೆ ಹನಿಸಿ l

ಆಳವಾದ ಪ್ರೀತಿ ಬೇರು

ಇನ್ನೂ ತನುವಮನವ ಬೆರೆಸಿ

ಮಿಲನವಾಗು ಬಾ ll            llಪll


ಪ್ರತೀ ಪ್ರೀತಿಯಾ ಹನಿಯು

ಮಣ್ಣಿನಲ್ಲೇ ಹದವ ಕಲೆಸಿ l

ಕಾಯುತ್ತಿರುವ ಹಸಿರ‌ ಕನಸು

ಸೃಷ್ಟಿಶೀಲ‌ ದೃಷ್ಟಿಯಿಂದ

ಚಿಗುರುವಂತೆ ಮಾಡು ಬಾ ll      llಪll


ಬೆಂದ‌ಒಡಲು ತಣಿಯುವಂತೆ

ಒಡಲ‌ ಬಗೆದು ಹನಿಯಬೇಕು l

ಎದೆಯ ಆಳಕ್ಕಿಳಿದು ಬೇರು

ಗಂಧಪುಷ್ಪ ಅರಳುವಂತೆ

ಎದೆಯ ತಣಿಸು‌ ಬಾ ll          Ilಪll


ಹಸಿರು ಉಸಿರ ಕಾನಮೌನ

ಭೂಮಿಯೆದೆಗೆ ಸಿಂಚನ l

ಜಗಕೆ ಸೊಗದ ಜೀವಗಾನ

ಮಳೆಯ ಹನಿಯ ಮುತ್ತಿನಾ

ಹೊನಲ ಹರಿಸು ಬಾ ll          Ilಪll


ಇಳೆ‌ ಕಾಯುತಿದೆ ಮಳೆ

ಬರಡು ಬದುಕಿಗ್ಹೊಳೆಯಾಗಿ

ಸುರಿದು ತಣಿಸು ಬಾ ..ll


Rate this content
Log in

Similar kannada poem from Abstract