JAISHREE HALLUR

Horror Tragedy Action

4.5  

JAISHREE HALLUR

Horror Tragedy Action

ಸೇಡಿನ ಕಿಡಿ

ಸೇಡಿನ ಕಿಡಿ

5 mins
502



ಇಂದು ಮಧ್ಯಾನ ಕೆಲಸವೆಲ್ಲ ಮುಗಿದ ನಂತರ, ಟೀವಿ ವೀಕ್ಷಿಸಲೆಂದು ಹಾಗೇ ಸೋಫಾಗೆ ಒರಗಿಕೊಂಡು ಆನ್ ಮಾಡಿದೆ. ಅಮೆಜಾನ್ ನಲ್ಲಿ ಕಂಡ ಯಾವುದೋ ಸಿನೇಮಾ ನೋಡಲೆಂದು ಬಟನ್ ಒತ್ತಿದೆ. ಶುರುವಾಯ್ತು..

ಒಂದು ಮಲೆಯಾಳೀ ಚಿತ್ರ ಓಡುತಿತ್ತು. ಕಣ್ಣು ಪಿಳುಕಿಸದೇ ನೋಡಿದೆ. ನನಗೆ ಬಹುಮಟ್ಟಿಗೆ ಮಲೆಯಾಳೀ ಭಾಷೆ ಅರ್ಥವಾಗುತ್ತದೆಂದು ಹೇಳುವ ಅವಶ್ಯಕತೆಯಿಲ್ಲ. ಸಾಧಾರಣವಾಗಿ, ತಮಿಳು, ತೆಲುಗು, ಮಲೆಯಾಳೀ, ಹಿಂದಿ, ಇಂಗ್ಲೀಷ್ ಇತ್ಯಾದಿ ಬಂದೇ ಬರುತ್ತದೆ...

ಈ ಚಿತ್ರದ ಹುಡುಗಿ ಕಥಾನಾಯಕಿ,ಒಬ್ಬ ನರ್ಸ್, ಜೇಲಿನಿಂದ ಬಿಡುಗಡೆ ಹೊಂದಿ ಹೊರಬಂದವಳು..ತನಗೆ ಕೇಡು ಬಯಸಿ ಮೋಸದಿಂದ ಜೇಲಿಗೆ ತಳ್ಳಿದ ತನ್ನದೇ ಪ್ರಿಯಕರನ ಮೇಲೆ ಸೇಡು ತೀರಿಸಿಕೊಳ್ಳುವ ಹುನ್ನಾರ ಅವಳದು. 

ಆತ, ಈಗ ಒಂದು ದೊಡ್ಡ Advertising ಕಂಪೆನಿಯ ಮಾಲೀಕ. ಹೇಗೆ ಅವನನ್ನು ಬಗ್ಗುಬಡಿಯುವುದೆಂದು ಅವಳ ತಲೆಯಲ್ಲಿ ಸುಳಿದಾಡಿದ ಯೋಚನೆ. 

ಅಂದೊಂದು ದಿನ , ಅವಳು ಕೆಲಸ ಮಾಡುತ್ತಿದ್ದ ಆಸ್ಪತ್ರೆಯ ಮಾಲೀಕರು, ಇವಳ ಚಾಣಾಕ್ಷತೆಗೆ ಮೆಚ್ಚಿ , ಮತ್ತೊಂದು ಕೆಲಸದ ನಿಮಿತ್ತ ಫಾರಿನ್ನಿಗೆ ಕಳಿಸುವ ಇಚ್ಛೆಯನ್ನು ವ್ಯಕ್ತ ಪಡಿಸುತ್ತಾರೆ. ಹಾಗೇ ವೀಸಾ, ಪಾಸ್ಪೋರ್ಟ್ ವ್ಯವಸ್ತೆಯನ್ನೂ ಮಾಡಲು ಮುಂದಾಗುತ್ತಾರೆ. ಅವಳೂ ಖುಷಿಯಿಂದ ಒಪ್ಪಿರುತ್ತಾಳೆ. ಈ ಸಂತಸವನ್ನು ತನ್ನ ಪ್ರಿಯಕರನ ಮುಂದೆ ಹಂಚಿಕೊಂಡು ಇಬ್ಬರೂ ಪಾರ್ಟೀ ಮಾಡಿಕೊಳ್ಳುತ್ತಾರೆ. ತಡರಾತ್ರಿಯಲ್ಲಿ, ಅವನನ್ನು ಮನೆತನಕ ಬಿಟ್ಟು ಅವಳು ತನ್ನ ಮನೇಗೆ ತೆರಳಿದಾಗ, ತಂಗಿಯ ಅಸಮಾಧಾನಕ್ಕೆ ಗುರಿಯಾಗುತ್ತಾಳೆ. ನಂತರ , ತಾನು ಪಾರೆನ್ನಿಗೆ ಹೋಗುವ ಸುದ್ದಿಯನ್ನು ತಿಳಿಸಿ ಮನವೊಲಿಸುವ ಪ್ರಯತ್ನ ಮಾಡುತ್ತಾಳೆ..

ಮೂಲತಃ ಕ್ರೈಸ್ತ ಮತದವಳಾದ ಈ ಟೆಸ್ಸೀಯ ತಂದೆತಾಯಿ ಕೇರಳದಲ್ಲಿ ವಾಸವಿದ್ದು, ಇವಳು ಮಾತ್ರ ತನ್ನ ಇತರ ನರ್ಸ್ಗಳೊಂದಿಗೆ ಬೆಂಗಳೂರಲ್ಲಿ ವಾಸವಾಗಿರುತ್ತಾಳೆ..ಹಾಗಾಗಿ, ಕೆಲವು ಒಳ್ಳೆಯ ಸ್ನೇಹಿತರೂ ಇರುತ್ತಾರೆ. ತನ್ನ ಕಾರ್ಯದಲ್ಲಿ ದಕ್ಷತೆ, ಅನನ್ಯ ಪ್ರೀತಿಯಿಟ್ಟಿರುತ್ತಾಳೆ. ಅವಳ ಈ ಗುಣವೇ ಎಲ್ಲರನ್ನೂ ಆಕರ್ಷಿಸುತ್ತದೆ. 

ಆಸ್ಪತ್ರೆಯ ಒಬ್ಬ ಮಧ್ಯವಯಸ್ಕನಿಗೆ ಇವಳ ಮೇಲೆ ಅಕ್ಕರೆ. ಏನೋ ಬಂಧ. ಯಾವುದೋ ಸೆಳೆತ. ಆತನ ಭಯಂಕರ ಕಾಯಿಲೆಯ ವಿಷಯ ತಿಳಿದ ಟೇಸ್ಸಾ ಗೆ ಒಂಚೂರು ಹೆಚ್ಚಿನ ಕಾಳಜಿಯಿರುತ್ತದೆ. ಹಾಗಾಗಿ, ಆತನ ಆರೈಕೆ ಬಹಳ ಮುತುವರ್ಜಿಯಿಂದ ನಡೆಯುತ್ತಿರುತ್ತದೆ. ಆತನ ಮಕ್ಕಳಲ್ಲಿ, ಹೆಂಡತಿಯಲ್ಲಿ ನಂಬಿಕೆ ಕಳೆದುಕೊಂಡು, ಅನಾಥನಾಗಿ ಆಸ್ಪತ್ರೆಯಲ್ಲಿ ತಿಂಗಳುಗಟ್ಟಲೆ ನರಳಾಡುತ್ತಿದ್ದವನನ್ನು ಯಾರೂ ನೋಡಲು ಬರುತ್ತಿರಲಿಲ್ಲ. ತನ್ನ ಅಕೌಂಟಲ್ಲಿ ಹಣವಿದ್ದುದರಿಂದ ಹೇಗೋ ಖರ್ಚನ್ನು ನಿಭಾಯಿಸುತ್ತಿದ್ದ. ಟೆಸ್ಸಾಳಂತಹ ಆತ್ಮೀಯ ನರ್ಸ್ ಇರುವಾಗ ಯಾರೂ ಬೇಡ ಅನಿಸಿತ್ತು. 


ಒಂದಿನ ಬೆಳಗಿನ ಜಾವದಲ್ಲಿ ಟೆಸ್ಸಾಗೆ ಫೋನಿನ ಕರೆ..ತನ್ನ ಪ್ರಿಯಕರ ಸಿರಿಲ್ ಥಾಮಸ್ ನ ಕರೆ. ಎದ್ದು ಮಾತಾಡಿದಾಗ, ಆತ ತನ್ನ ಹಾಸ್ಟೇಲ್ ನ ಹೊರಗೆ ಕಾಯುತ್ತಿರುವುದಾಗಿಯೂ ಕೆಳಗೆ ಬರುವಂತೆ ಹೇಳುತ್ತಾನೆ. ಅಂದು ಯಾವುದೇ ಡ್ಯೂಟಿ ಇಲ್ಲದ್ದರಿಂದ, ಸರಿಯೆಂದು ಒಪ್ಪಿ, ಬೇಗ ಬೇಗ ರೆಡಿಯಾಗಿ ಹೊರಡುತ್ತಾಳೆ. ಆತನ ಹಿಂದೆ ಬೈಕಲ್ಲಿ ಕುಳಿತು ಸಂತಸದಿಂದ ಹಾರಾಡುವ ಬಾನಾಡಿಯಂತೆ ಹಾರಿಹೋಗುತ್ತಾಳೆ. ಇವಳು ಫಾರೆನ್ನಿಗೆ ಹೋಗುವುದನ್ನು ಆತನೂ ಶ್ಲಾಘಿಸುತ್ತಿರುವುದು ಟೆಸ್ಸಾಗೆ ಖುಷಿ ತಂತು. ಯಾಕೆಂದರೆ, ಇವಳೇನೂ ಮದುವೆಯಾಗುವ ಇಚ್ಛೆಯಿರಲಿಲ್ಲ. ತನ್ನ ತಂದೆತಾಯಿಯರ ಆರ್ಥಿಕ ಸ್ಥಿತಿ ಅಷ್ಟೇನೂ ಸರಿಯಿಲ್ಲದ ಕಾರಣ ಇನ್ನಷ್ಟು ದಿನ ಅವರಿಗೆ ನೆರವಾಗಿರುವುದು ಅವಳ ಆಸೆಯಾಗಿತ್ತು. ಮತ್ತು, ಫಾರಿನ್ನಿಗೆ ಹೋದರೆ ಹೆಚ್ಚು ಹಣ ಗಳಿಸಬಹುದೆಂಬ ಆಸೆ ಕೂಡಾ ಇತ್ತು...

ಆದರೆ, ಇಂದೇಕೋ, ಸಿರಿಲ್ ನ ಮನಸಲ್ಲಿ ಬೇರೆಯದೇ ಯೋಚನೆಯಿತ್ತು. ಅವನ ಕಂಪನಿಯ ಕಸ್ಟಮರ್ ಒಬ್ಬರು, ಟೆಸ್ಸಾಳ ಫೋಟೋವನ್ನು ನೋಡಿದಾಗಿಂದ, ಇವನ ಹಿಂದೆ ಬಿದ್ದಿರುತ್ತಾನೆ. ಹೇಗಾದರೂ ಮಾಡಿ ಅವಳನ್ನು ಪರಿಚಯಿಸು ಎಂದು. ಮೊದಮೊದಲು ಇದಕ್ಕೊಪ್ಪದ ಸಿರಿಲ್, ಹಣದ ಆಮಿಷ ತೋರಿದಾಗ, ತಟ್ಟನೆ ಒಪ್ಪಿದ್ದ. ಅಂತೆಯೇ ಒಂದಿನ ಹೀಗೇ ಹೊರಗೆ ಬಂದಾಗ ಪಾರ್ಟಿಯ ನೆಪದಲ್ಲಿ ಇವಳಿಗೂ ಕುಡಿಸಿ, ತಿನ್ನಿಸಿ, ಮೂರ್ಚೆ ಹೋಗುವಂತೆ ಮಾಡಿ, ಕಣ್ಮರೆಯಾಗುತ್ತಾನೆ. ಆ ಕಸ್ಟಮರ್ ಅಲ್ಲೇ ಇದ್ದು, ಇವಳ ಮೇಲೆ ಅತ್ಯಾಚಾರವೆಸಗುತ್ತಾನೆ. ಪ್ರಜ್ಞೆ ಮರಳಿದಾಗ, ಆತನನ್ನು ತಡೆಯಲು ಪ್ರಯತ್ನಿಸಿ, ತಲೆ, ಕೈ ಕಾಲುಗಳಿಗೆ ಪೆಟ್ಟಾಗಿ, ಮತ್ತೆ ಮೂರ್ಚೆ ಹೋಗುತ್ತಾಳೆ..ಇದು ತನಗೇನೂ ಸಂಬಂಧವೇ ಇಲ್ಲವೆಂಬಂತೆ ಮರುದಿನ ಸಿರಿಲ್ ಹಾಜರಾಗುತ್ತಾನೆ. ತಕ್ಷಣ ಇವಳಿಗೆ ಆರೈಕೆ ಮಾಡಿ, ಏನಾಯಿತು? ಹೇಗಾಯಿತು ಎಂಬಂತೆ ನಾಟಕ ಮಾಡಿದಾಗ,ಅಮಾಯಕಿ ಇವಳು ಮತ್ತೆ ಅವನನ್ನು ನಂಬಿ ಎಲ್ಲವನ್ನೂ ವರಧಿ ಒಪ್ಪಿಸುತ್ತಾಳೆ...ತನ್ನ ಬದುಕು ಹೀಗೆ ನಾಶವಾಗಬಾರದೆಂದು ದುಃಖಿಸುತ್ತಾಳೆ..ಆದರೆ, ಇದಾವುದರ ಬಗ್ಗೆ ತಲೆ ಕೆಡಿಸಿಕೊಳ್ಳದ ಸಿರಿಲ್, ಆಗಲೇ ಹಣದ ರುಚ್ಚಿ ನೋಡಿದ್ದು, ಅವಳನ್ನು ನಂಬುವಂತೆ ಮಾಡಿ ಆರೈಕೆಯ ನೆಪದಲ್ಲಿ ಒಂದೆರಡು ದಿನ ಒಟ್ಟಿಗಿದ್ದು ನೋಡಿಕೊಂಡಾಗ ನಿಜಕ್ಕೂ ಅವಳು ನಂಬಿರುತ್ತಾಳೆ.


ಅಂದೊಮ್ಮೆ ಸ್ನಾನದ ಕೋಣೆಗೆ ಹೋದವಳ ಕಣ್ಣು ತಪ್ಪಿಸಿ, ತನ್ನ ಕಸ್ಟಮರ್ ಗೋಪಿಗೆ ಫೋನ್ ಮಾಡುತ್ತಾನೆ..ಸಿರಿಲ್..."She is now ready, you can come " ಅಂತ. ತಾನು ಯತಾಪ್ರಕಾರ ಅಲ್ಲಿಂದ ನಾಪತ್ತೆಯಾಗುತ್ತಾನೆ...

ಆಗ ತಾನೇ ಚೇತರಿಸಿಕೊಳ್ಳುತ್ತಿದ್ದ ಟೆಸ್ಸಾಗೆ ಹೊರಬಂದಾಗ ಕಂಡದ್ದು ಅದೇ ರಾಕ್ಷಸನ ಮುಖ. ಹೆದರಿ ಕಂಗಾಲಾಗುತ್ತಾಳೆ. ಜೋರಾಗಿ ಕಿರುಚಿದರೂ ಯಾರೂ ಬಾರದಂತೆ ಬಿಗಿಬಂಧೋಬಸ್ತ್ ಮಾಡಿದ್ದ ಸಿರಿಲ್...

ಆ ನೀಚ ವ್ಯಕ್ತಿಗೆ ಒಂತರಾ ಕಾಯಿಲೆ...ಅಲ್ಲಲ್ಲಾ..ಖಯಾಲೀ ಇರಬೇಕು..ಆಗಾಗ ಹೆಣ್ಣಿನ ರುಚಿನೋಡುವ ಚಪಲ..ಮತ್ತೊಮ್ಮೆ ಇವಳನ್ನು ಮುಟ್ಟಲು ಬಂದಾಗ, ಕೈಗೆ ಸಿಕ್ಕ ವಸ್ತವಿನಿಂದ ಅವನನ್ನು ತಳಿಸಿ ಪರಾರಿಯಾಗುತ್ತಾಳೆ...ಅಲ್ಲೇ ಹತ್ತಿರದಲ್ಲಿ ಅವಿತಿದ್ದ ಸಿರಿಲ್ ಗಾಭರಿಯಿಂದ ಓಡಿಬರುತ್ತಾನೆ..ಏನಾಯಿತು ಎಂಬ ಕಪಟಮುಖಮುದ್ರೆಯಿಂದ..ಇವಳಿಗೆ ಕಿಂಚಿತ್ತೂ ಸಂಶಯ ಬರಲೇ ಇಲ್ಲ. ಎಲ್ಲಿ ಹೋಗಿದ್ದೆ ನನ್ನ ಬಿಟ್ಟು? ಎಂದು ಒಂದೇ ಸಮನೇ ಅಳುತ್ತಿದ್ದವಳನ್ನು ಸಮಾಧಾನ ಪಡಿಸುತ್ತ..ದೂರ ಕರೆದೊಯ್ಯುತ್ತಾನೆ....


ಈ ಜಾಲದಲ್ಲಿ ಸಿಲುಕಿದ ಈ ಇಬ್ಬರು ಖದೀಮರಿಗೆ ಈಗ ಭಯ ಶುರುವಾಗುತ್ತದೆ. ಫೋಲಿಸ್ ಕಂಪ್ಲೇಂಟು ಕೊಟ್ಟರೆ, ವಿಚಾರಣೆಯಲ್ಲಿ ಇಬ್ಬರೂ ಸಿಕ್ಕಿಹಾಕಿಕೊಳ್ಳುವ ಸಾಧ್ಯತೆ ಬಹಳವಿತ್ತಾದ್ದರಿಂದ,ಇವಳನ್ನೇ ಮುಗಿಸಿಬಿಡುವ ಸಂಚನ್ನೂ ಮಾಡುತ್ತಾರೆ...


ಅಷ್ಟರಲ್ಲಿ, ತನ್ನ ತಂಗಿಗೂ ವಿಷಯ ತಿಳಿಸದೇ ಟೆಸ್ಸಾ ಮಾನಸಿಕವಾಗಿ ಕೊರಗುತ್ತಾಳೆ..ಸಿರಿಲ್ ನೊಂದಿಗೆ ಮದುವೆಯಾಗಿ ದೂರ ಹೋಗಿಬಿಡಬೇಕೆಂದು ಕನಸುಕಾಣುತ್ತಾಳೆ...ಅಂತೆಯೇ ಒಂದಿನ ಅವನೊಡನೆ ಬಸ್ ನಿಲ್ದಾಣದಲ್ಲಿ ನಿಂತಾಗ, ಅಂಗಡೀಗೆ ಹೋಗಿಬರುತ್ತೇನೆ ಇಲ್ಲೇ ಇರು ಎಂದು ಹೇಳಿ ಹೋದ ಸಿರಿಲ್ ಮರಳಿ ಬರುವುದಿಲ್ಲ. ಅವನು ಹೋದ ತಕ್ಷಣವೇ ಒಂದಿಬ್ಬರು ಪೋಲಿಸ್ ಸಿಂಬಂಧಿಗಳು ಇವಳನ್ನು ಸಂಶಯಾಸ್ಪದವಾಗಿ ದಿಟ್ಟಿಸಿ, ಯಾರು ನೀನು, ಎಂತ ಕೇಳುತ್ತಾರೆ..ಇವಳ ಉತ್ತರಕ್ಕೂ ಕಾಯದೇ ಬ್ಯಾಗಿನಲ್ಲಿ ಏನಿಟ್ಟಿದ್ದೀಯಾ ತೋರಿಸೆಂದು ದುಂಬಾಲು ಬೀಳುತ್ತಾರೆ...ಇವಳ ಕಣ್ಣೆದುರಿಗೇ ಆ ಹೆಣ್ಣು ಪೇದೆ ಪರ್ಸನ್ನು ತೆರೆದು ಒಳಗಿದ್ದ ಬಿಳೀ ಕವರ್ ಒಂದನ್ನು ಹೊರತೆಗೆದು ನೋಡುತ್ತಾಳೆ..ತನಗೇ ಗೊತ್ತಿಲ್ಲದ ಈ ವಸ್ತು ಹೇಗೆ ಬಂತೆಂದು ಯೋಚಿಸುತ್ತಿರುವಾಗಲೇ, ಅವರಿಬ್ಬರೂ, ನಿಜ ಹೇಳು, ಎಷ್ಟು ದಿನದಿಂದ ಈ ದಂಧೇ ನಡೆಸುತ್ತಿದ್ದೀಯಾ? ಯಾರು ನಿನ್ನ ಮಾಲೀಕ? ಏನು ನಿನ್ನ ಹೆಸರು? ಇತ್ಯಾದಿ ಪ್ರಶ್ನೆಗಳಿಗೆ ಉತ್ತರಕ್ಕೆ ತಡಕಾಡುತ್ತಾ, ..ಸಿರಿಲ್...ಸಿರಿಲ್....ಎಂದು ಜೋರಾಗಿ ಅವನನ್ನು ಕೂಗುವಾಗ, ಆತ, ಕೊಂಕು ನಗೆ ಬೀರಿ ಕೈಯಾಡಿಸಿ ಮರೆಯಾಗುತ್ತಾನೆ..ಇವಳಿಲ್ಲಿ ಮೂಕವೇದನೆಯಲ್ಲಿ ತಲ್ಲಣಿಸಿಬಿಡುತ್ತಾಳೆ...ಎಂತಹ ಘನಘೋರ ಅಪವಾದವನ್ನು ತನ್ನ ಮೇಲೆ ಎಸಗಿ ಹೀಗೆ ಮೋಸಮಾಡಿದನಲ್ಲಾ..ಎಂದು ಅರಿವಾಗಿ, ದುಃಖಿಸುತ್ತಾಳೆ...ಡ್ರಗ್ ಮಾಫೀಯಾ ಕೇಸನ್ನು ದಾಖಲಿಸಿ ಪರಪ್ಪನ ಅಗ್ರಹಾರಕ್ಕೆ ತಳ್ಳುತ್ತಾರೆ...ನಂತರದ ಬದುಕು ಶೋಚನೀಯ ಮಾತ್ರ. ಸೇಡಿನ ದಳ್ಳುರಿ ಹೊತ್ತಿ ಉರಿಯದೇ ಇದ್ದೀತೆ? 


ಜೇಲಿನಲ್ಲಿದ್ದ ಒಂದು ತಮಿಳು ಗರ್ಭಿಣಿ ಹೆಂಗಸಿನ ಉಸ್ತುವಾರಿ ಕೆಲಸವನ್ನು ಶ್ರದ್ಧೆಯಿಂದ ನಿಭಾಯಿಸುತ್ತಾಳೆ. ಆ ಹೆಂಗಸಿನ ಅನುಕಂಪ, ಕನಿಕರ ಗಿಟ್ಟಿಸಿಕೊಳ್ಳುತ್ತಾಳೆ..ಅದೇ ವೇಳೆ ಆಕೆಗೆ ಪ್ರಸವವನ್ನೂ ಮಾಡಿಸುತ್ತಾಳೆ. ತಾಯಿ ಮಗು ಹುಶಾರಾಗಿರುವುದನ್ನು ಕಂಡು ಖುಷೀಪಡುತ್ತಾಳೆ..ಜೇಲು ಅಧಿಕಾರಿಗಳಿಗೂ ಇವಳನ್ನು ಕಂಡರೆ ಅಚ್ಚುಮೆಚ್ಚು. ಓದಲು ಬರೆಯಲು, ಪುಸ್ತಕಗಳನ್ನು ಕೊಡುತ್ತಾರೆ. ನರ್ಸ್ ವೃತ್ತಿಯವಳಾದ್ದರಿಂದ ಅನೇಕರ ಪ್ರೀತಿಗೆ ಪಾತ್ರಳಾಗುತ್ತಾಳೆ..


ಒಂದಿನ ತಂಗಿಯ ಆಗಮನ. ಅವಳಲ್ಲಿ ತನ್ನೆಲ್ಲ ವೃತ್ತಾಂತವನ್ನು ಹೇಳಿಕೊಂಡು ಕಣ್ಣೀರಿಡುತ್ತಾಳೆ. ಹೇಗಾದರೂ ಮಾಡಿ ತಾನು ಸೇಡು ತೀರಿಸಿಕೊಳ್ಳಬೇಕೆಂಬ ಆಸೆ ವ್ಯಕ್ತಪಡಿಸುತ್ತಾಳೆ. ಸಾಧ್ಯವಾದರೆ ತಾನಿದ್ದ ಆಸ್ಪತ್ರೆಯ ಮಾಲೀಕರಿಗೂ ವಿಷಯ ತಿಳಿಸಿ, ಏನಾದರೂ ಮಾಡೆಂದು ಹೇಳುತ್ತಾಳೆ...ತಂಗಿ ಇದಕ್ಕೆ ಒಪ್ಪುತ್ತಾಳೆ..

ಬೇಲ್ ಮೇಲೆ, ಟೆಸ್ಸಾ ಹೊರಬಂದಾಗ, ತನ್ನದೇ ಆಸ್ಪತ್ರೆಯಲ್ಲಿದ್ದ ಮಧ್ಯಮವಯಸ್ಸಿನ ಆ ಮನುಷ್ಯ ತೀರಿಕೊಂಡ ಸುದ್ದಿ ತಿಳಿದು ಬೇಸರವಾಗುತ್ತದೆ. ಮತ್ತೊಂದು ಸಂತಸ ಹಾಗೂ ಆಶ್ಚರ್ಯಕರ ಘಟನೆಯೊಂದು ಗೊತ್ತಾಗುತ್ತದೆ. ಆ ಮುದುಕ, ತನ್ನೆಲ್ಲ ಆಸ್ತಿಯನ್ನು ಟೆಸ್ಸಾಳ ಹೆಸರಿಗೆ ಬರೆದು ತನ್ನ ಪ್ರಾಣ ಬಿಟ್ಟಿದ್ದ. ಅದರೊಂದಿಗೆ ಒಂದು ಪತ್ರವನ್ನೂ ಸಹ ಬರೆದದ್ದು ಓದಿ ದಿಕ್ಕೇ ತೋಚದೆ ಒದ್ದಾಡುತ್ತಿದ್ದ ಇವಳಿಗೇ ದೇವರಂತೆ ಕಂಡ ಆ ದೇವತಾ ಮನುಷ್ಯ. ಮನಸಲ್ಲೇ ವಂದನೆ ಸೂಚಿಸಿದ್ದಳು...


ಮುಂದಿನ ದಾರಿ ಈಗ ಒಂದೇ ಆಗಿತ್ತು. ತನ್ನನ್ನು ಮೋಸಗೊಳಿಸಿದ ಸಿರಿಲ್ ನನ್ನೂ ಹಾಗೂ ಅತ್ಯಾಚ್ಯಾರವೆಸಗಿದ್ದ ಆ ಕಿರಾತಕನನ್ನು ಮುಗಿಸುವ ಯೋಜನೆ ಹೆಣೆದಿದ್ದಳು...ತಾನೇ ಬಲೆಗೆ ಬಿದ್ದಂತೆ ನಟಿಸಿ, ಅವನನ್ನು ಸ್ಥಳವೊಂದರ ಬಳಿ ಬರಹೇಳಿದಳು...ನಿರ್ಜನ ಪ್ರದೇಶ, ಸುಸಜ್ಜಿತ ಕೋಣೆಗಳು, ಸುಖದ ಸುಪ್ಪತ್ತಿಗೆಗಳು. ಕಂಡೊಡನೆ ಅವನ ಆಸೆಗಳು ಕೆರಳಿರಬೇಕು....ಇದನ್ನು ಅವಳು ಊಹಿಸಿಯೇ ಇದ್ದಳು....ಅವನ ಹಿಂದೆಯೇ ಇನ್ನಿಬ್ಬರು ಬಂದು ನಿಂತರು...ಯಾವ ಮಾತಿಗೂ ಅವಕಾಶ ಕೊಡದೇ ಕುರ್ಚಿಯೊಂದರ ಮೇಲೆ ಕೂರಿಸಿ, ಕೈಕಾಲುಗಳನ್ನು ಕಟ್ಟಿದರು. ಬಾಯಿಗೆ ಪ್ಲಾಸ್ಟರ್ ಅಂಟಿಸಿದರು. ಏನು ನಡೀತಿದೆ ಎಂದು ಯೋಚಿಸುವಷ್ಟರಲ್ಲಿ, ಚೀಲದಲ್ಲಿದ್ದ ದೊಡ್ಡ ನಾರಗಹಾವೊಂದನ್ನು ಹೊರತೆಗೆದು ಅದೇ ಚೀಲದಲ್ಲಿ ಅವನ ಕಾಲನಿಟ್ಟು ಹಾವನ್ನೂ ಸೇರಿಸಿ ಕಟ್ಟಿಬಿಟ್ಟರು.. ಅಷ್ಟೇ ಕುಟುಕಿದ ವಿಷ ಮೈಯೆಲ್ಲಾ ಕ್ಷಣಮಾತ್ರದಲ್ಲಿ ಪ್ರಾಣಪಕ್ಷಿ ಹಾರಿತ್ತು...ಅಲ್ಲಿಂದ ಮರೆಯಾದಳು ಟೆಸ್ಸಾ...


ಈಗ ಉಳಿದಿರುವುದು ಸಿರಿಲ್...ಅವನಿಗೂ ಬಲೆ ಬೀಸಿದಳು...ತನ್ನ ಸಹೋದ್ಯೋಗಿಯ ಸಹಾಯದಿಂದ ತಾನು ಮಾಡೆಲ್ ಎನ್ನುವಂತೆ ವೇಷಭೂಷಣ ತೊಟ್ಟು Add ಕಂಪನಿಯ ಮಾಲೀಕನ ಆಕರ್ಷಣೆಗೆ ಒಳಗಾಗುತ್ತಾಳೆ. ತಾ ಹೆಣೆದ ಬಲೆಗೆ ಸಿರಿಲ್ ಸುಲಭವಾಗಿ ಬೀಳುತ್ತಾನೆ. ಆದರೆ, ಇವಳ ಮುಖಚಹರೆಯಿಂದ ಗೊತ್ತಾಗಿಬಿಡುತ್ತದೆ. ಇವಳ ಮೇಲೆ ಏಕಾಏಕೀ ಹಲ್ಲೇ ಮಾಡುತ್ತಾನೆ. ಯಾವುದಕ್ಕೂ ಸಿದ್ದವಾಗಿಯೇ ಬಂದಿದ್ದ ಟೆಸ್ಸಾ ಅವನಿಗೆ ಬಲವಾಗಿ ಹೊಡೆದುರುಳಿಸುತ್ತಾಳೆ...ತಲೆಗೆ ಪೆಟ್ಟಾಗಿ ಪ್ರಜ್ಞೆ ತಪ್ಪುತ್ತಾನೆ...ನಂತರ ಕೆಲಸ ಸಲೀಸು...

ಟೆಸ್ಸಾ, ಮೂರ್ಚೆಹೋದವನ ಮೇಲೆ ತನ್ನೆಲ್ಲ ಕೋಪವನ್ನು ಕಾರುತ್ತಾಳೆ. ತಾನು ನರ್ಸ್ ಎಂಬುದನ್ನೂ ಮರೆತು, ಆತನ ಮರ್ಮಾಂಗವನ್ನು ಧ್ವಂಸಮಾಡುತ್ತಾಳೆ..ಕೈಕಾಲುಗಳನ್ನು ಮಂಚಕ್ಕೆ ಬಂದಿಸಿ, ಅರಿವಳಿಕೆ ಬಂದು ಅವನು ನರಳಾಡುವುದನ್ನು ನೋಡಲೆಂದೇ ರಾತ್ರಿಯಿಡೀ ಎಚ್ಚರವಾಗಿರುತ್ತಾಳೆ...ಅಬ್ಬಾ!! ಇದು ಸೇಡೆಂದರೆ...ಅಮಾಯಕ, ನೀಚ ಜನರನ್ನು ಇನ್ನಾವ ಶಿಕ್ಷೆಯೂ ಸಮನಾಗಲಾರದು..


ತಾನು ಪ್ರೀತಿಸಿದಂತ ವ್ಯಕ್ತಿಯೊಂದಿಗೆ ಎಲ್ಲವನ್ನೂ ಹಂಚಿಕೊಂಡಿದ್ದಳು..ಏನೂ ಅರಿಯದವಳನ್ನು ನಶೆಯ ದಂಧೆಯ ಹೆಸರಲ್ಲಿ ಜೈಲಿಗೆ ತಳ್ಳಿದ ನಯವಂಚಕನನ್ನು ಸುಮ್ಮನೇ ಸಾಯಿಸಬಾರದೆಂದು ಇವಳ ಇರಾದೆಯಿತ್ತು. ಅಂತೆಯೇ ತೀರಿಸಿಕೊಂಡ ಘೋರ ಕತೆಯಿದು. ಈಗ ನೆಮ್ಮದಿಯಾಗಿ ಫಾರೆನ್ನಿಗೆ ಹೋಗುವ ಸುಸಜ್ಜಿತ ವಿಮಾನಯಾನ ಇವಳಿಗಾಗಿಯೇ ಕಾದಿರುತ್ತದೆ..


Rate this content
Log in

Similar kannada story from Horror