ನಿರಾಸೆ
ನಿರಾಸೆ
ಭರವಸೆಯೇ ಬಾಳಿನ ಹೊನ್ನ ಕಿರಣ
ನಿರಾಸೆಗೆ ಅತಿಯಾದ ನಿರೀಕ್ಷೆಗೆ ಕಾರಣ
ಸೋಲೇ ಗೆಲುವಿನ ಸೋಪಾನ
ಅರಿತರೆ ಸುಂದರವಾಗುವುದು ಜೀವನ
ಆಸೆಗಳಿಗೆ ಇರಬೇಕು ಪರಿಧಿ
ಇಲ್ಲವಾದರೆ ಹಾಳಾಗುವುದು ನೆಮ್ಮದಿ
ಮನುಜಗೆ ಹೆಚ್ಚಾದರೆ ದುರಾಸೆ
ಅನುಭವಿಸ ಬೇಕಾಗುತ್ತದೆ ನಿರಾಸೆ
ಸಾಧನೆ ಮಾಡಿದ ನಂತರ
ಕಾಯುವುದು ನಿರಾಸೆ ಅಂತರ
ಜೀವನದಿ ಸಂತಸ ತುಂಬಿದ್ದರೆ ನಿರಂತರ
ಬದುಕನಿಸುವುದು ಸುಂದರ ಸುಮಧುರ