Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

Arjun Maurya

Abstract Fantasy Inspirational

4.7  

Arjun Maurya

Abstract Fantasy Inspirational

ಒಣರೆಂಬೆಯ ಚಿಗುರು

ಒಣರೆಂಬೆಯ ಚಿಗುರು

1 min
333

ಬಯಲು ಬೆಟ್ಟಗಳಾ ನಡುವೆ

ಕಲ್ಲುಮುಳ್ಳ ಹಾದಿಯಲ್ಲಿ |

ಹಸಿರ ಉಸಿರು ನೆರಳ ಬೆಳಕು

ಹುಡುಕಾಟದ ಬದುಕಪಯಣ ..||

ಎತ್ತಕಡೆಯೂ ಬಿಸಿಲ ಹೊಗೆ..

ಬರಿದು ಕಲ್ಲುಗುಡ್ಡಗಳು |

ನಡುವೆ ತುಂಬು ಧೂಳ ಹಾದಿ

ಸಿಗದು ಕಾಣೆ ಹಸಿರ ನಿಧಿ ||

ಸಿಗದ ಮರದ ಮರೀಚಿಕೆ

ಮತ್ತೆ‌ ಮನಕೆ ನಿರಾಸೆ |

ಹಸಿದ ಮನಕೆ ಹಸಿರ ಬಯಕೆ..

ನೀರ-ದೇಹ ದಾಹದಾಸೆ ||

ಕಂಡೆನದನು ದೂರದಲ್ಲಿ

ಹೊಳೆಯುತಿಹ ಬೆಳ್ಳಿ ಕಂಬ |

ಕೊನೆಗೂ ಸಿಕ್ಕ ಗರ

ಸಂದು ಸಂದೂ ಬೆಂದ ಮರ ||

ಬವಣೆ ಹೊತ್ತ ರೆಂಬೆ ಕೊಂಬೆ

ನೆರಳ ಕನಸು ಕನಸೇ ರಂಭೆ |

ಹಸಿರು ಉಸಿರು ಎಲೆಯ ಬಲೆ

ಹುಡುಕಿದರೂ ಇಲ್ಲ ಸೆಲೆ ||

ಬಿಡದ ಛಲಕೆ ಅದೋ ಸಣ್ಣ

ರೆಂಬೆ ತುದಿಗೆ ಬಿಡಲು ಕಣ್ಣ |

ಒಣರೆಂಬೆ ತುದಿಯಲೊಂದು

ಸಣ್ಣ ಚಿಗುರ ಹಸಿರ ಹಾಸೆ ||

Rate this content
Log in

Similar kannada poem from Abstract