JAISHREE HALLUR

Horror Action Thriller

4  

JAISHREE HALLUR

Horror Action Thriller

##ಸೆಂಟಿನಾವಾಂತರ--03

##ಸೆಂಟಿನಾವಾಂತರ--03

2 mins
262


ಸೆಂಟಿನಾವಾಂತರ

ಭಾಗ-0೩


  ಶ್ಯಾಂ ಸುಂದರ್ ಕೈಯಿಂದ ಸ್ಟೋರ್ ರೂಂ ಬೀಗದ ಕೈ ತೆಗೆದುಕೊಂಡಾಗಿಂದ , ರೀಟಾ...ನೆಲದ ಮೇಲೆ ಇಲ್ಲ. ಯಾವುದೋ ದೆವ್ವ ಹೊಕ್ಕಂತೆ ಕೆಲಸದಲ್ಲಿ ತೊಡಗಿದ್ದಳು. ನಿಂತೇ ಇಡೀ ದಿನ ಕೆಲಸ ಮಾಡಿದಳೆನ್ನ ಬಹುದು. ಅಷ್ಟರಮಟ್ಟಿಗೆ , ತರಾತುರಿಯಲ್ಲಿದ್ದಳು. 

  ಬರ್ರನೆ, ಮನೀಷ್ ಡೆಸ್ಕ್ ಮುಂದೆ ಹಾಜರಾದಳು. 

" ಮಿ! ಮನೀಷ್, ಪ್ಲೀಜ್ ಗಿವ್ ಮೀ ಲಾಸ್ಟ್ ಸಿಕ್ಸ್ ಮಂತ್ಸ್ ಅಟೆಂಡೆನ್ಸ್ ಡೇಟಾ. "

 " ಯಸ್ ಮೇಡಂ".. ಎನ್ನುತ ಅವಳನ್ನೇ ದಿಟ್ಟಿಸಿದ.ಉದ್ದನೆಯ ಸ್ಕರ್ಟ್, ಕಡುನೀಲೀ ಟಾಪ್ನಲ್ಲಿ ಖಡಕ್ಕಾಗಿ ಕಂಡಳು. ಇಳಿಬಿದ್ದ ಕೂದಲು ಮೋಹಕವಾಗಿತ್ತು. ನವಿರಾದ ಮೇಕಪ್, ಕನ್ನಡಕದೊಳಗಿನ ಹೊಳೆವ ಕಂಗಳು ಕೊಂಚ ಚಂಚಲ ಎನಿಸಿ ಏನೋ ಕಸಿವಿಸಿಯಾಗಿ, ಮನೀಷ್...., ಬೇಕಾದ ರೆಜಿಸ್ಟರ್ ಅನ್ನು ಅವಳ ಕೈಗಿತ್ತ. 

"ಥ್ಯಾಂಕ್ಯೂ" ,ಮುಗುಳು ನಕ್ಕಳು. 

   

    ತನ್ನ ಸೀಟಿಗೆ ಮರಳಿ, ಎಲ್ಲವನ್ನೂ ಪರಿಶೀಲಿಸಿ ನೋಟಿಂಗ್ ಮಾಡಿಕೊಂಡಳು. ಪೀಸಿ ಓಪನ್ ಮಾಡಿ , ಮಾಹಿತಿಗಳನ್ನೆಲ್ಲಾ ಕಲೆ ಹಾಕಿ, ಡೇಟಾ ಬೇಸ್ ತಯಾರು ಮಾಡಿದಳು.....ಎಲ್ಲೋ ಕೆಲವು ಕಾಲಂ ಗಳಿನ್ನೂ ಬಾಕೀ ಉಳಿದವು....ಇವುಗಳನ್ನು ಎಲ್ಲಿ ಹುಡುಕೋದು...? ಎಂದು ಯೋಚಿಸುವಾಗಲೇ, ಶ್ಯಾಂ ಸುಂದರ್ ಕೊಟ್ಟ ಕೀ ನೆನಪಾದದ್ದು. ಡ್ರಾನಲ್ಲಿ ಭದ್ರವಾಗಿತ್ತು. ಅದಕ್ಕೂ ಮುಂಚೆ , ಇನ್ನೊಂದು ಮುಖ್ಯ ಕೆಲಸ ಇತ್ತು. 


   ಎಮ್ಡೀ ಕ್ಯಾಬಿನ್ ಗೆ ನುಗ್ಗಿದಳು. ಇವಳಿಗೆ ಮಾತ್ರ ಯಾವಾಗ ಬೇಕಾದರೂ ಬರಬಹುದೆಂದು ಪರವಾನಿಗೆ ಕೊಟ್ಟಿದ್ದರಿಂದ, ಸರಾಗವಾಗಿ ಓಡಿಯಾಡುತ್ತಿದ್ದಳು. ಬೇರೆಯವರಿಗೆ ಕರೆಗಂಟೆ ಮೂಲಕ ತಿಳಿಸಿ ಒಳಹೋಗಬೇಕೆಂದು ತಾಕೀತು. 


  " ಮೇ ಐ ಕಮಿನ್ ಸರ್..." ಹೇಳುತ್ತಲೇ ಒಳನುಗ್ಗಿದ್ದಳು....

 " ಹ್ಹಾ...ಹ್ಹಾ...ಕಮಿನ್ ಬೇಬಿ....." ಎಂದಿನಂತೆ ನಗುಮುಖದ ಬಾಸ್.....


" ಐ ನೀಡ್ ಸಂ ಡೇಟಾ ಫಾರ್ ದಿ ಪ್ರೆಸೆಂಟೇಶನ್", ಎನ್ನುತ , ನೋಟ್ ಮಾಡಿದ ಕೆಲವು ಬ್ಲ್ಯಾಂಕ್ ಕಾಲಂಗಳನ್ನು ತೋರಿಸಿದಳು...

ಅವುಗಳನ್ನು ಓದಿ, ಕ್ಷಣ ಮೌನವಾದ ಬಾಸ್. ಅವನ ಮುಖದ ಚಹರೆ ಬದಲಾದುದನ್ನು ಗಮನಿಸಿದಳು. ತಾನು ಗುರುತು ಹಾಕಿದ್ದು ಸರಿಯಾಗಿತ್ತೆಂದು ಅವಳು ಎರಡು ಬಾರಿ ಖಾತ್ರಿ ಪಡಿಸಿಕೊಂಡಿದ್ದಳು. ಅದರ ಅವಶ್ಯಕತೆ ಬಹಳ ಇತ್ತು. ಅತ್ಯಂತ ಪ್ರಮುಖ ವಾದ ವಿಷಯದ ವಿವರ. ಕೊಂಚ ಹಿಂಜರಿದ ಬಾಸ್ ಇವಳನ್ನೊಮ್ಮೆ ದಿಟ್ಟಿಸಿ, ನಂತರ ಮನ ಬದಲಾಯಿಸಿ,


 "ಓಕೇ ನೋ ಇಶ್ಯೂಸ್......", " ಐ ಕ್ಯಾನ್ ಪ್ರೋವಾಯಿಡ್ ಯೂ ದೀಜ್ ಇನ್ಫೋ....", ಎನ್ನುತ್ತಾ...

ತನ್ನ ಟೇಬಲ್ ಡ್ರಾದ ಬೀಗ ತೆಗೆದು ಒಂದು ಹಾರ್ಡ್ ಡಿಸ್ಕ್ ಅನ್ನು ಹೊರತೆಗೆದು ಇವಳತ್ತ ಚಾಚಿದ. 


" ಎಲ್ಲ ಮಾಹಿತಿ..ಇದರಲ್ಲಿದೆ. ಇದು ಬಹಳ ಇಂಪಾರ್ಟೆಂಟ್ ಡಾಕ್ಯುಮೆಂಟ್ ಫಾಯಿಲ್. ಜೋಪಾನವಾಗಿರಬೇಕು. ಯಾರ ಕೈಗೂ ಸಿಗದಂತೆ ಎಚ್ಚರವಹಿಸು. ಮುಗಿದ ನಂತರ ನನಗೇ ವಾಪಸ್ ಮಾಡು.." ಎಂದು ಹೇಳಿದಾಗ, ರೀಟಾ ತಲೆಯಲ್ಲಾಡಿಸುತ್ತ, ಎದ್ದು ಹೊರಹೊರಟಳು.


ಬಹಳ ಸುಸ್ತಾದಂತೆನಿಸಿತು. ಸೀಟಿಗೊರಗಿ , ಒಂದು ಕಪ್ ಕಾಫೀಗೆ ಬಾಯ್ ಹತ್ತಿರ ಹೇಳಿ ಕಳಿಸಿದಳು. ಇಂದೇ ಮುಗಿಸ ಬೇಕಾದ ಮಹತ್ವದ ಕೆಲಸ ಅಂದರೆ ಸ್ಟೋರ್ ರೂಂ ಚೆಕ್ ಮಾಡೋದು. ಸಮಯವೇ ಸಾಲುತ್ತಿಲ್ಲ. ಊಟದ ನಂತರ, ಸಂಜೆ ತಡವಾದರೂ ಸರಿ, ಮುಗಿಸಿಯೇ ಮನೆಗೆ ಹೋಗೋದೆಂದು ತೀರ್ಮಾನ ಮಾಡಿಕೊಂಡಳು. 

  

  ಮೇಲಿನ ಕೋಟನ್ನು ಕಳಚಿಟ್ಟು, ಕೊಂಚ ಗಾಳಿಗೆ ಮೈಯೊಡ್ಡಿದ್ದಳು. 

ಬಿಸಿ ಬಿಸಿ ಕಾಫೀಯನ್ನು ತಂದಿತ್ತ ಬಾಯ್ , ಎವೆಯಿಕ್ಕದೇ ಇವಳನ್ನೇ ನೋಡುತ್ತಿದ್ದುದು ಕಣ್ಣ ಕೊನೆಯಿಂದಲೇ ಗಮನಿಸಿದ್ದಳು. ಅತ್ತ ನೋಡದಂತೆ ಮುಖ ಮಾಡಿ ಕಾಫೀಯ ಕಪ್ಪನ್ನು ತುಟಿಗೇರಿಸಿದಳು.


" ಹಲೋ ರೀಟಾ, ಆರ್ ಯೂ ಫ್ರೀ...?"


ಅತ್ತಲಿಂದ ಬಂದ ಕರೆಗೆ ತಿರುಗಿದಳು.

ಶ್ಯಾಂ ದೂರದಲ್ಲಿ ನಿಂತಿದ್ದ. ಊಟಕ್ಕೆ ಹೊರಗೆ ಕರೆದೊಯ್ಯುವ ಇರಾದೆ ಇರಬಹುದೇನೋ ಎಂಬ ಸಂಶಯ ಇವಳಿಗೆ ಸುಳಿಯದಿರಲಿಲ್ಲ.  


" ಎಸ್ ಸರ್! ಎದ್ದು ನಿಂತಳು.. ಕೈಯಲ್ಲಿ ಕಾಫೀ ಕಪ್."


ಶ್ಯಾಂ ನ ಎದೆ ಡವಗುಟ್ಟಿತು. ರಾತ್ರಿ ಇವಳೇನಾದರೂ ಮನೆಗೆ ಬಂದಿದ್ಳಾಂತ. ಮೈಮುಟ್ಟಿದಾಗಿಂದ ತಾನು ತಾನಾಗಿಲ್ಲವೆಂದು ಭಾಸವಾಗುತ್ತಿತ್ತು. ಯಾರಿವಳು? ಯಾಕೆ ಹೀಗೆ ನನ್ನ ಮನಸಲ್ಲಿ ಬಂದು ಕಾಡುತ್ತಿದ್ದಾಳೆ?

ಉತ್ತರ ಸಿಗದ ಪ್ರಶ್ನೆಗೆ ಇಂದು ಉತ್ತರ ಕಂಡು ಹಿಡಿಯಬೇಕೆಂದು ಇವಳನ್ನು ಊಟಕ್ಕೆ ಕರೆದೊಯ್ಯಲು ಬಂದಿದ್ದ. 


  ಆದರೆ, ಹೇಗೆ ಕೇಳುವುದು, ಬಾಸ್ ಏನಾದರೂ ತಪ್ಪು ತಿಳಿದರೆ?, ಎನ್ನುವ ಅಳುಕು...

  " ಊಟಕ್ಕೆ ಹೊರಟಿರಾ..ಸರ್, ನಾನಿವತ್ತು ಊಟ ಮಾಡೋಲ್ಲ. ಉಪವಾಸ. " ಎಂದಳು.

" ವ್ಹಾಟ್! ರಿಯಲೀ? , ಆರ್ ಯೂ ಜೋಕಿಂಗ್? ಈ ಕಾಲದಲ್ಲಿ ನಿಮ್ಮಂತವರೂ ಉಪವಾಸ ಮಾಡ್ತೀರಾ...ನಂಬೋಕೇ ಆಗ್ತಿಲ್ಲ" ಎಂದು ಆಶ್ಚರ್ಯ ವ್ಯಕ್ತ ಪಡಿಸಿದ.


" ಹೂಂ! ಅಮ್ಮ ನಂಗೆ ಯಾವಾಗಲೂ ಹೇಳ್ತಿರ್ತಾರೆ, ವಾರದಲ್ಲಿ ಒಂದೊತ್ತಾದರೂ ಉಪವಾಸ ಮಾಡಬೇಕು. ದೇಹದ ಆರೋಗ್ಯಕ್ಕೆ ಒಳ್ಳೆಯದೆಂದು. ಅದಕ್ಕೇ ಇಂದು ಗುರುವಾರ, ಒಂದು ಹೊತ್ತು ಮಾತ್ರ ಉಪವಾಸ. ರಾತ್ರಿ ಜಡಾಯಿಸೋದೆ..." ನಗುತ್ತಾ ಹೇಳಿದಳು...


" ಓಕೆ..ಓಕೆ...ಗುಡ್ ಪ್ರಾಕ್ಟೀಸ್...ಕ್ಯಾರಿಯಾನ್...."


ಎಂದು ತಾನು ಹೊರನಡೆದಿದ್ದ. 


 ರೀಟಾ ಬೇಕೆಂತಲೇ ಉಪವಾಸದ ನಾಟಕವಾಡಿದ್ದಳು. ಅವಳಿಗೆ ಹೊರಗೆ ಹೋಗುವ ಇಚ್ಛೆಯಿರಲಿಲ್ಲ. ತನ್ನ ಟೇಬಲ್ ಮೇಲೆ ಹರಡಿ ಕುಳಿತ ಪಾಯಿಲ್ಗಳ ರಾಶಿಯನ್ನು ಕ್ಲಿಯರ್ ಮಾಡಬೇಕಿತ್ತು. ಹೀಗಾಗಿ, ಒಂದು ಸಬೂಬು ಅಷ್ಟೆ. 


(ಮುಂದುವರಿಯುವುದು...)


Rate this content
Log in

Similar kannada story from Horror