Achala B.Henly

Abstract Comedy Classics

4  

Achala B.Henly

Abstract Comedy Classics

ಸೀತಾ -ಗೀತಾ

ಸೀತಾ -ಗೀತಾ

1 min
23



ಗೆಳತಿಯರಾದ ಸೀತಾ ಗೀತಾ ನಡುವೆ ಕಾಲ್ಪನಿಕ ಸಂಭಾಷಣೆ.


ತರಕಾರಿ ಅಂಗಡಿಯಿಂದ ತರಕಾರಿಗಳನ್ನು ಖರೀದಿಸಿ ಮನೆಗೆ ಹೋಗುತ್ತಿದ್ದ ಸೀತಾಳನ್ನು ಮನೆಗೆ ಕರೆದಳು ಗೀತಾ...


ಗೀತಾ: ಏನು ಸೀತಾ ಹೇಗಿದ್ದೀಯ? ಸ್ವಲ್ಪ ಹೊತ್ತು ಸುಧಾರಿಸಿಕೋ. ಹೇಗಿದ್ದಾರೆ ಮನೆಯಲ್ಲಿ ಎಲ್ಲಾ?


ಸೀತಾ: ಎಲ್ಲ ಚೆನ್ನಾಗಿದ್ದಾರೆ ಗೀತಾ. ಅದ್ಸರಿ ಸುಮ್ನೆ ಕೇಳ್ತೀನಿ, ತಪ್ಪು ತಿಳಿಬೇಡ. ನೀನು ಹಾಕಿಕೊಂಡಿರುವ ದಪ್ಪ ಜುಮ್ಕಿ ಗಿಲೀಟು ಅನ್ಸುತ್ತೆ ಅಲ್ವಾ? ಆದ್ರು ಚಿನ್ನದ ಹಾಗೆಯೇ ಕಾಣುತ್ತೆ. ಏನೊಂದು ಇನ್ನೂರು 

ರೂಪಾಯಿ ಆಗಬಹುದಾ..?


ಗೀತಾ: ಏನು? ನನ್ನ ಓಲೇನಾ ಗಿಲೀಟು ಅಂತೀಯಾ? ಯಾವ್ದೋ ಹಳೆ ಬಿಳಿ ಸೀರೆಗೆ ಒಂದೋಲೆ ತೊಗೊಂಡು, ತರಕಾರಿ ಬುಟ್ಟಿ ಹಿಡ್ಕೊಂಡ್ರೆ ನಿನ್ನ ಆರ್ಟಿಫಿಷಿಯಲ್ ಓಲೆ ಏನು ಚಿನ್ನ ಆಗಲ್ಲ..!!


ಸೀತಾ: ಏನೂ? ನನ್ನ ಸೀರೆ ಬಗ್ಗೆ ಕಾಮೆಂಟ್ ಮಾಡ್ತೀಯಾ..?! ಐದು ಸಾವಿರ ಕೊಟ್ಟು ಖರೀದಿಸಿದ ಸೀರೆ ಕಣೆ ಇದು. ನಿನ್ನ ಥರ ಐನೂರು ರೂಪಾಯಿ ಕೊಟ್ಟು ಜರಿ ಸೀರೆ ತೊಗೊಳ್ಳೋ ಪಾರ್ಟಿ ನಾನಲ್ಲ..!!


ಗೀತಾ: ಏನೂ? ನನ್ನ ರೇಷ್ಮೆ ಸೀರೆ ಬಗ್ಗೆ ಕಾಮೆಂಟ್ ಮಾಡ್ತೀಯಾ? ಎಷ್ಟು ಧೈರ್ಯ ಇರ್ಬೇಕು ನಿನಗೆ? ಪಾಪ ಏನೋ ಹುಡುಗಿ ತರಕಾರಿ ತೊಗೊಂಡು ಸುಸ್ತಾಗಿ ಇರ್ತಾಳೆ, ಸ್ವಲ್ಪ ಸುಧಾರಿಸಿ ಮನೆಗೆ ಹೋಗಲಿ ಎಂದರೆ ಸುಮ್ನೆ ಜಗಳಕ್ಕೆ ನಿಲ್ತಿಯಲ್ಲ... ಹೋಗು, ಮೊದಲು ಮನೆಗೆ ಹೋಗು... "ಪಾಪ ಎಂದ್ರೆ ಆರು ತಿಂಗಳ ಪಾಪ ಸುತ್ತಿತು" ಅಂತಾರೆ. ಅದನ್ನು ನಿನ್ನ ಥರದವರನ್ನ ನೋಡಿಯೇ ಹೇಳಿರಬೇಕು..!!


ಸೀತಾ: ಹೂಂ ಕಣೆ, ಹೇಳಿರ್ತಾರೆ. ಏನೋ ಸುಸ್ತು ಅಂತ ಕರೆದ್ಲು. ಮಾತಾಡಿ, ಕಾಫಿ ಕುಡಿದು ಹೋಗೋಣ ಎಂದ್ರೆ, ಜಗಳ ಮಾಡ್ತಾಳೆ. ತುಂಬಾ ಚೆನ್ನಾಗಿ ಬಂದವರನ್ನ ಸತ್ಕರಿಸುತ್ತೀಯಾ ಬಿಡು...


ಗೀತಾ: ಹೌದಮ್ಮ, ನೀನು ನನ್ನನ್ನ ಆಡಿಕೊಂಡರೂ, ಕಾಫಿ ಉಪ್ಪಿಟ್ಟು ಕೊಡೋದಕ್ಕೆ ಆಗಲ್ಲ. ನನಗೆ ಅಂಥ ಒಳ್ಳೆಯ ಬುದ್ಧಿಯೂ ಇಲ್ಲ. ನಾನಷ್ಟು ಒಳ್ಳೆಯವಳು ಅಲ್ಲ..!! ತಾವಿನ್ನು ಹೊರಡಬಹುದು... ಬೈ..!!


ಎನ್ನುತ್ತಾ ಬಾಗಿಲು ಹಾಕಿದಳು ಗೀತಾ..!!


Rate this content
Log in

Similar kannada story from Abstract