mamta km

Inspirational Thriller Others

4.5  

mamta km

Inspirational Thriller Others

ಸಣ್ಣಕಥೆ:ಅಪಾರ್ಥ.

ಸಣ್ಣಕಥೆ:ಅಪಾರ್ಥ.

1 min
279



  ಅದೊಂದು ಕಾಲೇಜು ಕ್ಯಾಂಪಸ್, ಅನುಪಮ ಈ ಬಾರಿ ಹೊಸದಾಗಿ ಕಾಲೇಜಿಗೆ ಸೇರ್ಪಡೆ ಆದವಳು. ಅವಳು ಅನುಪಮ ಸುಂದರಿಯೇ, ಜೊತೆಗೆ ಆಕರ್ಷಕ ವ್ಯಕ್ತಿತ್ವ. ಬಹಳ ಜನ ವಿದ್ಯಾರ್ಥಿಗಳು ಹುಡುಗ ಹುಡುಗಿಯರೆನ್ನದೇ ಅವಳ ಸ್ನೇಹಕ್ಕೆ ಹಾತೊರೆದಿದ್ದರು. ಆದರೆ ಅವಳು ತೀರಾ,ಯಾರನ್ನು ಸ್ನೇಹಿತರನ್ನಾಗಿ ಹಚ್ಚಿಕೊಂಡಿರಲಿಲ್ಲ. ಅವಳು ತನ್ನ ದೊಡ್ಡ ಬಟ್ಟಲು ಕಣ್ಣುಗಳಿಂದ ಯಾರನ್ನಾದರೂ ನೇರವಾಗಿ ದೃಷ್ಟಿಸಿದ್ದರೆ ಅವರು ಅವಳ ನೇರ ದೃಷ್ಟಿಯನ್ನು ಎದುರಿಸಲಾಗದೆ ತಮ್ಮ ಮುಖವನ್ನೇ ತಿರುಗಿಸಿ ಬಿಡುತ್ತಿದ್ದರು. ಹಾಗೆ ಅವಳನ್ನು ಮಾತನಾಡಲು ಪ್ರಯತ್ನಿಸಿ, ಕೆಲವರು ಭಯಪಡುತ್ತಿದ್ದರು. ಅವಳು ಬೇರೆ ಹುಡುಗಿಯರಂತೆ ತಡಬಡಾಯಿಸದೆ, ನಾಚಿಕೊಳ್ಳದೇ ಯಾರಾದರೂ ಮಾತನಾಡಿಸಿದವರಲ್ಲಿ ನೇರವಾಗಿ ಮಾತನಾಡಿ ಬಿಡುತ್ತಿದ್ದಳು. ಹಾಗೆಯೇ ಕೆಲವಾರು ವಿದ್ಯಾರ್ಥಿಗಳು ಅವಳಿಗೆ ಬಹಳ ದುರಹಂಕಾರ ಎಂದು ಕೂಡ ಮಾತನಾಡುತ್ತಿದ್ದರು.


   ಕೆಲವರು ಅವಳನ್ನು ತಮ್ಮ ಪ್ರೇಮಪಾಶದಲ್ಲಿ ಬಂಧಿಸಲು ಪ್ರಯತ್ನಿಸುತ್ತಿದ್ದರು, ಆದರೆ ಅವಳು ತನ್ನ ಪಾಡಿಗೆ ತಾನು, ಕೆಲವಾರು ಸ್ನೇಹಿತರ ಜೊತೆ ತಾನಾಯಿತು ತನ್ನ ಓದಾಯ್ತು ಎಂಬಂತೆ ಇರುತ್ತಿದ್ದಳು.

 ಒಂದು ದಿನ ಇದ್ದಕ್ಕಿದ್ದಂತೆ ಅವಳು ಒಬ್ಬ ಸುಂದರವಾದ ಹುಡುಗನ ಜೊತೆ ಬೈಕ್ ನಲ್ಲಿ ಬಂದಿಳಿದಳು ಅದನ್ನು ನೋಡಿ ಎಲ್ಲರೂ ಅವನನ್ನು ಅವಳ ಪ್ರೇಮಿ ಎಂದು ಕೊಂಡರು.

  ಇಷ್ಟು ದಿನ ಭಾರಿ ಸಂಭಾವಿತೆಯಂತೆ ನಾಟಕ ಮಾಡಿದಳು, ಈಗ ಯಾರನ್ನು ಪ್ರೀತಿಸುತ್ತಿದ್ದಾಳೆ ಹಾಗಾಗಿ ಅವನ ಜೊತೆ ಬೈಕ್ ನಲ್ಲಿ ಕಾಲೇಜಿನವರೆಗೆ ಬರುವಷ್ಟು ಧೈರ್ಯ ಮಾಡಿದ್ದಾಳೆ ಎಂದೆಲ್ಲ ಹೆಣ್ಣು ಗಂಡು ಭೇದವಿಲ್ಲದೆ ಎಲ್ಲರೂ ಮಾತನಾಡಿಕೊಂಡರು.. ಆದರೆ ಅವಳ ಸ್ನೇಹಿತರಿಂದ ನಂತರ ಗೊತ್ತಾಯಿತು ಅವನು, ಆಕೆಯ ಅಣ್ಣ. ವಿದೇಶದಲ್ಲಿ ಓದುತ್ತಿದ್ದವನು, ರಜೆಗಾಗಿ ಊರಿಗೆ ಬಂದಿದ್ದ, ಹಾಗೆ ಅವಳನ್ನು ಕಾಲೇಜಿಗೆ ಡ್ರಾಪ್ ಮಾಡಲು ಬಂದಿದ್ದ ಎಂದು. ಆದರೆ ಎಲ್ಲರೂ ಅವಳು ಇದ್ದಕ್ಕಿದ್ದಂತೆ ಒಬ್ಬ ಹುಡುಗನ ಜೊತೆ ಬಂದಿದ್ದನ್ನು ಕಂಡು ಅವನು ಅವಳ ಪ್ರೇಮಿ ಎಂದು ಸುಲಭದಲ್ಲಿ ಅಂದಾಜಿಸಿಬಿಟ್ಟರು. ಅವಳು ಅಷ್ಟಾಗಿ ತನ್ನ ವೈಯಕ್ತಿಕ ವಿಚಾರ ಎಲ್ಲರ ಬಳಿ ಮತನಾಡುತ್ತಿರಲಿಲ್ಲ. ಹಾಗಾಗಿ ಎಲ್ಲರೂ ಅವಳು ಸರಳ ಶುದ್ಧ ಚಾರಿತ್ರ್ಯ ಹೊಂದಿದ್ದರೂ ಕೂಡ ಅನುಮಾನದಿಂದ ಅಪಾರ್ಥ ಮಾಡಿ ಕೊಂಡಿದ್ದರು.

 ಆದರೆ ಗಂಡು-ಹೆಣ್ಣು ಎಂದೊಡನೆ ಬರಿ ಗಂಡ ಹೆಂಡತಿಯೊ, ಪ್ರೇಮಿಗಳೊ, ಆಗಿರುವುದಿಲ್ಲ.ಅವರ ನಡುವೆ ಅಣ್ಣ ತಂಗಿಯ ಸಂಬಂಧ, ಹಾಗೂ ಸ್ವಚ್ಛವಾದ ಸ್ನೇಹಕ್ಕೂ ಏನು ಕೊರತೆ ಇರುವುದಿಲ್ಲ. ಯಾವುದೇ ಸಂಭಂದ ಇಲ್ಲದ ಎಷ್ಟೋ ಜನರು ಪರಸ್ಪರ ಉತ್ತಮ ಸ್ನೇಹಿತರಾಗಿರುತ್ತದೆ. ಹಾಗಾಗಿ ಎಲ್ಲವನ್ನು ನಾವು ಅಪಾರ್ಥ ಮಾಡಿಕೊಳ್ಳಬಾರದು.

 ಧನ್ಯವಾದಗಳು


Rate this content
Log in

Similar kannada story from Inspirational