nagavara murali

Inspirational Others

1.8  

nagavara murali

Inspirational Others

ಅಪರೂಪದ ಮದುವೆ

ಅಪರೂಪದ ಮದುವೆ

5 mins
121


ಹೈದರಾಬಾದ್ ನ ತಾಡಪತ್ರಿ ರಾಮಮೂರ್ತಿರ ಯವ ರು , ಅವರ ತಂದೆ ಕಾಲದಿಂದ ಇವರ ಜಮೀನಿನಲ್ಲೇ ರೈತರು ಬೆಳೆಯುವ ಶೇಂಗಾ , ಎಳ್ಳು ಹಾಗೂ ಇತರೆ ಕಾಳು ಗಳನ್ನ ತಮ್ಮ ಸ್ವಂತ ಆಯಿಲ್ ಮಿಲ್ ನಲ್ಲೇ ಎಣ್ಣೆ ತೆಗೆದು ದೊಡ್ಡ ದೊಡ್ಡ ಹೋಟೆಲ್ ಗಳಿಗೆ ಮಾತ್ರ ಕಳು ಹಿಸುವ ವ್ಯವಹಾರವನ್ನೇ ಮುಂದುವರೆಸಿಕೊಂಡು ಬಂದಿ ದ್ದರು .ಇವರ ಒಬ್ಬಳೇ ವಿಧವೆ ತಂಗಿ ಅರುಂಧತಿ ಯೂ ಇವರೊಂದಿಗೇ ಇದ್ದ ಕಾರಣ ಅವರ ಪಾಲಿನ ಆಸ್ತಿಯೂ ಅಣ್ಣನಿಗೇ ಕೊಟ್ಟು ನಿನಗೆ ಮಗಳಾದರೆ ನನ್ನ ಮಗನನ್ನ ಅಳಿಯನ ನ್ನಾಗಿ ಮಾಡಿಕೊಳ್ಳಬೇಕೆಂದು ಸಾಯುವಾಗ ಅಣ್ಣನಿಂದ ಭಾಷೆ ತೆಗೆದುಕೊಂಡಿದ್ದರು. 


ರಾಮಮೂರ್ತಿಯ ಸಹಾಯಕ್ಕೆ ಈಗ ಪತ್ನಿ ಸುಮಿತ್ರ ಮಾತ್ರ . ಆಂಧ್ರ ಪ್ರದೇಶದಲ್ಲಿ ಇವರ sun brand oil ಒಳ್ಳೆಯ ಹೆಸರು ಪಡೆದಿತ್ತು .ಅಪಾರ ಬೇಡಿಕೆ ಇದ್ದರೂ ಹೆಚ್ಚು supply ಮಾಡಲು ಇವರಿಂದ ಸಾಧ್ಯ ವಾಗದೆ 

ದೊಡ್ಡ ಹೋಟಲ್ ಗಳಿಗೆ ಮಾತ್ರ ಇದು ಸೀಮಿತ ವಾಗಿ ತ್ತು.


ಇವರಿಗೆ ಒಬ್ಬಳೇ ಮಗಳು ಸುಧಾ. ಬಹಳ ಬುದ್ಧಿವಂತೆ , ಧೈರ್ಯವಂತೆ ತಾಯಿಯಂತೆ ರೂಪವತಿ .ರಾಮ ಮೂ ರ್ತಿ ಯ ತಂಗಿಯ ಮಗ ಸುಂದರ್ ಮತ್ತು ಸುಧಾ ಇಬ್ಬ ರೂ ಒಟ್ಟಿಗೇ ಆಡಿ ಬೆಳೆದವರು. ಮಗಳಿಗೆ ಹದಿನೆಂಟು ವರ್ಷ ಆದ ಕೂಡಲೇ ಅವರ ತಂಗಿ ಸಾಯುವಾಗ ಮಾ ತು ಕೊಟ್ಟಿದ್ದ ಕಾರಣ ಸುಂದರ್ ನ ಮನೆ ಅಳಿಯನನ್ನಾ ಗಿ ಮಾಡಿಕೊಂಡರು. ಹೆಂಡತಿಗೆ ಇದು ಇಷ್ಟವಿಲ್ಲದಿದ್ದರೂ 

ಗಂಡನ ಮಾತನ್ನು ಮೀರುವ ಹಾಗಿರಲಿಲ್ಲ.ಅಳಿಯ ಸುಂದರ್ ಗೆ ಹಣಕಾಸಿನ ವ್ಯವಹಾರಮಾತ್ರ ಕೊಟ್ಟಿರ ಲಿಲ್ಲ. ಆದರೆ ಬೇರೆ ವ್ಯವಹಾರಗಳನ್ನ ಮಾತ್ರನೋಡಿ ಕೊಳ್ಳಲು ಹೇಳಿದ್ದರು. ಇದರಿಂದ ಅತ್ತೆ ಮಾವನ ಮೇಲೆ ಸ್ಸಲ್ಪ ಕೋಪ ಇದ್ದೇ ಇತ್ತು. ಸುಧಾಳ ಹತ್ತಿರ ಈ ವಿಷಯ ಎಷ್ಟೊ ಸಲ ಪ್ರಸ್ಥಾಪಿಸಿದರೂ ಅವಳು ನೀವೇ ಕೇಳಿ ನನ ಗೆ ಅದು ಸಂಬಂಧಿಸಿದ್ದಲ್ಲ ಅಂಥ ಹೇಳಿ ಸುಮ್ಮ ನಾಗಿ ದ್ದಳು.


ಒಂದು ದಿನ ಬೆಳಗ್ಗೆ ಯಾರೋ ಕೊಟ್ಟ ದೂರಿನ ಕಾರಣ ಮನೆ , ಮಿಲ್ ,ಗೋಡೌನ್ ಎಲ್ಲಾ income tax raid ಆಗಿ seal ಮಾಡಿದ ಕಾರಣ ಒಂದು ವಾರ ಮುಚ್ಚಬೇಕಾ ಯ್ತು. ರಾಮಮೂರ್ತಿ ಇದರಿಂದ ಗಧ್ಗಧಿತರಾದರು .ಈ ಘಟನೆ ಆಗಿ ಹದಿನೈದು ದಿನಕ್ಕೆ ಒಂದು ದಿನ ಹಳೇ ಲೆಕ್ಕ ಪತ್ರಗಳನ್ನ ಲಾಯರ್ ಕಛೇರಿ ಗೆ ತೆಗೆದು ಕೊಂಡು ಹೋ ಗುವಾಗ ಕಾರ್ ನಲ್ಲೇ ಹಾರ್ಟ್ ಅಟಾಕ್ ಆಗಿ ಇಹಲೋ ಕ ತ್ಯಜಿಸಿದರು. ವಿಧಿ ಇಲ್ಲದೇ ಈಗ ಸುಂದರ್ ಕೈಗೆ ಹಣ ದ ವ್ಯವಹಾರವೂ ತಾನಾಗೇ ಬಂತು. ಸುಧಾ ಮತ್ತು ಸುಮಿತ್ರ ಸುಂದರ್ ಹೇಗೋ ನಡೆಸಿಕೊಂಡು ಹೋಗ್ತಾ ಇದಾನೆ ಅಂಥ ಆಕಡೆ ತಲೆಹಾಕದೆ ಸುಮ್ಮನಿದ್ದರು. 


ಕೆಲವು ವರ್ಷಗಳು ಕಳೆದಿದೆ. ಸುಧಾಗೆ ಎರಡು ಹೆಣ್ಣು ಮಕ್ಕಳಾಗಿದೆ . ಒಂದು ದಿನ ಸುಮಿತ್ರ ಹೆಸರಿಗೆ ಒಂದು ನೋಟಿಸ್ ಬಂತು .ನೋಡಿದ್ರೆ ಎರಡು ದೊಡ್ಡ ಹೋಟೆ ಲ್ ಗಳಿಗೆ ಅಡ್ವಾನ್ಸ್ ತೆಗೆದುಕೊಂಡು supply ಮಾಡಿ ರಲಿಲ್ಲ. ಅಡ್ವಾನ್ಸ್ ಏಕೆ ತೋಗೋತೀರಿ .ಮೊದಲಿಂದಲೂ ನಾವು supply ಮಾಡಿ ವಾರ ಅಥವಾ ಹದಿನೈದು ದಿನ ಆದ ಮೇಲೆ ಅವರೇ ನಮ್ಮ bank ಅಕೌಂಟ್ ಗೆ ಡಿಪಾಸಿ ಟ್ ಮಾಡ್ತಾ ಇದ್ದರು ಅಂಥ ಸುಮಿತ್ರ ಹೇಳಿದ್ದಕ್ಕೆ ಅದು ನಿಮ್ಮ ಕಾಲ ಅತ್ತೆ ಈಗ ಯಾರೂ ಹಾಗೆಲ್ಲಾ ಕೊಡಕ್ಕಾಗಲ್ಲ ಅಂದ. ತಕ್ಷಣ ಸುಧಾ  ಆಯ್ತು supply ಏಕೆ ಮಾಡ್ಲಿಲ್ಲ ಹೇಳಿ ಅಂದರೆ ಏನೋ ಬೆಕ್ಕಿಗೆ ಜ್ವರ ಬರೋಹಾಗೆ ಉತ್ತರ ಕೊಟ್ಟ. ನಾಳೆ ಯಿಂದ ನಾನೂ ನಿಮ್ಮಜೊತೆ ಬರ್ತೀನಿ ಅಂದಳು .ಆಗ ಸುಂದರ್ ಹೆದರಿದ್ದು ಇವಳಿಗೆ ಅವನ ಮುಖ ನೋಡಿದ ತಕ್ಷಣ ಗೊತ್ತಾಯ್ತು. ಮಾರನೇ ದಿನವೇ ಮ್ಯಾನೇಜರ್ ಹತ್ತಿರ ಮಾತನಾಡಿದಾಗ ಕೆಲವು ವಿಷಯ ಹೇಳಿದರೆ ನನ್ನ ಕೆಲಸ ಹೋಗತ್ತೆ ಮೇಡಮ್ .ನೀವು ಧೈರ್ಯ ಕೊಟ್ಟರೆ ಎಲ್ಲಾ ಹೇಳ್ತೀನಿ ಅಂಥ ವಿವರವಾಗಿ ತಿಳಿಸಿದರು . ಅಲ್ಲಿಂದಲೇ ತಾಯಿಗೂ ವಿಷಯ ತಿಳಿಸಿ ಅಮ್ಮ ನಾವು ಮುಳುಗಿ ಹೋಗ್ತಾ ಇದ್ದೇವೆ. ಈಗಲೂ ಕಾಲ ಮಿಂಚಿಲ್ಲ . ನಾವಿಬ್ಬರೂ ಏನಾದರೂ ಮಾಡಲೇ ಬೇಕು ಅಂದು ಆ ಕ್ಷಣದಿಂದಲೇ ಎಲ್ಲ ವ್ಯವಹಾರವನ್ನು ಇಬ್ಬರೂ ತಮ್ಮ ಕೈಗೆ ತೆಗೆದು ಕೊಂಡರು. ಮೂರು ದಿನ ದಲ್ಲಿ ಒಂದು ಕೋಟಿ ರೂಪಾಯಿ ನಷ್ಟವಾಗಿರುವುದಾಗಿ ಲೆಕ್ಕ ಸಿಗ್ತು. ಅಂದು ರಾತ್ರಿ ಸುಂದರ್ ಮನೆಗೆ ಬರಲಿಲ್ಲ. ಅವನ contact ಇರೋರಿಗೆಲ್ಲಾ ಫೋನ್ ಮಾಡಿ ಕೇಳಿ ದರೂ ಸುಳಿವಿಲ್ಲ. ಮೂರುದಿನ ವಾದರೂ ಬರದಿದ್ದಾಗ ಹೆದರಿ ಪೋಲಿಸ್ complaint ಕೊಟ್ಟಾಯ್ತು ಆದರೂ ಪ್ರಯೋಜನವಾಗಲಿಲ್ಲ.


ಹೆದರದೆ ದಿಟ್ಟತನದಿಂದ ಹೇಗಾದರೂ ತಾತನ ಕಾಲದ ಈ ಅಯಿಲ್ ಕಂಪೆನಿಯನ್ನ ಉತ್ತಮ ಸ್ಥಿತಿಗೆ ತೆಗೆದುಕೊಂಡು ಹೋಗಬೇಕೆಂದು ನಿರ್ಧಾರ ಮಾಡಿದಳು. Manager ಒಳ್ಳೆಯವರಾದ್ದರಿಂದ ಅವರ ಸಹಾಯದಿಂದ ಬಹಳ ಬೇಗ ಸುಧಾ ಎಲ್ಲಾ ವ್ಯವಹಾರ ತಿಳಿದು ,ತಾತನ ಕಾಲದ ಹಳೇ ಯಂತ್ರಗಳನ್ನೆಲ್ಲಾ ಬದಲಾಯಿಸಿ ಈಗಿನ ಕಾಲದ ವೇಗಕ್ಕೆ ಸರಿಯಾಗಿ ಉತ್ಪಾದನೆ ಮಾಡಬೇಕೆಂದು ಚಿಂತ ನೆ ಮಾಡಿ ಐವತ್ತು ವರ್ಷ ವಯಸ್ಸು ಮೀರಿದವರಿಗೆ ತೊಂದರೆ ಆಗದ ಹಾಗೆ ಕೈತುಂಬ ಹಣ ಕೊಟ್ಟು ಕೆಲಸ ದಿಂದ relieve ಮಾಡಿ , ಬೆರಳೆಣಿಕೆಯಷ್ಟು ಯುವಕ ರನ್ನು ಮಾತ್ರ ಉಳಿಸಿಕೊಂಡು ಅವರಿಗೆ ಪ್ರತ್ಯೇಕವಾಗಿ ತರಬೇತಿ ಕೊಡಿಸಿದಳು. ಹಳೇ ಹೆಸರನ್ನ ಬದಲಿಸಿದಾಗ Classic oil co 'ಆಯಿತು. ಹೊರದೇಶಕ್ಕೆ ರಫ್ತು ಮಾಡಲು ಎಲ್ಲಾ ತಯಾರು ಮಾಡಿಕೊಂಡಾಯ್ತು. ಐದಾ ರು ವರ್ಷಗಳಲ್ಲೇ ಐದು ಆರು ಕೋಟಿ turn over ಗುರಿ ತಲುಪಲು ಬೇಕಾದ ಎಲ್ಲಾ ಸಿದ್ಧತೆ ಮಾಡಿ ಕೊಂಡಳು. ನಿರೀಕ್ಷೆ ಗೂ ಮೀರಿ ಲಾಭ ಗಳಿಸಿ ಆಂದ್ರಪ್ರದೇಶದ ಮೊಟ್ಟ ಮೊದಲ "youngest lady exporter "ಅಂಥ Award ಬಂತು. ತಾಯಿ ಸುಮಿತ್ರಗೆ ಮಗಳ ಈ ಸಾಧನೆ ಕಂಡು ಹೆಮ್ಮೆಯಾದರೂ ಗಂಡು ದಿಕ್ಕಿಲ್ಲದ ಮನೆ ಆಯ್ತ ಲ್ಲಾ ಅನ್ನೋ ಒಂದೇ ಸಂಕಟ.


ಸುಧಾ ಈಗ ಬಿಡುವಿಲ್ಲದೆ ದುಡಿಯುತ್ತಿದ್ದಾಳೆ. ಪ್ರತಿ ದಿನ TV interview ಗಳು ,ಸನ್ಮಾನಗಳು .ಮೀಟಿಂಗ್ ಗಳು.

ಈಗ ಸುಧಾಗೆ 38 ವರ್ಷ. ಯಾರೂ ಎರಡು ಮಕ್ಕಳ ತಾಯಿ ಅಂಥ ಹೇಳಲು ಸಾಧ್ಯವಿಲ್ಲ. ಮಕ್ಕಳೂ ದೊಡ್ಡವ ರಾಗಿದ್ದಾರೆ .ಸರಳ B. com final year ,ಸ್ವಾತಿ MBA 2nd year. ಇಬ್ಬರೂ ಒಂದುದಿನ ಅಜ್ಜಿ ಹತ್ತಿರ ಕೂತು ಅಜ್ಜಿ ನಿಮ್ಮಹತ್ತಿರ ಒಂದು ವಿಷಯ ಹೇಳಬೇಕು. ಆದರೆ ಈ ವಿಷಯ ಪ್ರಸ್ತಾಪ ಮಾಡಕ್ಕೆ ನಾವು ಇನ್ನೂ ಬಹಳ ಚಿಕ್ಕವರು .ಅದಕ್ಕೆ ನಿಮ್ಮ ಸಲಹೆ ಮೊದಲು ತೊಗೊಂಡು ನಂತರ ಯೋಚನೆ ಮಾಡೋಣ ಅಂಥ ನಿಮ್ಮಹತ್ತಿರ ಬಂದಿರೋದು ಅಂದಾಗ ,ನೀವು ಈ ಕಾಲದವರು ಎಲ್ಲ ರೀತಿಯಲ್ಲೂ ಯೋಚನೆ ಮಾಡೋ ಶಕ್ತಿ ನಿಮಗೆ ಇದೆ. ಹೇಳಿ ಅoದಾಗ ನಾವು ಇಬ್ಬರೂ ಇವತ್ತಲ್ಲ ನಾಳೆ ಮದು ವೆ ಮಾಡಿ ಕೊಂಡು ಹೋದರೆ ನಿಮಗೂ ವಯಸ್ಸಾಯ್ತು ಅಮ್ಮನ್ನ ಯಾರು ನೋಡ್ಕೋತಾರೆ .ಇದಕ್ಕೆ ನಿಮ್ಮಹತ್ತಿರ ಒಂದು ಪರಿಹಾರ ಇದ್ದರೆ ಹೇಳಿ ಅಂದರು ಮೊಮ್ಮಕ್ಕಳು . ಒಳ್ಳೆ ಪ್ರಶ್ನೆ ಮಕ್ಕಳೇ ನಂಗೂ ಇದೇ ಯೋಚನೆ. ಒಂದು ಉಪಾಯ ಇದೆ . ಅದು ನಿಮ್ಮ ಅಮ್ಮನ್ನ ನೀವಿಬ್ಬರೂ ಒಪ್ಪಿಸಿದರೆ ಮಾತ್ರ .ಅವಳು ಒಪ್ಪಿಕೊಂಡರೆ ಎಲ್ಲಾ ಒಳ್ಳೆ ಯದಾಗತ್ತೆ. ಮೂರು ದಿನದಲ್ಲಿ ಹೇಳ್ತೀನಿ ಅಂಥ ಸಮ ಯ ತೊಗೊಂಡು ನಾಲ್ಕನೇ ದಿನ ಮಗಳು ಹೊರಗೆ ಹೋಗಿರೋದನ್ನ ಗಮನಿಸಿ ,ನಿಮ್ಮ ಅಮ್ಮಂಗೆ ಇನ್ನೊಂ ದು ಮ ದುವೆ ಮಾಡಕ್ಕೆ ನಿಮಗೆ ಒಪ್ಪಿಗೆ ಇದ್ದರೆ ಹೇಳಿ ಮುಂದಿನದು ನನ್ನ ಕೆಲಸ ಅಂದರು.ಅಯ್ಯೋ ಅದೇ ನಮ್ಮ plan ಸಹಾ. ಹೇಗೆ ಹೇಳೋದು ಅಂಥ ನಾವು ಹೆದರಿದ್ದು ಅದಕ್ಕಾಗಿಯೇ ಅಂದರು ಮೊಮ್ಮಕ್ಕಳು.


ಸುಧಾ ಇಷ್ಟೆಲ್ಲಾ ಸಾಧಿಸಲು ಒಂದು ಕಾಣದ ಕೈ ಇತ್ತು . ಅದು ತಾಯಿಗೂ ಗೊತ್ತು. ದುಬೈ ನಿಂದ ಬಂದು ದೆಹಲಿ ಯಲ್ಲಿ ಒಂದು ಕಂಪನಿಯ CEO ಆಗಿದ್ದ ರಘು ಸುಧಾ ಳನ್ನ ಮೆಚ್ಚಿ ಮದುವೆ ಮಾಡಿಕೊಳ್ಳಲು ಇಷ್ಟಪಟ್ಟಿದ್ದ ಆದರೆ ರಾಮಮೂರ್ತಿ ಸಾಧ್ಯವಿಲ್ಲವೆಂದು ಬಿಟ್ಟಾಗ ದೇಶಬಿಟ್ಟು ದುಬೈ ಗೆ ಹೊರಟು ಹೋಗಿದ್ದ .ಸುಧಾ ಅತ್ತೆಯ ಮಗನನ್ನ ಮದುವೆ ಮಾಡಿಕೊಂಡಿದ್ದು ನಂತರ ದಲ್ಲಿ ಅವನೇ ಇವರಿಗೆ ಮೊಸಮಾಡಿ ಪರಾರಿ ಆಗಿದ್ದು ಎಲ್ಲ ವಿಷಯ ತಿಳಿದು ಸುಧಾಳಿಗೆ ಸಹಾಯ ಮಾಡಿ ಕಂಪನಿ ಕೋಟಿ ಕೋಟಿ ಲಾಭಗಳಿಸಿ ಸುಧಾಗೆ ಸಮಾ ಜದಲ್ಲಿ ಒಳ್ಳೆಯ ಹೆಸರುಗಳಿಸಲು ಅವನ ಸಹಕಾರ ಬಹಳ ಇತ್ತು. ಈಗೀಗ ವಾರಕ್ಕೆ ಒಂದು ದಿನವಾದರೂ ಏನೋ ನೆಪ ಹೇಳಿ ದೆಹಲಿಗೆ ಹೋಗುತ್ತಿದ್ದುದನ್ನು ಅಮ್ಮ ಸೂಕ್ಷ್ಮ ವಾಗಿ ಗಮನಿಸಿದ್ದಳು. ಹಾಗೆ ನೋಡಿದರೆ ರಘು ದೂರದ ಸಂಭಂದಿಯೇ. ಯಾವುದೋ ಕಾರಣದಿಂದ ಮದುವೆ ಮಾಡಿಕೊಳ್ಳದೆ ಇದ್ದ ರಘು ವಿನ ಮನಸ್ಸು ಈಗೀಗ ಸುಧಾ ಕಡೆ ತಿರು ಗಿದೆ ಯಾದರೂ ಹೇಳಲಾಗದೆ ಇಕ್ಕಟ್ಟಿನಲ್ಲಿದ್ದ. ಅಮ್ಮ ಈ ವಿಷ ಯ ಮಗಳ ಹತ್ತಿರ ಚರ್ಚೆ ಮಾಡಿದಾಗ ,ಏನಮ್ಮ ಬೆಳೆದು ನಿಂತಿರುವ ಇಬ್ಬರು ಹೆಣ್ಣು ಮಕ್ಕಳು ಇರೋ ವಾಗ ನಾನು ಇನ್ನೊಂದು ಮದುವೆ ಆಗೋದಾ ಸಮಾಜ ಒಪ್ಪುತ್ತಾ ಅಂದಾಗ ಇಬ್ಬರು ಮಕ್ಕಳೂ ಬಂದು ಅಮ್ಮ ಇದು ನಮ್ಮದೇ ಪ್ಲಾನ್ .ಅಜ್ಜಿಯ ಒಪ್ಪಿಗೆ ಪಡೆದಾಗಿದೆ. ಇನ್ನೇನಿದ್ದರೂ ರಘು ಅವರ ಅನುಮತಿ ಮಾತ್ರ ಅಂದಾ ಗ ,ಓಹೋ ಅಮ್ಮನಿಗೇ ಮದುವೆ ಮಾಡೋ ಅಷ್ಟು ದೊಡ್ಡವರಾಗಿ ಬಿಟ್ಟಿರಾ ಅಂದಾಗ. ಅಮ್ಮ ಹೆಳಿದ್ದು ನಾ ನು ರಘು ಹತ್ತಿರ ಮಾತಾಡ್ತೀನಿ .ಅವನಿಗೆ ಇಷ್ಟ ಇಲ್ಲ ದಿದ್ದರೆ ಬೇಡಾ ಅಂದರು. ಮುಂದಿನ ಭಾನುವಾರ ಹೈದರಾಬಾದ್ ಗೆ ಬರ್ತಾ ಇದಾನೆ ನೀವುಂಟು ರಘು ಉಂಟು ನನಗೆ ಗೊತ್ತಿಲ್ಲ ಅಂದಾಗ ಅರ್ಧ ಕೆಲಸ ಆಯಿತು. ಇನ್ನೇನಿದ್ದರೂ ಅವನ ಒಪ್ಪಿಗೆ ಅಷ್ಟೇ ಅಂಥ ಮೂವರೂ ಸಂತೋಷ ಪಟ್ಟಾಗ ನಾಚಿಕೆಯಿಂದ ತಲೆ ತಗ್ಗಿಸಿ ಸುಧಾ ಆಚೆ ಹೋದಳು.


ಸರಳವಾಗಿ ಮದುವೆ ತಿರುಪತಿಯಲ್ಲಿ ಮಾಡಿಕೊಳ್ಳ ಬೇಕೆಂದರೂ ಅದು ಅದ್ದೂರಿಯಾಗಿ ಹೈದರಾಬಾದ್ ನಲ್ಲೇ ಆಯ್ತು. ಮಕ್ಕಳೇ ನಿಂತು ಅಮ್ಮನ ಮದುವೆ ಮಾಡಿಸಿದ ಅಪರೂಪದ ಮದುವೆ ಅಂಥ ಹೆಸರಾ ಯಿತು.ಇವರ ಮದುವೆಯ ದಿನವೇ ಸುಂದರ್ ಅರೆಸ್ಟ್ ಆದ ಅಂಥ ತಿಳಿಯಿತು. ಹೆದರ ಬೇಡಿ ನಾವು ಅವನಿಂದ ನಿಮಗೆ ತೊಂದರೆ ಆಗದಹಾಗೆ ನೋಡಿಕೊಳ್ಳುತ್ತೇವೆ ಅಂಥ ಪೋಲೀಸರಿಂದ ಆಶ್ವಾಸನೆ ಸಿಕ್ಕಿತ್ತು .ನಾನು ಇನ್ನೂ ಬದುಕಿರೋವಾಗಲೇ ನನ್ನ ಹೆಂಡತಿ ಮತ್ತೊಂದು ಮದುವೆ ಹೇಗೆ ಆಗ್ತಾಳೆ ಅಂಥ ಕೂಗಾಡ್ತಾ ರಸ್ತೆಯಲ್ಲಿ ಹುಚ್ಚನಂತೆ ಹೊರಳಾಡಿ ಕೂಗಾಡ್ತಾ ಇದ್ದಾಗ ಪೋಲೀಸ್ ಬಂದು ಅರೆಸ್ಟ್ ಮಾಡಿದ್ದರಂತೆ.


Rate this content
Log in

Similar kannada story from Inspirational