Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

PRASANNA KUMAR

Classics Inspirational Others

4  

PRASANNA KUMAR

Classics Inspirational Others

ಸಹಜ

ಸಹಜ

1 min
8


ಬಯಸಿದ ಹಾಗೆ ನಡೆಯುವುದಿಲ್ಲ ಬದುಕಿನ ಗಡಿಯಾರ

ಬದಲಿಸುವೆ ಎಂದರೆ ಬಿಡನು ಕೀಲಿಯ ಸರದಾರ |


ತಿಳಿದವನು ನಾನೆಂದು ನಡೆಯುವುದು ಸಹಜ

ಅರಿತವನು ಯಾರೆಂದು ತಿಳಿದವನೆ ಮನುಜ

ನನಗಿಂತ ಮಿಗಿಲಿಲ್ಲ ಎನ್ನುತ ಬೀಗಿದರೆ

ಕಣ್ಣಿಗೆ ಬಿದ್ದ ಧೂಳಿನ ಕಣವು ಕೊಡದೇನು ತೊಂದರೆ

ಕೋಟಿ ಕೋಟಿ ಇದ್ದರೇನು

ಬಾಧೆಯ ಪಡಬೇಕು

ಏನೇ ಬಂದರೂ ಚಿಕ್ಕದು ದೊಡ್ಡದು

ಎಂಬುದ ಬಿಡಬೇಕು ||


ಜೀವನದ ಪ್ರತಿಕ್ಷಣವು ಕಲಿಸುವುದು ಪಾಠ

ಕಲಿಯುತ್ತಾ ನಡೆದವನು ತಿಳಿಯುವನು ಗುಟ್ಟ

ಕೆಲಸವನು ಮಾಡುತ್ತಾ ಪ್ರತಿಫಲ ಬಯಸದಿರು

ನಿನ್ನ ಕೆಲಸದ ತೂಕಕ್ಕೆ ಫಲವನು ಪಡೆಯುತಿರು

ಕೊಟ್ಟು ಕೆಟ್ಟೆ ಎನ್ನದಿರು

ಮುಂದಿಹುದು ಒಳಿತು

ಚಿಂತಿಸಿ ಕಾಲವ ಕಳೆಯದಿರು

ದಿನದಿನವೂ ಹೊಸತು ||


Rate this content
Log in

Similar kannada poem from Classics