Achala B.Henly

Abstract Classics Inspirational

4  

Achala B.Henly

Abstract Classics Inspirational

ಹಣ್ಣೆಲೆಗೂ ಬಣ್ಣ ತುಂಬೋಣ

ಹಣ್ಣೆಲೆಗೂ ಬಣ್ಣ ತುಂಬೋಣ

1 min
385



ಬಣ್ಣ ಕಳೆದುಕೊಂಡು ಉದುರಿ ಬಿದ್ದಿದ್ದ ಒಣಗಿದ ಎಲೆಗಳ ರಾಶಿಯನ್ನು ಗುಡಿಸಿ ಸ್ವಚ್ಛ ಮಾಡಿದರು ಆ ಮನೆಯ ಹಿರಿಯ ಜೀವ ಮಹದೇವಪ್ಪ. ಅವರು ಯಾವಾಗಲೂ ಹಾಗೆ. ಒಂದಲ್ಲ ಒಂದು ಕೆಲಸದಲ್ಲಿ ವ್ಯಸ್ತರಾಗಲು ಇಷ್ಟ. ಆ ರೀತಿಯಿಂದಾದರೂ ತಮ್ಮ ಕೈಲಾದ ಸಹಾಯವನ್ನು ಮನೆಗೆ ಮಾಡೋಣ ಎಂಬ ಆಸೆ. ಇತ್ತ ಅವರ ಪ್ರೀತಿಯ ಪತ್ನಿ ಸುಂದರಮ್ಮನವರ ಕಥೆಯೂ ಹಾಗೆ. ಎಷ್ಟೇ ಬೇಡವೆಂದರೂ ಮನೆ ಕೆಲಸಗಳನ್ನೆಲ್ಲ ಮಾಡುತ್ತಾ, ಮಗ-ಸೊಸೆಯರ ಕೆಲಸಗಳಿಗೆ ಕೈಜೋಡಿಸುತ್ತಾರೆ. ಎಲ್ಲರಿಂದಲೂ ಭೇಷ್ ಎನಿಸಿಕೊಳ್ಳುವ ಈ ದಂಪತಿಗೆ ಮನದಲ್ಲೆಲ್ಲೋ ಒಂದು ಸಣ್ಣ ಕೊರಗಿದೆ. ಕಿರಿಯ ಮಗ ಸೊಸೆ ತಮ್ಮನ್ನು ಪ್ರೀತಿಸಿ ಆದರಿಸಿದ ರೀತಿ, ಹಿರಿಯ ಮಗ ಸೊಸೆ ತಮ್ಮನ್ನು ಕಾಣಲಿಲ್ಲವಲ್ಲ ಎಂದು! ಏನು ಮಾಡುವುದು..? ಅಂದುಕೊಂಡಿದ್ದೆಲ್ಲ ನೆರವೇರಲು ಸಾಧ್ಯವೇ..?! ದೂರದಿಂದಲೇ ಅವರು ಚೆನ್ನಾಗಿರಲಿ ಎಂದು ಹಾರೈಸುವುದಷ್ಟೇ ಇವರ ಕೆಲಸ. "ಎಂದೋ ಯಾವಾಗಲೋ ಅವರಿಗೂ ವಯಸ್ಸಾಗುತ್ತದೆ. ಆಗ ಅಪ್ಪ ಅಮ್ಮನ ಬೆಲೆ ತಿಳಿಯುತ್ತದೆ" ಎಂದು ನೋವು ನುಂಗಿ ಸುಮ್ಮನಾಗುತ್ತಾರೆ.


ಇರುವುದರ ಬಗ್ಗೆ ಮಾತ್ರ ಖುಷಿಪಡೋಣ

ಇರದುದರ ಬಗ್ಗೆ ಚಿಂತೆ ಬಿಟ್ಟುಬಿಡೋಣ..!!


ಎಂದು ಮತ್ತೆ ತಮ್ಮ ಕೆಲಸಗಳಲ್ಲಿ ತಲ್ಲೀನರಾಗುತ್ತಾರೆ ಈ ವೃದ್ಧ ದಂಪತಿ. ತಮ್ಮ ಪುಟ್ಟ ಮೊಮ್ಮಕ್ಕಳು ಆಟ-ಪಾಠ, ಮಾತು, ತುಂಟಾಟಗಳಿಂದ ಮನೆಯನ್ನು ನಗೆಗಡಲಲ್ಲಿ ತುಂಬಿ ತುಳುಕಿಸುತ್ತಿರುವಾಗ, ತಮ್ಮ ಜೀವನವೂ ವರ್ಣಮಯ ಬಣ್ಣಗಳಿಂದ ಕಂಗೊಳಿಸುತ್ತಿದೆ ಎಂಬ ನವಿರಾದ ಭಾವನೆ ಈ ಹಿರಿಯ ದಂಪತಿಗೆ. ಹಣ್ಣೆಲೆಗೆ ಬಣ್ಣ ತುಂಬುವ ಕಾರ್ಯ ತಮ್ಮ ಮಕ್ಕಳು ಮಾಡುತ್ತಿದ್ದಾರಲ್ಲ ಎಂಬ ಹೆಮ್ಮೆ ಮತ್ತು ಸಂತೋಷ ಕಿರಿಯ ಮಗ ಮತ್ತು ಸೊಸೆಗೆ..!!


ಹಿರಿಯ ಜೀವಗಳು ಇರಲು ಮನೆ-ಮನಗಳಲ್ಲಿ

ಅಲ್ಲಿ ನೆಲೆಸುವುದು ನೆಮ್ಮದಿ, ಪ್ರೀತಿ, ಶಾಂತಿ.

ಬಾಳೋಣ ಅವರ ಜೊತೆಗೂಡಿ ಎಂದಿಗೂ ಒಂದಾಗಿ,

ಅವರ ಆಶೀರ್ವಾದ ಮಾರ್ಗದರ್ಶನಗಳೇ ಬದುಕಿಗೆ ಬುನಾದಿ!!


Rate this content
Log in

Similar kannada story from Abstract