mamta km

Abstract Classics Inspirational

4  

mamta km

Abstract Classics Inspirational

ಚಿವುಟಿದರೂ ಚಿಗುರುವ ಮನಸು

ಚಿವುಟಿದರೂ ಚಿಗುರುವ ಮನಸು

3 mins
15


ಶ್ರೀಪಾದ, ಸುಮತಿ ಅವರ ಮಲ ಮಗ. ಸುಮತಿ ಅವರು ಕೇಶವರಾಯರನ್ನು ಮದುವೆಯಾಗಿ ಬಂದಾಗ ಪುಟ್ಟ ಮಗು ಶ್ರೀಪಾದ ತಂದೆಯ ಹಿಂದೆ ಮುಂದೆಯೇ ಸುತ್ತುವ ಪುಟ್ಟ ಬಾಲಕನಾಗಿದ್ದ. ಆಗಿನ್ನು ಮೂರು ವರುಷವಿರಬಹುದು. ಶ್ರೀಪಾದನ ತಾಯಿ ಯಾವುದೋ ಕಾಯಿಲೆಗೆ ತುತ್ತಾಗಿ, ಶ್ರೀಪಾದನಿಗೆ ಎರಡು ವರ್ಷ ತುಂಬ ಮೊದಲೇ ಮರಣ ಹೊಂದಿದಾಗ, ಮಗು ಹಾಗೂ ತಂದೆಯನ್ನು ನೋಡಿಕೊಳ್ಳಲು ಹಾಗೂ ಮನೆಗೊಂದು ಗೃಹಿಣಿ ಬೇಕೆಂದು ಶ್ರೀಪಾದನ ಅಜ್ಜಿ, ಕಾವೇರಮ್ಮ ತಮ್ಮ ದೂರದ ಸಂಬಂಧಿ ಆದ ಸುಮತಿಯನ್ನು ಶ್ರೀಪಾದನ ತಂದೆಗೆ ಮದುವೆ ಮಾಡಿಸಿದರು.

  ಆದರೆ ಮದುವೆಗೆ ಮೊದಲೇ ಸುಮತಿಯ ಬಳಿ ಶ್ರೀಪಾದನನ್ನು ಸ್ವಂತ ಮಗುವಿನಂತೆ ನೋಡಿಕೊಳ್ಳುವುದಾದರೆ ಮಾತ್ರ ಮದುವೆಯಾಗಬೇಕು ಎಂದು ಹೇಳಿ, ಅದಕ್ಕೆಲ್ಲ ಒಪ್ಪಿಕೊಂಡ ನಂತರವೇ ಸುಮತಿ ಕೇಶವರಾಯರನ್ನು ಮದುವೆಯಾಗಿ ಶ್ರೀಪಾದನಿಗೆ ಅಮ್ಮನಾಗಿ ಬಂದಳು.

ಕಾವೇರಮ್ಮ ಇದ್ದಿದ್ದರಿಂದ ಸುಮತಿಗೆ ಶ್ರೀಪಾದನನ್ನು ದೂರವಿರಿಸುವ ಪ್ರಮೇಯವೇನು ಇರಲಿಲ್ಲ. ಮೂರು ವರ್ಷದವನಾದ ಕಾರಣ ಅಜ್ಜಿಯ ಜೊತೆ ಮಲಗುತ್ತಿದ್ದ, ಅಜ್ಜಿ ಊಟ ಮಾಡಿಸಿ, ಸ್ನಾನ ಮಾಡಿಸಿ ಅವನ ಎಲ್ಲಾ ಕೆಲಸವನ್ನು ನೋಡಿಕೊಳ್ಳುತ್ತಿದ್ದರು. 

 ಕೇಶವರಾಯರು ಸುಮತಿ ಅವರ ದಾಂಪತ್ಯ ಜೀವನ ಶುರುವಾದ ನಂತರ ಶ್ರೀಪಾದ ಹೆಚ್ಚಾಗಿ ಅಜ್ಜಿಯನ್ನು ಹಚ್ಚಿಕೊಂಡ ಸದಾ ಅಜ್ಜಿಯ ಜೊತೆ ಇರುತ್ತಿದ್ದ ಅವನನ್ನು ಸುಮತಿ ಹೆಚ್ಚಾಗಿ ಹಚ್ಚಿಕೊಳ್ಳಲೂ ಇಲ್ಲ, ಅತಿಯಾಗಿ ದ್ವೇಷಿಸಲೂ ಇಲ್ಲ. ಆದರೆ ತಾಯಿಯ ಪ್ರೀತಿಯನ್ನು ತೋರಲು ಇಲ್ಲ. ಆದರೆ ಚಿಕ್ಕಮಗು ಅವಳನ್ನು ತಾಯಿಯೆಂದೆ ನಂಬಿಕೊಂಡಿತ್ತು. ಮಗು ಅಜ್ಜಿಯ ಬಾಲವಾದರೂ ಕೆಲವೊಮ್ಮೆ ಸುಮತಿಯನ್ನು, "ಅಮ್ಮ", ಎಂದು ಕರೆಯುತ್ತಾ ಅಡುಗೆ ಮನೆಗೆ, ಮಲಗುವ ಕೋಣೆಗೆ ಬಂದಾಗ ಸಹಜವಾಗಿಯೇ ಮಾತನಾಡಿಸುತ್ತಿದ್ದಳು ಸುಮತಿ. 

  ಹೀಗಿರುವಾಗ ಸುಮತಿ ಕೂಡ ಸಾಲಾಗಿ ಮೂರು ಮಕ್ಕಳನ್ನು ಹೆತ್ತಳು. ಸುಮತಿಯ ಮಕ್ಕಳು ಶ್ರೀನಿಧಿ, ಶ್ರೀಕರ, ಹಾಗೂ ಕೊನೆಯವಳು ಶ್ರೀದೇವಿ.

ಅಣ್ಣ ತಮ್ಮಂದಿರು ತಂಗಿಯೊಂದಿಗೆ ಆಡಿಕೊಳ್ಳುತ್ತಾ ಇರುವಗೆಲ್ಲಾ ಶ್ರೀಪಾದ ದೊಡ್ಡವನೆಂದು ಎಲ್ಲರ ಬೈಗುಳವು ಅವನ ಪಾಲಿಗೆ ಬರುತ್ತಿತ್ತು, ಹಾಗೂ ಅಮ್ಮನೆಂದುಕೊಂಡ ಚಿಕ್ಕಮ್ಮ, ನೀನು ದೊಡ್ಡವನು, ತಮ್ಮಂದಿರನ್ನು ತಂಗಿಯನ್ನು ನೋಡಿಕೋ. ಆಟದ ವಸ್ತುಗಳನ್ನು ಅವರಿಗೆ ಕೊಡು ಎನ್ನುತ್ತಾರೆ, ಏನನ್ನಾದರೂ ಇಷ್ಟಪಟ್ಟು ತಿನ್ನುವಾಗಲೂ ಅವರ ಚಿಕ್ಕವರಲ್ಲವೇ? ಅವರಿಗೆ ಕೊಡಬೇಕು.. ಎಂದು ಹೇಳುತ್ತಾ, ಸೂಕ್ಷ್ಮವಾಗಿ ತನ್ನ ಮಕ್ಕಳಿಗೆ ಒಂದು ರೀತಿ, ಶ್ರೀಪಾದನಿಗೆ ಒಂದು ರೀತಿಯ ಬೇಧ ಮಾಡುತ್ತಿದ್ದಳು. 

  ನೋಡುವವರಿಗೆ ಅದೇನು ಅತಿಯಾದ ವ್ಯತ್ಯಾಸ ಕಾಣುತ್ತಿರಲಿಲ್ಲ, ಆದರೆ ಎಂದಿಗೂ ಶ್ರೀಪಾದನ ಬಟ್ಟೆ ಬರೆಯನ್ನು ತಮ್ಮಂದಿರಿಗೆ ಹಾಕುತ್ತಿರಲಿಲ್ಲ, ಹೇಗೂ ಶ್ರೀಪಾದ ಮೂರ್ನಾಲ್ಕು ವರ್ಷ ದೊಡ್ಡವನಾದ ಕಾರಣ ಅವನು ಉಪಯೋಗಿಸಿದ ವಸ್ತುಗಳು ಹಳೆಯದಾದವು ಎಂದು ಚೆನ್ನಾಗಿರುವುದನ್ನು ಕೂಡ ಉಪಯೋಗಿಸದೆ ತನ್ನ ಮಕ್ಕಳಿಗೆ ಪ್ರತಿಯೊಂದನ್ನು ಹೊಸದೇ ತಂದುಕೊಡುತ್ತಿದ್ದಳು. ಶ್ರೀಪಾದನನಿಗೆ ಬಟ್ಟೆ ಕೊಳ್ಳುವುದೇ ಅಪರೂಪವಾಗಿತ್ತು. ಆದರೂ ಅವನ ಪುಟ್ಟ ಮನಸ್ಸು ಅಮ್ಮ ತಮ್ಮ ತಂಗಿಯರನ್ನು ಪ್ರೀತಿಸುತ್ತಾ ಇತ್ತು.

  

ಬೆಳೆಯುತ್ತಾ ಹೋದಂತೆ ತಮ್ಮಂದಿರು ಉಪಯೋಗಿಸಿದ ವಸ್ತುಗಳನ್ನು ಶ್ರೀಪಾದನಿಗೆ ಆಡಲು, ಉಪಯೋಗಿಸಲು ಹೇಳುತ್ತಿದ್ದಳು. ಮಾತು ಮಾತಿಗೆ ನೀನು ದೊಡ್ಡವನಲ್ಲವೇ? ಅಣ್ಣನಲ್ಲವೇ? ಸುಧಾರಿಸಿಕೊಂಡು ಹೋಗಬೇಕು ಎಂದು ಹೇಳುತ್ತಾ ಇದ್ದಳು. ಶ್ರೀಪಾದ ನೋವಾದರೂ ತೋರಿಸಿಕೊಳ್ಳದೆ ಅಮ್ಮ ಹೇಳಿದ್ದನ್ನು ಕೇಳುತ್ತಾ,ಬೆಳೆದು ದೊಡ್ಡವನಾಗುತ್ತಿದ್ದ ಹಾಗೆ, ಚೆನ್ನಾಗಿ ಓದುತ್ತಿದ್ದ ಶ್ರೀಪಾದನಿಗೆ ಸ್ಕಾಲರ್ಶಿಪ್ ದೊರಕಿ ಒಳ್ಳೆಯ ವಿದ್ಯಾಭ್ಯಾಸ ಸಿಕ್ಕಿತು.

 ಸುಮತಿಯ ಮಕ್ಕಳು ತಕ್ಕಮಟ್ಟಿಗೆ ಚೆನ್ನಾಗಿಯೇ ಓದುತ್ತಿದ್ದರು.ಹಣ ಸುರಿದು ಒಳ್ಳೆಯ ಶಾಲೆಯಲ್ಲಿ ವಿದ್ಯಾಭ್ಯಾಸವನ್ನು ಕೊಡಿಸಿ ವಿದ್ಯಾವಂತರನ್ನಾಗಿಸಿದರು. ಶ್ರೀ ಪಾದ ಚೆನ್ನಾಗಿ ಓದಿದ್ದರಿಂದ ಅವನಿಗೆ ಪದವಿಯಲ್ಲಿರುವಾಗಲೇ ಒಳ್ಳೆಯ ಕಂಪನಿಯಲ್ಲಿ ಕ್ಯಾಂಪಸ್ ಸೆಲೆಕ್ಷನ್ ಆಗಿ ಕೆಲಸ ಸಿಕ್ಕಿ ಚೆನ್ನಾಗಿ ದುಡಿಯಲಾರಂಭಿಸಿದ. ಸುಮತಿಗೆ ಮತ್ತು ಮಕ್ಕಳಿಗೆ ಅವನ ಸಂಬಳದ ಮೇಲೆ ಕಣ್ಣು.

ಅವನ ಸಂಬಳವೆಲ್ಲಾ ಮನೆಗೆಯೇ ಸಮನಾಗುತ್ತಿತ್ತು. ದೊಡ್ಡ ಮಗ ಎಲ್ಲವೂ ನಿನ್ನ ಜವಾಬ್ದಾರಿ ಎಂದು ಹೇಳುತ್ತಾ, ತಮ್ಮ ತಂಗಿಯ ವಿದ್ಯಾಭ್ಯಾಸ, ವಿವಾಹಕ್ಕೆ ಶ್ರೀಪಾದನದ್ದೇ ಹೆಚ್ಚು ಕಡಿಮೆ ಸಂಬಳ ವ್ಯಯವಾಗತೊಡಗಿತು. 


  ಕೇಶವರಾಯರು ಒಂದಷ್ಟು ವಿಚಾರಗಳನ್ನು ಗಮನಿಸಿದ್ದರೂ, ಸುಮತಿಯ ವಿರುದ್ಧವಾಗಿ ಯಾವ ಮಾತನ್ನು ಆಡದೆ, ಕಂಡು ಕಾಣದಂತೆ ಇದ್ದು ಬಿಡುತ್ತಿದ್ದರು. ಆದರೂ ಶ್ರೀಪಾದನ ಮದುವೆಯನ್ನು ನೋಡಿ ಕಣ್ಣುಮುಚ್ಚಬೇಕೆಂದು ಕಾವೇರಮ್ಮನ ಆಸೆಯಾಗಿತ್ತು.

  ಆದರೆ ಶ್ರೀನಿಧಿ ವಿದ್ಯಾಭ್ಯಾಸ ಮುಗಿಸಿ ವಿದೇಶಕ್ಕೆ ಹೋಗಲು, ದೊಡ್ಡ ಮೊತ್ತದ ಸಾಲ ತೆಗೆದು ಕೊಡಬೇಕಾಗಿ ಬಂದಿದ್ದರಿಂದ ಶ್ರೀಪಾದ ಮದುವೆಯಾಗುವ ಆಲೋಚನೆಯನ್ನು ಮಾಡಲಿಲ್ಲ. ಇದೇ ಕೊರಗಿನಲ್ಲಿ ಕಾವೇರಮ್ಮನವರು ದೇವರ ಪಾದ ಸೇರಿಕೊಂಡರೆ, ಕೇಶವಾಯರಿಗೆ ದೊಡ್ಡ ಮಗ ಕಷ್ಟ ಪಡುತ್ತಾ ಉಳಿದವರೆಲ್ಲ ಅವನನ್ನು ತೆಗಳುತ್ತಾ, ಇಲ್ಲಸಲ್ಲದ ನೆಪ ಹೇಳಿ ಹಣ ವಸೂಲಿ ಮಾಡಿ ಶ್ರೀಪಾದನ ಮದುವೆಗೆ ಗೊತ್ತಾದ ಹೆಣ್ಣುಗಳಿಗೆಲ್ಲ, ಏನೇನು ಚಾಡಿ ಹೇಳಿ ವಿವಾಹವನ್ನು ತಪ್ಪಿಸುತ್ತಿದ್ದ ವಿಚಾರ ತಿಳಿದು ಬೇಸರಗೊಂಡರು, ಆದರೆ ಈಗ ಅವರ ಮಾತು ಏನು ನಡೆಯದೆ ಬೇಸರದಿಂದ ಹಾಸಿಗೆ ಹಿಡಿದರು.

  ಸುಮತಿಯಂತೂ ನಿನ್ನ ಸ್ವಂತ ತಮ್ಮನಾಗಿದ್ದರೆ ಹೀಗೆಯೇ ಮಾಡುತ್ತಿದ್ದೀಯಾ? ಸ್ವಂತ ತಂಗಿಯನ್ನು ಹೀಗೆ ನೋಡಿಕೊಳ್ಳುತ್ತಿದ್ದೀಯಾ? ನಾನು ಎಷ್ಟು ಪ್ರೀತಿ ತೋರಿದರು, ನನ್ನನ್ನು ಮಲತಾಯಿಯನ್ನಾಗಿಯೇ ನಡೆಸಿಕೊಳ್ಳುತ್ತಿದ್ದೀಯಾ? ಎನ್ನುತ್ತಾ ಶ್ರೀಪಾದನನ್ನು ಚುಚ್ಚು ಮಾತುಗಳಿಂದ ಚುಚ್ಚುತಿದ್ದರು.

 ಆದರೂ ಕೂಡ ಶ್ರೀಪಾದ ಎಷ್ಟಾದರೂ ತನ್ನನ್ನು ಬಾಲ್ಯದಿಂದ ನೋಡಿಕೊಂಡವರು, ತನ್ನ ತಮ್ಮಂದಿರು ತಂಗಿ ಎಂದು ಅವರೆಲ್ಲ ಇಚ್ಛೆಗಳನ್ನು ಈಡೇರಿಸಿದರೂ, ಶ್ರೀನಿಧಿ ಶ್ರೀಕರನ ಓದಿಗಾಗಿ ಹಾಗೂ ಶ್ರೀದೇವಿಯ ಮದುವೆಯ ಖರ್ಚಿಗಾಗಿ ತನ್ನ ಸಂಪಾದನೆ ಖರ್ಚಾಗಿತ್ತು. 

 ಶ್ರೀಪಾದ ಕೊನೆಗೂ ತನ್ನ ಸಂಬಂಧಿಕರ ಪರಿಚಯದ, ಬಡವರ ಮನೆಯ ಹೆಣ್ಣನ್ನು ಮದುವೆಯಾಗಿ ಮನೆ ತುಂಬಿಸಿಕೊಂಡಾಗ, ಶ್ರೀಕರನ ಹೆಂಡತಿ ಜಾನಕಿಗೆ ಪ್ರತಿದಿನ ಒಂದಲ್ಲ ಒಂದು ರೀತಿಯ ತೊಂದರೆಯನ್ನು ನೀಡುತ್ತಿದ್ದರು. 

   

  ಇದೆಲ್ಲದರ ಅರಿವಾಗಿ ಶ್ರೀಪಾದ ಚಿಕ್ಕಮ್ಮನ ಪ್ರಶ್ನೆ ಮಾಡಿದ್ದಕ್ಕೆ ಆಸ್ತಿಗೋಸ್ಕರ, ಹೆಂಡತಿಗೋಸ್ಕರ ನಮ್ಮ ಜೊತೆಯ ಜಗಳವಾಡುತ್ತಿದ್ದೀಯ?!ಎಂದು ಆಪಾದನೆ ಹೊರಿಸಿದಾಗ ಶ್ರೀಪಾದ ಎಲ್ಲವನ್ನು ಬಿಟ್ಟು ಬೇರೆ ಮನೆ ಮಾಡಿಕೊಂಡು ಪತ್ನಿಯೊಂದಿಗೆ ವಾಸವಾಗಿದ್ದನು. 

 ನಿನಗದರೆ ಒಳ್ಳೆಯ ಕೆಲಸ ಇದೆ ಶ್ರೀಕರನಿಗೆ ಏನು ಇಲ್ಲ, ಮನೆ ಬಿಟ್ಟು ಹೋಗುವ ಮೊದಲು ಮನೆ ತೋಟವನ್ನೆಲ್ಲ, ಮನೆಯಲ್ಲಿ ಇರುವ ತಮ್ಮ ಶ್ರೀಕರನಿಗೆ ಬರೆದು ಕೊಡಬೇಕು ಎಂದು ಜಗಳವಾಡಿದ ಕಾರಣ, ಸಮಸ್ತ ಆಸ್ತಿಯನ್ನು ಅವನಿಗೆ ಬರೆದುಕೊಟ್ಟು ಶ್ರೀಪಾದ ಹೊರಬಂದ. ಬಾಲ್ಯದಿಂದಲೂ ಕಷ್ಟಪಟ್ಟು ಅಭ್ಯಾಸ ಇದ್ದ ಅವನು ಒಳ್ಳೆಯ ನಡವಳಿಕೆ, ಕಷ್ಟಪಟ್ಟು ದುಡಿಯುವ ಗುಣದಿಂದ ಚನ್ನಾಗಿಯೇ ಜೀವನ ನಡೆಸಿದ.

  ಶ್ರೀಕರ ಎಷ್ಟಾದರೂ ಒಳ್ಳೆ ಬುದ್ಧಿ ಕಲಿಯದೆ, ಸರಿಯಾಗಿ ವಿದ್ಯೆ ಕಲಿಯದೆ, ಪೋಲಿ ಅಲೆಯುತ್ತಿದ್ದ.ತನ್ನ ದುಶ್ಚಟಗಳಿಗೆ ಮನೆ ಜಮೀನನ್ನೆಲ್ಲ ಅಡವಿಟ್ಟು, ಅದನ್ನು ಪ್ರಶ್ನೆ ಮಾಡಿದ ತಾಯಿಯನ್ನು ಒಂದು ದಿನ ಮನೆಯಿಂದ ಹೊರದೂಡಿದ ವಿಚಾರ ತಿಳಿದು, ಶ್ರೀಪಾದ ಹಾಗೂ ಜಾನಕಿಯವರು ಬಂದು ಅವರನ್ನು ತಮ್ಮೊಂದಿಗೆ ಕರೆದೊಯ್ದರು. ವಿದೇಶ ಸೇರಿದ್ದ ಮಗ ಮಗಳು ಅಕ್ಷರಶಃ ಅಪ್ಪ ಅಮ್ಮ ಕುಟುಂಬವನ್ನು ಮರೆತೇ ಬಿಟ್ಟಿದ್ದರು.

 ಹಾಗೆಯೇ ಕೇಶವರಾಯರು ಸುಮತಿಯನ್ನು ತಮ್ಮೊಂದಿಗೆ ನೋಡಿಕೊಳ್ಳುವುದರ ಜೊತೆಗೆ, ದಾರಿ ತಪ್ಪಿದ ತಮ್ಮನನ್ನು ಸರಿದಾರಿಗೆ ತರಲು ಪ್ರಯತ್ನಿಸುವುದನ್ನು ನೋಡಿ ಇಷ್ಟು ಒಳ್ಳೆಯ ಮಗನನ್ನು, ತನ್ನ ಸ್ವಾರ್ಥದಿಂದ ಕೆಟ್ಟದಾಗಿ ನಡೆಸಿಕೊಂಡಿದ್ದನ್ನು ನೆನೆದು, ಸುಮತಿಯವರ ಮನಸ್ಸು ಭಾರವಾಯಿತು. ಆಗಾಗ ಅದನೆಲ್ಲಾ ನೆನೆದು ಕಣ್ಣೀರು ತುಂಬಿಕೊಳ್ಳುವ ಸುಮತಿಯವರಿಗೆ, "ಆದದ್ದಲ್ಲ ಮರೆತು ಹಾಯಾಗಿರಿ, ಮುಂದೆ ಚೆನ್ನಾಗಿರುವ ದಿನಗಳು ಬರುತ್ತದೆ ಎಂದು ಸಮಾಧಾನ ಮಾಡುವ ಶ್ರೀಪಾದ ಅವರ ಪಾಲಿಗೆ ದೇವರಂತೆ ಕಾಣಿಸಿದನು. 


Rate this content
Log in

Similar kannada story from Abstract